Back
Home » ಆರೋಗ್ಯ
ಖಾಲಿ ಹೊಟ್ಟೆಗೆ ಚಿಟಿಕೆಯಷ್ಟು ಕರಿಮೆಣಸಿನ ಪುಡಿ ಬೆರೆಸಿ ಕುಡಿದರೆ, ಆರೋಗ್ಯಕ್ಕೆ ಒಳ್ಳೆಯದು
Boldsky | 5th Nov, 2018 03:42 PM
 • ತೂಕ ಕಳೆದುಕೊಳ್ಳಲು ಸಹಕಾರಿ

  ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಿಟಿಕೆಯಷ್ಟು ಕಾಳುಮೆಣಸನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ಇದು ತೂಕ ಕಳೆದುಕೊಳ್ಳಲು ನೆರವಾಗುವುದು. ಕಾಳುಮೆಣಸು ಮತ್ತು ಬಿಸಿ ನೀರು ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಿಸುವುದು. ಇದರಿಂದ ಕ್ಯಾಲರಿ ದಹಿಸಿ, ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು.

  Most Read: ಕೆಂಪು ಈರುಳ್ಳಿಯ ರಸ ಬಳಸಿ ಕೂಡ, ಥೈರಾಯ್ಡ್ ಸಮಸ್ಯೆಯನ್ನು ಗುಣಪಡಿಸಬಹುದು!


 • ಪ್ರತಿರೋಧಕ ಶಕ್ತಿ ವೃದ್ಧಿ

  ಈ ಮ್ಯಾಜಿಕ್ ಪಾನೀಯವು ನಿಮ್ಮ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಕೋಶಗಳಿಗೆ ಪೋಷಣೆ ನೀಡಿ, ಆರೋಗ್ಯ ಕಾಪಾಡುವುದು. ಇನ್ನು ಕೆಲವರಲ್ಲಿ ದೇಹದ ಗಾತ್ರ ಬಲಾಢ್ಯವಾಗಿರುವಂತೆ ಕಂಡುಬಂದರೂ ಕೊಂಚ ದೂರ ಹೋಗುವಷ್ಟೂ ತ್ರಾಣ ಇರುವುದಿಲ್ಲ. ಏಕೆಂದರೆ ಇವರ ದೇಹದಲ್ಲಿ ತ್ರಾಣದ ಸಂಗ್ರಹ ಹೆಚ್ಚಿರುವುದಿಲ್ಲ. ಈ ಪೇಯದ ಸೇವನೆಯಿಂದ ತ್ರಾಣ ಮತ್ತು ಶಕ್ತಿ ಹೆಚ್ಚುವ ಮೂಲಕ ನಿತ್ಯದ ಚಟುವಟಿಕೆಗಳ ಜೊತೆಗೇ ವಾರಾಂತ್ಯದಲ್ಲಿನ ಅಥವಾ ನೀವು ಯಾವಾಗಲೂ ಹೋಗಬೇಕೆಂದು ಬಯಸುವ ದೂರದ ಸ್ಥಳದ ಚಾರಣಕ್ಕೆ ಅಗತ್ಯವಾದ ದೈಹಿಕ ಮತ್ತು ಮನೋಬಲ ದೊರಕುತ್ತದೆ.


 • ನಿರ್ಜಲೀಕರಣ ತಡೆಯುವುದು

  ಬಿಸಿ ನೀರಿಗೆ ಕಪ್ಪು ಕಾಳುಮೆಣಸಿನ ಹುಡಿ ಹಾಕಿ ಕುಡಿಯುವುದರಿಂದ ಅಂಗಾಂಶಗಳು ಪೋಷಣೆಗೊಂಡು, ತೇವಾಂಶದಿಂದ ಇರುವುದು. ಇದರಿಂದ ದೇಹದ ಅಂಗಾಂಶಗಳು ನಿರ್ಜಲೀಕರಣ, ಆಯಾಸ ಮತ್ತು ಒಣ ಚರ್ಮದಿಂದ ಸುರಕ್ಷಿತವಾಗಿರುವುದು.


 • ಶಕ್ತಿ ಹೆಚ್ಚಿಸುವುದು

  ಈ ಪಾನೀಯವನ್ನು ನೀವು ದಿನಾಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಲು ಆರಂಭಿಸಿದ ಬಳಿಕ ದೇಹದ ಶಕ್ತಿಯು ಇಮ್ಮಡಿ ಹೆಚ್ಚಾಗಿರುವುದನ್ನು ನೀವು ಕಾಣಬಹುದು. ಇದರಿಂದ ದೇಹವು ಶಕ್ತಿಯುತವಾಗುವುದು ಮತ್ತು ಇದು ಚಯಾಪಚಯವನ್ನು ಹೆಚ್ಚು ಮಾಡುವುದು.

  Most Read: ಬ್ರೇಕ್‍ಫಾಸ್ಟ್‌ನ ಮೊದಲೇ ಖಾಲಿ ಹೊಟ್ಟೆಗೆ ಸೇವಿಸಬೇಕಾದ ಆಹಾರಗಳು


 • ಮಲಬದ್ಧತೆ ನಿವಾರಿಸುವುದು

  ದೀರ್ಘಕಾಲದಿಂದ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವಂತಹ ವ್ಯಕ್ತಿಗಳು ಬಿಸಿ ನೀರಿಗೆ ಕಾಳುಮೆಣಸು ಹಾಕಿಕೊಂಡು ಕುಡಿಯಿರಿ. ಇದರಿಂದ ಕರುಳಿನ ಕ್ರಿಯೆಗಳು ಸರಾಗವಾಗಿ ಆಗುವುದು. ದೇಹದಲ್ಲಿರುವಂತಹ ಎಲ್ಲಾ ವಿಷಕಾರಿ ಅಂಶವನ್ನು ಹೊರಹಾಕವುದು. ಇದರಿಂದ ನಿಮಗೆ ಪೈಲ್ಸ್ ಮತ್ತು ಮಲಬದ್ಧತೆ ಸಮಸ್ಯೆಯು ಮತ್ತೆ ಕಾಡದು.


 • ಚರ್ಮಕ್ಕೆ ಕಾಂತಿ ನೀಡುವುದು

  ಕಾಳುಮೆಣಸನ್ನು ಬಿಸಿ ನೀರಿಗೆ ಹಾಕು ಕುಡಿದರೆ ಅದರಿಂದ ದೇಹವು ನಿರ್ವಿಷಗೊಳ್ಳುವುದು. ದೇಹದಿಂದ ವಿಷವು ಹೊರಗೆ ಹೋದಾಗ ಚರ್ಮವು ಕಾಂತಿಯುತವಾಗುವುದು ಮತ್ತು ಸಮಸ್ಯೆಯಿಂದ ಮುಕ್ತವಾಗುವುದು. ಇದು ದೇಹದಲ್ಲಿ ಮೇದೋಗ್ರಂಥಿ ಸ್ರಾವ ಉತ್ಪತ್ತಿ ಕಡಿಮೆ ಮಾಡುವುದು.

  Most Read: ನಾನ್ ವೆಜ್ ಪ್ರಿಯರಿಗೆ ಸಿಹಿ ಸುದ್ದಿ-'ಚಿಕನ್ ಲಿವರ್‌' ಆರೋಗ್ಯಕ್ಕೆ ಒಳ್ಳೆಯದು


 • ನೈಸರ್ಗಿಕವಾಗಿ ದೇಹವನ್ನು ನಿರ್ವಿಷಗೊಳಿಸುವುದು

  ಈ ಆರೋಗ್ಯಕರ ಪಾನೀಯವು ದೇಹದಲ್ಲಿ ಸಂಗ್ರಹವಾಗಿ ಇರುವಂತಹ ಎಲ್ಲಾ ತ್ಯಾಜವನ್ನು ಹೊರಹಾಕುವುದು. ಇದು ದೇಹದಲ್ಲಿರುವ ವಿಷನ್ನು ಹೊರಹಾಕುವುದು ಮತ್ತು ಆರೋಗ್ಯಕರ ಜೀವನ ಸಾಗಿಸಲು ನೆರವಾಗುವುದು. ಆರೋಗ್ಯಕರ ಜೀವನವೇ ಎಲ್ಲಾ ರೀತಿಯ ಸುಖವನ್ನು ನೀಡುವುದು.


 • ಸೈನಸ್ ತೊಂದರೆಗೆ

  ನಮ್ಮ ಮೂಗಿನ ಮೇಲ್ಭಾಗದಲ್ಲಿ ಒಂದು ಟೊಳ್ಳು ಭಾಗವಿದೆ. ಇದನ್ನೇ ಕುಹರ ಅಥವಾ ಸೈನಸ್ ಎಂದು ಕರೆಯುತ್ತಾರೆ. ಕೆಲವೊಮ್ಮೆ ಈ ಭಾಗದಲ್ಲಿಯೂ ಸೋಂಕು ಆವರಿಸುತ್ತದೆ. ಆಗ ವಿಪರೀತವಾದ ತಲೆನೋವು, ಮೂಗು ಕಟ್ಟಿಕೊಳ್ಳುವುದು, ತಲೆ ಭಾರವಾಗುವುದು ಮೊದಲಾದವು ಕಾಣಿಸಿಕೊಳ್ಳುತ್ತವೆ. ಈ ತೊಂದರೆಗೂ ಕಾಳುಮೆಣಸಿನ ಪುಡಿಯ ಟೀ ಕುಡಿಯುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ದಿನಕ್ಕೆ ಎರಡು ಬಾರಿ ಕಪ್ಪು ಕರಿಮೆಣಸಿನ ಹುಡಿಯನ್ನು ಬಿಸಿ ನೀರಿಗೆ ಹಾಕಿ ಮೂಲಕ ಕಟ್ಟಿಕೊಂಡಿದ್ದ ಮೂಗು ತೆರೆದು ಕುಹರದ ಸೋಂಕಿನ ನೀರು ಸೋರಿ ಹೋಗುತ್ತದೆ.


 • ಸೌಂದರ್ಯ ಹೆಚ್ಚಿಸುತ್ತದೆ

  ಈ ಪೇಯದ ಇನ್ನೊಂದು ಉತ್ತಮ ಗುಣವೆಂದರೆ ಕಾಳುಮೆಣಸಿನ ಕೆಲವು ಪೋಷಕಾಂಶಗಳು ರಕ್ತದ ಮೂಲಕ ಚರ್ಮಕ್ಕೆ ತಲುಪಿದ ಬಳಿಕ ಚರ್ಮದ ಅಡಿಯಲ್ಲಿ ಹೆಚ್ಚಿನ ಪ್ರಚೋದನೆ ನೀಡಿ ಚರ್ಮದ ಅಡಿಯಲ್ಲಿ ಹೆಚ್ಚಿನ ರಕ್ತಸಂಚಾರವಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಚರ್ಮದ ಬುಡದಲ್ಲಿ ಕೀವು ತುಂಬಿಕೊಳ್ಳದೇ ಮೊಡವೆಗಳಾಗದಿರಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಚರ್ಮದ ಹೊರಭಾಗ ಅತ್ಯುತ್ತಮ ಆರೋಗ್ಯ ಮತ್ತು ಕಾಂತಿ ಹೊಂದುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ.
ಮನುಷ್ಯನಿಗೆ ಜೀವನದಲ್ಲಿ ಆರೋಗ್ಯಕ್ಕಿಂತ ಮಿಗಿಲಾಗಿರುವುದು ಬೇರೇನೂ ಇಲ್ಲ. ಎಷ್ಟೇ ಸಂಪತ್ತಿದ್ದರೂ ಆರೋಗ್ಯ ಸರಿಯಿಲ್ಲದೆ ಇದ್ದರೆ ಸಂಪತ್ತು ಅನ್ನುವುದು ಕೆಲವೇ ದಿನಗಳಲ್ಲಿ ಕರಗಿ ಹೋಗುವುದು. ಆದರೆ ಆರೋಗ್ಯ ಎನ್ನುವುದು ಹಾಗಲ್ಲ. ಇದು ದೀರ್ಘಕಾಲ ತನಕ ಇದ್ದರೆ ಎಂತಹ ಸಂಪತ್ತನ್ನು ಬೇಕಿದ್ದರೂ ಪಡೆಯಬಹುದು. ಆದರೆ ಕೆಲವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವರು. ಅವರ ಪ್ರತಿರೋಧಕ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವುದು. ಅನಾರೋಗ್ಯದಿಂದ ನಮಗೆ ತುಂಬಾ ಕಿರಿಕಿರಿಯಾಗುವುದು. ಇದು ನಮ್ಮ ದೈನಂದಿನ ಜೀವನದ ಮೇಲೂ ಪರಿಣಾಮ ಬೀರುವುದು. ಇದು ದೇಹದಲ್ಲಿನ ಶಕ್ತಿ ಕುಂದಿಸುವುದು ಮಾತ್ರವಲ್ಲದೆ, ಉತ್ಪಾದಕತೆ ಕುಗ್ಗಿಸುವುದು.

ಇಂದಿನ ದಿನಗಳಲ್ಲಿ ಆರೋಗ್ಯ ಸೇವೆ ಎನ್ನುವುದು ತುಂಬಾ ದುಬಾರಿಯಾಗಿರುವುದು. ಇದು ಪ್ರತಿಯೊಬ್ಬರ ಕೈಗೆಟುವಂತದ್ದಲ್ಲ. ಆದರೆ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು ಯಾಕೆ ಎಂದು ನಿಮಗೆ ತಿಳಿದಿದೆಯಾ? ಯಾಕೆಂದರೆ ನಿಮ್ಮ ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾಗಿರುವುದು ಇದಕ್ಕೆ ಕಾರಣವಾಗಿದೆ. ಅಂಗಾಂಗಗಳ ಮೇಲೆ ಪರಿಣಾಮ ಬೀರುವಂತಹ ರೋಗಗಳ ವಿರುದ್ಧ ಹೋರಾಡಲು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗಿರದೆ ಇದ್ದರೆ ಆಗ ಬೇಗನೆ ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ. ಆದರೆ ಇದರ ಬಗ್ಗೆ ನೀವು ಹೆಚ್ಚು ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಅಡುಗೆ ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ನೀವು ಕಾಯಿಲೆಗಳನ್ನು ದೂರ ಮಾಡಬಹುದು. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಕಪ್ಪುಕರಿಮೆಣಸಿನ ಹುಡಿಯನ್ನು ಬಿಸಿ ನೀರಿಗೆ ಹಾಕಿಕೊಂಡು ಕುಡಿಯುವುದು ಇದರಲ್ಲಿ ಒಂದಾಗಿದೆ. ಇದು ನಿಮ್ಮ ಸಂಪೂರ್ಣ ಆರೋಗ್ಯವನ್ನು ಹೇಗೆ ಕಾಪಾಡುವುದು ಎಂದು ತಿಳಿಯಿರಿ.

   
 
ಹೆಲ್ತ್