Back
Home » ಸಮ್ಮಿಲನ
ಲಿಂಗ ಪರಿವರ್ತನೆಗೊಂಡು ಸುಂದರ ಯುವಕರಾದ ಮಹಿಳೆಯರು!
Boldsky | 5th Nov, 2018 04:15 PM
 • ಬಲಿಯನ್ ಬುಷ್ಬೌಮ್

  ಜರ್ಮನಿಯ ಪೋಲ್ ವಾಲ್ಟರ್ ಆಗಿದ್ದ ಯವೊನೆ ಬುಷ್ಬೌಮ್ ಬಲಿಯನ್ ಬುಷ್ಬೌಮ್ ಆಗಿ ಪರಿವರ್ತನೆಯಾಗಿರುವವರು. 2007ರಲ್ಲಿ ಆಕೆ ಕ್ರೀಡಾ ಜೀವನಕ್ಕೆ ನಿವೃತ್ತಿ ಘೋಷಿಸಿದ ಬಳಿಕ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ತಿಳಿಸಿದರು. ಆಕೆಗೆ ನಡೆಸಿರುವಂತಹ ಶಸ್ತ್ರಚಿಕಿತ್ಸೆಯು ಯಶಸ್ವಿಯಾಯಿತು ಮತ್ತು ಬಾಲ್ಯದಿಂದಲೂ ತಾನು ಬೇರೆ ದೇಹದಲ್ಲಿ ಸಿಲುಕಿಕೊಂಡಿರುವ ಅನುಭವಾಗುತ್ತಲಿತ್ತು ಎಂದು ಆತ ಶಸ್ತ್ರಚಿಕಿತ್ಸೆ ಬಳಿಕ ಹೇಳಿಕೊಂಡಿದ್ದಾನೆ. ಇದನ್ನು ಬದಲಾಯಿಸಿಕೊಳ್ಳಬೇಕೆಂದು ಆತ ಬಯಸಿದ್ದ. ಈತ ಆತ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವೇಳೆ ಫ್ಯಾಶನ್ ಮ್ಯಾಗಜಿನ್ ಗಳಿಗೂ ರೂಪದರ್ಶಿಯಾಗಿರುವರು.

  Most Read: ವೈದ್ಯರ ಎಡವಟ್ಟು, ಮಹಿಳೆಯ ಆರೋಗ್ಯವಂತ ಕಿಡ್ನಿಯನ್ನೇ ತೆಗೆದ ವೈದ್ಯರು!


 • ಆಡಿಯಾನ್ ಡೌಲಿಂಗ್

  ಆಡಿಯಾನ್ ಡೌಲಿಂಗ್ ಯೂ ಟೂಬ್ ನಲ್ಲಿ ಒಂದು ಚಾನೆಲ್ ಮಾಡಿಕೊಂಡು ಅದರಲ್ಲಿ ತನ್ನ ಲಿಂಗಪರಿವರ್ತನೆ ಬಗ್ಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ವ್ಯಾಯಾಮ ಮಾಡುವಂತಹ ಮತ್ತು ದೇಹದಾರ್ಢ್ಯ ಮತ್ತು ಇತರ ಚಟುವಟಿಕೆ ಮಾಡುವಂತಹ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಆಡಿಯಾನ್ 2015ರಲ್ಲಿ ವಿಶ್ವದೆಲ್ಲೆಡೆ ಪ್ರಸಿದ್ಧಿ ಸಿಕ್ಕಿತ್ತು. ಅವರು ಎರಡು ಸ್ತನಛೇದನಕ್ಕೆ ಒಳಗಾಗಿದ್ದರು ಎಂದು ಬಹಿರಂಗಪಡಿಸಿದ್ದರು. ಅವರು ಪುರುಷರ ಫಿಟ್ನೆಸ್ ಮ್ಯಾಗಜಿನ್ ಒಂದರ ಮುಖಪುಟದ ಸ್ಟಾರ್ ಆಗಿದ್ದಾರೆ.


 • ಲ್ಯೂಕಾಸ್ ಸಿಲ್ವಿರಾ

  ಕೆನಡಾದ ರಾಕ್ ಸಂಗೀತಗಾರ ಮತ್ತು ಸಂಗೀತ ಸಂಯೋಜಕರಾಗಿರುವ ಲ್ಯೂಕಾಸ್ ಕೂಡ ಹೆಣ್ಣಾಗಿಯೇ ಹುಟ್ಟಿದವರು. ಇವರ ಹಿಂದಿನ ಹೆಸರು ಲಿಲಿಯಾ ಸಿಲ್ವಿರಾ. 2004ರ ವೇಳೆ ಆಕೆ ತನ್ನ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಬಯಸಿದರು. 2010ರಲ್ಲಿ ಅವರು ಕೆನಡಾದಲ್ಲಿ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಸೆಕ್ಸಿ ಪುರುಷ ಪ್ರಶಸ್ತಿ ಪಡೆದ ಮೊದಲ ಲಿಂಗ ಪರಿವರ್ತಿತ ವ್ಯಕ್ತಿ ಎಂಬ ಹೆಗ್ಗಳಿಕಗೆ ಪಾತ್ರರಾದರು. ಈಗ ಇವರು ಕ್ಲಿಕ್ಸ್ ಎನ್ನುವ ರಾಕ್ ಬ್ಯಾಂಡ್ ನ್ನು ಮುನ್ನಡೆಸುತ್ತಿದ್ದಾರೆ. ಇವರು ಎಲ್ ಜಿಬಿಟಿ ಸಮುದಾಯದ ಸಕ್ರಿಯ ಕಾರ್ಯಕರ್ತನಾಗಿದ್ದಾರೆ.


 • ಚಾಜ್ ಬೊನೊ

  ಇವರು ಪ್ರಸಿದ್ಧ ಪಾಪ್ ಕಲಾವಿದರಾದ ಸೊನ್ನಿ ಬೊನೊ ಮತ್ತು ಚೆರ್ ಅವರ ಮಗ. ಬಾಲ್ಯದಲ್ಲಿ ಇವರು ಹಾಸ್ಯ ಕಲಾವಿದೆಯಾಗಿ ನಟಿಸಿದ್ದರು. ಚಾಜ್ ಅವರು `ಚಾಸ್ಟಟಿ'ಸಿನಿಮಾದಲ್ಲಿ ನಟಿಸಿದ ಬಳಿಕ ಅವರನ್ನು `ಚಾಸ್ಟಟಿ' ಸನ್ ಬೊನೊ ಎಂದು ಕರೆಯಲಾಗುತ್ತಿತ್ತು. ತಾನು ಸಲಿಂಗಿಯೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಆಕೆಯು ಸುಂದರನಾಗಲು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ಇದರ ಬಳಿಕ ಆಕೆ ಬಿಕಮ್ಮಿಂಗ್ ಚಾಜ್ ಎನ್ನುವ ಸಿನಿಮಾದಲ್ಲಿ ತನ್ನ ಲಿಂಗ ಪರಿವರ್ತನೆಯ ಕಥೆಯನ್ನು ಹೇಳಿಕೊಂಡಿದ್ದರು. ಈಗ ಅವರು ಅಮೆರಿಕಾದಲ್ಲಿ ಪ್ರಸಿದ್ಧ ವಕೀಲ, ಲೇಖಕ, ಸಂಗೀತಗಾರ ಮತ್ತು ನಟನಾಗಿದ್ದಾರೆ.

  Most Read: ರಾತ್ರಿ ಬೆಳಗಾಗುವುದರೊಳಗೆ ಮಗುವಿನ ಬಾಯಿಯಲ್ಲಿ ಮೂಡಿದ ಕೋರೆ ಹಲ್ಲು!


 • ಬಕ್ ಏಂಜೆಲ್

  ಬಕ್ ಏಂಜೆಲ್ ಇಂದು ಎಲ್ ಜಿಬಿಟಿ ಸಮುದಾಯದಲ್ಲಿ ಐಕಾನ್ ಆಗಿರುವರು. ಸುಸಾನ್ ಎಂದು ಕರೆಯಲ್ಪಡುತ್ತಿದ್ದ ಆಕೆ ಯೌವನದಲ್ಲಿ ವೃತ್ತಿಪರ ಮಾಡೆಲ್ ಆಗಿ ಕಾರ್ಯನಿರ್ವಹಿಸಿದ್ದರು. ಲಿಂಗದ ಬಗ್ಗೆ ಇದ್ದಂತಹ ಗೊಂದಲದಿಂದಾಗಿ ಆಕೆಯ ವ್ಯಕ್ತಿತ್ವದ ಮೇಲೆ ಇದು ತೀವ್ರ ಪರಿಣಾಮ ಬೀರಿತು. ಇದರಿಂದಾಗಿ ಆಕೆಯು ಮಾದಕ ವಸ್ತುಗಳನ್ನು ಸೇವಿಸಲು ಆರಂಭಿಸಿದರು. ಆದರೆ ತನ್ನ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಬಯಸಿದ ವೇಳೆ ಆಕೆಗೆ ಶಾಂತಿ ಸಿಕ್ಕಿತು. ಇದರ ಬಳಿಕ ಆಕೆ ಜೀವನದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಿದರು. ಈಗ ಅವರು ತನ್ನದೇ ಆಗಿರುವಂತಹ ನೀಲಿ ಚಿತ್ರದ ಕಂಪೆನಿಯೊಂದನ್ನು ಹೊಂದಿರುವರು. ಅವರು ರೂಪದರ್ಶಿ, ವಕೀಲ, ಪ್ರಾಧ್ಯಾಪಕ ಮತ್ತು ಲೇಖಕನಾಗಿ ಕೆಲಸ ಮಾಡುತ್ತಿದ್ದಾರೆ.
ಲಿಂಗ ಪರಿವರ್ತನೆ ಮಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಒಂದು ರೀತಿಯ ಫ್ಯಾಷನ್ ಆಗಿ ಹೋಗಿದೆ. ಹೆಚ್ಚಿನ ಜನರು ಇದರಿಂದ ಅನುಭವ ಪಡೆದುಕೊಳ್ಳಲು ಬಯಸುವರು. ಆದರೆ ಕೆಲವು ಮಂದಿ ಇಂತಹ ಸಮಯದಲ್ಲಿ ತುಂಬಾ ಸುಂದರವಾದ ಬದಲಾವಣೆಗಳನ್ನು ಕಂಡುಕೊಂಡಿದ್ದಾರೆ. ಇದು ತುಂಬಾ ಅನನ್ಯ ಮತ್ತು ಪರಿಪೂರ್ಣವಾದ ಬದಲಾವಣೆಯಾಗಿದ್ದು, ಇವರು ಯಾವ ಲಿಂಗ ಹೊಂದಿದ್ದರು ಎಂದು ಹೇಳುವುದು ತುಂಬಾ ಕಷ್ಟವಾಗಿರುವುದು.

ಕೆಲವೊಂದು ಸಂದರ್ಭದಲ್ಲಿ ಮಹಿಳೆಯು ತುಂಬಾ ಸುಂದರ ಯುವಕನಾಗಿ ಪರಿವರ್ತನೆಗೊಂಡಿರುವಳು. ಇನ್ನು ಕೆಲವೊಂದು ಸಂದರ್ಭದಲ್ಲಿ ಪುರುಷನು ಮಹಿಳೆಯಾಗಿರುವನು. ಹೆಣ್ಣಾಗಿ ಹುಟ್ಟಿದ ಬಳಿಕ ತುಂಬಾ ಸುಂದರ ಯುವಕನಾಗಿರುವಂತಹ ವ್ಯಕ್ತಿಗಳ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ.

   
 
ಹೆಲ್ತ್