Back
Home » ಗಾಸಿಪ್
ಯುವರತ್ನ'ನಿಗೆ ಜೋಡಿ ಆಗ್ತಾರಂತೆ ತಮನ್ನಾ
Oneindia | 6th Nov, 2018 04:59 PM

ಪುನೀತ್ ರಾಜ್ ಕುಮಾರ್ ಅವರ 'ಯುವರತ್ನ' ಸಿನಿಮಾದ ನಾಯಕಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈಗ ತಮನ್ನಾ ಭಾಟಿಯಾ ಚಿತ್ರದ ನಾಯಕಿ ಆಗುತ್ತಾರೆ ಎಂಬ ಮಾತುಗಳು ಹೆಚ್ಚಾಗಿದೆ.

ಸಿನಿಮಾ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಸೌತ್ ಚಿತ್ರರಂಗದ ದೊಡ್ಡ ನಟಿ ಸಿನಿಮಾದ ನಾಯಕಿ ಆಗುತ್ತಾರೆ ಎಂದು ಹೇಳಿದ್ದರು. ಅದೇ ರೀತಿ ಈಗ ತಮನ್ನಾ ಚಿತ್ರದ ಹೀರೋಯಿನ್ ಎಂಬ ಸುದ್ದಿ ಕೇಳಿಬಂದಿದೆ.

ಮತ್ತೆ ಕಾಲೇಜ್ ಹುಡುಗನಾದ ಅಪ್ಪು : ಪುನೀತ್ ಗೆ ಒಳಗೊಳಗೆ ಭಯವಂತೆ!

ಸೌತ್ ಚಿತ್ರರಂಗದ ಸ್ಟಾರ್ ನಟ ಪುನೀತ್ ಜೊತೆಗೆ ಈ ಹಿಂದೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ಅವರೊಂದಿಗೆ ಸಿನಿಮಾ ಮಾಡುವ ಬಯಕೆ ವ್ಯಕ್ತ ಪಡಿಸಿದ್ದರು.

ಜೊತೆಗೆ, ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾದ 'ಕೆ ಜಿ ಎಫ್' ಚಿತ್ರದ ಒಂದು ಹಾಡಿನಲ್ಲಿ ಯಶ್ ಜೊತೆಗೆ ತಮನ್ನಾ ಹೆಜ್ಜೆ ಹಾಕಿದ್ದರು. ಈಗ ಅದೇ ನಿರ್ಮಾಣ ಸಂಸ್ಥೆಯ 'ಯುವರತ್ನ' ಚಿತ್ರಕ್ಕೆ ತಮನ್ನಾ ನಾಯಕಿ ಆದರೂ ಆಶ್ವರ್ಯವಿಲ್ಲ.

'ಯುವರತ್ನ' ಸಿನಿಮಾದ ನಾಯಕಿಯ ಪಟ್ಟಕ್ಕೆ ತಮನ್ನಾ ಹಾಗೂ ಕೀರ್ತಿ ಸುರೇಶ್ ಅವರ ಹೆಸರು ಕೇಳಿಬರುತ್ತಿದ್ದು, ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ.

   
 
ಹೆಲ್ತ್