Back
Home » Bike News
ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..
DriveSpark | 8th Nov, 2018 02:40 PM
  • ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..

    ಇದೀಗ ದೇಶದಲ್ಲಿನ ಹಲವಾರು ರಾಯಲ್ ಎನ್‍ಫೀಲ್ಡ್ ಡೀಲರ್‍‍ಗಳು ಈ ಟ್ವಿನ್ ಬೈಕ್‍ಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಅನಧಿಕೃತವಾಗಿ ಪಡೆದುಕೊಳ್ಳುತ್ತಿರುವುದಾಗಿ ಮಾಹಿತಿಗಳ ಪ್ರಕಾರ ತಿಳಿದು ಬಂದಿದ್ದು, ಆಸಕ್ತ ಗ್ರಾಹಕರು ನಿಮ್ಮ ಹತ್ತಿರದ ಅಧಿಕೃತ ಡೀಲರ್‍‍ಗಳ ಬಳಿ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕ್‍‍ಗಳ ಖರೀದಿಗಾಗಿ ರೂ.5000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.


  • ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..

    ಈಗಾಗಲೆ ಯುಎಸ್ ಮಾರುಕಟ್ಟೆಯಲ್ಲಿ ಆರ್‍ಇ ಟ್ವಿನ್ 650 ಬೈಕ್‍ಗಳು ಬಿಡುಗಡೆಯಾಗಿದೆ. ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ರೂ. 4.21 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ ಬೈಕಿನ ಬೆಲೆಯು 6.36 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಈ ಎರಡೂ ಬೈಕ್‍‍ಗಳು ಸ್ಟ್ಯಾಂಡರ್ಡ್,ಕಸ್ಟಂ ಮತ್ತು ಕ್ರೂಮ್ ಎಂಬ ಮೂರ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.


  • ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..

    ಕಸ್ಟಂ ವೇರಿಯಂಟ್ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ರೂ. 4.36 ಲಕ್ಷ, ಕಸ್ಟಂ ಆರ್‍ಇ ಕಾಂಟಿನೆಂಟಲ್ ಜಿಟಿ 650 ಬೈಕ್ ಬೆಲೆ ರೂ. 4.53ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.


  • ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..

    ಇನ್ನು ಕ್ರೋಮ್ ವೇರಿಯಂಟ್‍‍ನ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ ಬೈಕ್‍‍ನ ಬೆಲೆಯು ರೂ. 4.72 ಲಕ್ಷ ಮತ್ತು ಕ್ರೋಮ್ ವೇರಿಯಂಟ್‍‍ನ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್‍ನ ಬೆಲೆಯು ರೂ. 4.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ.


  • ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..

    ಪ್ರಸ್ಥುತ ಯುಎಸ್ ಮಾರುಕಟ್ಟೆಯಲ್ಲಿ ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍‍ಗಳು ಸತತ ಮೂರು ವರ್ಷ ಅಥವಾ ಅನ್‍ಲಿಮಿಟೆಡ್ ಕಿಲೋಮೀಟರ್ ವಾರಂಟಿ ಮತ್ತು ರೋಡ್‍‍ಸೈಡ್ ಅಸ್ಸಿಸ್ಟಂಸ್ ಅನ್ನು ನೀಡಲಾಗುತ್ತಿದೆ.


  • ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..

    ಇನ್ನು ಭಾರತಕ್ಕೆ ಬರಲಿರುವ ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಿಗೆ ಮೂರು ವರ್ಷ ಅಥವಾ 40,000 ಕಿಲೋಮೀಟರ್ ವಾರಂಟಿ ಮತ್ತು ರೋಡ್‍‍ಸೈಡ್ ಅಸ್ಸಿಸ್ಟನ್ಸ್ ಅನ್ನು ನೀಡಲಿರುವ ಸಾಧ್ಯತೆಗಳಿವೆ. ಯುಎಸ್ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಲೆಗಿಂತಾ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುವ ಬೈಕ್‍‍ಗಳ ಬೆಲೆಯು ಕೊಂಚ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ.


  • ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..

    ಎಂಜಿನ್ ಸಾಮರ್ಥ್ಯ
    ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍‍ಗಳು 648ಸಿಸಿ ಆಯಿಲ್ ಕೂಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್ ಸಹಾಯದಿಂದ 47ಬಿಹೆಚ್‍‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.


  • ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..

    ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍‍ಗಳ ಮುಂಭಾಗದಲ್ಲಿ ಎಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಶಾಕ್ ಅಬ್ಸಾರ್ಬರ್‍‍ಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕ್‍‍ಗಳ ಮುಂಭಾಗದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ನೀಡಲಾಗಿದೆ. ಇಷ್ಟೆ ಅಲ್ಲದೆ ಡ್ಯುಯಲ್ ಚಾನಲ್ ಎಬಿಎಸ್ ಮತ್ತು 18 ಇಂಚಿನ ಅಲ್ಯೂಮಿನಿಯಂ ಸ್ಪೋಕ್ ವೀಲ್‍‍ಗಳನ್ನು ನೀಡಲಾಗುತ್ತಿದೆ.




ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಬಹುನಿರೀಕ್ಷಿತ 650 ಟ್ವಿನ್ ಬೈಕ್‍ಗಳನ್ನು ಪರಿಚಯಿಸಲಿದ್ದು, ಇದೇ ನಂವೆಂಬರ್ ತಿಂಗಳ 14 ರಂದು ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕ್‍ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಿದೆ.

   
 
ಹೆಲ್ತ್