Back
Home » ಆರೋಗ್ಯ
ಬ್ರೇಕ್‍ಫಾಸ್ಟ್‌ನ ಮೊದಲೇ ಖಾಲಿ ಹೊಟ್ಟೆಗೆ ಸೇವಿಸಬೇಕಾದ ಆಹಾರಗಳು
Boldsky | 5th Nov, 2018 09:57 AM
 • ನೆನೆಸಿಟ್ಟ ಬಾದಾಮಿ

  ಬಾದಾಮಿಯಲ್ಲಿ ಒಳ್ಳೆಯ ಪ್ರಮಾಣದ ಮೆಗ್ನಿಶಿಯಂ, ವಿಟಮಿನ್ ಇ, ಪ್ರೋಟೀನ್, ನಾರಿನಾಂಶ, ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲವಿದೆ. ಅದಾಗ್ಯೂ, ಬಾದಾಮಿಯನ್ನು ನೀವು ಸರಿಯಾದ ಕ್ರಮದಲ್ಲಿ ಸೇವನೆ ಮಾಡದೆ ಇದ್ದರೆ ಆಗ ನಿಮಗೆ ಅದರ ಲಾಭಗಳು ಸಿಗುವುದು ಕಡಿಮೆ. ರಾತ್ರಿ ವೇಳೆ ಬಾದಾಮಿ ನೆನೆಸಿಡಿ ಮತ್ತು ಬೆಳಗ್ಗೆ ಇದನ್ನು ಸೇವಿಸಿ. ಬಾದಾಮಿ ಸಿಪ್ಪೆಯಲ್ಲಿ ಇರುವಂತಹ ಟ್ಯಾನ್ನಿನ್ ಪೋಷಕಾಂಶ ಹೀರುವಿಕೆಯನ್ನು ತಡೆಯುವುದು. ಇದನ್ನು ನೆನಸಿದಾಗ ಸಿಪ್ಪೆಯು ಸುಲಭವಾಗಿ ಬರುವುದು. ಬಾದಾಮಿಯು ಸರಿಯಾದ ಪೋಷಕಾಂಶ ಒದಗಿಸುವುದು ಮತ್ತು ದಿನಪೂರ್ತಿ ಹೊಟ್ಟೆ ತುಂಬಿದಂತೆ ಮಾಡುವುದು.


 • ನೆನೆಸಿಟ್ಟ ಬಾದಾಮಿ

  ಬಾದಾಮಿ ಬೀಜಗಳು ವಿಟಮಿನ್ Eಯನ್ನು ಸಮೃದ್ಧವಾಗಿ ಒಳಗೊ೦ಡಿರುವುದರಿ೦ದ, ಅವು ಶರೀರದ ಅನಾರೋಗ್ಯಕರ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತವೆ. ಇದರ ನೇರ ಪರಿಣಾಮವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಮೇಲೆ ಧನಾತ್ಮಕವಾಗಿ ಆಗುತ್ತದೆ. ನೀರಿನಲ್ಲಿ ನೆನೆಸಿಟ್ಟಿರುವ ಬಾದಾಮಿ ಬೀಜಗಳ ಬಳಕೆಯ ಮತ್ತೊ೦ದು ಪ್ರಯೋಜನವೆ೦ದರೆ, ಈ ಕಾಳುಗಳು ನಾವು ವಿಪರೀತವಾಗಿ ಹೊಟ್ಟೆಬಾಕರ೦ತೆ ಆಹಾರವನ್ನು ಸೇವಿಸದ೦ತೆ ಅವು ನಮ್ಮನ್ನು ತಡೆಹಿಡಿಯುತ್ತವೆ. ಇದು ಹೇಗೆ ಸಾಧ್ಯವಾಗುತ್ತದೆ ಎ೦ದರೆ, ಬಾದಾಮಿ ಬೀಜಗಳಲ್ಲಿರುವ ಏಕಪರ್ಯಾಪ್ತಗಳು ನಮ್ಮ ಹಸಿವನ್ನು ಇ೦ಗಿಸಿಬಿಡುತ್ತವೆ ಹಾಗೂ ತನ್ಮೂಲಕ ತೂಕವನ್ನು ಕಳೆದುಕೊಳ್ಳುವ೦ತೆ ಮಾಡುತ್ತವೆ.


 • ಬಿಸಿನೀರು ಮತ್ತು ಜೇನುತುಪ್ಪ

  ಜೇನುತುಪ್ಪದಲ್ಲಿ ಖನಿಜಾಂಶಗಳು, ವಿಟಮಿನ್ ಗಳು, ಫ್ಲಾವನಾಯ್ಡ್ ಗಳು ಮತ್ತು ಕಿಣ್ವಗಳಿವೆ. ಇದು ಹೊಟ್ಟೆಯನ್ನು ಶುದ್ಧೀಕರಿಸಲು ಮತ್ತು ಆರೋಗ್ಯಕ್ಕೆ ಅತೀ ಅಗತ್ಯವಾಗಿರುವುದು. ಖಾಲಿ ಹೊಟ್ಟೆಯಲ್ಲಿ ಬಿಸಿನೀರಿನೊಂದಿಗೆ ಜೇನುತುಪ್ಪ ಸೇವನೆ ಮಾಡಿದರೆ ಆಗ ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುವುದು. ದೇಹದ ಚಯಾಪಚಯ ಕ್ರಿಯೆ ಉತ್ತಮಪಡಿಸಿ, ದಿನವಿಡಿ ನಿಮಗೆ ಬೇಕಾಗಿರುವಂತಹ ಶಕ್ತಿಯನ್ನು ಒದಗಿಸುವುದು.

  Most Read: ಎಳೆನೀರು ಕುಡಿದರೂ ಸಾಕು, ದೇಹದ ತೂಕ ಇಳಿಸಿಕೊಳ್ಳಬಹುದು!


 • ಬಿಸಿನೀರು ಮತ್ತು ಜೇನುತುಪ್ಪ

  ಇನ್ನು ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣ ಸೇವನೆ ಮಾಡಿದಾಗ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹಾಕಲು ನೆರವಾಗುವುದು. ಇದನ್ನು ನಿಯಮಿತವಾಗಿ ಸೇವಿಸಿ, ಸರಿಯಾದ ಆಹಾರಕ್ರಮ ಪಾಲಿಸಿದರೆ ದೇಹದ ತೂಕ ಇಳಿಸಿಕೊಳ್ಳಬಹುದು. ಈ ಅದ್ಭುತ ಪಾನೀಯದ ಮತ್ತೊಂದು ಲಾಭವೆಂದರೆ ಇದಕ್ಕೆ ನಾವು ಸಕ್ಕರೆಯನ್ನು ಬಳಸುವುದಿಲ್ಲ. ಅದರ ಬದಲಿಗೆ ಜೇನುತುಪ್ಪ ಬಳಸುವ ಕಾರಣದಿಂದ ಕ್ಯಾಲರಿ ಸೇವನೆ ಶೇ.60ರಷ್ಟು ಕಡಿಮೆಯಾಗುವುದು. ಇದರಿಂದ ಪ್ರತಿನಿತ್ಯ ಬಿಸಿನೀರಿನ ಜತೆಗೆ ಜೇನುತುಪ್ಪ ಪ್ರತಿನಿತ್ಯ ಸೇವಿಸಿ. ಬಳಿಕ ಆರೋಗ್ಯಕಾರಿ ಉಪಾಹಾರ ಸೇವಿಸಿ. ಅರ್ಧ ಲಿಂಬೆ ಹಿಂಡಿದರೆ ಇದು ಮತ್ತಷ್ಟು ಪರಿಣಾಮಕಾರಿ.


 • ನೀರಿನೊಂದಿಗೆ ಗೋಧಿಹುಲ್ಲಿನ ಹುಡಿ

  ಅಮೆರಿಕಾದ ಇಲಿನಾಯ್ಸ್ ಸ್ಟೇಟ್ ಯೂನಿವರ್ಸಿಟಿ ಪ್ರಕಾರ ಗೋಧಿ ಹುಲ್ಲನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ ಆಗ ನಿಮ್ಮ ದೈನಂದಿನ ಅಗತ್ಯಕ್ಕೆ ಬೇಕಾಗಿರುವಂತಹ ಐದರಿಂದ ಒಂಬತ್ತು ತರಕಾರಿಗಳು ಅಥವಾ ಹಣ್ಣುಗಳು ಸೇವಿಸಿದಂತೆ ಆಗುವುದು. ಪೋಷಕಾಂಶವನ್ನು ಒಳಗೊಂಡಿರುವ ಗೋಧಿ ಹುಲ್ಲಿನ ಹುಡಿಯನ್ನು ನೀರಿಗೆ ಹಾಕಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಸುಧಾರಣೆಯಾಗುವುದು ಮತ್ತು ಮಲಬದ್ಧತೆಯು ತಡೆಯಬಹುದು. ಇದರಿಂದ ಕೆಲವೊಂದು ರೀತಿಯ ಹೊಟ್ಟೆಯ ಸಮಸ್ಯೆ ನಿವಾರಣೆ ಮಾಡಬಹುದು ಮತ್ತು ಆಮ್ಲ ಹಿಮ್ಮುಖವಾಗಿ ಹರಿಯುವುದನ್ನು ತಡೆಯಬಹುದು. ಗೋಧಿ ಹುಲ್ಲಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಫ್ರೀ ರ್ಯಾಡಿಕಲ್ ನಿಂದ ಕೋಶಗಳನ್ನು ರಕ್ಷಿಸುವುದು.


 • ಒಣದ್ರಾಕ್ಷಿ

  ಒಣದ್ರಾಕ್ಷಿಯಲ್ಲಿ ಹೆಚ್ಚಿನ ಮಟ್ಟದ ಪೊಟಾಶಿಯಂ, ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶವಿದೆ. ಬಾದಾಮಿಯಂತೆ ಒಣದ್ರಾಕ್ಷಿಯನ್ನು ಕೂಡ ರಾತ್ರಿ ವೇಳೆ ನೀರಿನಲ್ಲಿ ಹಾಕಿ ನೆನೆಸಬೇಕು. ಬೆಳಗ್ಗೆ ಇದರ ಸೇವನೆ ಮಾಡಿದರೆ ಅದರಿಂದ ಹೆಚ್ಚಿನ ಪೋಷಕಾಂಶಗಳು ಸಿಗುವುದು. ಇದರಲ್ಲಿ ನೈಸರ್ಗಿಕ ಸಕ್ಕರೆಯು ಇರುವ ಕಾರಣದಿಂದಾಗಿ ಇದು ಬೆಳಗ್ಗೆ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಆ ದಿನಕ್ಕೆ ನಿಮ್ಮನ್ನು ತಯಾರು ಮಾಡುವುದು. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುವುದು ಮತ್ತು ಸಿಹಿ ತಿನ್ನುವ ಬಯಕೆ ಕಡಿಮೆ ಮಾಡುವುದು. ದೇಹಕ್ಕೆ ತುಂಬಾ ಹಾನಿಕಾರವಾಗಿರುವಂತಹ ಆಮ್ಲವನ್ನು ಒಣದ್ರಾಕ್ಷಿಯು ತಟಸ್ಥಗೊಳಿಸುವುದು.

  Most Read: ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಒಣದ್ರಾಕ್ಷಿ ಸೇವಿಸಿದರೆ ಹತ್ತಾರು ಲಾಭ


 • ಪಪ್ಪಾಯಿ

  ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವನೆ ಮಾಡುವ ಕಾರಣದಿಂದ ದೇಹದಲ್ಲಿನ ವಿಷವನ್ನು ಹೊರಹಾಕಬಹುದು ಮತ್ತು ಹೊಟ್ಟೆಯ ಸರಾಗ ಕ್ರಿಯೆ ನೆರವಾಗುವುದು. ಪಪ್ಪಾಯಿಯು ವರ್ಷವಿಡಿ ನಿಮಗೆ ಲಭ್ಯವಿರುವುದು. ಇದರಿಂದ ಇದನ್ನು ಸೇವಿಸಿ. ಇದು ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುವುದು ಮತ್ತು ಹೃದಯದ ಕಾಯಿಲೆ ತಡೆಯುವುದು. ಪಪ್ಪಾಯಿ ಸೇವಿಸಿದ 45 ನಿಮಿಷ ಬಳಿಕ ನೀವು ಉಪಾಹಾರ ಸೇವಿಸಬೇಕು.


 • ಕಲ್ಲಂಗಡಿ

  ಈ ಹಣ್ಣಿನಲ್ಲಿ ಶೇ.90ರಷ್ಟು ನೀರಿನಾಂಶ ಮತ್ತು ಅಧಿಕ ವಿದ್ಯುದ್ವಿಚ್ಛೇದಗಳು ಇರುವ ಕಾರಣದಿಂದಾಗಿ ಇದು ಹೊಟ್ಟೆಗೆ ಅದ್ಭುತವನ್ನು ಉಂಟು ಮಾಡಲಿದೆ. ಕಲ್ಲಂಗಡಿಯೊಂದಿಗೆ ನಿಮ್ಮ ದಿನವನ್ನು ಆರಂಭಿಸುವ ಮೂಲಕ ದಿನವಿಡಿ ದೇಹವನ್ನು ತೇವಾಂಶದಿಂದ ಇಡುವುದು ಮತ್ತು ಕಡಿಮೆ ಕ್ಯಾಲರಿಯೊಂದಿಗೆ ಸಿಹಿ ತಿನ್ನುವ ಬಯಕೆ ತಗ್ಗಿಸುವುದು. ಕಲ್ಲಂಗಡಿ ಹಣ್ಣಿನಲ್ಲಿ ಉನ್ನತ ಮಟ್ಟದ ಲೈಕೊಪೆನೆ ಇದೆ. ಇದು ಹೃದಯ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡುವುದು.

  Most Read: ನೀವು ಯಾರೊಂದಿಗೂ ಹಂಚಿಕೊಳ್ಳಲೇಬಾರದ ಕೆಲವೊಂದು ವಸ್ತುಗಳು ಹಾಗೂ ಸಂಗತಿಗಳು


 • ಚಿಯಾ ಬೀಜಗಳು

  ಈ ಸಣ್ಣ ಬೀಜಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್, ನಾರಿನಾಂಶ, ಕ್ಯಾಲ್ಸಿಯಂ, ಆ್ಯಂಟಿಆಕ್ಸಿಡೆಂಟ್ ಮತ್ತು ಒಮೆಗಾ 3 ಕೊಬ್ಬಿನಾಮ್ಲವಿದೆ. ರಾತ್ರಿ ವೇಳೆ ಇದನ್ನು ನೀರಿನಲ್ಲಿ ನೆನೆಯಲು ಹಾಕಿದರೆ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು. ಚಿಯಾ ಬೀಜಗಳು ಹೊಟ್ಟೆಯಲ್ಲಿ ದೊಡ್ಡದಾಗಿ ದಿನವಿಡಿ ಹೊಟ್ಟೆ ತುಂಬಿದಂತೆ ಇರುವಂತೆ ಮಾಡುವುದು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ. ಇದನ್ನು ನೀರಿನಲ್ಲಿ ನೆನಸಲು ಹಾಕಿದರೆ ಜೆಲಟಿನಸ್ ಲೇಪನವು ಬಂದು ಜೀರ್ಣಾಂಗ ವ್ಯವಸ್ಥೆಯಲ್ಲಿ ಇದು ತುಂಬಾ ಸರಾಗವಾಗಿ ಸಾಗುವಂತೆ ಮಾಡುವುದು.
ಬೆಳಗ್ಗೆ ಎದ್ದ ತಕ್ಷಣ ನಿತ್ಯಕರ್ಮಗಳನ್ನು ಪೂರೈಸಿದ ಬಳಿಕ ನೀವು ಉಪಾಹಾರ ಸೇವನೆ ಮಾಡುತ್ತೀರಿ. ಹಿಂದಿನಿಂದಲೂ ಬೆಳಗ್ಗಿನ ಉಪಾಹಾರವು ದೇಹಕ್ಕೆ ಅತೀ ಅಗತ್ಯವೆಂದು ಹೇಳಿಕೊಂಡು ಬರಲಾಗಿದೆ. ಇದು ನಿಜ ಕೂಡ. ಆದರೆ ದೀರ್ಘನಿದ್ರೆಯ ಬಳಿಕ ಎದ್ದು ನೇರವಾಗಿ ಉಪಾಹಾರ ಸೇವನೆ ಮಾಡುವುದು ಸರಿಯಾದ ಕ್ರಮವಲ್ಲ. ಯಾಕೆಂದರೆ ನಾವು ಏಳೆಂಟು ಗಂಟೆ ನಿದ್ರಿಸಿರುವ ವೇಳೆ ಹೊಟ್ಟೆಯಲ್ಲಿನ ಅಂಗಾಂಗಗಳು ಕೂಡ ವಿಶ್ರಾಂತಿ ಪಡೆಯುತ್ತಲಿರುವುದು.

ಇದರಿಂದ ನೀವು ಎದ್ದ ಬಳಿಕ ಅಂಗಾಂಗಗಳಿಗೆ ಮತ್ತೆ ಕಾರ್ಯನಿರ್ವಹಿಸಲು ಕೆಲವು ಸಮಯ ಬೇಕಾಗುವುದು. ಹೀಗಾಗಿ ನೀವು ಎದ್ದ ಎರಡು ಗಂಟೆ ಬಳಿಕ ಉಪಾಹಾರ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಪೋಷಕಾಂಶ ತಜ್ಞರ ಪ್ರಕಾರ, ಚಯಾಪಚಯ ಹೆಚ್ಚಿಸಲು ಲಘುಉಪಾಹಾರದೊಂದಿಗೆ ದಿನವನ್ನು ಆರಂಭಿಸಿ. ನಿದ್ರೆಯಿಂದ ಎದ್ದ ಎರಡು ಗಂಟೆ ಬಳಿಕ ನೀವು ಉಪಾಹಾರ ಸೇವಿಸಿ ಎನ್ನುವರು. ಉಪಾಹಾರಕ್ಕೆ ಮೊದಲು ಸೇವಿಸಬೇಕಾಗಿರುವ ಕೆಲವೊಂದು ಆರೋಗ್ಯಕರ ಆಹಾರಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಲಾಗಿದೆ. ಇದನ್ನು ನೀವು ತಿಳಿಯಿರಿ.

   
 
ಹೆಲ್ತ್