ನೆಲ್ಲಿಕಾಯಿಯಲ್ಲಿ ಪ್ರಮುಖವಾಗಿರುವಂತಹ ಒಂದು ಅಂಶವೆಂದರೆ ಅದು ಕ್ರೋಮಿಯಂ. ಇದು ಮಧುಮೇಹ ಇರುವಂತಹ ಜನರಲ್ಲಿ ಚಿಕಿತ್ಸಕವಾಗಿ ಕೆಲಸ ಮಾಡುವುದು. ಕ್ರೋಮಿಯಂ ಕೆಲವೊಂದು ಕೋಶಗಳ ಗುಂಪಿನಲ್ಲಿ ಇನ್ಸುಲಿನ್ ನ್ನು ಉತ್ಪತ್ತಿ ಮಾಡಲು ನೆರವಾಗುವುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು. ಇದು ದೇಹದಲ್ಲಿರುವ ಹೆಚ್ಚಿನ ಗ್ಲೂಕೋಸ್ ಅಂಶವನ್ನು ಬಳಸುವಂತೆ ಉತ್ತೇಜಿಸುವುದು. ಇದರಿಂದ ಚಯಾಪಚಯ ಕ್ರಿಯೆಯು ಶಕ್ತಿಯನ್ನು ಪಡೆಯುವುದು. ಕೆಲವೊಂದು ಗಿಡಮೂಲಿಕೆಗಳಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಬಹುದು.
Most Read: ಮೆಂತೆ ಕಾಳುಗಳನ್ನು ಹಾಕಿ ಕುದಿಸಿದ ನೀರು ಕುಡಿದರೆ,ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಹಲವಾರು ಉಪಯೋಗಗಳು ಇವೆ. ಕ್ರೋಮಿಯಂ ಹೃದಯವು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ನೆರವಾಗುವುದು. ಹೃದಯದ ಸಮಸ್ಯೆ ಇರುವಂತಹ ಜನರಿಗೆ ನೀಡುವಂತಹ ಔಷಧಿಯಾಗಿರುವ ಬಿಟಾ ಬ್ಲಾಕರ್ ಪರಿಣಾಮ ಹೆಚ್ಚಿಸುವುದು ಮತ್ತು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು.
ಕರುಳಿನ ಕ್ರಿಯೆಯನ್ನು ಸರಾಗಗೊಳಿಸುವಲ್ಲಿ ನೆಲ್ಲಿಕಾಯಿ ಜ್ಯೂಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಹೊಟ್ಟೆಯಲ್ಲಿ ತಳಮಳ ಕಡಿಮೆ ಮಾಡುವುದು ಮತ್ತು ಕರುಳಿನ ಕ್ರಿಯೆಯು ಸರಾಗವಾಗಿ ಆಗಲು ನೆರವಾಗುವುದು. ನೆಲ್ಲಿಕಾಯಿಯಲ್ಲಿ ಇರುವಂತಹ ಹೆಚ್ಚಿನ ಮಟ್ಟದ ನಾರಿನಾಂಶವು ಹೊಟ್ಟೆಯಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಮಲವು ಸರಿಯಾಗಿ ಕರುಳಿನಲ್ಲಿ ಸಾಗಲು ಮತ್ತು ಕರುಳಿನ ಕ್ರಿಯೆ ವ್ಯವಸ್ಥಿತವಾಗಿರುವಂತೆ ಮಾಡುವುದು. ನೆಲ್ಲಿಕಾಯಿ ಜ್ಯೂಸ್ ನಲ್ಲಿ ಇರುವಂತಹ ಹೆಚ್ಚಿನ ಮಟ್ಟದ ನಾರಿನಾಂಶವು ನೀರಿನಂತಿರುವ ಮಲವನ್ನು ಗಟ್ಟಿಗೊಳಿಸಿ, ಭೇದಿಯ ಸಮಸ್ಯೆ ನಿವಾರಣೆ ಮಾಡುವುದು. ನೆಲ್ಲಿಕಾಯಿ ಜ್ಯೂಸ್ ಗ್ಯಾಸ್ಟ್ರಿಕ್ ದ್ರವದ ಸ್ರವಿಸುವಿಕೆಗೆ ಕಾರಣವಾಗುವುದು ಮತ್ತು ಇದರಿಂದ ಜೀರ್ಣಕ್ರಿಯೆಯು ಸರಿಯಾಗಿ ಆಗುವುದು ಮತ್ತು ಕರುಳು ಆಹಾರದಲ್ಲಿರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುವಂತೆ ಆಗುವುದು.
ನೆಲ್ಲಿಕಾಯಿ ಜ್ಯೂಸ್ ಕೆಲವೊಂದು ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಈಗಾಗಲೇ ಹೇಳಲಾಗಿದೆ. ಅದೇ ರೀತಿ ನೆಲ್ಲಿಕಾಯಿಯು ಪ್ರಮುಖವಾಗಿ ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ನೆರವಾಗುವುದು. ಮೂಳೆಗಳು, ಹಲ್ಲುಗಳು ಮತ್ತು ಉಗುರುಗಳಿಗೆ ಪ್ರಮುಖವಾಗಿ ಕ್ಯಾಲ್ಸಿಯಂನ ಅಗತ್ಯವಿದೆ. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆಹಾರದಲ್ಲಿರುವಂತಹ ಕ್ಯಾಲ್ಸಿಯಂನ್ನು ಹೊಟ್ಟೆಯು ಸರಿಯಾಗಿ ಹೀರಿಕೊಳ್ಳುವಂತೆ ಮಾಡಲು ನೆರವಾಗುವುದು.
Most Read:ಮೊಟ್ಟೆ ತಿಂದ ಕೂಡಲೇ ಹಾಲು ಕುಡಿಯಬಹುದೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಇದೆಯೇ?
ನೆಲ್ಲಿಕಾಯಿ ಜ್ಯೂಸ್ ನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವ ಮತ್ತೊಂದು ಲಾಭವೆಂದರೆ ಅದು ದೇಹದಲ್ಲಿರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕುವುದು. ನೈಸರ್ಗಿಕವಾಗಿ ನೀರಿನಾಂಶವನ್ನು ಹೊಂದಿರುವ ನೆಲ್ಲಿಕಾಯಿಯು ಮೂತ್ರವರ್ಧಕವಾಗಿದೆ. ಇದರಿಂದ ಹೆಚ್ಚಿನ ಸಲ ಮೂತ್ರ ವಿಸರ್ಜನೆಯಾಗುವುದು. ಮೂತ್ರವಿಸರ್ಜನೆ ಹೆಚ್ಚಿನ ಸಲ ಆಗುವ ಕಾರಣದಿಂದ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕುವುದು. ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನೀರು, ಉಪ್ಪು, ಯೂರಿಕ್ ಆಮ್ಲ ಮತ್ತು ಕಲ್ಲನ್ನು ಹೊರಹಾಕುವುದು. ಇದು ಕಿಡ್ನಿ ಹಾಗೂ ಮೂತ್ರನಾಳಗಳಿಗೆ ತುಂಬಾ ಪ್ರಯೋಜಕಾರಿಯಾಗಿದೆ. ಇದು ಮೂತ್ರಕೋಶದ ಸೋಂಕನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಸಾಂಪ್ರದಾಯಿಕವಾಗಿ ಔಷಧೀಯ ಗುಣವನ್ನು ಹೊಂದಿರುವಂತಹ ಈ ಹಣ್ಣಿನಲ್ಲಿ ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ನೆಲ್ಲಿಕಾಯಿ ಜ್ಯೂಸ್ ದೇಹದಲ್ಲಿ ಬಿಳಿರಕ್ತ ಕಣಗಳನ್ನು ವೃದ್ಧಿಸುವುದು. ಇದು ದೇಹವನ್ನು ಬಾಧಿಸುವಂತಹ ಕೆಲವೊಂದು ಬಾಹ್ಯ ಕಣಗಳು ಹಾಗೂ ಸೂಕ್ಷ್ಮಾಣು ಜೀವಿಗಳ ವಿರುದ್ಧ ಹೋರಾಡುವುದು ಮತ್ತು ದೇಹದ ರಕ್ಷಣೆಯ ಕಾರ್ಯ ಮಾಡುವುದು.ರಕ್ತನಾಳಗಳಲ್ಲಿ ದೇಹದಪೂರ್ತಿ ಇರುವಂತಹ ವಿಷಕಾರಿ ಅಂಶಗಳನ್ನು ಇವು ಹೊರಹಾಕುವುದು. ನೆಲ್ಲಿಕಾಯಿ ಜ್ಯೂಸ್ ಗಂಟುಗಳಲ್ಲಿ ಸೋಂಕಿನಿಂದ ಉಂಟಾಗಿರುವ ಊತ ಹಾಗೂ ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ಸಂಧಿವಾತ ನಿವಾರಿಸುವುದು.
ಹೆಚ್ಚು ಶ್ರಮ ವಹಿಸದೆ ಮತ್ತು ವ್ಯಾಯಾಮ ಮಾಡದೆ ನಿಮಗೆ ತೂಕ ಇಳಿಸಿಕೊಳ್ಳಬೇಕೆಂದು ಇದ್ದರೆ ಆಗ ನೀವು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಒಳ್ಳೆಯ ಆಯ್ಕೆ. ನೆಲ್ಲಿಕಾಯಿ ಜ್ಯೂಸ್ ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಿಸಿ ಕೊಬ್ಬನ್ನು ಕರಗಿಸುವುದು. ಇದರ ಪರಿಣಾಮವಾಗಿ ದೇಹವು ಸಂಗ್ರಹಿಸಿಟ್ಟಿರುವ ಕೊಬ್ಬನ್ನು ಬಳಸುವುದು ಮತ್ತು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ತೂಕ ಇಳಿಯುವುದು.ದೇಹದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಇವೆಲ್ಲವೂ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಸಿಗುವಂತಹ ಆರೋಗ್ಯ ಲಾಭಗಳಾಗಿವೆ.
Most Read:ನೆಲ್ಲಿಕಾಯಿ: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಈ ಕಾರಣದಿಂದಾಗಿ ಇದು ನೈಸರ್ಗಿಕವಾಗಿ ಆಮ್ಲೀಯ ಗುಣ ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಅದರಿಂದ ಹೆಚ್ಚಿನ ಲಾಭಗಳು ಸಿಗಲಿದೆ ಎಂದು ಹಲವಾರು ಮೂಲಗಳು ಹೇಳಿವೆ. ಇದು ಹೊಟ್ಟೆಯಲ್ಲಿ ಆಮ್ಲೀಯ ಮಟ್ಟವನ್ನು ಹೆಚ್ಚಿಸುವುದು ಎಂದು ನೀವು ಗಮನಿಸಬೇಕು. ಕೆಲವು ಜನರ ಹೊಟ್ಟೆಯು ತುಂಬಾ ಸೂಕ್ಷ್ಮವಾಗಿರುವುದು. ಇಂತಹವರು ಇದರ ಸೇವನೆ ಮಾಡದೆ ಇದ್ದರೆ ಒಳ್ಳೆಯದು. ಯಾವುದಕ್ಕೂ ಒಮ್ಮೆ ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ.
ಮಧುಮೇಹಿಗಳಿಗೆ ನೆಲ್ಲಿಕಾಯಿಯು ತುಂಬಾ ಲಾಭಕಾರಿ ಎಂದು ಮೇಲೆ ಹೇಳಲಾಗಿದೆ. ಅದಾಗ್ಯೂ, ವೈದ್ಯರು ಮಧುಮೇಹಿಗಳಿಗೆ ನೀಡಿರುವಂತಹ ಔಷಧಿಯೊಂದಿಗೆ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಅದು ಔಷಧದ ಮೇಲೆ ಪರಿಣಾಮ ಮಾಡಬಹುದು. ಇದರಿಂದಾಗಿ ಹೈಪೊಗ್ಲಿಸಿಮಿಯಾ ಎಂದರೆ ರಕ್ತದಲ್ಲಿ ಸಕ್ಕರೆ ಮಟ್ಟವು ಕಡಿಮೆಯಾಗುವುದು. ಹೈಪೊಗ್ಲಿಸಿಮಿಯಾವು ಪ್ರಾಣಹಾನಿಗೂ ಕಾರಣವಾಗಬಲ್ಲದು. ನೀವು ಮಧುಮೇಹಕ್ಕೆ ಮಾತ್ರೆಗಳನ್ನು ಸೇವನೆ ಮಾಡುತ್ತಲಿದ್ದರೆ ಆಗ ನೀವು ವೈದ್ಯರ ಸಲಹೆ ಪಡೆದ ಬಳಿಕ ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಒಳ್ಳೆಯದು.
Most Read: ಹಲ್ಲಿನ ಕಾಂತಿ ಹೆಚ್ಚಿಸಲು ಅರಿಶಿನದ ಚಿಕಿತ್ಸೆ! ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್
ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕಾಡುವ ಮತ್ತೊಂದು ಆರೋಗ್ಯ ಸಮಸ್ಯೆಯೆಂದರೆ ಅಲರ್ಜಿ. ಈ ಕ್ರಿಯೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಮತ್ತು ಜನರು ತಮಗೆ ಅಲರ್ಜಿ ಉಂಟು ಮಾಡುವಂತಹ ಆಹಾರಗಳ ಪಟ್ಟಿಯನ್ನು ಹಿಡಿದುಕೊಂಡು ಇರಲು ಸಾಧ್ಯವಿಲ್ಲ. ಇದರಲ್ಲಿ ನೆಲ್ಲಿಕಾಯಿ ಕೂಡ ಅಲರ್ಜಿ ಉಂಟು ಮಾಡುವುದು. ನೆಲ್ಲಿಕಾಯಿಯಿಂದ ಉಂಟಾಗುವಂತಹ ಅಲರ್ಜಿಯೆಂದರೆ ಭೇದಿ, ಹೊಟ್ಟೆನೋವು, ವಾಕರಿಕೆ ಹಾಗೂ ವಾಂತಿ, ಚರ್ಮ ಕೆಂಪಾಗುವುದು ಮತ್ತು ಬಾಯಿಯ ಸುತ್ತಲು ಊದಿಕೊಳ್ಳುವುದು, ಉಸಿರಾಡಲು ಕಷ್ಟವಾಗುವುದು. ನೆಲ್ಲಿಕಾಯಿ ಜ್ಯೂಸ್ ಕುಡಿದ ಬಳಿಕ ಯಾರಿಗಾದರೂ ಈ ರೀತಿಯ ಸಮಸ್ಯೆಯು ಕಂಡುಬಂದರೆ ಅವರು ತಕ್ಷಣವೇ ಹೋಗಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯದ ಅಪಾಯದ ಬಗ್ಗೆ ತಿಳಿದ ಬಳಿಕವೂ ನೆಲ್ಲಿಕಾಯಿ ಜ್ಯೂಸ್ ಹೇಗಿರಬಹುದು ಎಂದು ರುಚಿ ನೋಡಲು ನೀವು ಕಾತರರಾಗಿದ್ದೀರಾ? ಇದು ಮುಖ್ಯವಾಗಿ ಸಂಕೋಚನ ಹಾಗೂ ಹುಳಿ. ಆದರೆ ಸ್ವಲ್ಪ ಸಿಹಿ ಮತ್ತು ತೀಕ್ಷ್ಣತೆ ಇರುವುದು. ನೆಲ್ಲಿಕಾಯಿ ಜ್ಯೂಸ್ ನಿಂದ ಆಗುವಂತಹ ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಯಾವುದೇ ಚಿಂತೆಯಿಲ್ಲದೆ ಇದ್ದರೆ ಆಗ ನೀವು ನೆಲ್ಲಿಕಾಯಿ ಜ್ಯೂಸ್ ನ್ನು ಕುಡಿಯಲು ತಯಾರಾಗಿ.
ನೆಲ್ಲಿಕಾಯಿ ಸಣ್ಣದಾದರೂ ಅದರಲ್ಲಿ ಅಡಗಿರುವಂತಹ ಪೋಷಕಾಂಶಗಳು, ಆರೋಗ್ಯ ಲಾಭಗಳು ಅಪಾರ. ಪ್ರಾಚೀನ ಕಾಲದಿಂದಲೂ ನೆಲ್ಲಿಕಾಯಿಯನ್ನು ಔಷಧಿಯಾಗಿ ಬಳಸಿಕೊಂಡು ಬರಲಾಗುತ್ತಿದೆ. ಹಿಂದಿನ ಕಾಲದಲ್ಲಿ ನೆಲ್ಲಿಕಾಯಿಯಲ್ಲಿ ಉಪ್ಪಿನಕಾಯಿ, ಚಟ್ನಿ, ಜಾಮ್ ಮತ್ತು ಮುರಬ್ಬಸ್ ಮಾಡಲು ಬಳಸಲಾಗುತ್ತಿತ್ತು. ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.
ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ಔಷಧಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇಂದಿನ ದಿನಗಳಲ್ಲಿ ನೆಲ್ಲಿಕಾಯಿಯನ್ನು ಔಷಧಿ, ಆಹಾರ ಮತ್ತು ಕಾಸ್ಮೆಟಿಕ್ ಗಳಲ್ಲೂ ಬಳಸಲಾಗುತ್ತಿದೆ. ನೆಲ್ಲಿಕಾಯಿಯಲ್ಲಿರುವಂತಹ ಪೋಷಕಾಂಶಗಳು ಹಾಗೂ ಅದರಲ್ಲಿರುವ ಆರೋಗ್ಯ ಲಾಭಗಳೇ ಇದಕ್ಕೆ ಕಾರಣವಾಗಿದೆ. ನೆಲ್ಲಿಕಾಯಿಯನ್ನು ಬಳಸಿಕೊಂಡು ಇಂದು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಉತ್ಪನ್ನಗಳು ನಮಗೆ ಲಭ್ಯವಿದೆ. ಇದು ತಿನ್ನುವ ಆಹಾರದಿಂದ ಹಿಡಿದು ತಲೆಗೆ ಬಳಸುವಂತಹ ಶಾಂಪೂ ತನಕ ಎಲ್ಲವೂ ನೆಲ್ಲಿಕಾಯಿಯಿಂದ ಮಾಡಿರುವಂತದ್ದಾಗಿದೆ.
ಇಂತಹ ನೆಲ್ಲಿಕಾಯಿಯು ಫಿಲಂತೇಸಿ ಎನ್ನುವ ಪ್ರಜಾತಿಗೆ ಸೇರಿರುವುದು. ಇದರ ಲ್ಯಾಟಿನ್ ಹೆಸರು ಫಿಲಂತೇಸಿ ಎಮ್ಬ್ಲಿಕಾಯಾಂಡ್. ಇದನ್ನು ಸಂಸ್ಕೃತದಲ್ಲಿ ಅಮ್ಲಕಿ' ಎದು ಕರೆಯಲಾಗುತ್ತದೆ. ಇದು ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದರ ಜ್ಯೂಸ್ ಕೂಡ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಹೊಂದಿದೆ. ನೆಲ್ಲಿಕಾಯಿ ಜ್ಯೂಸ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೆಲ್ಲಿಕಾಯಿಯ ಜ್ಯೂಸ್ ನಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಲಾಭಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ದಿನದ ಯಾವುದೇ ಸಮಯದಲ್ಲೂ ಸೇವಿಸಬಹುದಾಗಿದೆ. ಆದರೆ ಹೆಚ್ಚಿನ ಆರೋಗ್ಯ ಲಾಭಗಳು ಸಿಗಬೇಕೆಂದರೆ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು.