Back
Home » ಆರೋಗ್ಯ
ಕಾಫಿಗೆ ಒಂದೆರಡು ಚಮಚ ತೆಂಗಿನೆಣ್ಣೆ ಬೆರೆಸಿ ಕುಡಿದರೆ, ಆರೋಗ್ಯಕ್ಕೆ ಹಲವಾರು ಲಾಭಗಳಿವೆ
Boldsky | 2nd Nov, 2018 03:35 PM
 • ಪ್ರತಿರೋಧಕ ಶಕ್ತಿ ವೃದ್ಧಿ

  ಕೆಫಿನ್ ನಮ್ಮ ದೇಹದಲ್ಲಿ ಪ್ರತಿರೋಕ ಶಕ್ತಿಯನ್ನು ಹೆಚ್ಚಿಸುವುದು. ಯಾಕೆಂದರೆ ಇದರಲ್ಲಿ ಪಾಲಿಫಿನಾಲ್ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದು ವಿವಿಧ ರೀತಿಯ ಕ್ಯಾನ್ಸರ್, ಹೃದಯದ ಸಮಸ್ಯೆ, ಅಸ್ಥಿರಂಧ್ರತೆ ಮತ್ತು ನರಗಳ ಸಮಸ್ಯೆಗಳನ್ನು ತಡೆಯುವುದು. ತೆಂಗಿನೆಣ್ಣೆಯಲ್ಲಿ ಲೌರಿಕ್ ಆಮ್ಲ(ಎದೆಹಾಲಿನಲ್ಲಿ ಕಂಡು ಬರುವಂತಹ ಆರೋಗ್ಯಕಾರಿ ಕೊಬ್ಬು)ವಿದೆ. ಈ ಆಮ್ಲವು ರೋಗಕಾರಕಗಳನ್ನು ಕೊಲ್ಲುವುದು, ಸೂಕ್ಷ್ಮಾಣು ವಿರೋಧಿ ಗುಣಗಳು ಇರುವ ಕಾರಣದಿಂದಾಗಿ ಇದು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು.


 • ಅರಿವಿನ ಕಾರ್ಯ ಹೆಚ್ಚಳ

  ಕಾಫಿಯಲ್ಲಿ ಉತ್ತೇಜಕನಾರಿ ಗುಣವು ಇರುವ ಕಾರಣದಿಂದಾಗಿ ಇದನ್ನು ಶಕ್ತಿಯ ಪೇಯ ಎಂದು ಪರಿಗಣಿಸಬಹುದು. ಮನಸ್ಥಿತಿ ಉತ್ತಮಪಡಿಸುವುದರೊಂದಿಗೆ ಇದು ಏಕಾಗ್ರತೆಯನ್ನು ಹೆಚ್ಚಿಸುವುದರಿಂದ ಜನರದಲ್ಲಿ ಅರಿವಿನ ಕಾರ್ಯ ಉತ್ತಮಪಡಿಸುವುದು. ಒಮ್ಮೆ ನಾವು ತೆಂಗಿನೆಣ್ಣೆ ಸೇವನೆ ಮಾಡಿದರೆ ಆಗ ದೇಹವು ಇದನ್ನು ಕೆಟೋನ್ ಗಳಾಗಿ ಪರಿವರ್ತಿಸುವುದು. ಇದು ಬಳಿಕ ಯಕೃತ್ ಗೆ ಹೋಗುವುದು ಅಥವಾ ತಕ್ಷಣವೇ ಅದನ್ನು ಶಕ್ತಿಯನ್ನಾಗಿ ಬಳಸಿಕೊಳ್ಳುವುದು. ಕೆಟೋನ್ ಗಳು ನಮ್ಮ ಮೆದುಳಿನ ಕ್ರಿಯೆ ಹಾಗೂ ನೆನಪನ್ನು ಹೆಚ್ಚಿಸುವುದು. ಕಾಫಿಗೆ ತೆಂಗಿನೆಣ್ಣೆ ಹಾಕಿಕೊಂಡು ಕುಡಿದಾಗ ಕೆಟೋನ್ ಮಟ್ಟವು ದೇಹದಲ್ಲಿ ಹೆಚ್ಚಾಗುವುದು. ಇದು ನಮ್ಮ ನರಗಳ ಕಾರ್ಯವನ್ನು ಉತ್ತಮಪಡಿಸುವುದು ಎಂದು ಅಧ್ಯಯನಗಳು ಹೇಳಿವೆ.

  Most Read: ಲಕ್ಷ್ಮೀ ದೇವಿ ಚಂಚಲೆ ಅಂತ ಎಲ್ಲರಿಗೂ ಗೊತ್ತು! ಆದರೆ ಇವಳ ಜನನದ ಕಥೆ ಗೊತ್ತೇ?


 • ಜೀರ್ಣಕ್ರಿಯೆ ಸುಧಾರಣೆ

  ಕಾಫಿಯು ಮಲಬದ್ಧತೆ ನಿವಾರಣೆ ಮಾಡುವುದು ಮಾತ್ರವಲ್ಲದೆ, ದೇಹವು ಸಕ್ಕರೆ ಅಂಶವನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುವುದು. ಇದರಿಂದ ಕಾಫಿಯು ಜೀರ್ಣಕ್ರಿಯೆಗೆ ನೆರವಾಗುವುದು. ಅದಾಗ್ಯೂ, ಇದನ್ನು ನೀವು ಮಿತವಾಗಿ ಸೇವನೆ ಮಾಡಬೇಕು. ಯಾಕೆಂದರೆ ಕಾಫಿ ಸೇವನೆಯಿಂದಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗಬಹುದು ಮತ್ತು ಹೊಟ್ಟೆಯ ನೋವು ಹೆಚ್ಚಿಸಬಹುದು. ಅದೇ ರೀತಿಯ ತೆಂಗಿನೆಣ್ಣೆ ಕೂಡ ದೇಹದಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಗೆ ವೇಗ ನೀಡುವುದು. ಇದು ಕರುಳಿನ ಕ್ರಿಯೆಯನ್ನು ಸುಧಾರಣೆ ಮಾಡುವುದು ಮತ್ತು ಜೀರ್ಣಕ್ರಿಯೆ ಸುಲಭವಾಗಿ ಆಗಲು ನೆರವಾಗುವುದು. ಇದು ಉರಿಯೂತವನ್ನು ಕೂಡ ಕಡಿಮೆ ಮಾಡುವುದು. ತೆಂಗಿನೆಣ್ಣೆಯು ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ನೆರವಾಗುವುದು.
  ಇಷ್ಟೆಲ್ಲಾ ಲಾಭಗಳು ತೆಂಗಿನೆಣ್ಣೆಯನ್ನು ಕಾಫಿಗೆ ಬೆರೆಸಿದಾಗ ಸಿಗುವುದು. ಇನ್ನು ತಡ ಮಾಡದೆ ನೀವು ಕಾಫಿಗೆ ತೆಂಗಿನೆಣ್ಣೆ ಬೆರೆಸಿ ಕುಡಿಯಿರಿ.


 • ಮಧುಮೇಹ ನಿಯಂತ್ರಣಕ್ಕೆ!

  ಮಧುಮೇಹವು ದೇಹದ ಒಂದು ಪ್ರಮುಖ ಸಮಸ್ಯೆಯಾಗಿದೆ. ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕವು ನಿರ್ಮಾಣವಾಗಿ ಯಾವುದೇ ರೀತಿಯ ಇನ್ಸುಲಿನ್ ದೇಹದಲ್ಲಿ ಉತ್ಪತ್ತಿಯಾಗದೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವುದು. ಮಧುಮೇಹ ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲ. ಆದರೆ ಚಿಕಿತ್ಸೆಯಿದೆ. ಕಾಫಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಚಯಾಪಚಯಾ ಕ್ರಿಯೆಯ ಆರೋಗ್ಯವಾಗಿಸಿ, ಇನ್ಸುಲಿನ್ ಹಾರ್ಮೋನು ಸಮತೋಲ ಕಾಪಾಡಿಕೊಂಡು ವಯಸ್ಸಾಗುವ ವೇಳೆ ಬರುವ ಮಧುಮೇಹ ತಡೆಯುವುದು ಎಂದು ಅಮೆರಿಕನ್ ಕೆಮಿಕಲ್ ಸೊಸೈಟಿ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ಹೇಳಿದೆ.

  Most Read: ನಾನ್ ವೆಜ್ ಪ್ರಿಯರಿಗೆ ಸಿಹಿ ಸುದ್ದಿ-'ಚಿಕನ್ ಲಿವರ್‌' ಆರೋಗ್ಯಕ್ಕೆ ಒಳ್ಳೆಯದು


 • ಆಲ್ಝೈಮೆರ್ ನಿಯಂತ್ರಣಕ್ಕೆ

  ಆಲ್ಝೈಮೆರ್ ಎನ್ನುವುದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ಮೆದುಳಿನ ಜೀವಕೋಶದ ನೆನಪು, ಕಾರ್ಯ ಮತ್ತು ಕೌಶಲ್ಯ ಹಾಳುಗೆಡವುದು. ಇದರಿಂದ ಆ ವ್ಯಕ್ತಿಯ ದೈನಂದಿನ ಚಟುವಟಿಕೆ ಮೇಲೆ ಪರಿಣಾಮವಾಗುವುದು.ಕಾಫಿಯಲ್ಲಿ ಇರುವಂತಹ ಕೆಫಿನ್ ಮೆದುಳಿನ ಕೋಶಗಳು ಆರೋಗ್ಯವಾಗಿ ಹಾಗೂ ದೀರ್ಘಕಾಲ ತನಕ ಚಟುವಟಿಕೆಯಿಂದ ಇರುವಂತೆ ಮಾಡುವುದು. ಇದರಿಂದ ಆಲ್ಝೈಮೆರ್ ಕಾಯಿಲೆ ತಡೆಯಬಹುದು ಎಂದು ಅಮೆರಿಕಾದ ಸಂಶೋಧನಾ ವರದಿ ಹೇಳಿದೆ.


 • ಖಿನ್ನತೆ ಕಡಿಮೆ ಮಾಡಲು ನೆರವಾಗುತ್ತದೆ

  ಕಾಫಿಯಲ್ಲಿರುವ ಕೆಫೀನ್ ಮೆದುಳಿನ ಮೇಲೆ ನೀಡುವ ಪ್ರಚೋದನೆಯ ಮೂಲಕ ಮೆದುಳಿನಲ್ಲಿರುವ ಕೇಂದ್ರ ನರವ್ಯೂಹ ವ್ಯವಸ್ಥೆಗೂ ಚುರುಕು ತಟ್ಟುತ್ತದೆ ಹಾಗೂ ನರಪ್ರೇಕ್ಷಕಗಳಾದ ಸೆರೋಟೋನಿನ್, ಡೋಪಮೈನ್ ಹಾಗೂ ನೋರಾಡೋಪಮೈನ್ ಎಂಬ ರಾಸಾಯನಿಕಗಳನ್ನು ಹೆಚ್ಚು ಬಿಡುಗಡೆ ಮಾಡುತ್ತದೆ. ಇವು ಮನೋಭಾವವನ್ನು ತಿಳಿಯಾಗಿಸುವ ಮೂಲಕ ಖಿನ್ನತೆಯಿಂದ ಹೊರಬರಲು ನೆರವಾಗುತ್ತವೆ. ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವುದರಿಂದ ಹೆಚ್ಚು ಕಡಿಮೆ ಇಡಿಯ ದಿನ ಸಕಾರಾತ್ಮಕವಾಗಿ ಯೋಚಿಸಲು ಸಾಧ್ಯ. ಆದರೆ ಈ ಪ್ರಮಾಣ ಇದಕ್ಕೂ ಹೆಚ್ಚಾಗಬಾರದು.

  Most Read: ಕಾಫಿ ಕುಡಿಯುವುದರಿಂದ ಆಯುಷ್ಯ ವೃದ್ಧಿಸುವುದೇ?


 • ತೂಕ ಇಳಿಸಲು ನೆರವಾಗುತ್ತದೆ

  ಕಾಫಿಯಲ್ಲಿ ಕೆಲವು ಅವಶ್ಯಕ ಖನಿಜಗಳಾದ ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ಇವೆ. ಇವು ದೇಹದಲ್ಲಿರುವ ಇನ್ಸುಲಿನ್ ಹೆಚ್ಚು ಬಳಕೆಯಾಗಲು ಕಾರಣವಾಗುತ್ತವೆ. ಪರಿಣಾಮವಾಗಿ ರಕ್ತದಲ್ಲಿರುವ ಸಕ್ಕರೆಯ ಮಟ್ಟ ನಿಯಂತ್ರಿಸಲ್ಪಡುತ್ತವೆ ಹಾಗೂ ಈ ಮೂಲಕ ದೇಹ ಇನ್ನಷ್ಟು ಸಕ್ಕರೆ ಬೇಡುವುದರಿಂದ ತಡೆದಂತಾಗುತ್ತದೆ. ಹಾಗೂ ಕಾಫಿಯಲ್ಲಿರುವ ಕೆಫೀನ್ ದೇಹದಲ್ಲಿರುವ ಕೊಬ್ಬಿನ ಕಣಗಳನ್ನು ಒಡೆದು ಬಳಸಿಕೊಳ್ಳಲು ಸುಲಭವಾಗಿಸುವ ಮೂಲಕವೂ ತೂಕ ಇಳಿಕೆಯಲ್ಲಿ ನೆರವಾಗುತ್ತದೆ.
ಬೆಳಗ್ಗೆ ಎದ್ದು ಕಾಫಿ ಕುಡಿಯುತ್ತೀರಿ. ಆ ಕಾಫಿ ಕಪ್ ಗೆ ಒಂದೆರಡು ಚಮಚ ತೆಂಗಿನೆಣ್ಣೆ ಹಾಕಿ ಕುಡಿದರೆ ಹೇಗಿರಬಹುದು ಎಂದು ಯೋಚಿಸಿ! ಇದು ನಿಮಗೆ ತುಂಬಾ ವಿಚಿತ್ರವಾಗಿ ಕಾಣಿಸಬಹುದು. ಆದರೆ ಕಾಫಿಗೆ ತೆಂಗಿನೆಣ್ಣೆ ಹಾಕಿ ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಇದು ನಿಮ್ಮ ದೇಹಕ್ಕೆ ಹೆಚ್ಚಿನ ಆರೋಗ್ಯ ಲಾಭ ನೀಡುವುದು. ಇದರಿಂದಾಗಿ ಇದನ್ನೊಂದು ಅದ್ಭುತ ಪಾನೀಯವಾಗಿಸಬಹುದು.

ಹೌದು, ನಿಮ್ಮ ಕಾಫಿಗೆ ತೆಂಗಿನೆಣ್ಣೆ ಹಾಕಿ ಕುಡಿದರೆ ಅದು ದೇಹದ ಆರೋಗ್ಯಕ್ಕೆ ಅದ್ಭುವನ್ನು ಉಂಟು ಮಾಡಲಿದೆ. ಇದರಿಂದ ಕಾಫಿಯಿಂದ ಸಿಗುವಂತಹ ಲಾಭಗಳು ಕೂಡ ಹೆಚ್ಚಾಗಲಿದೆ. ಇದಕ್ಕಾಗಿ ನೀವು ಹೆಚ್ಚು ಶ್ರಮ ವಹಿಸಬೇಕಿಲ್ಲ. ಕೇವಲ ಎರಡು ಚಮಚ ತೆಂಗಿನೆಣ್ಣೆಯನ್ನು ಕಾಫಿ ಕಪ್ ಗೆ ಹಾಕಿ ಮತ್ತು ಅದಕ್ಕೆ ಬಿಸಿಬಿಸಿಯಾಗಿರುವ ಕಾಫಿ ಹಾಕಿ. ಸರಿಯಾಗಿ ಮಿಶ್ರಣ ಮಾಡಿಕೊಂಡು ಕುಡಿಯಿರಿ. ಇದು ತೂಕ ಕಳೆದುಕೊಳ್ಳಲು, ಖಿನ್ನತೆ ದೂರ ಮಾಡಲು, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣ ಮತ್ತು ಹೃದಯದ ಕಾಯಿಲೆ ಅಪಾಯ ನಿವಾರಣೆ ಮಾಡಲು ತುಂಬಾ ಸಹಕಾರಿಯಾಗಿರಲಿದೆ. ಅತಿಯಾಗಿ ಕಾಫಿ ಸೇವನೆ ಮಾಡುವುದು ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಈ ಲೇಖನದಲ್ಲಿ ಕಾಫಿಗೆ ತೆಂಗಿನೆಣ್ಣೆ ಮಿಶ್ರಣ ಮಾಡಿದರೆ ಸಿಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

   
 
ಹೆಲ್ತ್