Back
Home » ಪ್ರವಾಸ
ಗೋವಾದಲ್ಲಿ ಬ್ಯಾಚುಲರ್ಸ್ ಪಾರ್ಟಿ ಮಾಡೋವಾಗ ಇದನ್ನು ನೆನಪಿಟ್ಟುಕೊಳ್ಳಿ
Native Planet | 5th Nov, 2018 12:31 PM
 • ಹೆಚ್ಚಿನವರುಇಷ್ಟಪಡೋದು ಗೋವಾ

  ಆದರೆ ಬಹುತೇಕರು ಬ್ಯಾಚುಲರ್ಸ್ ಪಾರ್ಟಿ ಮಾಡೋಕೆ ಇಷ್ಟಪಡೋದು ಗೋವಾವನ್ನು. ಜೀವನದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರೂ ಗೋವಾಕ್ಕೆ ಹೋಗಲು ಇಷ್ಟಪಡ್ತಾರೆ. ಗೋವಾದ ಕಡಲತೀರದಲ್ಲಿ ಶಾಂತವಾಗಿ ಕಾಲಕಳೆಯಲು ಇಚ್ಛಿಸುತ್ತಾರೆ. ಈ ಸ್ಥಳವು ಪಾರ್ಟಿ ಮಾಡಲು ಸೂಕ್ತವಾಗಿದೆ.

  ಐದು ಮುಖ, ಐದು ಶರೀರವುಳ್ಳ ಬೆಂಗಳೂರಿನ ಪಂಚಮುಖ ಗಣೇಶನ ದರ್ಶನ ಪಡೆದಿದ್ದೀರಾ?


 • ಬೆಸ್ಟ್‌ ತಾಣ

  ಇನ್ನೂ ಯುವಕ/ಯುವತಿಯರಿಗಂತೂ ಇದು ಬೆಸ್ಟ್‌ ತಾಣವಾಗಿದೆ. ಒಂದು ವೇಳೆ ನೀವು ನಿಮ್ಮ ಬ್ಯಾಚುಲರ್ಸ್ ಪಾರ್ಟಿಯನ್ನು ಗೋವಾದಲ್ಲಿ ಮಾಡಡಬೇಕೆಂದಿದ್ದರೆ ಅಲ್ಲಿ ಈ ಎಲ್ಲಾ ಆಪ್ಷನ್‌ಗಳನ್ನು ಬಳಸಿಕೊಳ್ಳಬಹುದು.


 • ತಂಗಲು ಸಾಕಷ್ಟು ರೆಸಾರ್ಟ್‌ಗಳಿವೆ

  ಗೋವಾದಲ್ಲಿ ತಂಗಲು ಬಹಳಷ್ಟು ವಿಲ್ಲಾ. ಬಂಗಲೆ, ರೆಸಾರ್ಟ್‌ಗಳಿವೆ. ನೀವು ನಿಮ್ಮ ಸ್ನೇಹಿತರೊಂದಿಗೆ ಇಲ್ಲಿ ಎಂಜಾಯ್ ಮಾಡಬಹುದು. ಒಂದು ವೇಳೆ ನಿಮಗೆ ಪ್ರೈವೆಸಿ ಬೇಕೆಂದಿದ್ದರೆ ನೀವು ಪ್ರೈವೆಟ್ ಮನೆಗಳನ್ನೂ ಪಡೆಯಬಹುದು. ಲೀಲಾ ಗೋವಾ, ಗ್ರ್ಯಾಂಡ್ ಹಯಾತ್ , ವಿವಾಂತ ತಾಜ್‌ನಂತಹ ಆಯ್ಕೆಯೂ ಇದೆ.

  ಚಿತ್ರದುರ್ಗದಲ್ಲಿ ನಡೆಯುತ್ತೆ ದುಡ್ಡಿನ ಜಾತ್ರೆ, ಹಣ ತುಂಬಿಸಲು ಚೀಲ ಹಿಡಿದುಕೊಂಡು ಬರ್ತಾರಂತೆ ಜನ್ರು


 • ಜಲಕ್ರೀಡೆಗಳು

  ಗೋವಾದಲ್ಲಿ ವಾಟರ್‌ಸ್ಪೋರ್ಟ್ಸ್ ಕೂಡಾ ಬಹಳ ಫೇಮಸ್. ಇಲ್ಲಿ ನಾನಾ ರೀತಿಯ ಜಲಕ್ರೀಡೆಗಳನ್ನು ನೀವು ಎಂಜಾಯ್ ಮಾಡಬಹುದು. ಅವುಗಳಲ್ಲಿ ಸ್ಕೂಬಾ ಡೈವಿಂಗ್, ಕಯಾಕಿಂಗ್,ಸೇಲಿಂಗ್ , ಜೆಟ್‌ ಸ್ಕೇಯಿಂಗ್, ಬನಾನಾ ರೈಡ್‌ ಮುಂತಾದ ರೋಮಾಂಚನಕಾರಿ ಜಲಕ್ರೀಡೆಗಳಿವೆ. ಇವುಗಳಲ್ಲಿ ಕೆಲವಲ್ಲಿ ಅನ್‌ಲಿಮಿಟೆಡ್ ಬಿಯರ್ ಹಾಗು ಲಂಚ್‌ನ ಆಫರ್ ಕೂಡಾ ಇರುತ್ತವೆ.


 • ಕ್ರೂಜ್ ಪಾರ್ಟಿ

  ನಿಮ್ಮ ಬ್ಯಾಚುಲರ್ಸ್ ಪಾರ್ಟಿಯನ್ನು ಇನ್ನಷ್ಟು ರೋಮಾಂಚನಕಾರಿಯಾಗಿಸಲು ಕ್ರೂಜ್ ಪಾರ್ಟಿಯನ್ನು ಮಿಸ್‌ ಮಾಡಲೇ ಬೇಡಿ. ಈ ಪಾರ್ಟಿಯು ನಿಮಗೆ ಹಾಗೂ ನಿಮ್ಮ ಸ್ನೇಹಿತರಿಗೆ ಜೀವನ ಪರ್ಯಂತ ನೆನಪಿರುತ್ತದೆ. ಈ ಕ್ರೂಜ್ ಪಾರ್ಟಿ ಗೋವಾದಲ್ಲಿ ನೀವು ಪಡೆಯಬಹುದಾದ ಬೆಸ್ಟ್ ಅನುಭವ ಎಂದೇ ಹೇಳಬಹುದು.

  ಕೋಲಾರದ ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ!


 • ಗೋವಾದಲ್ಲಿ ಪಾರ್ಟಿ

  ಗೋವಾದಲ್ಲಿ ಹೆಚ್ಚಾಗಿ ಜನರು ಹೋಗೋದು ಬೀಚ್‌ ಪಾರ್ಟಿ ಮಾಡೋಕೆ. ಬೀಚ್‌ನಲ್ಲಿ ಆಟವಾಡೋಕೆ. ಇನ್ನು ಗೋವಾದ ಬೀಚ್‌ನಲ್ಲಿ ನಿಮಗೆ ಒಬ್ಬರಲ್ಲ ಒಬ್ಬರು ಪಾರ್ಟಿ ಮಾಡುವವರು ಸಿಕ್ಕೇ ಸಿಕ್ತಾರೆ.


 • ಭೇಟಿಗೆ ಸೂಕ್ತ ಸಮಯ

  ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ನವಂಬರ್‌ನಿಂದ ಫೆಬ್ರವರಿ. ಈ ಸಮಯದಲ್ಲಿ ಅಲ್ಲಿನ ವಾತಾವರಣ ಚೆನ್ನಾಗಿರುತ್ತದೆ. ಹಾಗು ಎಂಜಾಯ್ ಮಾಡಲು ಅನುಕೂಲಕರವಾಗಿರುತ್ತದೆ.
ಈಗೀನ ಯುವಕ/ಯುವತಿಯರಲ್ಲಿ ಮದುವೆಗೂ ಮುಂಚೆ ಬ್ಯಾಚುಲರ್ಸ್ ಪಾರ್ಟಿ ಮಾಡೋದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಬ್ಯಾಚುಲರ್ಸ್ ಪಾರ್ಟಿ ಅಂದ್ರೆ ಅದ್ರಲ್ಲಿ ಎಲ್ಲವೂ ಇರುತ್ತೆ. ಗುಂಡು, ತುಂಡು, ಡಿಸ್ಕೋ ಹೀಗೆ ಎಲ್ಲಾ ರೀತಿಯ ಮನೋರಂಜನೆಗಳಿರುತ್ತವೆ. ಬ್ಯಾಚುಲರ್ಸ್ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗೋದು ಯಾವ ತಾಣವನ್ನು ಆಯ್ಕೆ ಮಾಡೋದು ಅನ್ನೋದು ಹೆಚ್ಚಿನವರಿಗಿರೋ ಕನ್‌ಫ್ಯೂಷನ್.

   
 
ಹೆಲ್ತ್