Back
Home » ಇತ್ತೀಚಿನ
ಭಾರತದಲ್ಲಿ ಪೋರ್ನ್ ವೀಕ್ಷಣೆ!..ಮತ್ತೆ ಶಾಕ್ ನೀಡಿದ ಕೇಂದ್ರ ಸರ್ಕಾರ!
Gizbot | 7th Nov, 2018 05:49 PM
 • 3ನೇ ಸ್ಥಾನದಲ್ಲಿದೆ ಭಾರತ!

  ಒಂದು ವರ್ಷದ ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದರೆ ವಿಶ್ವದಲ್ಲಿ ಅತಿ ಹೆಚ್ಚು ಪೋರ್ನ್​ ವಿಡಿಯೋ ನೋಡುವವರ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ. 2015 ರಲ್ಲಿ 6ನೇ ಸ್ಥಾನದಲ್ಲಿದ್ದ ಭಾರತದಲ್ಲಿ ಪೋರ್ನ್​ ವೀಕ್ಷಕರ ಸಂಖ್ಯೆ ಅಧಿಕವಾಗಿದೆ. ಎರಡನೇ ಸ್ಥಾನವನ್ನು ಯುನೈಟೆಡ್ ಕಿಂಗ್​ಡಮ್(ಇಂಗ್ಲೆಂಡ್) ಪಡೆದುಕೊಂಡರೆ, ನಾಲ್ಕನೇ ಸ್ಥಾನದಲ್ಲಿ ಕೆನಡಾ ಇದೆ.


 • ದೇಶಿಯರ ಪೋರ್ನ್​ ವಿಡಿಯೋ

  ಅಧ್ಯಯನವೊಂದು ನೀಡಿರುವ ವರದಿ ಪ್ರಕಾರ, ಹೆಣ್ಣು ಮಕ್ಕಳ ಸಲಿಂಗ ಸಂಬಂಧಗಳ ಅಶ್ಲೀಲ ವಿಡಿಯೋಗಳನ್ನು ಅತಿ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಭಾರತೀಯರು ದೇಶಿಯರ ಪೋರ್ನ್​ ವಿಡಿಯೋಗಳನ್ನು ವೀಕ್ಷಿಸಲು ಹೆಚ್ಚಾಗಿ ಸರ್ಚ್ ಮಾಡುತ್ತಾರೆ ಎಂದು ಅಂಕಿ ಅಂಶಗಳಲ್ಲಿನೀಡಲಾಗಿದೆ. ಆಯಾ ದೇಶಿಯರ ಪೋರ್ನ್​ ವಿಡಿಯೋ ಸರ್ಚ್‌ನಲ್ಲಿ ಭಾರತ ವಿಶ್ವದಲ್ಲೇ ಮುಂದಿದೆ.


 • ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸಮಯ

  ವಿಶ್ವದ ಜನರು ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸಮಯ ಕೂಡ ತಿಳಿದುಬಂದಿದೆ. ಭಾರತದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿಯಾಗಿ 9 ನಿಮಿಷ ಮತ್ತು 30ಸೆಕೆಂಡ್ ವೀಕ್ಷಿಸಿದ್ದಾರೆ. ಅಮೇರಿಕಾದಲ್ಲಿ 9 ನಿಮಿಷ ಮತ್ತು 51 ಸೆಕೆಂಡ್‌, ಬ್ರಿಟನ್‌ನಲ್ಲಿ 9 ನಿಮಿಷ ಮತ್ತು 18 ಸೆಕೆಂಡ್‌ಗಳು ಪೋರ್ನ್‌ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.


 • ಅಶ್ಲೀಲ ವೆಬ್‌ಸೈಟ್‌ ಸರಾಸರಿ ವೀಕ್ಷಣೆ

  ಅಶ್ಲೀಲ ವೆಬ್‌ಸೈಟ್‌ನಿಂದಲೇ ನಡೆದ ಅಧ್ಯಯನದ ಪ್ರಕಾರ, ಭಾರತೀಯ ಪುರುಷರು ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿ 9 ನಿಮಿಷ ಮತ್ತು 22 ಸೆಕೆಂಡ್‌ಗಳು ವೀಕ್ಷಿಸಿದ್ದಾರೆ. ಮಹಿಳೆಯರ ಪ್ರಮಾಣ 9 ನಿಮಿಷ ಮತ್ತು 36 ಸೆಕೆಂಡ್‌ಗಳಿವೆ. ಇನ್ನು ಪ್ರಪಂಚದಾದ್ಯಂತ ಸರಾಸರಿ ಮಹಿಳೆಯರು 10 ನಿಮಿಷ ಮತ್ತು 10 ಸೆಕೆಂಡ್‌ಗಳು ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ.


 • ರಜೆ ಇದ್ದರೆ ಟ್ರಾಫಿಕ್‌ ಹೆಚ್ಚು

  ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುವವರ ಸಂಖ್ಯೆ ಪಬ್ಲಿಕ್‌ ರಜೆದಿನಗಳಲ್ಲಿ ಹೆಚ್ಚಾಗಿರುತ್ತದೆ. ಅಲ್ಲದೇ, ರಾತ್ರಿ 10 ಗಂಟೆಯಿಂದ 12 ಗಂಟೆ ವೇಳೆಯಲ್ಲಿ ಅಶ್ಲೀಲ ವೆಬ್‌ಸೈಟ್‌ ವೀಕ್ಷಣಾ ಟ್ರಾಫಿಕ್‌ ಹೆಚ್ಚಾಗಿರುತ್ತದೆ. ವೆಬ್‌ಸೈಟ್‌ಗಳೀಗೆ ಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲಿ ಪ್ರತಿ ಸೆಕೆಂಡಿಗೆ 1000 GB ಸರ್ಫ್ ಅಗಿರುವ ಬಗ್ಗೆ ಅಧ್ಯಯನದ ಪ್ರಕಾರ ಮಾಹಿತಿ ಬೆಳಕಿಗೆ ಬಂದಿದೆ.


 • ಶೇಕಡ 30 ರಷ್ಟು ಮಹಿಳೆಯರು

  ಅಶ್ಲೀಲ ವೆಬ್‌ಸೈಟ್‌ಗಳನ್ನು ಹೆಚ್ಚು ವೀಕ್ಷಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಅಧ್ಯಯನ ನೀಡಿದ ಡಾಟಾ ಪ್ರಕಾರ 60 ದಶಲಕ್ಕಿಂತ ಹೆಚ್ಚು ಜನರು ಅಶ್ಲೀಲ ವೆಬ್‌ಸೈಟ್‌ ಬಳಕೆದಾರರು ಇದ್ದಾರೆ. ಇಂಟರ್‌ನೆಟ್ ಬಳಕೆದಾರರಲ್ಲಿ ಭಾರತದ ಶೇಕಡ 30 ರಷ್ಟು ಮಹಿಳೆಯರು ಸಹ ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುತ್ತಾರೆ ಎಂದು ಅಧ್ಯಯನ ಹೇಳಿದೆ.
ಉತ್ತರಾಖಂಡ ಹೈಕೋರ್ಟ್ ಆದೇಶದ ಮೇರೆಗೆ ಅಶ್ಲೀಲತೆ ಹೊಂದಿರುವ 827 ಪೋರ್ನ್​ ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡುವಂತೆ ಇಂಟರ್​ನೆಟ್​ ಸೇವೆ ಒದಗಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ನಿರ್ದೇಶನ ನೀಡಿದೆ. ಹೈಕೋರ್ಟ್​ ತೀರ್ಪಿನ ಹಿನ್ನಲೆಯಲ್ಲಿ ಈ ಸೂಚನೆ ಹೊರಡಿಸಲಾಗಿದ್ದರೂ, ಅನೇಕ ಇಂಟರ್​ನೆಟ್ ಕಂಪನಿಗಳು ಇನ್ನೂ ಕೂಡ ವೆಬ್​ಸೈಟ್​ಗಳನ್ನು ಬ್ಯಾನ್ ಮಾಡಿರಲಿಲ್ಲ. ಈ ಬಗ್ಗೆ​ ಕಾರಣವನ್ನು ತಿಳಿಸುವಂತೆ ಕಂಪನಿಗಳಿಗೆ ಹೇಳಿದೆ.

ಎಲ್ಲಾ ಇಂಟರ್​ನೆಟ್​ ಸೇವಾ ಪರವಾನಗಿ ಹೊಂದಿರುವವರು ತಕ್ಷಣವೇ 827 ಪೋರ್ನ್​ ವೆಬ್​ಸೈಟ್​ಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ನಿರ್ದೇಶನದಂತೆ ಹಾಗೂ ಹೈಕೋರ್ಟ್​ ಆದೇಶದಂತೆ ಬ್ಲಾಕ್​ ಮಾಡಬೇಕೆಂದು ಟೆಲಿಕಾಮ್​ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಇಂಟರ್​ನೆಟ್​ ಸೇವೆ ಒದಗಿಸುವ ಕಂಪನಿಗಳಿಗೆ ಕಳುಹಿಸಲಾಗಿದೆ. ಜಿಯೋ ಬಿಟ್ಟು ಉಳಿದ ಕಂಪನಿಗಳು ಶೀಘ್ರದಲ್ಲೇ ನಿರ್ಭಂಧಿಸುವುದಾಗಿ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸರ್ಕಾರ ಗರಂ ಆಗಿದೆ.

ಸದ್ಯ ಭಾರತದಲ್ಲಿ ಪೋರ್ನ್​ಸೈಟ್​ಗಳ ಬ್ಯಾನ್ ವಿಚಾರವಾಗಿ ಪರ ವಿರೋಧದ ವಾದಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ. ವಿಶ್ವ ಪೋರ್ನ್ ವಿಡಿಯೋಗಳ ​ ಮಾರುಕಟ್ಟೆ ಎಂದೆನಿಸಿಕೊಂಡಿರುವ ಭಾರತದಲ್ಲಿ ಸಂಪೂರ್ಣ ಅಶ್ಲೀಲ ವಿಡಿಯೋ ಸೈಟ್​ಗಳ ಮೇಲೆ ನಿಷೇಧ ಹೇರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ, ನಿಮಗೆ ಗೊತ್ತಾ ಭಾರತದಲ್ಲಿ ಪೋರ್ನ್ ವೀಕ್ಷಣೆ ಈಗ ಅಮೆರಿಕಾಕ್ಕೆ ಸೆಡ್ಡುಹೊಡುತ್ತಿದೆ.

   
 
ಹೆಲ್ತ್