Back
Home » ಪ್ರವಾಸ
ಚಿತ್ರದುರ್ಗದಲ್ಲಿ ನಡೆಯುತ್ತೆ ದುಡ್ಡಿನ ಜಾತ್ರೆ, ಹಣ ತುಂಬಿಸಲು ಚೀಲ ಹಿಡಿದುಕೊಂಡು ಬರ್ತಾರಂತೆ ಜನ್ರು
Native Planet | 5th Nov, 2018 12:06 PM
 • ದುಡ್ಡಿನ ಜಾತ್ರೆ

  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿರುವ ಕಂಚೀಪುರ ಗ್ರಾಮದಲ್ಲಿರುವ ವರದರಾಜಸ್ವಾಮಿ ದೇವಾಲಯದಲ್ಲಿ ಒಂದು ವಿಶೇಷ ಜಾತ್ರೆ ನಡೆಯುತ್ತದೆ. ಅದುವೇ ದುಡ್ಡಿನ ಜಾತ್ರೆ. ಇಲ್ಲಿ ದೇವರಿಗೆ ಹಣವನ್ನು ಎಸೆಯಲಾಗುತ್ತದೆ.

  ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ ! • ಹಣ ಹುಂಡಿಗೆ ಹಾಕುವಂತಿಲ್ಲ

  ಇಷ್ಟಾರ್ಥ ಸಿದ್ದಿಯಾದವರು ಹಣವನ್ನು ದೇವರ ಹುಂಡಿಗೆಯಾಗಲಿ ಅಥವಾ ಆಡಳಿತ ಮಂಡಳೀಗಾಗಲೀ ನೀಡುವಂತಿಲ್ಲ. ಬದಲಾಗಿ ದೇವರಿಗೆ ಎಸೆಯುತ್ತಾರೆ. ಈ ಮೂಲಕ ತಮ್ಮ ಹರಕೆ ಈಡೇರಿಸುತ್ತಾರೆ.


 • ಹಣ ಆಯ್ದುಕೊಳ್ಳು ಸಾಕಷ್ಟು ಜನರು ಬರುತ್ತಾರೆ

  ಹೀಗೆ ದೇವರ ಮೇಲೆ ತೂರಿ ಬರುವ ಹಣವನ್ನು ಆಯ್ದುಕೊಳ್ಳಲು ಭಕ್ತರು ದೇವರ ಹಿಂದೆಯೇ ಬಟ್ಟೆ ಹಿಡಿದುಕೊಂಡು ಹೋಗುತ್ತಾರೆ. ಹಣ ಆಯ್ದುಕೊಳ್ಳಲು ಭಕ್ತರು ಮುನ್ನುಗ್ಗುತ್ತಾರೆ.

  ಬೆಂಗಳೂರು ಸಮೀಪವಿರುವ ಮಾರಿಬೆಟ್ಟಕ್ಕೆ ಹೋಗಿದ್ದೀರಾ? • ಹರಕೆ ತೀರಿಸುತ್ತಾರೆ

  ಭಕ್ತರು ಕಷ್ಟ ನಿವಾರಣೆಗೆ, ಸಂತಾನ ಭಾಗ್ಯಕ್ಕೆ ಹೀಗೆ ಇನ್ನೀತರ ಬೇಡಿಕೆಯನ್ನು ಕೋರುತ್ತಾರೆ. ಅದಕ್ಕೆ ಪ್ರತಿಯಾಗಿ ದುಡ್ಡನ್ನು ನೀಡುವುದಾಗಿ ಕೋರಿಕೊಳ್ಳುತ್ತಾರೆ. ಭಕ್ತರು ತಮ್ಮ ಬೇಡಿಕೆ ಈಡೇರಿದ ನಂತರ ಜಾತ್ರೆ ಸಂದರ್ಭದಲ್ಲಿ ಹರಕೆ ತೀರಿಸುತ್ತಾರೆ.


 • ಅಂಬಿನೋತ್ಸವ

  ಜಾತ್ರೆ ಆರಂಭವಾದ ದಿನ ಅಂಬಿನೋತ್ಸವ ನಡೆಯುತ್ತದೆ. ಒಂದುವಾರ ಕಾಲ ಜಾತ್ರೆ ನಡೆಯುತ್ತದೆ. ಅಂಬಿನ ಬೆಳಗಿನ ಜಾವ ೧೬ ಸೇರಿನ ಅಕ್ಕಿಯ ಪ್ರಸಾದ ತಯಾರಿಸಿ ಭಕ್ತರಿಗೆ ಪ್ರಸಾದವನ್ನಾಗಿ ನೀಡಲಾಗುತ್ತದೆ.

  ಇಲ್ಲಿ ಜಾತ್ರೆ ದಿನ ಬೆತ್ತಲಾಗಿ ಹೋದ್ರೇನೆ ಉತ್ಸವ ಸಂಪೂರ್ಣವಾಗೋದಂತೆ !


 • ತಿರುಪತಿಯಿಂದ ಬಂದ ವರದರಾಜ

  ದೆವ್ವ, ಪಿಶಾಚಿ ಕಾಟದಿಂದ ಮುಕ್ತಿ ಸಿಗುತ್ತದೆ. ಒಳ್ಳೆಯ ಉದ್ಯೋಗ ದೊರೆಯತ್ತದೆ, ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು, ವರದರಾಜ ಸ್ವಾಮಿ ತಿರುಪತಿಯಿಂದ ಬಂದನೆಂದು ಹೇಳಲಾಗುತ್ತದೆ.


 • ಚೀಲಗಳನ್ನೂ ತರುತ್ತಾರೆ

  ಇಲ್ಲಿನ ವರದರಾಜನಿಗೆ ವರ್ಷಕ್ಕೊಮ್ಮೆ ಮಾತ್ರ ಅಂದರೆ ಜಾತ್ರೆಯ ಸಂದರ್ಭದಲ್ಲಿ ಮಾತ್ರ ನಾಮ ಹಾಕಲಾಗುತ್ತದೆ. ಇಲ್ಲಿಗೆ ಜಾತ್ರೆಗೆ ಬರುವವರು ತಮ್ಮ ಜೊತೆ ಚೀಲಗಳನ್ನೂ ಹಿಡಿದುಕೊಂಡು ಬರುತ್ತಾರೆ. ಹಣ ಆರಿಸಿಕೊಳ್ಳೆಂದೇ ಸಾಕಷ್ಟು ಜನರು ಬರುತ್ತಾರೆ.

  ಹುಬ್ಬಳ್ಳಿಯಲ್ಲಿರುವ ನೃಪತುಂಗ ಬೆಟ್ಟ ಹತ್ತಿದ್ದೀರಾ?


 • ದುಡ್ಡಿನ ಮಳೆ

  ತಮ್ಮ ಕಷ್ಟಗಳು ನಿವಾರಣೆಯಾಗಿದೆ, ಬೇಡಿಕೆಗಳು ಈಡೇರಿದೆ ಎನ್ನುವುದು ಭಕ್ತರ ಅನಿಸಿಕೆ. ಹೊರ ರಾಜ್ಯದ ಭಕ್ತರೂ ಇಲ್ಲಿ ಬಂದು ಎರಡು ದಿನಗಳ ಕಾಲ ಉಳಿತಾರೇ. ಇಲ್ಲಿ ಜಾತ್ರೆಯ ದಿನ ಎರಡು ದಿನಗಳ ಕಾಲ ದುಡ್ಡನ್ನು ದೇವರಿಗೆ ಎಸೆಯಲಾಗುತ್ತದೆ.
ವಿಷ್ಣುವಿನ ಇನ್ನೊಂದು ಹೆಸರೇ ವರದರಾಜ. ಈ ವರದರಾಜಸ್ವಾಮಿಯ ದೇವಾಲಯವೊಂದು ಚಿತ್ರದುರ್ಗ ಜಿಲ್ಲೆಯಲ್ಲಿದೆ. ಅಲ್ಲಿ ನಡೆಯುವ ಜಾತ್ರೆಯೂ ವಿಶೇಷವಾಗಿದೆ. ಇಲ್ಲಿನ ದೇವರಿಗೆ ದುಡ್ಡಿನ ಹರಕೆ ಹೇಳುತ್ತಾರೆ. ಅದರಂತೆಯೇ ಜಾತ್ರೆಯ ದಿನ ದುಡ್ಡನ್ನು ದೇವರ ಮೇಲೆ ಎಸೆಯುತ್ತಾರೆ. ಇಲ್ಲಿ ನೀವು ಲಕ್ಷ ರೂ. ಹರಕೆ ಕಟ್ಟಿದ್ರೂ ಅದನ್ನು ದೇವರ ಮೇಲೆ ಎರೆಯಬೇಕು.

   
 
ಹೆಲ್ತ್