Back
Home » ಪ್ರವಾಸ
ಕಳಸದಲ್ಲಿ ಒಡಮೂಡಿರುವ ಮೂಡಿಗೆರೆಯ ಕಳಶೇಶ್ವರನ ದರ್ಶನ ಮಾಡಿದ್ದೀರಾ?
Native Planet | 8th Nov, 2018 09:59 AM
 • ಎಲ್ಲಿದೆ ಈ ಕಳಶೇಶ್ವರ ದೇವಾಲಯ

  Wind4wings

  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಕಳಶೇಶ್ವರ ಸ್ವಾಮಿ ದೇವಾಲಯವು ಭಾರತದ ಐತಿಹಾಸಿಕ ಸ್ಥಳವಾಗಿದೆ. ಅದು ಭದ್ರಾ ನದಿಯ ಮೇಲೆ ನಿಂತಿದೆ. ಇಲ್ಲಿ ವಸಿಷ್ಠರು, ಅಗಸ್ತ್ಯರು ತಪಸ್ಸನ್ನಾಚರಿಸಿದ್ದರಂತೆ.

  ಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರು


 • ಪುರಾಣ ಕಥೆ

  Vikramkkl

  ಮೈತ್ರಾವರ್ಣರು ಎನ್ನುವ ಐವರು ಋಷಿಗಳು ತಪಸ್ಸಿಗಾಗಿ ಶಾಂತವಾದ ಸ್ಥಳದ ಹುಡುಕಾಟದಲ್ಲಿದ್ದಾಗ ಭದ್ರಾನದಿಯ ದಡದಲ್ಲಿ ತಪಸ್ಸು ಮಾಡುವ ಮನಸ್ಸಾಗಿ ಅಲ್ಲೇ ತಪಸ್ಸನ್ನಾಚರಿಸಿದರು ಎನ್ನಲಾಗುತ್ತದೆ.


 • ಅಪ್ಸರ ಸ್ತ್ರೀಯರನ್ನು ಕಳಿಸಿದ ಇಂದ್ರ

  Bdeepu

  ಇಂದ್ರನು ಮೈತ್ರಾವರ್ಣರ ತಪೋಭಂಗ ಮಾಡಲು ಅಪ್ಸರ ಸ್ತ್ರೀಯರನ್ನು ಕಳಿಸುತ್ತಾರೆ. ತಪೋಭಂಗವಾಗಿ ಅವರ ರೇತಸ್ಸು ಸ್ಕಲನವಾಗುತ್ತದೆ. ಋಷಿ ಮುನಿಗಳ ರೇತಸ್ಸು ವ್ಯರ್ಥವಾಗಬಾರದೆಂದು ದೇವತೆಗಳು ಅದನ್ನು ಒಂದು ಕಲಶದಲ್ಲಿ ಶೇಖರಿಸಿಟ್ಟರಂತೆ.

  ದುಂಬಿಯಂತೆ ಬಂದು ಅಸುರನನ್ನು ಸಂಹರಿಸಿದ ದುರ್ಗೆಯ ಸನ್ನಿಧಿಯೇ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ


 • ಕಳಸಿಂದ ಹುಟ್ಟಿಕೊಂಡ ಅಗಸ್ತ್ಯರು

  Dineshkannambadi

  ರೇತಸ್ಸನ್ನು ಶೇಖರಿಸಿಟ್ಟ ಸ್ಥಳವೇ ಭದ್ರಾದಂಡೆ. ಆ ಕಳಸದಿಂದ ಅಗಸ್ತ್ರ್ಯರು ಹುಟ್ಟಿಕೊಂಡರು ಎನ್ನಲಾಗುತ್ತದೆ. ಕಲಶೇಶ್ವರನು ಈ ಭದ್ರಾದಂಡೆಯ ಮೇಲೆ ನೆಲೆಯಾಗಿದ್ದಾನೆ. ಕಳಸದಿಂದ ಒಡಮೂಡಿದ ಶಿವ.


 • ಆನೆ ಗಣಪತಿ

  Wind4wings

  ಮಹಾದ್ವಾರದ ಬಳಿ ಮೆಟ್ಟಿಲನ್ನು ಹತ್ತಿ ಹೋದರೆ ಶಿವನ ದರ್ಶನವಾಗುತ್ತದೆ. ಅಲ್ಲೇ ಆನೆ ಗಣಪತಿ ಇದೆ. ಕಾಳಾಸುರನನ್ನು ಸಂಹರಿಸಿದಂತಹ ಗಣಪತಿ ಇದಾಗಿದೆ. ಇಲ್ಲಿ ಗಂಡು ಆನೆ ಗಣಪತಿ ಹಾಗು ಹೆಣ್ಣು ಆನೆ ಗಣಪತಿ ಇದೆ. ಇವೆರಡನ್ನೂ ಪೂಜಿಸಲಾಗುತ್ತದೆ.

  ಐದು ಮುಖ, ಐದು ಶರೀರವುಳ್ಳ ಬೆಂಗಳೂರಿನ ಪಂಚಮುಖ ಗಣೇಶನ ದರ್ಶನ ಪಡೆದಿದ್ದೀರಾ?


 • ಗಿರಿಜಾ ಕಲ್ಯಾಣ

  ಪೂರ್ವದಲ್ಲಿ ಪಾರ್ವತಿ ಪರಮೇಶ್ವರರಿಗೆ ವಿಹಾಹ, ಗಿರಿಜಾ ಕಲ್ಯಾಣ ನಡೆಯುವಾಗ ಎಲ್ಲಾ ದೇವಾನುದೇವತೆಗಳು ನೆರೆದಿದ್ದರು, ಅಗಸ್ತ್ಯ ಮುನಿಗಳೂ ಹೋಗಿದ್ದರು. ಆಗ ಭೂಮಿಯ ಭಾರ ಹೆಚ್ಚಾಗಿ ಒಂದು ಕಡೆಗೆ ವಾಲಿತ್ತಂತೆ. ಆಗ ಶಿವನು ಅಗಸ್ತ್ಯರಿಗೆ ದಕ್ಷಿಣಕ್ಕೆ ಹೋಗುವಂತೆ ತಿಳಿಸಿದ್ರು.


 • ಗಿರಿಜಾ ಕಲ್ಯಾಣ

  ಪೂರ್ವದಲ್ಲಿ ಪಾರ್ವತಿ ಪರಮೇಶ್ವರರಿಗೆ ವಿಹಾಹ, ಗಿರಿಜಾ ಕಲ್ಯಾಣ ನಡೆಯುವಾಗ ಎಲ್ಲಾ ದೇವಾನುದೇವತೆಗಳು ನೆರೆದಿದ್ದರು, ಅಗಸ್ತ್ಯ ಮುನಿಗಳೂ ಹೋಗಿದ್ದರು. ಆಗ ಭೂಮಿಯ ಭಾರ ಹೆಚ್ಚಾಗಿ ಒಂದು ಕಡೆಗೆ ವಾಲಿತ್ತಂತೆ. ಆಗ ಶಿವನು ಅಗಸ್ತ್ಯರಿಗೆ ದಕ್ಷಿಣಕ್ಕೆ ಹೋಗುವಂತೆ ತಿಳಿಸಿದ್ರು.

  ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ ! • ಅಗಸ್ತ್ಯರಿಗೆ ವರವಿತ್ತ ಪರಮೇಶ್ವರ

  Swaropz

  ಆದರೆ ಶಿವ-ಪಾರ್ವತಿ ಕಲ್ಯಾಣ ನೋಡಲು ಸಾಧ್ಯವಿಲ್ಲವೆಂದು ಬೇಸರ ಪಟ್ಟ ಅಗಸ್ತ್ಯರಿಗೆ ಪರಮೇಶ್ವರನು ಕಳಸದಲ್ಲೇ ವಿವಾಹದ ದೃಶ್ಯವನ್ನು ತೋರಿಸುವಂತೆ ವರ ನೀಡುತ್ತಾರೆ.


 • ಪ್ರಮುಖ ಮಹೋತ್ಸವಗಳು

  ಇಲ್ಲಿ ಪ್ರತಿವರ್ಷ ಮೂರು ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ರುದ್ರಾಭಿಷೇಕ, ಗಿರಿಜಾ ಕಲ್ಯಾಣ, ಕಳಶೇಶ್ವರ ಜಾತ್ರೆ ನಡೆಯುತ್ತದೆ.


 • ಕಳಸದಲ್ಲೇ ಮೂಡಿದ ಶಿವ

  Dineshkannambadi

  ಕಳಸದಲ್ಲೇ ಒಡಮೂಡಿದ ಶಿವನ ದೇವಾಲಯ ಇಲ್ಲಿ ಮಾತ್ರ ಕಾಣಸಿಗುವುದು. ಕಾಶಿಗೆ ಹೋದಷ್ಟೇ ಪುಣ್ಯ ಇಲ್ಲಿ ಸಿಗುತ್ತದಂತೆ. ಮೈಸೂರಿನ ಜಯಚಾಮರಾಜ ಒಡೆಯರ ಉಡುಗೊರೆಯು ಇಲ್ಲಿದೆಯಂತೆ.

  ಬೆಂಗಳೂರು ಸಮೀಪವಿರುವ ಮಾರಿಬೆಟ್ಟಕ್ಕೆ ಹೋಗಿದ್ದೀರಾ?


 • ಹೊಯ್ಸಳ ಶೈಲಿಯ ದೇವಾಲಯ

  Wind4wings

  ಈ ದೇವಾಲಯವು ನದಿಯ ಹತ್ತಿರ ಒಂದು ಗುಡ್ಡದ ಮೇಲೆ ನೆಲೆಗೊಂಡಿದೆ . ಹೊಯ್ಸಳ ಶಿಲ್ಪ ಶೈಲಿಯಲ್ಲಿ ಮಂದಿರವನ್ನು ನಿರ್ಮಿಸಲಾಗಿದೆ. ದೂರದಿಂದ ನೋಡಿದಾಗ, ದೇವಾಲಯದ ಗುಮ್ಮಟವು ಒಂದು ಮಡಕೆ ಅಥವಾ ಪಾತ್ರೆಗಳನ್ನು ಹೋಲುತ್ತದೆ.


 • ಅನ್ನದಾನವಿದೆ

  ಸೌಲಭ್ಯಗಳು 5000 ಜನರಿಗೆ ಅವಕಾಶ ಕಲ್ಪಿಸುವ ದೊಡ್ಡ ಸಮುದಾಯ ಸಭಾಂಗಣವನ್ನು ಒಳಗೊಂಡಿದೆ. ಯಾತ್ರಾರ್ಥಿಗಳು, ಭಕ್ತರಿಗೆ ಮಧ್ಯಾಹ್ನ 1 ರಿಂದ 2 ಘಂಟೆಯವರೆಗೆ ಭೋಜನಕ್ಕೆ ವ್ಯವಸ್ಥೆ ಇದೆ.
ಕಳಸ ಹೊರನಾಡಿನಲ್ಲಿರುವ ಕಳಸ ಕ್ಷೇತ್ರದ ಬಗ್ಗೆ ಕೇಳಿದ್ದೀರಾ? ಇಲ್ಲಿದ್ದಾನೆ ಕಳಸದಲ್ಲಿ ಒಡಮೂಡಿದ ಪರಮೇಶ್ವರ. ಈ ದೇವಾಲಯದ ಮುಖ್ಯ ಗೋಪುರವು ನಗರದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಪ್ರಾಂತ್ಯದ ಎಲ್ಲ ಯಾತ್ರಿಕರು ದಿನವಿಡೀ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಪಟ್ಟಣವು ಪಶ್ಚಿಮದ ಘಟ್ಟಗಳಿಂದ ಸುತ್ತುವರಿಯಲ್ಪಟ್ಟಿದೆ.

   
 
ಹೆಲ್ತ್