Back
Home » ಇತ್ತೀಚಿನ
ಆಧಾರ್ ವೆರಿಫಿಕೇಷನ್‌ಗೆ ಬೈ ಬೈ!...ಏರ್‌ಟೆಲ್ ತಂದಿದೆ ಹೊಸ ಡಿಜಿಟಲ್ ತಂತ್ರಜ್ಞಾನ!!
Gizbot | 7th Nov, 2018 04:08 PM

ಮೊಬೈಲ್ ಸಿಮ್ ಖರೀದಿಸಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಕೋರ್ಟ್ ಆದೇಶ ನೀಡಿದ ನಂತರ ಏರ್‌ಟೆಲ್ ಇದೀಗ 'ಪರ್ಯಾಯ ಡಿಜಿಟಲ್ ಕೆವೈಸಿ ಪ್ರಕ್ರಿಯೆ'ಯನ್ನು ಜಾರಿಗೆ ತಂದಿದೆ. ಆಧಾರ್ ಆಧಾರಿತ ಎಲೆಕ್ಟ್ರಾನಿಕ್ ಪರಿಶೀಲನೆಗೆ ಪರ್ಯಾಯವಾಗಿ ಡಿಜಿಟಲ್ ಪ್ರಕ್ರಿಯೆ ನಡೆಸಲು ಏರ್‌ಟೆಲ್ ಮುಂದಾಗಿದೆ. ಇದರಿಂದ ಹಲವು ದಿನಗಳಿಂದ ಇದ್ದ ಕುತೋಹಲಕ್ಕೆ ತೆರೆಬಿದ್ದಿದೆ.

ಆಧಾರ್ ಆಧಾರಿತ ಎಲೆಕ್ಟ್ರಾನಿಕ್ ಪರಿಶೀಲನೆಗೆ ಪರ್ಯಾಯವಾಗಿ ಏರ್‌ಟೆಲ್‌ನ ಹೊಸ ಡಿಜಿಟಲ್ ಕೆವೈಸಿ ಪ್ರಕ್ರಿಯೆಯು ದೆಹಲಿ, ಯುಪಿ (ಪೂರ್ವ) ಮತ್ತು ಯುಪಿ (ವೆಸ್ಟ್) ಸೇರಿದಂತೆ ಆಯ್ದ ವಲಯಗಳಲ್ಲಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇತರ ವಲಯಗಳಲ್ಲಿಯೂ ಡಿಜಿಟಲ್ ಕೆವೈಸಿ ಪ್ರಕ್ರಿಯೆಯನ್ನು ವಿಸ್ತರಿಸಲಾಗುವುದು ಎಂದು ಏರ್‌ಟೆಲ್‌ ಕಂಪೆನಿ ಅಧಿಕೃತಪಡಿಸಿದೆ.

ಏರ್‌ಟೆಲ್‌ನ ಹೊಸ ಡಿಜಿಟಲ್ ಕೆವೈಸಿ ಪ್ರಕ್ರಿಯೆಯು ಬಹುತೇಕ ಆಧಾರ್ ದೃಢೀಕರಣದಂತೆಯೇ ಇದೆ. ಆದರೆ, ಇದರಲ್ಲಿ ಆಧಾರ್ ಬದಲಾಗಿ ಗ್ರಾಹಕರಿಗೆ ಇತರೆ ಗುರುತಿನ ಚೀಟಿ ನೀಡುವಂತೆ ಏರ್‌ಟೆಲ್ ತಿಳಿಸಿದೆ. ಸರ್ಕಾರದಿಂದ ನೀಡಿರುವ ಇತರೆ ಯಾವುದೇ ಅಧಿಕೃತ ಗುರುತಿನ ಚೀಟಿಯನ್ನು ನೀಡಿದರೆ, ಅದನ್ನು ಸ್ಕ್ಯಾನಿಂಗ್ ಮಾಡುವ ಮೂಲಕ ದೃಢೀಕರಣ ಮಾಡಲಾಗುತ್ತಿದೆ.

ಈಗಾಗಲೇ ಆಧಾರ್ ನೀಡಿ ಮೊಬೈಲ್ ಸಿಮ್ ಖರೀದಿಸಿದ್ದವರು ಇತರೆ ಯಾವುದೇ ಒಂದು ಅಧಿಕೃತ ದಾಖಲೆಯೊಂದನ್ನು ನೀಡಿ ಅವರ ಆಧಾರ್ ದಾಖಲೆಗಳನ್ನು ಅಳಿಸಿಹಾಕಬಹುದಾಗಿದೆ. ಈ ಬಗ್ಗೆ ಏರ್‌ಟೆಲ್ ಕಂಪೆನಿಯ ಅಧಿಕಾರಿ ಸ್ಪಷ್ಟನೆ ನೀಡಿದ್ದು, ಏರ್‌ಟೆಲ್ ಔಟ್‌ಲೇಟ್‌ಗಳಲ್ಲಿ ಗ್ರಾಹಕರು ಇತರೆ ದಾಖಲೆಗಳನ್ನು ನೀಡಿ ಅವರ ಆಧಾರ್ ದಾಖಲೆಗಳನ್ನು ಅಳಿಸಬಹುದು ಎಂದಿದ್ದಾರೆ.

ಇನ್ನು ಏರ್‌ಟೆಲ್ ಕಂಪನಿ ಈ ನೂತನ ಡಿಜಿಟಲ್ ಪ್ರಕ್ರಿಯೆ ನಡೆಸಲು ನಡೆಸಲು ಆರಂಭಿಸಿದ ಮೇಲೆ ಇನ್ನುಳಿದ ಎಲ್ಲಾ ಟೆಲಿಕಾಂ ಕಂಪೆನಿಗಳು ಕೂಡ ಹೊಸ ಡಿಜಿಟಲ್ ಕೆವೈಸಿ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಗ್ರಾಹಕರು ಆಧಾರ್ ನೀಡದೇ ಇದ್ದರೂ, ಈಗಲೂ ಸಹ ಡಿಜಿಟಲ್ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂಬುದು ಮಾತ್ರ ಸತ್ಯ.

   
 
ಹೆಲ್ತ್