Back
Home » ಇತ್ತೀಚಿನ
'ನೋಕಿಯಾ 9' ಲೀಕ್!..ಮೊಬೈಲ್ ಮಾರುಕಟ್ಟೆಯನ್ನು ನಡುಗಿಸುತ್ತಿವೆ ಫೀಚರ್ಸ್!
Gizbot | 8th Nov, 2018 07:25 AM

ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮಾರಾಟ ಹಕ್ಕನ್ನು ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು ಐದು ಕ್ಯಾಮೆರಾಗಳ ವೈಶಿಷ್ಟ್ಯಗಳನ್ನು ಹೊಂದಿರುವ ಬಹುನಿರೀಕ್ಷಿತ ನೋಕಿಯಾ 9 ಸ್ಮಾರ್ಟ್‌ಫೋನಿನ ಚಿತ್ರಗಳು ಇದೇ ಮೊದಲ ಬಾರಿಗೆ ಲೀಕ್ ಆಗಿವೆ. ಬಹುನಿರೀಕ್ಷಿತ ನೋಕಿಯಾ 9 ಸ್ಮಾರ್ಟ್‌ಫೋನಿಲ್ಲಿ ಐದು ಕ್ಯಾಮೆರಾ ಲೆನ್ಸ್ ಜೊತೆಗೆ ದೊಡ್ಡದಾದ ಎಲ್‌ಇಡಿ ಫ್ಲ್ಯಾಶ್, ಆಟೋಫೋಕಸ್ ಪ್ರಮುಖ ಆಕರ್ಷಣೆಯಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ ಎಂದು ಹೇಳಲಾಗಿದೆ.

MWC 2018ನಲ್ಲಿ ತನ್ನ ಅಭಿಮಾನಿಗಳಿಗೆ ನಿರಾಶೆಯುಂಟು ಮಾಡಿದ್ದ ನೋಕಿಯಾ ಈಗ ಸಿಹಿ ಸುದ್ದಿ ನೀಡಿದ್ದು, ಸಾಧ್ಯವಾದರೆ ಈ ಬೇಸಿಗೆಯ ಕೊನೆಯ ಹಂತದ ರಜಾ ದಿನಗಳಲ್ಲಿ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆ ಇದೆಯಂತೆ. ಈ ಬಾರಿಯ ಬೇಸಿಗೆ ಅಂತ್ಯದಲ್ಲಿ ಬರ್ಲಿನ್‌ನಲ್ಲಿ ನಡೆಯುವ IFA 2018 ಟ್ರೇಡ್ ಶೋನಲ್ಲಿ ನೋಕಿಯಾ 9 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೆಚ್‌ಎಂಡಿ ಗ್ಲೋಬಲ್ ಸಂಸ್ಥೆಯ ಮೂಲಗಳು ತಿಳಿಸಿವೆ.

ಕಳೆದ MWC 2018ನಲ್ಲಿ ನೋಕಿಯಾ 1, ನೋಕಿಯಾ 6 (2018), ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೊಕೊ ಸ್ಮಾರ್ಟ್ಫೋನ್‌ಗಳನ್ನು ಘೋಷಿಸಿದ್ದ ಹೆಚ್‌ಎಂಡಿ ಗ್ಲೋಬಲ್ ಸಂಸ್ಥೆ ಆಗ ತನ್ನ ಸ್ಮಾರ್ಟ್‌ಫೋನ್‌ಗಳ ಹಾರ್ಡ್‌ವೇರ್‌ಗಳಲ್ಲಿ ಯಾವುದೇ ಹೇಳಿಕೊಳ್ಳುವಂತಹ ಬದಲಾವಣೆಯನ್ನು ತಂದಿರಲಿಲ್ಲ. ಆದರೆ ಈ ವರ್ಷದ MWC 2018ನಲ್ಲಿ ಬಿಡುಗಡೆಯಾಗುತ್ತಿರುವ ನೋಕಿಯಾ 9 ಸ್ಮಾರ್ಟ್‌ಫೋನ್ ಭಾರೀ ಫೀಚರ್ಸ್ ಹೊತ್ತು ಬಿಡುಗಡೆಯಾಗುವುದು ಪಕ್ಕಾ ಎಂದು ಹೇಳಲಾಗಿದೆ.

ಐದು ಕ್ಯಾಮೆರಾ ಲೆನ್ಸ್ಗಳ ಜೊತೆಗೆ ನೋಕಿಯಾ 9 ಸ್ಮಾರ್ಟ್‌ಫೋನ್ 3ಡಿ ಸ್ಮಾರ್ಟ್‌ಫೋನ್ ಆಗಿರಲಿರುವ ಬಗ್ಗೆಯೂ ಕೂಡ ಸುದ್ದಿ ಸಿಕ್ಕಿದೆ. ಹಾಗೇನಾದರೂ ಇದು 3ಡಿ ಸ್ಮಾರ್ಟ್‌ಫೋನ್ ಆಗಿದ್ದರೆ, ಬಿಡುಗಡೆಗೆ ಸಜ್ಜಾಗಿರುವ ಮೊದಲ ನೋಕಿಯಾ 3ಡಿ ಸ್ಮಾರ್ಟ್‌ಫೋನ್ ಇದಾಗಿರಲಿದೆ. ಈ ನೋಕಿಯಾ 9 ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷ ಏನೆಂದರೆ ಸ್ಮಾರ್ಟ್‌ಫೋನಿನಲ್ಲಿ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಸಹ ಅಳವಡಿಸಲಾಗಿದೆ ಎಂದು ಸಹ ಹೇಳಲಾಗಿದೆ.

ಇನ್ನು ಸ್ಮಾರ್ಟ್‌ಫೋನ್‌ಗೆ ಯಾವ ಕಂಪನಿ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ನೀಡುತ್ತಿದೆ ಎನ್ನುವುದು ಈ ವರೆಗೂ ಸ್ಪಷ್ಟವಾಗಿಲ್ಲ. ಆದರೆ, ಖಚಿತ ಮೂಲಗಳ ಪ್ರಕಾರ Vivo ಕಂಪನಿಯ Vivo X20 UDಗೆ ಫಿಂಗರ್ಪ್ರಿಂಟ್ ಮ್ಯಾಡ್ಯೂಲ್‌ಗಳನ್ನು ಪೂರೈಸುತ್ತಿದ್ದ ಸ್ಯಾನ್ಜೋಸ್ ಮೂಲದ ಸೈಟೋಪ್ಟಿಕ್ಸ್ ಕಂಪನಿಯೇ ನೋಕಿಯಾ 9ಗೂ ಮಾಡ್ಯೂಲ್‌ಗಳನ್ನ ನೀಡಿದೆ ಎಂದು ಹೇಳಲಾಗಿದೆ.. ಅಷ್ಟೇ ಅಲ್ಲದೆ, ನೋಕಿಯಾ 8 ಸಿರಾಕೊದಲ್ಲಿ ಇರುವಂತೆಯೇ ನೋಕಿಯಾ 9ನಲ್ಲೂ ಬಾಗಿದ ಡಿಸ್ಪ್ಲೇ ಪ್ಯಾನಲ್ ಇರಲಿದೆ.

   
 
ಹೆಲ್ತ್