Back
Home » ಸಮ್ಮಿಲನ
8-11-2018: ಗುರುವಾರದ ದಿನ ಭವಿಷ್ಯ
Boldsky | 8th Nov, 2018 04:00 AM
  • ಮೇಷ

    ಅಮೃತಪೂರ್ಣ ಸಿಹಿಯಾದ ಮಾತುಗಳು ನಿಮ್ಮ ವಿರೋಧಿಗಳನ್ನು ಕೂಡಾ ನಿಮ್ಮತ್ತ ಸೂಜಿಗಲ್ಲಿನಂತೆ ಸೆಳೆಯುವವು. ಅಜಾತ ಶತ್ರುಗಳಿಂದ ನೀವು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಯಾವುದೇ ರೀತಿಯ ವ್ಯರ್ಥ ಚರ್ಚೆಗಳನ್ನು ಮುಂದುವರಿಸದೆ ಇರುವುದು ಒಳ್ಳೆಯದು. ನಿಮ್ಮ ಸೋಲು ಇತರರಿಗೂ ಪಾಠ ಕಲಿಸಿದೆ. ಮುಂದಿನ ದಿನಗಳಲ್ಲಿ ಹೇಗೆ ಕಾರ್ಯ ಹಮ್ಮಿಕೊಳ್ಳಬೇಕು ಎಂದು ಸಾವಧಾನದಿಂದ ಚಿಂತಿಸಿ. ಭವಿಷ್ಯದ ಬಗೆಗಿನ ಅತಂತ್ರಗಳಿಗೆ ವಿರಾಮ ಸಿಗುವ ಸಾಧ್ಯತೆ ಇದೆ. ಮನೆಯ ಹಿರಿಯರೊಬ್ಬರ ಸಹಾಯ, ಸಹಕಾರ ದೊರೆಯಲಿದ್ದು ಸರ್ಕಾರದ ವತಿಯಿಂದ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವಂಥ ಆದೇಶ ನಿಮ್ಮ ಕೈ ಸೇರುವುದು.

    ಅದೃಷ್ಟ ಸಂಖ್ಯೆ:2


  • ವೃಷಭ

    ಹಲವಾರು ಕಾರ್ಯ ಯೋಜನೆಗಳನ್ನು ಒತ್ತಡದಲ್ಲಿ ನಿರ್ವಹಿಸಲು ಮುಂದಾಗುವಿರಿ. ನಿಧಾನವಾಗಿ ಆದರೂ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಆದರೆ ನಿಮ್ಮ ದೌರ್ಬಲ್ಯವನ್ನು ಪರರ ಮುಂದೆ ಪ್ರದರ್ಶಿಸದಿರುವುದು ಒಳ್ಳೆಯದು. ಯಾರೊಡನೆಯೂ ಮುಖ ಗಂಟಿಕ್ಕಿ ಮಾತನಾಡದಿರಿ. ಮುಖಕ್ಕೆ ನಗುವೇ ಶೃಂಗಾರ. ಹಾಗಾಗಿ ಎದುರಾದ ಜನರನ್ನು ನಗುನಗುತ್ತಲೇ ಮಾತನಾಡಿಸಿ ಮತ್ತು ಮಾತಿನ ನಾಜುಕೂತನದಿಂದಲೇ ಪರರ ತಪ್ಪನ್ನು ಎತ್ತಿ ತೋರಿ. ಮುಂದಿನ ದಿನಗಳ ಬಗೆಗಿನ ಮುಂದಾಲೋಚನೆ ಬೇಡವೆಂದಿಲ್ಲ. ಆದರೆ ನಾಳೆಯ ಊಟವನ್ನು ಇಂದೇ ಮಾಡಿ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ಈ ದಿನದ ಕಾರ್ಯಕ್ರಮವನ್ನು ಹೇಗೆ ಶಿಸ್ತುಬದ್ಧವಾಗಿ ಪೂರ್ಣಗೊಳಿಸಬೇಕೆನ್ನುವುದರ ಬಗ್ಗೆ ಚಿಂತಿಸಿ.
    ಅದೃಷ್ಟ ಸಂಖ್ಯೆ:1


  • ಮಿಥುನ

    ಬಹು ದೊಡ್ಡ ಬಂಡವಾಳದೊಂದಿಗೆ ವ್ಯಾಪಾರ, ವ್ಯವಹಾರಗಳನ್ನು ಆರಂಭಿಸುವಿರಿ. ಇದರಿಂದ ಹೆಚ್ಚಿನ ಲಾಭ ಬರುವುದು. ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.ಸಿನಿಮಾ, ನೃತ್ಯ, ನಾಟಕ ಅಥವಾ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಜನರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ಬಹುದಿನದ ಬೇಡಿಕೆಗಳು ಈಡೇರುವ ಸಾಧ್ಯತೆ ಇದೆ. ಅಲ್ಲಿ ಚುನಾವಣೆ ನಡೆದಲ್ಲಿ ಅದರಲ್ಲಿ ಪಾಲ್ಗೊಳ್ಳುವ ಅವಕಾಶ ಇರುತ್ತದೆ. ಗುರುವಿನ ಶುಭ ಸಂಚಾರವು ಹಣದ ಮುಗ್ಗಟ್ಟು ಉಂಟು ಮಾಡುವುದಿಲ್ಲ. ಆದರೆ ಅನವಶ್ಯಕ ಸಂಗತಿಗಳಿಗೆ ಹಣ ವ್ಯಯಿಸುವುದನ್ನು ನಿಲ್ಲಿಸುವುದು ಪ್ರಮುಖ ಕರ್ತವ್ಯವಾಗಿದೆ. ಈ ಬಗ್ಗೆ ಮನೆಯ ಸದಸ್ಯರೂ ಸಹಕರಿಸುವರು.
    ಅದೃಷ್ಟ ಸಂಖ್ಯೆ:2


  • ಕಟಕ

    ಕಚೇರಿಯಲ್ಲಿ ನಿಮ್ಮ ವಿಶೇಷವಾದ ಕಾರ್ಯಕ್ಷ ಮತೆಯಿಂದ ಪ್ರಶಂಸೆ ಪಡೆಯುವ ಹೇರಳ ಅವಕಾಶಗಳು ಲಭ್ಯವಾಗುತ್ತದೆ. ಸ್ಥಿರಾಸ್ಥಿ ಖರೀದಿ ಬಗ್ಗೆ ಮಾತುಕತೆ ನಡೆಸುವಿರಿ ಮತ್ತು ಅದರಲ್ಲಿ ಸಫಲತೆ ಕಾಣುವಿರಿ. ಮನೆಯ ವಾತಾವರಣದಿಂದ ನಿಮ್ಮನ್ನು ದೂರ ಮಾಡಿಕೊಳ್ಳದಿರಿ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಮೊದಲು ಮನೆಯ ಸದಸ್ಯರ ವಿಶ್ವಾಸವನ್ನು ಪಡೆದುಕೊಂಡು ಹೊರ ಜಗತ್ತಿನಲ್ಲಿ ವ್ಯವಹರಿಸಿ. ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಹೋಗದು ಎಂಬ ಗಾದೆ ಮಾತನ್ನು ಕೇಳಿರುತ್ತೀರಿ. ಅಂತೆಯೇ ನಿಮ್ಮ ವ್ಯವಹಾರದಲ್ಲಿನ ಕಿಂಚಿತ್‌ ಲೋಪವು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇದೆ. ಕುಲದೇವರ ಮೊರೆ ಹೋಗುವುದು ಒಳ್ಳೆಯದು.
    ಅದೃಷ್ಟ ಸಂಖ್ಯೆ:4


  • ಸಿಂಹ

    ಮಕ್ಕಳ ವಿಚಾರವಾಗಿ ಆತಂಕದ ಕ್ಷ ಣಗಳನ್ನು ಎದುರಿಸುವಿರಾದರೂ ಸಂತೋಷದ ವಾರ್ತೆಯೂ ಸಿಗಲಿದೆ. ವಿದ್ಯಾಗುರುಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗುವಿರಿ. ಇದರಿಂದ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ನೀವು ಮಾಡುತ್ತಿರುವ ಕೆಲಸಕ್ಕೆ ಸರಿಯಾದ ಸಂಬಳ ಅಥವಾ ಗೌರವ ದೊರೆಯುತ್ತಿಲ್ಲ ಎಂಬುದು ನಿಜವೇ ಆದರೆ ಅತ್ಯಂತ ಸ್ವಾಭಿಮಾನಿಯಾದ ನೀವು ಸಂಬಳ ಹೆಚ್ಚು ಮಾಡಿ ಎಂದು ನಿಮ್ಮ ಬಾಸಿನ ಹತ್ತಿರ ಹೇಳಿಕೊಳ್ಳಲು ಸಂಕೋಚ ಪಡದಿರಿ.ಸ್ವಾಭಿಮಾನ ಮತ್ತು ದುರಭಿಮಾನಗಳಿಗೆ ಕೂದಲೆಳೆ ಅಂತರ ಮಾತ್ರ. ನೀವು ಅತಿ ಚಾಣಾಕ್ಷ ಮತಿ ಎಂದು ಎಲ್ಲರೂ ಬಲ್ಲರು. ಆದರೆ ಅದೇ ನಿಮಗೆ ಅಹಂಕಾರವಾಗಿದೆ. ಹಾಗಾಗಿ ಸಾರ್ವತ್ರಿಕವಾಗಿ ತಲೆಬಾಗಿ ನಡೆಯುವುದು ಕ್ಷೇಮ.
    ಅದೃಷ್ಟ ಸಂಖ್ಯೆ:1


  • ಕನ್ಯಾ

    ನಿಮ್ಮದೇ ಆದ ಕೆಲವು ನಿರ್ದಿಷ್ಟ ಯೋಜನೆಗಳನ್ನು ನೀವು ಸಾಧಿಸಿ ತೋರಿಸುವ ಮೂಲಕ ಬಂಧು, ಬಳಗದವರಿಂದ ವಿಶೇಷ ಅಭಿಮಾನಕ್ಕೆ ಪಾತ್ರರಾಗುವಿರಿ. ಒಂದು ಮಹತ್ತರ ಕಾರ್ಯವನ್ನು ಮಾಡಿ ಮುಗಿಸಿದ ತೃಪ್ತಿ ನಿಮ್ಮದಾಗುವುದು. ಹೊಸ ರೀತಿಯ ನಿಮ್ಮ ಕನಸು ವಾಸ್ತವದಲ್ಲಿ ಕಾರ್ಯಯೋಜನೆಗೊಳ್ಳಲು ಹೇರಳ ಅವಕಾಶಗಳು ದೊರೆಯುವವು. ನಿಮಗೆ ಒದಗಿ ಬರುವ ಮಹತ್ತರ ಕಾಲಾವಕಾಶವನ್ನು ವ್ಯರ್ಥಮಾಡಿಕೊಳ್ಳದಿರಿ. ನಿಮ್ಮನ್ನು ಜನರು ಹಿಂದಿನಿಂದ ಟೀಕಿಸುತ್ತಾರೆ ಎಂಬ ಪೂರ್ವಗ್ರಹಿಕೆ ಇಟ್ಟುಕೊಳ್ಳದೆ ಕಾರ್ಯ ಪ್ರವೃತ್ತರಾಗಿ. ಟೀಕಿಸುವ ಜನ ಯಾವಾಗಲೂ ಇರುತ್ತಾರೆ. ಅವರ ಟೀಕೆಯಲ್ಲಿನ ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು ಅವರ ಬಾಯಿಗೆ ಬೀಗ ಹಾಕುವಿರಿ.
    ಅದೃಷ್ಟ ಸಂಖ್ಯೆ:6


  • ತುಲಾ

    ವಸ್ತುವಿನ ಬಗ್ಗೆ ಎಚ್ಚರವಾಗಿರಿ. ಸಾಮಾಜಿಕವಾದ ನೆಲೆಯಲ್ಲಿ ತೊಂದರೆಗಳಿಗೆ ಹೆಚ್ಚಿನ ಅವಕಾಶಗಳು ಬರುವುದು. ಹಣಕಾಸಿನ ವ್ಯವಸ್ಥೆ ಸಾಧಾರಣ ಮಟ್ಟದ್ದಾಗಿದ್ದು ಖರ್ಚು, ವೆಚ್ಚಗಳಲ್ಲಿ ಕೈ ಹಿಡಿತ ಮಾಡಬೇಕಾಗುವುದು. ಕೆಲವು ದಿನಗಳಿಂದ ನಿಮ್ಮ ಬಾಸ್‌ ನಿಮ್ಮ ಕೆಲಸದಿಂದ ಸಂತೃಪ್ತಿಗೊಂಡಿದ್ದಾರೆ. ಇದು ನಿಮ್ಮ ಮುಂದಿನ ಭವಿಷ್ಯದ ಭದ್ರ ಬುನಾದಿಗೆ ಕಾರಣವಾಗುವುದು. ಮಡದಿ ಮಕ್ಕಳ ಸಹಕಾರ ನಿಮಗೆ ನೆಮ್ಮದಿಯನ್ನು ತರುವುದು.ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹೋದರ, ಸಹೋದರಿಯರು ಸಹಾಯ ಮಾಡುವರು. ಆದಾಗ್ಯೂ ಮನಸ್ಸಿನ ಅವ್ಯಕ್ತ ಭಯ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರನ್ನು ಭಜಿಸಿ.

    ಅದೃಷ್ಟ ಸಂಖ್ಯೆ:4


  • ವೃಶ್ಚಿಕ

    ಮನೆಯಲ್ಲಿ ಅಶಾಂತಿ ವಾತಾವರಣ ತಲೆದೋರುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಭಕ್ತಿಯಿಂದ ಪೂಜಿಸಿ. ದೇವಿಯು ನಿಮ್ಮ ಸಂಕಷ್ಟಗಳನ್ನು ದೂರಮಾಡಿ ಮನಸ್ಸಿಗೆ ಮುದ ನೀಡುವಳು. ಬಾಳಸಂಗಾತಿಯ ಆರೋಗ್ಯದಲ್ಲಿ ಏರು, ಪೇರುಗಳುಂಟಾಗುವ ಸಾಧ್ಯತೆ ಇದೆ. ಹಾಗಾಗಿ ಮನೆಯ ಸದಸ್ಯರ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ವಿರೋಧಿಗಳು ಕಣ್ಣಾಮುಚ್ಚಾಲೆಯಾಟ ಆಡುವುದು ಇದ್ದಿದ್ದೆ. ಗ್ರಹಗಳು ಕೆಟ್ಟಾಗ ಮಡದಿ ಮಕ್ಕಳೇ ಮಾತು ಕೇಳದ ಇರುವ ಪರಿಸ್ಥಿತಿ ಇರುತ್ತದೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ನೀವು ನಂಬಿದ ದೈವವನ್ನು ಮನಸಾ ಸ್ಮರಿಸಿ.
    ಅದೃಷ್ಟ ಸಂಖ್ಯೆ:6


  • ಧನುಸ್ಸು

    ನಿಮ್ಮ ಪಾಲಿನ ಹಲವು ವಿಚಾರಗಳಲ್ಲಿ ಹಿರಿಯರೊಬ್ಬರ ಸಲಹೆ ಸ್ವೀಕರಿಸಿ ಮತ್ತು ನಿಮಗೆ ಸ್ತ್ರೀ ಸಮೂಹ ಬೆಂಗಾವಲಿಗೆ ನಿಲ್ಲಲಿದೆ. ದೇವಿಯು ನಿಮಗೆ ಸ್ತ್ರೀ ರೂಪದಲ್ಲಿ ಸಹಾಯ ಮಾಡುವಳು. ಸಾರ್ವಜನಿಕ ಜೀವನದಲ್ಲಿ ಜನಾನುರಾಗಿ ಎನಿಸಲಿದ್ದೀರಿ. ಮಾತಿನ ಚಾತುರ್ಯ ನಿಮಗೆ ದೊಡ್ಡ ಆಸ್ತಿ ಆಗಲಿದೆ. ಆಂಜನೇಯ ಸ್ವಾಮಿಯನ್ನು ಅನನ್ಯ ಭಕ್ತಿಯಿಂದ ಭಜಿಸಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಸರ್ರನೆ ಮನಸ್ಸಿಗೆ ಬಂದಿದ್ದನ್ನು ಕಾರ್ಯಗತಗೊಳಿಸಬೇಡಿ. ಸದ್ಯದ ಪರಿಸ್ಥಿತಿಯಲ್ಲಿ ನೀವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಶನಿ ಪ್ರಭಾವವೇ ಅಂತಹದು. ಎಂತಹವರನ್ನು ಸಂಕಷ್ಟಕ್ಕೆ ದೂಡುವನು.
    ಅದೃಷ್ಟ ಸಂಖ್ಯೆ:6


  • ಮಕರ

    ದಶಮದ ಗುರು ಹಾಗೂ ವ್ಯಯಸ್ಥಾನದ ಶನಿ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವರು. ಹಾಗಾಗಿ ಮಹತ್ತರವಾದ ಕಾರ್ಯಗಳನ್ನು ಮುಂದೂಡುವುದು ಒಳಿತು. 5 ವರ್ಷದ ಒಳಗೆ ಇರುವ ಹೆಣ್ಣು ಮಕ್ಕಳಿಗೆ ಸಿಹಿ ಹಂಚಿ.
    ಯಾರದೋ ಮಾತು ಕೇಳಿ ಇನ್ಯಾರ ಬಗೆಗೋ ತಪ್ಪು ಕಲ್ಪನೆ ಹೊಂದದಿರಿ. ತಪ್ಪು ಕಲ್ಪನೆ ತಾಳಿದ ವ್ಯಕ್ತಿಯಿಂದಲೇ ನಿಮಗೆ ಹೆಚ್ಚಿನ ಸಹಾಯ ಸಿಗುವುದು. ಹಾಗಾಗಿ ಸುಖಾಸುಮ್ಮನೆ ಮತ್ತೊಬ್ಬರ ಗುಣಾವಗುಣಗಳನ್ನು ತುಲನೆ ಮಾಡದಿರಿ. ಮಾತಿಗೆ ಮಾತು ಬೆಳೆದು ತೀವ್ರವಾದ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುವುದು. ಹಾಗಾಗಿ ಮಾತಿನಲ್ಲಿ ಸೋತು ಎದುರಾಳಿಯ ಹೃದಯ ಗೆಲ್ಲುವ ಚಾಕಚಕ್ಯತೆ ತೋರಿ. ಹಾಗಾಗಿ ಶಾಂತಿಯಿಂದ ಕಾರ್ಯ ನಿರ್ವಹಿಸಿ.
    ಅದೃಷ್ಟ ಸಂಖ್ಯೆ:9


  • ಕುಂಭ

    ಪ್ರಜ್ಞಾರೂಪದಿಂದ ಇಡೀ ಜಗತ್ತನ್ನೇ ವ್ಯಾಪಿಸಿಕೊಂಡಿರುವ ಶ್ರೀದೇವಿಯು ನಿಮಗೆ ಅಭಯ ಹಸ್ತ ನೀಡಿರುವಳು. ಆಕೆಯ ಕೃಪಾ ಕಟಾಕ್ಷ ದಿಂದ ನಿಮ್ಮೆಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು. ಗುರು ರಾಘವೇಂದ್ರರು ಇಲ್ಲವೆ ವಾದಿರಾಜರ ಸ್ಮರಣೆಯಿಂದ ನಿಮ್ಮ ಕೆಲಸವು ಪುಟಕ್ಕಿಟ್ಟ ಬಂಗಾರದಂತೆ ಶೋಭಿಸುವುದು. ನಿಮ್ಮ ಮೇಲಧಿಕಾರಿಯು ನಿಮ್ಮ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಆಡುವರು. ನೀವು ಅಂದುಕೊಂಡಿದ್ದಕ್ಕಿಂತ ಬೇಗನೆ ನಿಮ್ಮ ಕಾರ್ಯ ಯೋಜನೆಗಳು ಮುಗಿಯುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಸುತ್ತಮುತ್ತಲೂ ಪ್ರಭಾವಿ ಜನರ ಹಸ್ತಕ್ಷೇಪ ಇರುತ್ತದೆ. ಇದರಿಂದ ನಿಮಗೆ ಒಳಿತೇ ಅಗುವುದು.
    ಅದೃಷ್ಟ ಸಂಖ್ಯೆ:2


  • ಮೀನ

    ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದರು ಹಿರಿಯರು. ಹಾಗಾಗಿ ನೀವು ನಿಮ್ಮ ಇತಿ ಮಿತಿಗಳನ್ನು ಅರಿತು ಕಾರ್ಯ ರೂಪಿಸಿಕೊಳ್ಳಿ. ಇದರಿಂದ ಹೆಚ್ಚಿನ ಆತಂಕದಿಂದ ದೂರ ಉಳಿಯಬಹುದು. ಶಂಭು ಶಿವನ ಆರಾಧನೆಯಿಂದ ಮಾನಸಿಕ ಬೇಗುದಿ ತಲ್ಲಣಗಳು ಒಂದು ಹಂತದ ನಿಯಂತ್ರಣಕ್ಕೆ ಬರುವುದು. ಹಣಕಾಸಿನ ಏರು, ಪೇರಿನ ಸ್ಥಿತಿಯು ನಿಮ್ಮ ಮನಸ್ಸನ್ನು ಕಂಗೆಡಿಸುವುದು. ಈ ಬಗ್ಗೆ ಹೆಚ್ಚು ಚಿಂತೆ ಬೇಡ. ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚಾಗುವ ಸಂದರ್ಭವಿದೆ. ದೂರದಿಂದ ನೆಂಟರು ದಿಢೀರನೆ ಮನೆಗೆ ಆಗಮಿಸುವ ಸಾಧ್ಯತೆ ಇದೆ. ಬಹುದಿನಗಳ ನಂತರ ಮನಸ್ಸಿನ ದುಃಖವನ್ನು ಪರರ ಮುಂದೆ ತೋಡಿಕೊಳ್ಳುವಿರಿ. ಇದರಿಂದ ಮನಸ್ಸು ಹಗುರವಾಗುವುದು.
    ಅದೃಷ್ಟ ಸಂಖ್ಯೆ:1

    ಪಂಡಿತ್ ಮಂಜುನಾಥ್ ಶಾಸ್ತ್ರೀ
    ದೈವಜ್ಞ ಜ್ಯೋತಿಷ್ಯರು 9845743807
    ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp




ವೇದಕಾಲದ ಜ್ಯೋತಿಷ್ಯದಲ್ಲಿ, ಜ್ಯೋತಿಷ್ಯರು ಗುರು ಗ್ರಹವನ್ನು ಬೃಹಸ್ಪತಿ, ಅಥವಾ "ಗುರು" ಎಂದು ಕರೆದರು. ಇಂದಿಗೂ ಭಾರತದ ಹಲವು ಭಾಷೆಗಳಲ್ಲಿ ವಾರದ ಒಂದು ದಿನವನ್ನು ಗುರುವಾರ(ಗುರುಗ್ರಹದ ದಿನ)ವೆಂದು ಕರೆಯಲಾಗುತ್ತದೆ. ಜೀವನದ ಒಂದಲ್ಲಾ ಒಂದು ಘಟ್ಟದಲ್ಲಿ ಒಬ್ಬ ಮನುಷ್ಯನಿಗೆ ಒಂದಲ್ಲಾ ಒಂದು ಸಮಯಕ್ಕೆ ಒಂದಲ್ಲಾ ಒಂದು ಸಫ‌ಲತೆಯನ್ನು ಜನ್ಮ ಕುಂಡಲಿಯಲ್ಲಿ ಗುರುಗ್ರಹ ಕೂಡದೆಯೇ ಉಳಿಯಲಾರದು. ಒಂದಲ್ಲಾ ಒಂದು ಘಟ್ಟದಲ್ಲಿ ಶನೈಶ್ಚರ ಸ್ವಾಮಿ ಎಂಥದೇ ಬಲಾಡ್ಯ ವ್ಯಕ್ತಿಯಿರಲಿ ಆ ವ್ಯಕ್ತಿಯ ಕಾಲೆಳೆದೇ ತೀರುವುದು ಒಂದು ರೀತಿ.

ಗುರು ಗ್ರಹದ್ದು ಯಾರೋ ಕಾಲೆಳೆದ ಸಮಯ, ಬಿದ್ದವರನ್ನು ಮೇಲೆತ್ತುವುದು ಒಂದು ಪ್ರವೃತ್ತಿ. ಇದರ ಅರ್ಥ ಗುರು ಗ್ರಹ ಕೆಟ್ಟದನ್ನು ಮಾಡಲಾರದು ಎಂದೇನಲ್ಲ. ಆದರೆ ಗುರು ಗ್ರಹ ಶುಭಕಾರಿ ಗ್ರಹಗಳ ಗುಂಪಲ್ಲಿಯೇ ಅಗಾಧವಾದ ಶುಭಕಾರೀ ಗ್ರಹ. ನೀಚತ್ವಕ್ಕೆ ತುತ್ತಾಗಿಯೋ, ವ್ಯಯಕ್ಕೆ ಬಂದಾಗಲೋ, ಕೇಂದ್ರಾಧಿಪತ್ಯ ದೋಷದ ಜೊತೆ ನಿಶ್ಚಿತ ಗುರಿಯಿರದ ಅಭದ್ರತೆ ಒದಗಿದಾಗ ಮಾತ್ರ ಗುರು ತೀರಾ ಅಪಾಯಕಾರಿ.

ಗುರು ಗ್ರಹದ ರೇಖೆಯೂ ಪ್ರತಿಯೊಬ್ಬ ವ್ಯಕ್ತಿಯ ಹಸ್ತದಲ್ಲಿ ಒಳ್ಳೆಯ ಸೂಚನೆಯನ್ನೇ ಕೊಟ್ಟಿರುತ್ತಾನೆ. ಕಾಯಬೇಕು. ಸಾಯಿ ಬಾಬಾರನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ಶು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807.

   
 
ಹೆಲ್ತ್