Back
Home » ಸಮ್ಮಿಲನ
ನವೆಂಬರ್ 5ರಿಂದ 11 ರ ವರೆಗಿನ ವಾರ ಭವಿಷ್ಯ
Boldsky | 5th Nov, 2018 06:13 PM
 • ಮೇಷ

  ಏಳನೇ ಮನೆಯ ಆಡಳಿತಗಾರನಾದ ಶುಕ್ರನು ನಿಮ್ಮ ವೈವಾಹಿಕ ಸಂಬಂಧಗಳ ಮೇಲೆ ಪ್ರಭಾವ ಬೀರುವನು. ಗ್ರಹವು ಈ ವಾರ ಕೊಂಚ ವಿರೋಧಾಭಾಸದಲ್ಲಿ ಪರಿಣಾಮ ಬೀರುವುದರಿಂದ ಸಂಬಂಧಗಳಲ್ಲಿ ಕೊಂಚ ಅಶಾಂತಿ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ವ್ಯತ್ಯಾಸಗಳಿಂದಾಗಿ ಯಾವುದೇ ಪಶ್ಚಾತ್ತಾಪ ಪಡುವಂತಹ ನಿರ್ಣಯವನ್ನು ಕೈಗೊಳ್ಳದಿರಿ. ಸಮಸ್ಯೆಯು ತಾತ್ಕಾಲಿಕವಾಗಿರುತ್ತದೆ. ವೃತ್ತಿ ಕ್ಷೇತ್ರದಲ್ಲೂ ತುಳಿತಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಆದರೂ ಉತ್ತಮ ಫಲಿತಾಂಶ ಪಡೆದುಕೊಳ್ಳುವಿರಿ. ನಿಮ್ಮ ವಿಷಯದ ಬಗ್ಗೆ ಇತರರು ಸಾಕಷ್ಟು ಚರ್ಚೆ ಕೈಗೊಳ್ಳಬಹುದು. ನಿಮ್ಮ ಸಾಧನೆಗೆ ಮೆಚ್ಚುಗೆ ದೊರೆಯುವುದು.


 • ವೃಷಭ

  ವಾರದ ಆರಂಭದಿಂದಲೂ ಭವಿಷ್ಯದ ಕೆಲವು ಚಟುವಟಿಕೆಯಲ್ಲಿ ನೀವು ಉತ್ಸುಕರಾಗಿರಬಹುದು. ಉದ್ಯೋಗ ಆಧಾರಿತ ವೃತ್ತಿಪರರು ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಅನುಭವಿಸುವರು. ಇಲ್ಲವೇ ಸಹೋದ್ಯೋಗಿಗಳೊಂದಿಗೆ ಸಂಘರ್ಷ ಉಂಟಾಗುವುದು. ಏಳನೇ ಮನೆಯಲ್ಲಿರುವ ಸೂರ್ಯ ಮತ್ತು ಗುರುವಿನ ಪ್ರಭಾವದಿಂದ ದೃಢವಾದ ಸಂಬಂಧಗಳ ಮೇಲೆ ಉತ್ತಮ ಸ್ಥಿತಿ ಇರುವುದಿಲ್ಲ. ನಿಮ್ಮ ವ್ಯಾಪಾರ ವಹಿವಾಟುಗಳ ನಡುವೆ ಪಾಲುದಾರರು ಸೇರಿಕೊಳ್ಳಬಹುದು. ಸ್ವತಂತ್ರರಾಗಿರಲು ಪ್ರಯತ್ನಿಸಿ. ವಾರದ ಅಂತ್ಯದ ವೇಳೆಗೆ ಗುರುವು ಧನು ರಾಶಿಗೆ ಚಲಿಸುವನು.


 • ಮಿಥುನ

  ಬುಧ ಮತ್ತು ಶುಕ್ರನ ಹಿಮ್ಮುಖ ಚಲನೆಯ ಪ್ರಭಾವದಿಂದ ಉತ್ತಮ ಹಣವನ್ನು ಗಳಿಸುವ ಸಾಧ್ಯತೆಗಳಿರುತ್ತವೆ. ಅದನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗದೆಯೂ ಇರಬಹುದು. ನಿಮ್ಮ ಸಂಗಾತಿಯ ಅಥವಾ ಸ್ನೇಹಿತೆಯ ವಿಲಕ್ಷಣ ವರ್ತನೆಯಿಂದ ಕೊಂಚ ಅಸಮಧಾನ ಉಂಟಾಗುವುದು. ಭರವಸೆ ಕಳೆದು ಕೊಳ್ಳಬೇಡಿ. ಚಂದ್ರನ ಪ್ರಭಾವದಿಂದ ಸಾಕಷ್ಟು ಮುಂಗೋಪ ಹಾಗೂ ಅಸಮಧಾನವನ್ನು ಅನುಭವಿಸುವಿರಿ. ಗುರುವಾರದ ನಂತರ ನೀವು ಉತ್ತಮ ಸಮಯ ಹಾಗೂ ಒಳಿತನ್ನು ಪಡೆದುಕೊಳ್ಳುವಿರಿ. ಈ ವಾರ ನಿಮ್ಮ ಆರೋಗ್ಯದ ಬಗ್ಗೆಯೂ ಕೊಂಚ ಗಮನವನ್ನು ನೀಡಿ.

  Most Read: ಹಣ ಅಥವಾ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಲಕ್ಷ್ಮೀ ಮತ್ತು ಹನುಮಂತನ ಆರಾಧನೆ ಮಾಡಿ


 • ಕರ್ಕ

  ಮನೆ ಮತ್ತು ಪ್ರೀತಿಪಾತ್ರರ ಬಗ್ಗೆ ನೀವು ಈ ವಾರ ಹೆಚ್ಚಿನ ಚಿಂತನೆ ನಡೆಸುವಿರಿ. ಕುಟುಂಬಕ್ಕಾಗಿ ದೊಡ್ಡ ಮನೆಯನ್ನು ಖರೀದಿಸುವ ಚಿಂತನೆ ನಡೆಸುವ ಸಾಧ್ಯತೆಗಳಿವೆ. ಶುಕ್ರನು ನಿಮ್ಮ ನಾಲ್ಕನೇ ಮನೆಯಲ್ಲಿರುವುದರಿಂದ ನಿಮ್ಮ ಆಶಯದಂತೆ ಆಗಲು ಸ್ವಲ್ಪ ಕಷ್ಟವಾಗುವುದು. ವಾರದ ಮುಂಭಾಗದಲ್ಲಿ ಸಾಕಷ್ಟು ಸಮಾಧಾನ ದೊರೆಯದೇ ಇರಬಹುದು. ಶಾಂತಿ ಮತ್ತು ಸಹನೆಯು ಉತ್ತಮ ಭವಿಷ್ಯವನ್ನು ನೀಡುವುದು ಎನ್ನುವುದನ್ನು ಮರೆಯದಿರಿ. ಅನಿರೀಕ್ಷಿತವಾಗಿ ಉದ್ಯೋಗ ಅಥವಾ ವ್ಯಾಪಾರದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುವುದು. ಸಾಕಷ್ಟು ಕಾಳಜಿಯಿಂದ ಇರುವುದು ಉತ್ತಮ.


 • ಸಿಂಹ

  ಈ ವಾರ ನೀವು ದೈಹಿಕ ಅನ್ಯೋನ್ಯತೆಯ ಬಗ್ಗೆ ಸಂಬಂಧವನ್ನು ಹುಡುಕುತ್ತಿದ್ದರೆ ಸಾಕಷ್ಟು ಜಾಗ್ರತರಾಗಿರುವುದು ಉತ್ತಮ. ಏಕೆಂದರೆ ಈ ವಿಷಯವಾಗಿ ಸಾಕಷ್ಟು ತೊಂದರೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಅನುಕೂಲ ಸ್ಥಿತಿಯನ್ನು ಎದುರಿಸುವಿರಿ. ನಿಮ್ಮ ಹತ್ತನೇ ಮನೆಯಲ್ಲಿ ಗುರು ಮತ್ತು ಸೂರ್ಯ ಇರುವುದರಿಂದ ನೀವು ಉತ್ತಮ ಫಲವನ್ನು ಪಡೆದುಕೊಳ್ಳುವಿರಿ. ಲಾಭದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಉತ್ತಮ ಆರ್ಥಿಕ ಸ್ಥಿರತೆಯನ್ನು ಅನುಭವಿಸುವಿರಿ. ವಾರದಲ್ಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ವಾರದ ಮಧ್ಯದಲ್ಲಿ ನಿಮ್ಮ ಯೋಜನೆಯ ಜೊತೆಗೆ ಕುಟುಂಬಕ್ಕೂ ಸಾಕಷ್ಟು ಸಮಯವನ್ನು ನೀಡುವುದರ ಬಗ್ಗೆ ಚಿಂತನೆ ನಡೆಸಬೇಕು. ಆಗ ಉತ್ತಮ ಆನಂದವನ್ನು ಪಡೆದುಕೊಳ್ಳುವಿರಿ. ನಿಮ್ಮ ವೃತ್ತಿ ಹಾಗೂ ಆರ್ಥಿಕ ವಿಚಾರದಲ್ಲಿ ಉತ್ತಮ ಸಮಯವನ್ನು ನೀವು ಎದುರುನೋಡಬಹುದು.


 • ಕನ್ಯಾ

  ವಾರದ ಆರಂಭದಲ್ಲಿ ಹಣಕಾಸು ಮತ್ತು ಕುಟುಂಬ ಸಂಬಂಧಿತ ವಿಷಯಗಳು ನಿಮ್ಮ ಅಧಿಕ ಸಮಯವನ್ನು ತೆಗೆದುಕೊಳ್ಳುವುದು. ನಿಮ್ಮ ಖರ್ಚುಗಳನ್ನು ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಿ. ಐಷಾರಾಮಿ ಜೀವನ ಶೈಲಿಯು ನಿಮ್ಮ ಕಾರ್ಯಸೂಚಿ ಯಲ್ಲಿರುತ್ತದೆ. ನೀವು ಇಷ್ಟಪಟ್ಟ ವ್ಯಕ್ತಿಯೊಂದಿಗೆ ವಿವಾಹವಾಗಬೇಕು ಎನ್ನುವ ಹಂಬಲವನ್ನು ಹೊಂದಿದ್ದರೆ ನಿಮಗಿದು ವ್ಯಕ್ತಪಡಿಸಲು ಅಥವಾ ಮನೆಯವರಿಗೆ ಹೇಳಲು ಅತ್ಯುತ್ತಮವಾದ ಸಮಯ. ನಿಮ್ಮ ಸಹೋದರರು ನಿಮ್ಮ ಚಟುವಟಿಕೆಯಿಂದ ಅಸಮಧಾನಕ್ಕೆ ಒಳಗಾಗಬಹುದು. ಸಹೋದರರ ಬಗ್ಗೆ ಸಾಕಷ್ಟು ಗಮನ ನೀಡಲು ಪ್ರಯತ್ನಿಸಿ. ವ್ಯಾಪಾರಕ್ಕೆ ಸಂಬಂಧಿಸಿದ ಪ್ರವಾಸವಿದ್ದರೆ ಅದರ ಮಗ್ಗೆ ಗಮನನೀಡಿ. ಈವಾರ ಪ್ರಯಾಣಕ್ಕೆ ಯೋಗ್ಯವಾದ ಸಮಯವಲ್ಲ. ಗುರುವು ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುವುದರಿಂದ ನಿಮ್ಮ ಐಷಾರಾಮಿ ಕನಸುಗಳು ನನಸಾಗುವುದು.


 • ತುಲಾ

  ಆಲೋಚನೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ವಿವರಿಸುವುದು ಎಷ್ಟು ಮುಖ್ಯ ಎನ್ನುವುದನ್ನು ನೀವು ಈಗ ಗುರುತಿಸುತ್ತೀರಿ. ನಿಮ್ಮ ವ್ಯಕ್ತಿತ್ವ ಹಾಗೂ ಸಂವಹನ ಕೌಶಲ್ಯದ ಆಧಾರದ ಮೇಲೆ ಕೆಲಸ ನಿರ್ವಹಿಸಲು ಮುಂದಾಗುವಿರಿ. ಆದರೆ ಅನುಕೂಲಕರವಾದ ಗ್ರಹಗತಿಗಳ ಪ್ರಭಾವ ಇಲ್ಲದೆ ಇರುವುದರಿಂದ ಸಂಪೂರ್ಣವಾದ ಯಶಸ್ಸನ್ನು ಪಡೆದುಕೊಳ್ಳಲು ವಿಫಲರಾಗುವ ಸಾಧ್ಯತೆಗಳಿವೆ. ಅಲ್ಲದೆ ಗ್ರಹಗತಿಗಳ ಋಣಾತ್ಮಕ ಚಲನೆಯಿಂದಾಗಿ ಸಂಬಂಧಗಳ ಮೇಲೆ ಗಂಭೀರ ಪ್ರಭಾವ ಉಂಟಾಗುವ ಸಾಧ್ಯತೆಗಳಿವೆ. ಆದಷ್ಟು ತಾಳ್ಮೆಯಿಂದ ಇರಿ. ಪರಿಸ್ಥಿತಿಯು ನಿಧಾನವಾಗಿ ಸುಧಾರಿಸುವುದು. ವಾರಾಂತ್ಯದಲ್ಲಿ ಆಶಾವಾದದ ಜೀವನವು ಪುನರಾವರ್ತನೆಗೊಳ್ಳುವುದು.


 • ವೃಶ್ಚಿಕ

  ವಾರದ ಆರಂಭದಿಂದ ಚಂದ್ರನು ನಿಮ್ಮ 12ನೇ ಮನೆಗೆ ಚಲಿಸುವುದರಿಂದ ನಿಮ್ಮ ಆಲೋಚನೆಗಳು ಮತ್ತು ನಿರ್ಧಾರಗಳ ಮೇಲೆ ಪ್ರಭಾವ ಬೀರುವುದು. ಅವು ತಪ್ಪು ನಿರ್ಧಾರಗಳಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸೋಮವಾರ ಮತ್ತು ಮಂಗಳವಾರ ಯಾವುದೇ ಆಲೋಚನೆ ಅಥವಾ ನಿರ್ಧಾರಗಳನ್ನು ಕೈಗೊಳ್ಳದಿರಿ. ಸೂರ್ಯ ಮತ್ತು ಗುರುವಿನ ಪ್ರಭಾವದಿಂದ ಪ್ರಭಾವಶಾಲಿ ವ್ಯಕ್ತಿಗಳನ್ನು ಭೆಟಿಯಾಗುವ ಸಾಧ್ಯತೆಗಳಿರುತ್ತವೆ. ನೀವು ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ಮುಂದಿನ ದಿನಗಳಲ್ಲಿ ಸಾಲಷ್ಟು ಒಳ್ಳೆಯ ಸಮಯ ಎದುರಾಗುವುದು.

  Most Read: ಲಕ್ಷ್ಮೀ ದೇವಿ ಚಂಚಲೆ ಅಂತ ಎಲ್ಲರಿಗೂ ಗೊತ್ತು! ಆದರೆ ಇವಳ ಜನನದ ಕಥೆ ಗೊತ್ತೇ?


 • ಧನು

  ವಾರದ ಆರಂಭವಾಗುತ್ತಿದ್ದಂತೆ ಹಣಕಾಸಿನ ಲಾಭ ಉಂಟಾಗುವ ಸಾಧ್ಯತೆಗಳಿವೆ. ಆದಾಗ್ಯೂ ನೀವು ಅದಕ್ಕೆ ಸೂಕ್ತ ನಿರ್ವಹಣೆಯನ್ನು ಹೊಂದಬೇಕಾಗುವುದು. ತಪ್ಪು ವ್ಯಕ್ತಿಗಳಿಂದ ದಾರಿ ತಪ್ಪುವ ಸಾಧ್ಯತೆಗಳಿವೆ. ಗ್ರಹಗತಿಗಳ ಪ್ರಭಾವದಿಂದ ಕೆಲವು ಗೊಂದಲಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡಬಹುದು. ನಿಮ್ಮ ಹಳೆಯ ಸಂಬಂಧ ಮುಂಚೂಣಿಯಲ್ಲಿ ಇರಬಹುದು. ನಿರ್ದಿಷ್ಟವಾದ ಬಂಧದಲ್ಲಿ ಸಮಗ್ರತೆ ಮತ್ತು ಬದ್ಧತೆಯನ್ನು ಕಾಣಬೇಕು. ವಾರದ ಮಧ್ಯದ ಸಮಯದಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸಲು ಹಣವನ್ನು ಖರ್ಚುಮಾಡುವ ಸಾಧ್ಯತೆಗಳಿವೆ. ವಾರಾಂತ್ಯದಲ್ಲಿ ಉತ್ತಮ ಗ್ರಹಗತಿಗಳ ಪ್ರಭಾವ ಪಡೆದುಕೊಳ್ಳುವುದರಿಂದ ಧನಾತ್ಮಕ ಸಮಯವನ್ನು ಪಡೆದುಕೊಳ್ಳುವಿರಿ.


 • ಮಕರ

  ವಿಸ್ಮಯಕಾರಿಯಾದಂತಹ ಲಾಭಗಳು ನಿಮ್ಮ ಮುಡಿಗೇರಲಿವೆ. ಯಾವುದೇ ಒಪ್ಪಂದಗಳಲ್ಲಿ ವಿಳಂಬ ಉಂಟಾದರೆ ನಿರುತ್ಸಾಹಕ್ಕೆ ಒಳಗಾಗದಿರಿ. ನಿಧಾನವಾಗಿ ಉತ್ತಮ ಫಲಿತಾಂಶವನ್ನು ಪಡೆದುಕುಳ್ಳುವರು. ಗುರು ಮತ್ತು ಸೂರ್ಯನ ಪ್ರಭಾವದಿಂದ ಪರಿಸ್ಥಿತಿಗಳ ಮೇಲೆ ಸಮತೋಲವನ್ನು ಕಂಡುಕೊಳ್ಳುವರು. ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಂಬಂಧ ಹಾಗೂ ಸಮಯವನ್ನು ಕಳೆಯುವಿರಿ. ಕೆಲವು ಗ್ರಹಗಳ ಪ್ರಭಾವದಿಂದಾಗಿ ವಾರಾಂತ್ಯದ ವೇಳೆಗೆ ಆಧ್ಯಾತ್ಮಿಕ ವಿಚಾರಗಳ ಕಡೆಗೆ ಗಮನವನ್ನು ಕೇಂದ್ರೀಕರಿಸುವ ಸಾಧ್ಯತೆಗಳಿವೆ.


 • ಕುಂಭ

  ಗ್ರಹಗತಿಗಳ ಪ್ರಭಾವದಿಂದ ವ್ಯವಹಾರದಲ್ಲಿ ಸಣ್ಣ ಪ್ರಮಾಣದ ನಷ್ಟವನ್ನು ಅನುಭವಿಸುವ ಸಾಧ್ಯತೆಗಳಿವೆ. ಕೆಲವು ವಿಷಯಗಳ ಕುರಿತು ನೀವು ಸಾಕಷ್ಟು ಚಿಂತನೆ ಹಾಗೂ ಹುಡುಕಾಟಗಳನ್ನು ನಡೆಸುವ ಸಾಧ್ಯತೆಗಳಿವೆ. ಸಿಬ್ಬಂದಿ ಸದಸ್ಯರ ನಿರ್ಲಕ್ಷ್ಯ ಹಾಗೂ ಕೊರತೆಯ ಕಾರಣದಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲವು ಪರಿಸ್ಥಿತಿ ಹಾಗೂ ವಿಷಯಗಳಿಂದಾಗಿ ಉತ್ತಮ ಪಾಠವನ್ನು ಕಲಿತುಕೊಳ್ಳುವಿರಿ. ವಾರದ ಮಧ್ಯದ ಅವಧಿಯಿಂದ ಚಂದ್ರನು ವಿಕಸನ ಹೊಂದಿದಂತೆ ಸಕಾರಾತ್ಮಕ ಭಾವನೆಯು ನಿಮ್ಮಲ್ಲಿ ಮೂಡುವುದು. ಮುಂದಿನ ಯೋಜನೆಗಳಿಗೆ ಸೂಕ್ತ ಚಿಂತನೆ ನಡೆಸಲು ಉತ್ತಮ ಸಮಯವಾಗುವುದು. ವಾರಾಂತ್ಯದ ವೇಳೆಗೆ ಗುರುವು ಧನು ರಾಶಿಗೆ ಪ್ರವೇಶ ಪಡೆಯುವುದರಿಂದ ಉತ್ತಮ ಸಮಯವನ್ನು ಎದುರುನೋಡಬಹುದು.


 • ಮೀನ

  ವಾರದ ಆರಂಭದಲ್ಲಿ ನೀವು ಭಾವನಾತ್ಮಕವಾಗಿ ಇರುತ್ತೀರಿ. ಅನಪೇಕ್ಷಿತ ನಡವಳಿಕೆಯಿಂದ ನೀವು ನಿರಾಶೆಗೆ ಒಳಗಾಗಬಹುದು. ಒಂದಿಷ್ಟು ವಿಶ್ರಾಂತಿ ಹೊಂದಲು ಪ್ರಯತ್ನಿಸಿ. ವಾರದ ಮಧ್ಯದ ಅವಧಿಯಲ್ಲಿ ಶಾಂತವಾಗಿರಲು ಪ್ರಯತ್ನಿಸಿ. ಗುರುವಾರದಿಂದ ನೀವು ಗ್ರಹಗಳ ಪ್ರಭಾವ ಪಡೆದುಕೊಂಡು ಹೊಸ ಭರವಸೆ ಹಾಗೂ ಸ್ಫೂರ್ತಿಯನ್ನು ಪಡೆದುಕೊಳ್ಳುವರು. ಗುರು ಮತ್ತು ಚಂದ್ರನ ಪ್ರಭಾವ ಹೆಚ್ಚಾದಂತೆ ಲಾಭವನ್ನು ಪಡೆದುಕೊಳ್ಳುವಿರಿ. ವಾರಾಂತ್ಯದ ವೇಳೆಗೆ ಬುಧನ ಪ್ರಭಾವಕ್ಕೂ ಒಳಗಾಗುವುದರಿಂದ ಪ್ರಗತಿಯನ್ನು ಹೊಂದುವಿರಿ. ಜೊತೆಗೆ ಒಂದಿಷ್ಟು ಒಳ್ಳೆಯ ಸುದ್ದಿ ಹಾಗೂ ಶುಭ ಶಕುನವನ್ನು ಅನುಭವಿಸುವಿರಿ.
ಹೊಸ ವಾರದ ಆರಂಭವು ಸಾಮಾನ್ಯವಾಗಿ ಹೊಸ ಭರವಸೆ ಹಾಗೂ ಬದಲಾವಣೆಯ ಬಯಕೆಯನ್ನು ಹೆಚ್ಚಿಸುವುದು. ಹಿಂದೆ ಆಯೋಜಿಸಿಕೊಂಡ ಯೋಜನೆಗಳನ್ನು ಪ್ರಸ್ತುತ ವಾರದಲ್ಲಿ ನೆರವೇರಬಹುದೇ ಎನ್ನುವಂತಹ ಚಿಂತನೆ ಹಾಗೂ ಅದರ ಪರಿಣಾಮಗಳ ಬಗ್ಗೆ ಕುತೂಹಲವಿರುತ್ತದೆ. ಅವು ಅಂದುಕೊಂಡ ರೀತಿಯಲ್ಲಿ ನೆರವೇರದೆ ಇದ್ದರೆ ಸಾಕಷ್ಟು ಬೇಸರ ಉಂಟಾಗಬಹುದು. ಇಲ್ಲವೇ ಉತ್ತಮ ಫಲಿತಾಂಶದಿಂದ ಒಂದಿಷ್ಟು ಸಂತೋಷವನ್ನು ಹೊಂದಬಹುದು. ಒಟ್ಟಿನಲ್ಲಿ ಭವಿಷ್ಯದ ಕಲ್ಪನೆಯ ಬಗ್ಗೆ ನಾವೂ ಸಹ ಒಂದು ಕಲ್ಪನಾ ಲೋಕದಲ್ಲಿ ಇರುತ್ತೇವೆ.

ಈ ವಾರದ ಆರಂಭದಲ್ಲಿ ದೀಪಾವಳಿ ಹಬ್ಬದ ಆಗಮನವು ಒಂದು ಬಗೆಯ ಸಂತೋಷ-ಸಡಗರವನ್ನು ನೀಡುತ್ತದೆ. ಈ ಸಂಭ್ರಮದ ಪ್ರಭಾವ ವಾರದ ಉದ್ದಕ್ಕೂ ಹೇಗಿರುತ್ತದೆ? ವಾರದಲ್ಲಿ ವೈಯಕ್ತಿಕ ಹಾಗೂ ವೃತ್ತಿ ಕ್ಷೇತ್ರದಲ್ಲಿ ಯಾವ ಬಗೆಯ ಬದಲಾವಣೆ ತಲೆದೂರುವುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ಹಂಬಲಿಸುತ್ತಿದ್ದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ....

   
 
ಹೆಲ್ತ್