Back
Home » ಇತ್ತೀಚಿನ
ಯೂಟ್ಯೂಬ್‌, ವಾಟ್ಸ್‌ಆಪ್‌ ಬಳಸಲು ಇನ್ಮುಂದೆ ಆಧಾರ್‌ ಬೇಕಾಗಬಹುದು..!
Gizbot | 8th Nov, 2018 05:38 PM
 • ಪೆಟೀಷನ್‌ನಲ್ಲಿ ಏನೀದೆ..?

  ಆಂಟೋನಿ ಕ್ಲೆಮೆಂಟ್‌ ರುಬಿನ್‌ ಎಂಬಾತ ಮದ್ರಾಸ್‌ ಹೈಕೋರ್ಟ್‌ನಲ್ಲಿ ಎಲ್ಲಾ ಸಾಮಾಜಿಕ ಜಾಲತಾಣಗಳು ತಮ್ಮ ಬಳಕೆದಾರರ ಆಧಾರ್‌ ಅಥವಾ ಸರ್ಕಾರಿ ಗುರುತಿನ ಚೀಟಿಯನ್ನು ಲಿಂಕ್‌ ಮಾಡಲು ಆದೇಶ ನೀಡಬೇಕೆಂದು ಪೆಟೀಷನ್‌ ಸಲ್ಲಿಸಿದ್ದಾರೆ.


 • ಗೂಗಲ್‌, ಯೂಟ್ಯೂಬ್‌ಗೆ ನೋಟಿಸ್‌

  ಪೆಟೀಷನ್‌ನ್ನು ಆಲಿಸಿರುವ ನ್ಯಾ.ಎಸ್‌.ಮಣಿಕುಮಾರ್‌ ಮತ್ತು ನ್ಯಾ.ಸುಬ್ರಮಣ್ಯಮ್ ಪ್ರಸಾದ್‌ ಅವರ ಜಂಟಿ ಪೀಠ ಗೂಗಲ್‌ ಮತ್ತು ಯೂಟ್ಯೂಬ್‌ಗೆ ಕೋರ್ಟ್‌ ಮುಂದೆ ಹಾಜರಾಗಲು ಹೇಳಿದೆ. ಗೂಗಲ್‌ ಮತ್ತು ಯೂಟ್ಯೂಬ್‌ ಕೋರ್ಟ್‌ಗೆ ಬರಲಿಲ್ಲ ಎಂದರೂ ತಮ್ಮ ಪ್ರತಿಕ್ರಿಯೆಯನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಯೂಟ್ಯೂಬ್‌ನ ಪ್ರತಿಕ್ರಿಯೆಯನ್ನು ಸಹ ಪೇರೆಂಟ್‌ ಕಂಪನಿಯಾಗಿರುವ ಗೂಗಲ್‌ ಸಹ ನೀಡಬಹುದು ಎಂದು ಹೇಳಿದ್ದು, ಹೈದ್ರಾಬಾದ್‌ ಕಚೇರಿಗೆ ನೋಟಿಸ್‌ ನೀಡಿದೆ.


 • ಯಾಕಿಂಥ ಪೆಟೀಷನ್‌..?

  ಆಂಥೋನಿ ಕ್ಲೆಮೆಂಟ್ ರುಬಿನ್ ಪ್ರಕಾರ, ಪ್ರತಿ ಸಾಮಾಜಿಕ ಮಾಧ್ಯಮ ಬಳಕೆದಾರ ಕನಿಷ್ಟ ಒಂದು ಸರ್ಕಾರದ ಗುರುತಿನ ಚೀಟಿಯನ್ನು ಸೋಶಿಯಲ್ ಮೀಡಿಯಾ ಕಂಪನಿಗೆ ನೀಡಬೇಕು. ಇದು ಅವರ ಅಸ್ತಿತ್ವವನ್ನು ಪರಿಶೀಲಿಸುತ್ತದೆ. ಇದರಿಂದ ಸೈಬರ್‌ ಕ್ರೈಂ, ಸೈಬರ್ ಮಾನನಷ್ಟ ಪ್ರಕರಣಗಳು ಮತ್ತು ಸೈಬರ್ ಸ್ಟಾಲ್ಕಿಂಗ್‌ ಘಟನೆಗಳು ಕಡಿಮೆಯಾಗುತ್ತವೆ. ಮತ್ತು ಮುಗ್ಧರನ್ನು ಕಾಪಾಡಬಹುದು ಎಂದು ಅರ್ಜಿ ಸಲ್ಲಿಸಿದ್ದಾರೆ.


 • ಗೂಗಲ್‌ಗಷ್ಟೇ ಅಲ್ಲ ಎಲ್ಲವೂ ಪಾಲಿಸಬೇಕು..!

  ಸದ್ಯ ಮದ್ರಾಸ್‌ ಹೈಕೋರ್ಟ್‌ ಗೂಗಲ್‌ ಮತ್ತು ಯೂಟ್ಯೂಬ್‌ಗಳನ್ನು ಮಾತ್ರ ಈ ವಾದಕ್ಕೆ ಪರಿಗಣಿಸಿದೆ. ಕೋರ್ಟ್‌ ಏನಾದರೂ ಪೆಟೀಷನ್‌ ಪರ ತೀರ್ಪು ಕೊಟ್ಟರೆ ಗೂಗಲ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವಾಟ್ಸ್‌ಆಪ್‌, ಟ್ವಿಟ್ಟರ್ ಮತ್ತೀತರ ಸಾಮಾಜಿಕ ಜಾಲತಾಣ ಬಳಕೆಗೆ ಗುರುತಿನ ಚೀಟಿ ನೀಡಬೇಕು. ಅದಲ್ಲದೇ ಜಿಮೇಲ್, ಪೇಟಿಎಂ, ಊಬರ್‌, ಯಾಹೂ, ಓಲಾ ಬಳಸಲು ಸಹ ಗುರುತಿನ ಚೀಟಿ ಅವಶ್ಯಕವಾಗುತ್ತದೆ.


 • ಸೈಬರ್‌ ಕ್ರೈಂ ಪೊಲೀಸರಿಂದ ಸಕಾರಾತ್ಮಕ ನಿಲುವು

  ಈ ಪೆಟೀಷನ್‌ಗೆ ಚೆನ್ನೈನ ಪೊಲೀಸ್‌ ಸೈಬರ್‌ ಕ್ರೈಂ ವಿಭಾಗ ಕೌಂಟರ್‌ ಅಫಿಡವಿಟ್‌ ಸಲ್ಲಿಸಿದ್ದು, ಈ ಪೆಟೀಷನ್‌ಗೆ ಬೆಂಬಲ ನೀಡುತ್ತಾ ತನ್ನದೇ ಆದ ವಾದಗಳನ್ನು ಮಂಡಿಸಿ ಪೆಟೀಷನ್‌ಗೆ ಹೆಚ್ಚಿನ ತೂಕ ನೀಡಿದ್ದು, ಪೆಟೀಷನ್‌ ಪರ ತೀರ್ಪು ಬರುವ ಸಾಧ್ಯತೆಯಿದೆ


 • ಕಂಪನಿಗಳಿಂದ ಸಹಕಾರವಿಲ್ಲವಂತೆ

  ಯಾವುದೇ ಸೈಬರ್ ಅಪರಾಧ ನಡೆದ ಸಂದರ್ಭದಲ್ಲಿ ಆರೋಪಿಗಳ ವಿವರಗಳನ್ನು ಒದಗಿಸುವಂತೆ ಕೇಳಿದರೆ ವಾಟ್ಸ್‌ಆಪ್‌, ಗೂಗಲ್‌, ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳು ಪೊಲೀಸರಿಗೆ ಸಹಕಾರ ನೀಡುತ್ತಿಲ್ಲ ಎಂದು ಗ್ರೇಟರ್‌ ಚೆನ್ನೈನ ಕೇಂದ್ರಿಯ ಅಪರಾಧ ದಳದ ಹೆಚ್ಚುವರಿ ಪೊಲೀಸ್‌ ಆಯುಕ್ತರು ಹೇಳಿದ್ದಾರೆ.


 • ಸೋಷಿಯಲ್‌ ಮೀಡಿಯಾ ಕಂಪನಿಗಳಿಗೆ ಕ್ಲಾಸ್‌

  ಪೊಲೀಸರು ಅಫಿಡವಿಟ್ ಸಲ್ಲಿಸಿದ ನಂತರ ಸೋಷಿಯಲ್‌ ಮೀಡಿಯಾ ಕಂಪನಿಗಳಿಗೆ ಕ್ಲಾಸ್‌ ತೆಗೆದುಕೊಂಡ ಮದ್ರಾಸ್‌ ಹೈಕೋರ್ಟ್‌ ಪೀಠ ಯಾವುದೇ ಸೈಬರ್ ಅಪರಾಧ ಸಂಭವಿಸಿದರೆ ಸಾಮಾಜಿಕ ಮಾಧ್ಯಮ ಕಂಪನಿಗಳು ಪೊಲೀಸರಿಗೆ ನೆರವು ನೀಡುವಲ್ಲಿ ಬದ್ಧವಾಗಿರಬೇಕು ಎಂದು ಸೂಚಿಸಿದೆ.


 • ಟೆಕ್‌ ಕಂಪನಿಗಳನ್ನು ಪ್ರತಿವಾದಿ ಮಾಡಬಹುದು..!

  ಫೇಸ್‌ಬುಕ್‌, ಟ್ವಿಟ್ಟರ್‌, ಯೂಟ್ಯೂಬ್, ವಾಟ್ಸ್‌ಆಪ್‌, ಗೂಗಲ್‌ನಂತಹ ಸಾಮಾಜಿಕ ಜಾಲತಾಣಗಳಿಂದ ಬೇಕಾಗುವ ಮಾಹಿತಿಯನ್ನು ಸೈಬರ್‌ ಕ್ರೈಮ್‌ ಪೊಲೀಸರು ತೆಗೆದುಕೊಳ್ಳಬಹುದು ಎಂದು ಪೀಠ ಹೇಳಿದೆ. ಅದಲ್ಲದೇ ಈ ರಿಟ್‌ ಅರ್ಜಿಗಳಿಗೆ ಟೆಕ್‌ ಕಂಪನಿಗಳನ್ನು ಏಕೆ ಪ್ರತಿವಾದಿ ಮಾಡಬಾರದು ಎಂಬುದಕ್ಕೆ ಉತ್ತರಿಸಿ ಎಂದು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಕೋರ್ಟ್‌ ಆದೇಶಿಸಿದೆ.


 • ಮುಂದೇನು..?

  ಮುಂದಿನ ವಿಚಾರಣೆ ನವೆಂಬರ್‌ 22ಕ್ಕೆ ಇದೆ. ಏನಾದರೂ ಮದ್ರಾಸ್ ಹೈಕೋರ್ಟ್‌ ಪೀಠ ಪೆಟೀಷನ್‌ ಪರ ತೀರ್ಪು ನೀಡಿದರೆ ಸಾಮಾಜಿಕ ಜಾಲತಾಣಗಳು ಆಧಾರ್‌ ಅಥವಾ ಸರ್ಕಾರಿ ಗುರುತಿನ ಚೀಟಿಯನ್ನು ಅಕೌಂಟ್‌ಗಳಿಗೆ ಲಿಂಕ್‌ ಮಾಡಬೇಕಾಗುತ್ತದೆ.


 • ವಾಟ್ಸ್‌ಆಪ್‌ ಬ್ಯಾನ್‌ ಆಗಬಹುದು..!

  ವಾಟ್ಸ್‌ಆಪ್‌ ಈಗಾಗಲೇ ಸರ್ಕಾರಕ್ಕೆ ತಿಳಿಸಿದ್ದು, ಎನ್‌ಕ್ರಿಪ್ಷೆನ್‌ ಟೂ ಪ್ರೊಟೆಕ್ಷನ್‌ ಪಾಲಿಸಿ ಅನ್ವಯ ಬಳಕೆದಾರನನ್ನು ಅಥವಾ ಆತನ ಮೆಸೇಜ್‌ಗಳನ್ನು ಟ್ರೇಸ್‌ ಮಾಡಲು ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಕಾರಣದಿಂದ ಸರ್ಕಾರ ವಾಟ್ಸ್‌ಆಪ್‌ನ್ನು ಭಾರತದಲ್ಲಿ ನಿಷೇಧ ಮಾಡಬಹುದಾಗಿದೆ. ಏನೀದ್ದರೂ ಇದು ಬೇರೆ ಪ್ರಕರಣ. ಮದ್ರಾಸ್‌ ಹೈಕೋರ್ಟ್‌ ಏನಾದರೂ ಪೆಟೀಷನ್‌ ಪರ ತೀರ್ಪು ಕೊಟ್ಟರೆ ವಾಟ್ಸ್‌ಆಪ್‌ ಅನಿವಾರ್ಯವಾಗಿ ಆಧಾರ್‌ ಲಿಂಕ್‌ ಮಾಡುವ ಆಯ್ಕೆಯನ್ನು ನೀಡಬೇಕಾಗುತ್ತದೆ.
ಇತ್ತೀಚೆಗೆ ತಾನೇ ಸುಪ್ರಿಂ ಕೋರ್ಟ್‌ ಆಧಾರ್‌ ಬಗ್ಗೆ ಬಹಳ ದೊಡ್ಡ ತೀರ್ಪನ್ನು ನೀಡಿ ಟೆಲಿಕಾಂ ಆಪರೇಟರ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೆ, ಈಗ ಅದೇ ಆಧಾರ್‌ನ್ನು ಯೂಟ್ಯೂಬ್‌ ಮತ್ತು ಗೂಗಲ್‌ ಬಳಸಲು ಕಡ್ಡಾಯವಾಗಿ ಬಳಸಬೇಕಾದ ಪ್ರಸಂಗ ಬಂದರೂ ಬರಬಹುದು.

ಹೌದು, ಈ ಬಗ್ಗೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆಯನ್ನು ಮದ್ರಾಸ್‌ ಹೈಕೋರ್ಟ್‌ ಕೈಗೆತ್ತಿಕೊಂಡಿದೆ. ಒಂದು ವೇಳೆ PIL ಗೆದ್ದರೆ ಇನ್ಮುಂದೆ ಗೂಗಲ್‌, ಯೂಟ್ಯೂಬ್‌ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಲು ಆಧಾರ್‌ ಅಥವಾ ಸರ್ಕಾರದಿಂದ ನೀಡಿದ ಗುರುತಿನ ಚೀಟಿಯನ್ನು ನೀಡಬೇಕಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

   
 
ಹೆಲ್ತ್