Back
Home » ಆರೋಗ್ಯ
ಕೆಂಪು ಈರುಳ್ಳಿಯ ರಸ ಬಳಸಿ ಕೂಡ, ಥೈರಾಯ್ಡ್ ಸಮಸ್ಯೆಯನ್ನು ಗುಣಪಡಿಸಬಹುದು!
Boldsky | 5th Nov, 2018 12:10 PM
 • ಈರುಳ್ಳಿಯನ್ನು ಎರಡು ತುಂಡುಗಳನ್ನಾಗಿ ಮಾಡಿ

  ಸಂಜೆ ವೇಳೆ ಈರುಳ್ಳಿಯನ್ನು ಎರಡು ತುಂಡುಗಳನ್ನಾಗಿ ಮಾಡಿ. ಇದರ ರಸವು ಈ ವೇಳೆ ಹೊರಬರುವುದು. ಇದನ್ನು ಬಳಸಿಕೊಂಡು ಕುತ್ತಿಗೆ ಭಾಗದಲ್ಲಿ ಇರುವಂತಹ ಥೈರಾಯ್ಡ್ ಗ್ರಂಥಿಗಳಿಗೆ ನೀವು ತುಂಬಾ ನಯವಾಗಿ, ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ಕುತ್ತಿಗೆಯನ್ನು ತೊಳೆಯದ ಹಾಗೆ ನೀವು ಹೋಗಿ ಮಲಗಿಕೊಳ್ಳಿ. ಇದರಿಂದ ಈರುಳ್ಳಿ ರಸವು ರಾತ್ರಿ ವೇಳೆ ಅದರ ಕಾರ್ಯ ಮಾಡುವುದು. ಈರುಳ್ಳಿ ರಸವು ನೈಸರ್ಗಿಕವಾಗಿ ಥೈರಾಯ್ಡ್ ಕಾರ್ಯವನ್ನು ಉತ್ತೇಜಿಸುವುದು.


 • ಇನ್ನೊಂದು ವಿಧಾನ

  *ಕೆಂಪು ಈರುಳ್ಳಿಯನ್ನು ಅರ್ಧ ಮಾಡಿ.
  *ರಾತ್ರಿ ಮಲಗುವ ಮೊದಲು ನೀವು ಕೆಂಪು ಈರುಳ್ಳಿಯನ್ನು ತುಂಡರಿಸಿಕೊಳ್ಳಿ. ಇದರಿಂದ ರಸವು ಹೊರಗೆ ಬರುತ್ತಲಿರಲಿ.
  *ಈ ಈರುಳ್ಳಿ ತುಂಡುಗಳಿಂದ ಕುತ್ತಿಗೆ ಭಾಗಕ್ಕೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ.
  *ಈ ವೇಳೆ ನೀವು ಥೈರಾಯ್ಡ್ ಗ್ರಂಥಿಗಳನ್ನು ಗಮನದಲ್ಲಿಟ್ಟುಕೊಂಡು ಮಸಾಜ್ ಮಾಡಿ.
  *ಮಲಗುವ ಮೊದಲು ಕುತ್ತಿಗೆ ತೊಳೆಯಲು ಅಥವಾ ಒರೆಸಿಕೊಳ್ಳಬೇಡಿ.
  *ಕೆಂಪು ಈರುಳ್ಳಿಯು ಚರ್ಮವನ್ನು ಶುಚಿಗೊಳಿಸುವುದು ಮತ್ತು ಫೋಸ್ಪರಿಕ್ ಆಮ್ಲವು ಬ್ಯಾಕ್ಟೀರಿಯಾವನ್ನು ಕೊಂದು ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುವುದು.
  *ಕೆಂಪು ಈರುಳ್ಳಿಯಲ್ಲಿ ಹೆಚ್ಚಿನ ಮಟ್ಟದ ಕ್ವೆರ್ಸೆಟಿನ್ ಅಂಶವಿದೆ ಮತ್ತು ಇದು ಬೇರಿನ ಭಾಗಕ್ಕೆ ತುಂಬಾ ಹತ್ತಿರದ ಭಾಗದಲ್ಲಿ ಮತ್ತು ಹೊರಗಿನ ಚರ್ಮಕ್ಕೆ ಹತ್ತಿರವಾಗಿರುವಂತಹ ಸಿಪ್ಪೆಯ ಭಾಗದಲ್ಲಿ ಕಂಡುಬರುವುದು.
  *ಬಿಳಿ ಹಾಗೂ ಕೆಂಪು ಈರುಳ್ಳಿಯನ್ನು ಔಷಧಿಯಾಗಿ ಬಳಸಿ ಕೊಳ್ಳಬಹುದಾಗಿದೆ. ಕ್ವೆರ್ಸೆಟಿನ್ ನಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ, ಆ್ಯಂಟಿಹಿಸ್ಟಮೈನ್ ಮತ್ತು ಕೊಲೆಸ್ಟ್ರಾಲ್ ವಿರೋಧಿ ಗುಣಗಳು ಇವೆ. *ಈರುಳ್ಳಿಯಲ್ಲಿ ಇರುವಂತಹ ಆ್ಯಂಟಿಬಯೋಟಿಕ್ ಗುಣಗಳಿಂದಾಗಿ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಇದು ಹೊರಗೆ ಹಾಕುವುದು. ಈರುಳ್ಳಿಯನ್ನು ಹಸಿಯಾಗಿ ಬಳಸಿಕೊಂಡರೆ ಅದರಿಂದ ಎಲ್ಲಾ ರೀತಿಯ ಔಷಧೀಯ ಗುಣಗಳು ಲಭ್ಯವಾಗುವುದು.

  Most Read: ಎಳೆನೀರು ಕುಡಿದರೂ ಸಾಕು, ದೇಹದ ತೂಕ ಇಳಿಸಿಕೊಳ್ಳಬಹುದು!


 • ಕೆಮ್ಮು ಮತ್ತು ಶೀತಕ್ಕೆ ಈರುಳ್ಳಿಯು ಪರಿಹಾರ

  ಉಸಿರಾಟದ ಸಮಸ್ಯೆಯಾಗಿರುವಂತಹ ಕೆಮ್ಮು ಮತ್ತು ಶೀತಕ್ಕೆ ಈರುಳ್ಳಿಯು ಪರಿಹಾರ ನೀಡುವುದು. ಹಸಿಯಾಗಿ ತಿಂದರೆ ಇದು ತುಂಬಾ ಶ್ಲೇಷಹಾರಿಯಾಗಿ ಕೆಲವ ಮಾಡುವುದು. ಇದರಲ್ಲಿ ಇರುವಂತಹ ಫ್ಲಾವನಾಯ್ಡ್ ಮತ್ತು ಸಲ್ಫರ್ ಅಂಶವು ಹೃದಯಕ್ಕೆ ತುಂಬಾ ಲಾಭಕಾರಿಯಾಗಿರುವುದು. ಇದು ಕೊಲೆಸ್ಟ್ರಾಲ್ ಮಟ್ಟ, ಮಧುಮೇಹ, ಸಂಧಿವಾತ ಮತ್ತು ಆ್ಯಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು.


 • ಈರುಳ್ಳಿಯು ಶೀತ ನಿವಾರಿಸುವುದು

  ಶೀತ ನಿವಾರಣೆ ಮಾಡುವಲ್ಲಿ ಈರುಳ್ಳಿಯು ತುಂಬಾ ಪರಿಣಾಮಕಾರಿ ಎಂದು ಹೇಳಲಾಗಿದೆ. ಶೀತದ ಲಕ್ಷಣಗಳು ಕಾಣಿಸಿಕೊಂಡ ವೇಳೆ ನೀವು ಹಸಿ ಈರುಳ್ಳಿ ತಿನ್ನಿ ಅಥವಾ ಈರುಳ್ಳಿ, ಶುಂಠಿ ಮತ್ತು ಜೇನುತುಪ್ಪ ಹಾಕಿ ಕುದಿಸಿದ ನೀರು ಕುಡಿಯಿರಿ. ಹಸಿ ಈರುಳ್ಳಿ ಸೇವಿಸಿದರೆ ಆಗ ಸೈನಸ್ ನ್ನು ಇದು ಶುದ್ಧೀಕರಿಸುವುದು ಮತ್ತು ಇದೇ ವೇಳೆ ಈರುಳ್ಳಿ ಚಾ ಆ್ಯಂಟಿಬಯೋಟಿಕ್ ರೀತಿ ಕೆಲಸ ಮಾಡಿ, ನೋವಿರುವ ಗಂಟಲಿಗೆ ಶಮನ ನೀಡುವುದು.


 • ಜ್ವರದ ವಿರುದ್ಧ ಹೋರಾಡುವುದು

  ಈರುಳ್ಳಿಯಿಂದ ಜ್ವರವನ್ನು ಶಮನ ಮಾಡುವುದು ನಿಮಗೆ ತುಂಬಾ ವಿಚಿತ್ರವೆಂದು ಅನಿಸಬಹುದು.ಆದರೆ ಇದನ್ನು ಬಳಸಿದವರು ಮಾತ್ರ ಇದರ ಲಾಭ ಪಡೆದುಕೊಂಡಿರುವುದು ಖಚಿತ.ಹೆಚ್ಚಿನ ಜ್ವರ ಕಡಿಮೆ ಮಾಡಿಕೊಳ್ಳಲು ಕೆಳಗಿನ ಕೆಲವೊಂದು ವಿಧಾನಗಳನ್ನು ಪಾಲಿಸಿಕೊಂಡು ಹೋಗಬೇಕು.
  *ತುರಿದುಕೊಂಡಿರು ಬಟಾಟೆ,ಈರುಳ್ಳಿ ಮತ್ತು ಒಂದು ಎಸಲು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಎರಡು ಸಾಕ್ಸ್ ಗಳ ಒಳಗಡೆ ಹಾಕಿಕೊಳ್ಳಿ.
  *ಈ ಸಾಕ್ಸ್ ನ್ನು ನೀವು ರಾತ್ರಿ ಮಲಗುವ ವೇಳೆ ಧರಿಸಿ.
  *ಆ್ಯಪಲ್ ಸೀಡರ್ ವಿನೇಗರ್ ನಿಂದ ಅದ್ದಿಕೊಂಡಿರುವಂತಹ ಟವೆಲ್ ನ್ನು ಹಣೆಗೆ ಇಡಿ. ಇದರಿಂದ ಮುಂದಿನ ಕೆಲವು ಗಂಟೆಗಳಲ್ಲಿ ತಾಪಮಾನವು ಖಂಡಿತವಾಗಿಯೂ ಕಡಿಮೆಯಾಗುವುದು.


 • ಕೆಮ್ಮಿಗೆ ತುಂಬಾ ಪರಿಣಾಮಕಾರಿ ಈರುಳ್ಳಿ

  ಕೆಮ್ಮು ನಿವಾರಣೆ ಮಾಡಲು ನೀವು ಈ ವಿಧಾನಗಳನ್ನು ಪಾಲಿಸಿಕೊಂಡು ಹೋಗಬೇಕು.
  • ದೊಡ್ಡ ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ಎರಡು ತುಂಡು ಮಾಡಿ.
  • ತುಂಡಿನ ಮೇಲಿನ ಭಾಗಕ್ಕೆ ½ ಚಮಚ ಬೆಲ್ಲ ಸವರಿಕೊಳ್ಳಿ.
  • ಒಂದು ಗಂಟೆ ಕಾಲ ಹಾಗೆ ಬಿಡಿ ಮತ್ತು ಬಳಿಕ ಇದರಿಂದ ಬಂದಿರುವ ರಸ ಪಡೆಯಿರಿ.
  • ಇದನ್ನು ದಿನದಲ್ಲಿ ಎರಡು ಸಲ ಸೇವಿಸಿ.
  ಬೆಲ್ಲವು ಈರುಳ್ಳಿಯಲ್ಲಿರುವಂತಹ ಔಷಧೀಯ ಗುಣವನ್ನು ಹೊರಗೆ ತರುವುದು ಮತ್ತು ಇದರಿಂದ ರಸವು ತುಂಬಾ ಪರಿಣಾಮಕಾರಿಯಾಗುವುದು. ಹೆಚ್ಚಿನ ಜನರು ಕೆಮ್ಮಿನ ಸಿರಪ್ ನ್ನು ಕಡೆಗಣಿಸುವರು. ಈ ಸಿರಪ್ ನ್ನು ಬಳಸುವಂತಹ ಜನರು ಇದು ತುಂಬಾ ಪರಿಣಾಮಕಾರಿ, ನೈಸರ್ಗಿಕ ಮತ್ತು ಅಗ್ಗವಾಗಿರುವಂತಹದ್ದು ಎಂದು ಪರಿಗಣಿಸಿದ್ದಾರೆ.


 • ಕಣ್ಣಿನ ಕಿರಿಕಿರಿ ತಪ್ಪಿಸುವುದು

  ಈರುಳ್ಳಿ ಕತ್ತರಿಸುವಾಗ ಪ್ರತಿಯೊಬ್ಬಳು ಕಣ್ಣೀರು ಹಾಕುವರು. ಈ ರೀತಿ ಕಣ್ಣೀರು ಹಾಕಿದರೆ ಅದರಿಂದ ಕಣ್ಣಿಗೆ ಕಿರಿಕಿರಿ ಉಂಟು ಮಾಡುವಂತಹ ಅಂಶವು ನೀರಿನೊಂದಿಗೆ ಹೊರಗೆ ಬರುವುದು. ಆದರೆ ಕಣ್ಣಿನ ಸನಿಹಕ್ಕೆ ಈರುಳ್ಳಿ ತರಬೇಡಿ. ಯಾಕೆಂದರೆ ಇದರಿಂದ ಪರಿಸ್ಥಿತಿಯು ಮತ್ತಷ್ಟು ಕೆಡಬಹುದು.

  Most Read: ನಿಮಗೆ ಥೈರಾಯ್ಡ್ ಸಮಸ್ಯೆ ಇದ್ದರೆ ಇಲ್ಲಿದೆ ನೋಡಿ ಸುಲಭ ಪರಿಹಾರ


 • ಕಿವಿನೋವಿನಿಂದ ರಕ್ಷಿಸುತ್ತದೆ

  ಈರುಳ್ಳಿಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಕಿವಿಯ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ಕಿವಿಯಲ್ಲಿ ಸೋಂಕಾಗಿದ್ದು ನೋವಿದ್ದರೆ, ಅಥವಾ ಕಿವಿಯ ಒಳಗೆ ಹೆಚ್ಚಿನ ಪ್ರಮಾಣದಲ್ಲಿ ಮೇಣ ತುಂಬಿಕೊಂಡಿದ್ದರೆ ಒಂದು ಚಿಕ್ಕ ತುಂಡು ಈರುಳ್ಳಿಯನ್ನು ಕಿವಿಯೊಳಕ್ಕೆ ಕೆಲವು ನಿಮಿಷಗಳವರೆಗೆ ತುರುಕಿಸಿ. ಇದರಿಂದ ಮೇಣ ಮೃದುವಾಗಿ ಸುಲಭವಾಗಿ ಹೊರಬರಲು ಸಾಧ್ಯವಾಗುತ್ತದೆ.


 • ಹೃದಯದ ಆರೋಗ್ಯಕ್ಕೆ

  ಹೃದಯ ಇಡಿಯ ದೇಹಕ್ಕೆ ರಕ್ತ ಪೂರೈಸಲು ಸತತವಾಗಿ ಬಡಿಯುತ್ತಲೇ ಇರಬೇಕು. ಇದಕ್ಕಾಗಿ ಹೃದಯಕ್ಕೂ ರಕ್ತಪೂರೈಕೆಯ ಅಗತ್ಯವಿದೆ.ಈ ರಕ್ತನಾಳಗಳಲ್ಲಿ ಕೊಂಚವಾದರೂ ರಕ್ತ ಹೆಪ್ಪುಗಟ್ಟಲು ತೊಡಗಿದರೆ ನಿಧಾನವಾಗಿ ಹೃದಯಸ್ತಂಭನದ ಸಾಧ್ಯತೆಗಳು ಹೆಚ್ಚುತ್ತಾ ಹೋಗುತ್ತವೆ. ಹಾಗಾಗಿ ಕೆಂಪು ಈರುಳ್ಳಿಯ ನಿಯಮಿತ ಸೇವನೆಯಿಂದ ಈ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆಯಾಗಿ ಹೃದಯದ ಕ್ಷಮತೆ ಹೆಚ್ಚುತ್ತದೆ, ತನ್ಮೂಲಕ ಆರೋಗ್ಯ ಉತ್ತಮಗೊಳ್ಳುತ್ತದೆ.

  Most Read: ನೈಸರ್ಗಿಕ ಜ್ಯೂಸ್ ಸೇವಿಸಿ-ಥೈರಾಯ್ಡ್ ಸಮಸ್ಯೆಯಿಂದ ಮುಕ್ತರಾಗಿ


 • ಅಜೀರ್ಣಕ್ಕೆ ಉತ್ತಮ ಪರಿಹಾರ ನೀಡುತ್ತದೆ

  ಒಂದು ವೇಳೆ ಅಜೀರ್ಣದ ತೊಂದರೆ ಇದ್ದರೆ ಹಸಿ ಈರುಳ್ಳಿಯನ್ನು ತಿನ್ನುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಹಸಿ ಈರುಳ್ಳಿಯನ್ನು ಅನ್ನದೊಂದಿಗೆ ಕಲಸಿ ತಿನ್ನುವ ಮೂಲಕ, ಜೊತೆಗೆ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಸೇರಿಸಿ ತಿಂದರೆ ಅಜೀರ್ಣದ ತೊಂದರೆ ಶೀಘ್ರವೇ ಕಡಿಮೆಯಾಗುತ್ತದೆ.
ನಾವು ಪ್ರತಿನಿತ್ಯವು ಆಹಾರ ಪದಾರ್ಥದಲ್ಲಿ ಬಳಸಿಕೊಳ್ಳುವಂತಹ ಈರುಳ್ಳಿಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ನೀವು ಈಗಾಗಲೇ ಬೋಲ್ಡ್ ಸ್ಕೈಯಲ್ಲಿ ಹಲವಾರು ಸಲ ಓದಿರಬಹುದು. ಈರುಳ್ಳಿಯು ಹಲವಾರು ಸೋಂಕನ್ನು ತಡೆಯುವುದು ಮತ್ತು ಕಾಯಿಲೆಗಳು ಬರದಂತೆ ಮಾಡುವುದು. ಈರುಳ್ಳಿಯು ಬ್ಯಾಕ್ಟೀರಿಯಾ ಕೊಲ್ಲುವುದು ಮಾತ್ರವಲ್ಲದೆ ಅದನ್ನು ಶುದ್ದೀಕರಿಸುವುದು.

ಈರುಳ್ಳಿಯಲ್ಲಿ ಇರುವಂತಹ ಫೋಸ್ಪರಿಕ್ ಆಮ್ಲವು ಈ ಪರಿಣಾಮವನ್ನು ನೀಡುವುದು. ಥೈರಾಯ್ಡ್ ಗ್ರಂಥಿಗಳನ್ನು ಸುಧಾರಣೆ ಮಾಡಲು ನೀವು ಇಲ್ಲಿ ತುಂಬಾ ಸರಳ ಹಾಗೂ ಶೀಘ್ರವಾದ ಕೆಲವೊಂದು ಮನೆಮದ್ದನ್ನು ಬಳಸಿಕೊಳ್ಳಬಹುದು. ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಈರುಳ್ಳಿಯು ತುಂಬಾ ಅದ್ಭುತವಾಗಿ ಕೆಲಸ ಮಾಡುವುದು ಎಂದು ರಷ್ಯಾದ ಇಗೊರ್ ನಾಝ್ಕಿನ್ ಎನ್ನುವ ವೈದ್ಯರು ಪತ್ತೆ ಮಾಡಿದ್ದಾರೆ. ಕೆಂಪು ಈರುಳ್ಳಿಯು ಇಲ್ಲಿ ಪರಿಣಾಮಕಾರಿ ಆಗಿರುವುದು.

ಸಂಜೆ ವೇಳೆ ಈರುಳ್ಳಿಯನ್ನು ಎರಡು ತುಂಡುಗಳನ್ನಾಗಿ ಮಾಡಿ. ಇದರ ರಸವು ಈ ವೇಳೆ ಹೊರಬರುವುದು. ಇದನ್ನು ಬಳಸಿಕೊಂಡು ಕುತ್ತಿಗೆ ಭಾಗದಲ್ಲಿ ಇರುವಂತಹ ಥೈರಾಯ್ಡ್ ಗ್ರಂಥಿಗಳಿಗೆ ನೀವು ತುಂಬಾ ನಯವಾಗಿ, ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ಕುತ್ತಿಗೆಯನ್ನು ತೊಳೆಯದ ಹಾಗೆ ನೀವು ಹೋಗಿ ಮಲಗಿಕೊಳ್ಳಿ. ಇದರಿಂದ ಈರುಳ್ಳಿ ರಸವು ರಾತ್ರಿ ವೇಳೆ ಅದರ ಕಾರ್ಯ ಮಾಡುವುದು. ಈರುಳ್ಳಿ ರಸವು ನೈಸರ್ಗಿಕವಾಗಿ ಥೈರಾಯ್ಡ್ ಕಾರ್ಯವನ್ನು ಉತ್ತೇಜಿಸುವುದು.

   
 
ಹೆಲ್ತ್