Back
Home » ಗಾಸಿಪ್
ದರ್ಶನ್ ಜೊತೆಗೆ ಮಿಲನ ಪ್ರಕಾಶ್ ಮತ್ತೊಂದು ಸಿನಿಮಾ
Oneindia | 6th Nov, 2018 06:29 PM

ನಟ ದರ್ಶನ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅಪಘಾತ ನಂತರ ಚೇತರಿಕೆ ಕಂಡಿರುವ ಅವರು ಈಗ 'ಯಜಮಾನ' ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ.

'ಯಜಮಾನ', 'ಒಡೆಯ', 'ಗಂಡುಗಲಿ ಮದಕರಿ ನಾಯಕ' ಹಾಗೂ ಡಿ 53 ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿರುವ ದರ್ಶನ್ ಖಾತೆಗೆ ಈಗ ಹೊಸ ಸಿನಿಮಾ ಸೇರಿಕೊಂಡಿದೆ. ವಿಶೇಷ ಅಂದರೆ, ಈ ಚಿತ್ರವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ.

ಹರಿಕೃಷ್ಣ ಬರ್ತ್ ಡೇ : ದರ್ಶನ್ ಸೇರಿದಂತೆ ಅನೇಕರ ಶುಭಾಶಯ ಹೀಗಿವೆ

ಈ ಹಿಂದೆ 'ತಾರಕ್' ಸಿನಿಮಾದಲ್ಲಿ ದರ್ಶನ್ ಗೆ ಆಕ್ಷನ್ ಕಟ್ ಹೇಳಿದ್ದ ಪ್ರಕಾಶ್ ಈಗ ಮತ್ತೆ ಡಿ ಬಾಸ್ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅವರಿಬ್ಬರ ಕಾಂಬಿನೇಶನ್ ನ ಎರಡನೇ ಚಿತ್ರ ಇದಾಗಿದೆ. ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆಯಂತೆ.

ಮರಿ 'ಐರಾವತ'ನ ಬರ್ತ್ ಡೇ ಪಾರ್ಟಿಗೆ ಯಾರೆಲ್ಲ ಬಂದಿದ್ರು

ಈ ಚಿತ್ರದ ಕಥೆ ತುಂಬ ವಿಭಿನ್ನ ಶೈಲಿಯಲ್ಲಿ ಇದೆಯಂತೆ. ಸರಿಯಾದ ಸಮಯ ನೋಡಿ ಸಿನಿಮಾದವನ್ನು ಅನೌನ್ಸ್ ಮಾಡಲಿದ್ದಾರಂತೆ. ಡಿಸೆಂಬರ್ 10 ರಿಂದ 'ಒಡೆಯ' ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ತೊಡಗಲಿದ್ದಾರೆ.

   
 
ಹೆಲ್ತ್