Back
Home » ಇತ್ತೀಚಿನ
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ
Gizbot | 7th Nov, 2018 07:01 PM

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಬೇಡಿಕೆಯು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ದೀಪಾವಳಿಯ ಅಂಗವಾಗಿ ಸ್ಮಾರ್ಟ್ ಫೋನ್ ಖರೀದಿಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಅನೇಕ ಸ್ಮಾರ್ಟ್ ಫೋನ್ ಬ್ರಾಂಡ್ ಗಳು ಹೊಸ ಹೊಸ ಆಫರ್ ಗಳನ್ನು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಟಾಪ್ ಸ್ಮಾರ್ಟ್ ಫೋನ್ ಗಳ ಮೇಲೆ ಬೊಂಬಾಟ್ ಆಫರ್ ಗಳನ್ನು ನೀಡಲಾಗುತ್ತಿದೆ. ಇದೆ ಮಾದರಿಯಲ್ಲಿ ಸ್ಯಾಮ್ ಸಂಗ್ ಸಹ ತನ್ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳ ಮೇಲೆ ಬೆಸ್ಟ್ ಆಫರ್ ಅನ್ನು ನೀಡಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಸರಣಿಯ ಬಜೆಟ್ ಬೆಲೆಯ ಸ್ಮಾರ್ಟ್ ಫೋನ್ ಗಳಾದ ಗ್ಯಾಲೆಕ್ಸಿ A7 ಮತ್ತು ಗ್ಯಾಲೆಕ್ಸಿ A8 ಸ್ಮಾರ್ಟ್ ಪೋನ್ ಸೇರಿದಂತೆ ಗ್ಯಾಲೆಕ್ಸಿ J6 ಪ್ಲಸ್ ಮತ್ತು ಗ್ಯಾಲೆಕ್ಸಿ J4 ಪ್ಲಸ್ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಲಾಗಿದೆ. ಇದರಿಂದಾಗಿ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಖರೀದಿ ಮಾಡಬೇಕು ಎನ್ನುವವರಿಗೆ ಇದೊಂದು ಬೆಸ್ಟ್ ಆಫರ್ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಗ್ಯಾಲೆಕ್ಸಿ A7 ಮತ್ತು ಗ್ಯಾಲೆಕ್ಸಿ A8 ಸ್ಮಾರ್ಟ್ ಪೋನ್ ಮಧ್ಯಮ ವರ್ಗದಲ್ಲಿ ಟಾಪ್ ಎನ್ನಿಸಿಕೊಂಡಿದೆ. ಇದೇ ಮಾದರಿಯಲ್ಲಿ ದೊರೆಯುತ್ತಿರುವ ಗ್ಯಾಲೆಕ್ಸಿ J6 ಪ್ಲಸ್ ಮತ್ತು ಗ್ಯಾಲೆಕ್ಸಿ J4 ಪ್ಲಸ್ ಸ್ಮಾರ್ಟ್ ಫೋನ್ ಬಜೆಟ್ ಬೆಲೆಯಲ್ಲಿ ಬೆಸ್ಟ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ನಾಲ್ಕು ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಬಾರಿ ಇಳಿಕೆಯನ್ನುಮಾಡಲು ಮುಂದಾಗಿದೆ ಸ್ಯಾಮ್ ಸಂಗ್.

ಸ್ಯಾಮ್ ಸಂಗ್ ಗ್ಯಾಲೆಕ್ಸಿ A7 ಸ್ಮಾರ್ಟ್ ಫೋನ್ ಅನ್ನು ಬಳಕೆದಾರರು ರೂ. 26990ಕ್ಕೆ ಖರೀದಿ ಮಾಡಬಹುದಾಗಿದೆ. ಇದೇ ಮಾದರಿಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ A8 ಸ್ಮಾರ್ಟ್ ಪೋನ್ ಅನ್ನು ಬಳಕೆದಾರರು ರೂ.22990ಕ್ಕೆ ಪಡೆಯಬಹುದಾಗಿದೆ.

ಇದೇ ಮಾದರಿಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ J6 ಪ್ಲಸ್ ಮತ್ತು ಗ್ಯಾಲೆಕ್ಸಿ J4 ಪ್ಲಸ್ ಸ್ಮಾರ್ಟ್ ಫೋನ್ ಬೆಲೆಯಲ್ಲಿಯೂ ಕಡಿತವನ್ನು ಕಾಣಬಹುದಾಗಿದ್ದು, ಗ್ಯಾಲೆಕ್ಸಿ J6 ಪ್ಲಸ್ ರೂ.14990ಕ್ಕೆ ಮತ್ತು ಗ್ಯಾಲೆಕ್ಸಿ J4 ಪ್ಲಸ್ 10990ಕ್ಕೆ ಮಾರಾಟವಾಗಲಿದೆ.

   
 
ಹೆಲ್ತ್