Back
Home » Car News
ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ
DriveSpark | 8th Nov, 2018 10:14 AM
 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ಹ್ಯುಂಡೈ ಸಂಸ್ಥೆಯು ಅಕ್ಟೋಬರ್ 10ರಂದು ಹೊಸ ಸ್ಯಾಂಟ್ರೋ ಕಾರಿನ ಖರೀದಿಗಾಗಿ ಬುಕ್ಕಿಂಗ್ ಆನು ಶುರು ಮಾಡಿತ್ತು. ಕೇವಲ 15 ದಿನಗಳಲ್ಲಿ ಬರೊಬ್ಬರಿ 30,000 ಬುಕ್ಕಿಂಗ್ ಅನ್ನು ಪಡೆದುಕೊಂಡು ಮಾರಾಟದಲ್ಲಿ ಟಾಟಾ ಮೋಟಾರ್ಸ್‍ನ ಜನಪ್ರಿಯ ಟಿಯಾಗೊ ಕಾರುಗಳನ್ನು ಹಿಂದಿಕ್ಕಿದ್ದು, ಇದೀಗ ಮಾರುತಿ ಸುಜುಕಿ ವ್ಯಾಗನಾರ್ ಮತ್ತು ಸೆಲೆರಿಯೊ ಕಾರುಗಳನ್ನು ಹಿಂದಿಕ್ಕಲು ಸಜ್ಜುಗೊಳ್ಳುತ್ತಿದೆ.


 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ಮತ್ತೊಂದು ವಿಶೇಷ ಎಂದರೆ ಬುಕ್ಕಿಂಗ್ ಆದ 30,000 ಹ್ಯುಂಡೈ ಸ್ಯಾಂಟ್ರೋ ಕಾರುಗಳಲ್ಲಿ ಸುಮಾರು 9 ಸಾವಿರದ ಬುಕ್ಕಿಂಗ್ ಅಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯ ಮಾದರಿಗಳಿಗೆ ಬಂದಿದ್ದು, ಇನ್ನುಳಿದ 21,000 ಸಾವಿರದ ಬುಕ್ಕಿಂಗ್ ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಗಳಿಗೆ ಬಂದಿದೆ.


 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ಇನ್ನು ಹೊಸ ಕಾರಿನ ಖರೀದಿಗಾಗಿ ಪ್ರೀ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರು ಮೂರು ತಿಂಗಳು ಕಾಯಲೇಬೇಕಿದ್ದು, ಮತ್ತೇ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಠಿಸಲು ಬಂದಿರುವ ಹೊಸ ಸ್ಯಾಂಟೋ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..


 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ವೇರಿಯಂಟ್‍‍ಗಳು
  ಬಿಡುಗಡೆಯಾಗಿರುವ ಹೊಸ ಸ್ಯಾಂಟ್ರೋ ಕಾರು ಐದು ಪ್ರಮುಖ ವೆರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಸೌಲಭ್ಯಗಳಿಗೆ ಅನುಗುಣವಾಗಿ ಡಿ-ಲೈಟ್, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟ್ರಾ ವೆರಿಯೆಂಟ್‌‌ಗಳೊಂದಿಗೆ ಸಿಎನ್‌ಜಿ ಇಂಧನ ಆಯ್ಕೆಯನ್ನು ಕೂಡಾ ನೀಡಲಾಗಿದೆ.


 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ಸ್ಯಾಂಟ್ರೋ ಕಾರಿನ ಬೆಲೆಗಳು (ಎಕ್ಸ್‌ಶೋರೂಂ ಪ್ರಕಾರ)

  Variants Price D-Lite Rs 3,89,900
  Era Rs 4,24,900
  Magna Rs 4,57,900
  Magna AMT Rs 5,18,900
  Sportz Rs 4,99,900
  Sportz AMT Rs 5,64,900
  Asta Rs 5,45,900
  Magna CNG Rs 5,23,900
  Sportz CNG Rs 5,64,900

 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ಕಾರಿನ ಹೊರಭಾಗದ ವಿನ್ಯಾಸ
  ಹಳೆಯ ಮಾದರಿಯ ಸ್ಯಾಂಟ್ರೋ ಕಾರಿಗೂ ಮತ್ತು ಹೊಸ ಸ್ಯಾಂಟ್ರೋ‌ ಕಾರಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಮಹತ್ವದ ಬದಲಾವಣೆ ಕಂಡಿರುವ ಹೊಸ ಸ್ಯಾಂಟ್ರೋ ಕಾರು ಹೊಚ್ಚ ಹೊಸ ಡಿಸೈನ್ ಪ್ರೇರಿತ ಕಾಸ್‌ಕ್ಯಾಡಿಂಗ್ ಬ್ಲ್ಯಾಕ್ ಗ್ರಿಲ್, ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.


 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ಹಾಗೆಯೇ ಪ್ರೀಮಿಯಂ ಇಂಟಿರಿಯರ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಹೊಸ ಸ್ಯಾಂಟ್ರೋ ಕಾರು ಒಳಭಾಗದ ವಿನ್ಯಾಸಗಳು ಸಹ ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷವಾಗಿದ್ದು, ವೀಲ್ಹ್ ಆರ್ಚ್‌ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರಿನ ಕ್ಯಾಬಿನ್ ಸ್ಥಳಾವಕಾಶ ಕೂಡಾ ಹೆಚ್ಚಿದೆ.


 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ಪ್ರೀಮಿಯಂ ವೈಶಿಷ್ಟ್ಯತೆಗಳಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಮಿರರ್‌ ಲಿಂಕ್, ಎಲೆಕ್ಟ್ರಿಕ್ ಅಡ್ಜೆಸ್ಟ್‌ಮೆಂಟ್ ರಿಯರ್ ವ್ಯೂವ್ ಮಿರರ್, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಸೌಲಭ್ಯವಿದೆ.


 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ಮೈಲೇಜ್
  ಹ್ಯುಂಡೈ ಸಂಸ್ಥೆಯ ಅಧಿಕೃತ ಮಾಹಿತಿ ಪ್ರಕಾರ ಪೆಟ್ರೋಲ್ ಎಂಜಿನ್ ಸ್ಯಾಂಟ್ರೋ ಕಾರುಗಳು ಪ್ರತಿ ಲೀಟರ್‌ಗೆ 20.3 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಹೊಂದಿರುವ ಸ್ಯಾಂಟ್ರೋ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 30.5 ಕಿ.ಮಿ ಗರಿಷ್ಠ ಮೈಲೇಜ್ ನೀಡಲಿವೆ.


 • ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

  ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಡ್ರೈವರ್ ಸೈಡ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಪ್ಯಾಸೆಂಜರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ಯಾಮೆರಾ, ಸ್ಪೀಡ್ ಸೆಸ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯಗಳನ್ನು ನೀಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಿವೆ.
ಹ್ಯುಂಡೈ ಸಂಸ್ಥೆಯು ತಮ್ಮ ತನಪ್ರಿಯ ಸ್ಯಾಂಟ್ರೋ ಹ್ಯಾಚ್‍‍ಬ್ಯಾಕ್ ಕಾರನ್ನು ಅಕ್ಟೋಬರ್ 23ರಂದು ಆದೂರಿಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಹೊಸ ಕಾರಿನ ಪ್ರಾರಂಭಿಕ ಬೆಲೆಯನ್ನು ರೂ.3.89 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

   
 
ಹೆಲ್ತ್