Back
Home » ಆರೋಗ್ಯ
ಒದ್ದೆ ಸಾಕ್ಸ್ ಧರಿಸಿ ಮಲಗುವುದರಿಂದ ಆಗುವ ಪ್ರಯೋಜನಗಳೇನು ಗೊತ್ತೇ?
Boldsky | 8th Nov, 2018 01:21 PM
 • ಚಳಿ ಜ್ವರ ಬರುವ ಪ್ರಥಮ ಮುನ್ಸೂಚನೆ ಆಗಿರುತ್ತದೆ

  ಯಾವುದೋ ಒಂದು ಚಳಿ ಹೆಚ್ಚಾಗಿರುವ ದಿನ ನೀವು ಇನ್ನೇನು ರೆಡಿ ಆಗಿ ಕೆಲಸಕ್ಕೆ ಹೊರಡಬೇಕು ಎನ್ನುವಷ್ಟರಲ್ಲಿ ಯಾಕೋ ನಿದ್ರೆ ಬರುತ್ತಿದೆಯಲ್ಲ ಎನಿಸುವ ಒಂದು ಕ್ಷಣವನ್ನು ಕಲ್ಪಿಸಿಕೊಳ್ಳಿ. ಅದಾಗಿ ಕೆಲ ಗಂಟೆಗಳ ನಂತರ ಗಂಟಲು ಕೆರೆತ ಆರಂಭವಾಗಿ, ಮೂಗಿನಿಂದ ನೀರು ಸೋರಲಾರಂಭಿಸಿ ತಲೆನೋವು ಆರಂಭವಾಗುತ್ತದೆ. ಕಚೇರಿಯಲ್ಲಿ ಇನ್ನು ಇರುವುದು ಸಾಧ್ಯವೇ ಇಲ್ಲ ಎನಿಸಿ ಮನೆಗೆ ಹೋಗಿ ಹಾಸಿಗೆಯ ಮೇಲೆ ಮೈಚೆಲ್ಲಿದರೆ ಸಾಕಪ್ಪಾ ಎನ್ನುವ ಭಾವನೆ ಮೂಡುತ್ತದೆ. ಇಂಥ ಅನುಭವ ನಿಮಗೂ ಆಗಿರಬಹುದು. ಇದು ಚಳಿ ಜ್ವರ ಬರುವ ಪ್ರಥಮ ಮುನ್ಸೂಚನೆ ಆಗಿರುತ್ತದೆ. ಶೀತ ಬಾಧೆ ಆರಂಭವಾಗುತ್ತಲೇ ಕೆಲ ನಿರ್ದಿಷ್ಟ ವಿಟಮಿನ್‌ಗಳ ಸೇವನೆಯನ್ನು ಪ್ರಾರಂಭಿಸಬೇಕಾಗುತ್ತದೆ.


 • ಒದ್ದೆ ಸಾಕ್ಸ್ ಚಿಕಿತ್ಸೆ

  ಬಿಸಿ ಸೂಪ್, ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮತ್ತು ಮಲಗುವ ಮುನ್ನ ಒದ್ದೆ ಕಾಲುಚೀಲ (ಸಾಕ್ಸ್) ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಇದೇನು ಒದ್ದೆ ಸಾಕ್ಸ್ ಚಿಕಿತ್ಸೆ ಎಂದು ಆಶ್ಚರ್ಯವಾಗಬೇಡಿ. ಇದನ್ನು ಈಗಾಗಲೇ ಹಲವಾರು ಜನ ಬಳಸುತ್ತಿದ್ದು, ಸಕಾರಾತ್ಮಕ ಪರಿಣಾಮಗಳು ಕಂಡು ಬಂದಿವೆ. ಮೊದಲೇ ಶೀತ, ಅಂಥದ್ದರಲ್ಲಿ ಹಸಿ ಸಾಕ್ಸ್ ಧರಿಸುವುದು ಹೇಗೆ ಎಂದು ಚಿಂತಿತರಾಗಬೇಡಿ. ಹಸಿ ಸಾಕ್ಸ್ ಧರಿಸುವ ವಿಧಾನ ನಿಜವಾಗಿಯೂ ಒಳ್ಳೆಯದಾಗಿದೆ. ಒಂದು ಜೊತೆ ಒಳ್ಳೆಯ ಸಾಕ್ಸ್ ನಿಮ್ಮ ಬಳಿ ಇದ್ದರೆ ಸಾಕು. ನೀವು ಮತ್ತೆ ಶೀಘ್ರ ಆರಾಮವಾಗಿ ಲವವಿಕೆಯಿಂದ ಓಡಾಡಬಹುದು. ಒದ್ದೆ ಸಾಕ್ಸ್ ವಿಧಾನದ ಬಗ್ಗೆ ವಿವರವಾಗಿ ಇಲ್ಲಿ ತಿಳಿಸಿದ್ದು ನೀವೂ ಟ್ರೈ ಮಾಡಿ ಶೀತದಿಂದ ಉಪಶಮನ ಕಂಡುಕೊಳ್ಳಿ.


 • ಒದ್ದೆ ಸಾಕ್ಸ್ ಧರಿಸುವಿಕೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ

  ಒದ್ದೆ ಸಾಕ್ಸ್ ಧರಿಸುವಿಕೆಯಿಂದ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಮೊದಲು ತಿಳಿಯೋಣ. ಒದ್ದೆ ಸಾಕ್ಸ್ ಧರಿಸಿ ನೀವು ಆರಾಮವಾಗಿ ನಿದ್ದೆ ಮಾಡಬಹುದು. ಸಿಹಿಗನಸು ಕಾಣುತ್ತ ನೀವು ಮಲಗಿರುವಾಗ ಈ ಹಸಿ ಸಾಕ್ಸ್‌ಗಳು ಶೀತವನ್ನು ಗುಣಪಡಿಸುವ ಕೆಲಸ ಮಾಡುತ್ತಿರುತ್ತವೆ. ಪಾದಗಳು ತಂಪಾದಾಗ ಅಲ್ಲಿನ ರಕ್ತನಾಳಗಳು ಸಂಕೋಚನಗೊಂಡು ದೇಹದ ಎಲ್ಲ ಭಾಗಗಳಿಗೆ ಅವಶ್ಯಕವಾದ ಉತ್ತಮ ಪೋಷಕಾಂಶಗಳು ಬಿಡುಗಡೆ ಯಾಗಲಾರಂಭಿಸುತ್ತವೆ. ಈ ವಿಷಯ ಬಹುಷಃ ನಿಮಗೆ ಗೊತ್ತಿರಲಾರದು, ಆದರೂ ಇದು ಸತ್ಯ.

  Most Read: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಜೇನುತುಪ್ಪ ಸೇವಿಸಿದರೆ, ಆರೋಗ್ಯಕ್ಕೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳಿವೆ


 • ಶೀತ ಬಾಧೆಯ ಪರಿಣಾಮಗಳು ದೂರಾಗುತ್ತವೆ

  ಪಾದಗಳ ರಕ್ತನಾಳಗಳ ಕಾರ್ಯದಿಂದ ಬಿಡುಗಡೆಯಾಗುವ ಪೋಷಕಾಂಶಗಳು ದೇಹದಲ್ಲಿನ ಯಾವುದೇ ಸೋಂಕು ನಿವಾರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಂದರೆ ಪಾದಗಳಲ್ಲಿನ ಬಿಸಿಯಿಂದ ಜೀವಕೋಶಗಳಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳು ರಕ್ತಪರಿಚಲನೆಯೊಂದಿಗೆ ಕೂಡಿಕೊಂಡು ಅವು ಬೇಗ ಹೊರಹೋಗಲು ಸಹಕಾರಿಯಾಗುತ್ತದೆ. ಬಿಸಿ ಹಾಗೂ ತಣ್ಣನೆಯ ಕ್ರಿಯೆಗಳಿಂದ ರಕ್ತದ ಪಂಪಿಂಗ್ ವ್ಯವಸ್ಥೆ ಸುಧಾರಿಸಿ ದುಗ್ಧರಸ ನಾಳಗಳು ಉತ್ತಮವಾಗಿ ಕೆಲಸ ಮಾಡಲಾರಂಭಿಸುತ್ತವೆ. ಹೀಗಾಗಿ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಹಾಗೂ ಶೀತ ಬಾಧೆಯ ಪರಿಣಾಮಗಳು ದೂರಾಗುತ್ತವೆ. ನೀವು ಮಾತ್ರವಲ್ಲದೆ ಮನೆಯಲ್ಲಿನ ಮಕ್ಕಳು ಅಥವಾ ಇತರ ಸದಸ್ಯರಿಗೂ ಈ ಹೈಡ್ರೊಥೆರಪಿ ವಿಧಾನ ಬಳಸುವಂತೆ ತಿಳಿಸಿ.


 • ಸಾಕ್ಸ್ ಹಾಕಿಕೊಳ್ಳುವ ವಿಧಾನ

  ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಸಾಧಾರಣ ಬಿಸಿ ನೀರಿನಲ್ಲಿ 2 ರಿಂದ 3 ನಿಮಿಷ ಇರಲು ಬಿಡಿ. ಅಥವಾ ಪಾದಗಳ ಮೇಲೆ ಬಿಸಿ ನೀರು ಹರಿಯುವಂತೆ ಮಾಡಿದರೂ ಆದೀತು. ಆದರೆ ನೀರು ಚರ್ಮ ಸುಡುವಷ್ಟು ಬಿಸಿ ಆಗಿರದಂತೆ ಎಚ್ಚರಿಕೆ ಇರಲಿ. ನಂತರ ಒಂದು ಜೊತೆ ಸ್ವಚ್ಛವಾದ ಕಾಟನ್ ಸಾಕ್ಸ್‌ಗಳನ್ನು ತಣ್ಣೀರಿನಲ್ಲಿ ನೆನೆಸಿ. ಬಿಸಿ ನೀರಿನಲ್ಲಿ ಪಾದ ಅದ್ದಿ ತೆಗೆದ ತಕ್ಷಣ ಈ ಸಾಕ್ಸ್‌ಗಳನ್ನು ಹಿಂಡಿ ಒದ್ದೆಯಾಗಿರುವಾಗಲೇ ಧರಿಸಿಕೊಳ್ಳಿ. ಕೆಲ ಸಮಯದ ನಂತರ ಸಾಕ್ಸ್ ಕಳಚಿ ಆದಷ್ಟೂ ತಣ್ಣಗಿನ ನೀರಲ್ಲಿ ಅದ್ದಿ ಮತ್ತೆ ಧರಿಸಿಕೊಳ್ಳಿ.

  Most Read: ಈ 6 ರಾಶಿಚಕ್ರದ ಜನರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರಂತೆ!


 • ಸಾಕ್ಸ್ ಹಾಕಿಕೊಳ್ಳುವ ವಿಧಾನ

  ಬಿಸಿ ನೀರಿನಲ್ಲಿ ಪಾದಗಳನ್ನು ತೊಳೆದುಕೊಂಡಿದ್ದರಿಂದ ಈ ತಣ್ಣೀರಿನ ಸಾಕ್ಸ್‌ಗಳ ಧರಿಸುವಿಕೆ ಹಿತಕರವಾಗಿರುತ್ತದೆ. ಇಷ್ಟಾದ ನಂತರ ವುಲನ್‌ನಿಂದ ಮಾಡಿದ ದಪ್ಪನೆಯ ಹಸಿ ಸಾಕ್ಸ್‌ಗಳನ್ನು ಧರಿಸಿ ಹೊದ್ದು ಮಲಗಿ ಬಿಡಿ. ಕಾಲುಗಳ ಮೇಲೆ ಸಹ ಹೊದಿಕೆ ಇರಲಿ. ಬೆಳಗಿನ ಹೊತ್ತಿಗೆ ಸಾಕ್ಸ್‌ಗಳು ಒಣಗಿರುತ್ತವೆ. ಈ ಹಂತದಲ್ಲಿ ಹಾಲು ಹಾಗೂ ಸಕ್ಕರೆ ಅಂಶದ ಆಹಾರಗಳಿಂದ ಆದಷ್ಟೂ ದೂರವಿರಿ. ಇಷ್ಟು ಮಾಡಿದರೆ ಸಾಕು, ಮರುದಿನ ನಿಮ್ಮ ಮನಸು ಹಾಗೂ ದೇಹ ಎರಡೂ ಉಲ್ಲಸಿತವಾಗಿ ಮತ್ತೆ ಕೆಲಸಕ್ಕೆ ರೆಡಿ ಆಗಬಹುದು. ಯಾವುದೇ ಔಷಧಿ ತೆಗೆದುಕೊಳ್ಳದೆ ಕೇವಲ ಬಾಹ್ಯವಾಗಿ ಅನುಸರಿಸಬಹುದಾದ ಈ ಹಸಿ ಸಾಕ್ಸ್ ವಿಧಾನ ಶೀತಬಾಧೆ ಕಡಿಮೆ ಮಾಡಲು ಸಹಕಾರಿಯಾಗಿದೆ. ಅತ್ಯಂತ ಸುಲಭವಾದ ಈ ವಿಧಾನವನ್ನು ಅನುಸರಿಸಿ ಆರಾಮ ಪಡೆದುಕೊಳ್ಳಿ.
ನಾವು ಯಾವಾಗಲೂ ಆಕರ್ಷಕವಾಗಿ ಕಾಣಲು, ತೇಜಸ್ಸಿನ ಮೈಕಾಂತಿ ಹೊಂದಲು, ಗಮನ ಸೆಳೆಯುವಂಥ ವ್ಯಕ್ತಿತ್ವ ನಮ್ಮದಾಗಿಸಿಕೊಳ್ಳಲು, ಆರೋಗ್ಯಕರ ಕೇಶ ರಾಶಿ, ಉಗುರು ಹೊಂದಲು ಹೀಗೆ ಒಟ್ಟಾರೆಯಾಗಿ ಸುಂದರವಾಗಿರುವಂತೆ ಮಾಡಲು ಹಲವಾರು ಹೊಸ ಐಡಿಯಾಗಳನ್ನು ಪ್ರತಿನಿತ್ಯ ನಾವು ಬಳಸುತ್ತಲೇ ಇರುತ್ತೇವೆ. ಇಂತಹ ಸೌಂದರ್ಯವರ್ಧಕ ವಿಧಾನಗಳ ಬಗ್ಗೆ ಚಿತ್ರ ವಿಚಿತ್ರವಾದ ಲೇಖನಗಳನ್ನು ಓದಿ ನಿಜವಾಗಿಯೂ ಅವುಗಳಿಂದ ಪ್ರಯೋಜನವಿದೆಯೆ ಎಂದು ಕೆಲವೊಮ್ಮೆ ವಿಚಾರ ಮಾಡುವಂತಾಗುತ್ತದೆ.

ಕೆಲ ಬಾರಿ ಇಂತಹ ಐಡಿಯಾಗಳು ಕೈ ಕೊಟ್ಟು ಸೈಡ್ ಇಫೆಕ್ಟ್ ಆಗುವುದೂ ಉಂಟು. ಆದರೂ ನಾವು ನಿಮಗಿಲ್ಲಿ ಒಂದಿಷ್ಟು ನೂತನ ಆರೋಗ್ಯಕರ ಹಾಗೂ ಶೀತ ಬಾಧೆ ಹೋಗಲಾಡಿಸುವ ಕೆಲ ನೂತನ ವಿಧಾನಗಳನ್ನು ತಿಳಿಸುತ್ತಿದ್ದೇವೆ. ಆದರೆ ನಾವಿಲ್ಲಿ ತಿಳಿಸುತ್ತಿರುವ ವಿಧಾನಗಳು ನೈಜವಾಗಿವೆ ಹಾಗೂ ನಿಜ ಜೀವನದಲ್ಲಿ ಸುಲಭವಾಗಿ ಕಾರ್ಯಗತಗೊಳಿಸುವಂಥವಾಗಿವೆ.

   
 
ಹೆಲ್ತ್