Back
Home » ಇತ್ತೀಚಿನ
ಫ್ಲಿಪ್‌ಕಾರ್ಟ್‌ನಲ್ಲಿ ಏರಿಕೆ ಕಂಡ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆ..!
Gizbot | 8th Nov, 2018 07:01 PM

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಒಪ್ಪೋ ಮಾಲೀಕತ್ವದ ರಿಯಲ್ ಮೀ ಸ್ಮಾರ್ಟ್ ಫೋನ್ ಗಳು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಫೋನ್‍ಗಳು ದೊಡ್ಡ ಮಟ್ಟದಲ್ಲಿ ಬಳಕೆದಾರರಿಗೆ ಮೆಚ್ಚುಗೆಯಾಗಿದೆ. ಈ ಹಿನ್ನಲೆಯಲ್ಲಿ ರಿಯಲ್ ಮೀ ಫೋನ್‍ಗಳು ಸಾಕಷ್ಟು ಬೇಡಿಕೆಯನ್ನು ಗಳಿಸಿಕೊಂಡಿದೆ.

ಮೊದಲಿಗೆ ಬಿಡುಗಡೆಯಾದ ರಿಯಲ್ ಮಿ 1 ಸ್ಮಾರ್ಟ್ ಫೋನ್ ಅತೀ ಕಡಿಮೆ ಬೆಲೆಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಂಡು ಬಳಕೆದಾರರಿಗೆ ಹತ್ತಿರವಾಗಿತ್ತು. ಈ ಹಿನ್ನಲೆಯಲ್ಲಿ ರಿಯಲ್ ಮೀ ಕಂಪನಿಯೂ ಮಾರುಕಟ್ಟೆಗೆ ಮತ್ತೆ ಹೊಸ ಫೋನ್ ಅನ್ನು ಲಂಚ್ ಮಾಡಿತು ರಿಯಲ್ ಮಿ 2 ಎನ್ನುವ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿತ್ತು. ಇದು ಸಹ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇಲ್ ಆಗುತ್ತಿದೆ.

ಇದರೊಂದಿಗೆ ಬಿಡುಗಡೆಯಾದ ರಿಯಲ್ ಮಿ ಸಿ 1 ಸ್ಮಾರ್ಟ್ ಫೋನ್ ಸಹ ಮಾರುಟಕ್ಟೆಯಲ್ಲಿ ಬಹು ಬೇಡಿಕೆಯನ್ನು ಉಳಿಸಿಕೊಂಡಿದೆ. ಕಂಪನಿಯೂ ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯನ್ನು ಹೊಂದಿರುವುದಲ್ಲದೇ, ಖರೀದಿಯೂ ಜೋರಾಗಿದೆ. ಈ ಹಿನ್ನಲೆಯಲ್ಲಿ ಈ ಎರಡು ಸ್ಮಾರ್ಟ್ ಫೋನ್ ಬೆಲೆಯನ್ನು ಏರಿಕೆ ಮಾಡಲು ಕಂಪನಿಯೂ ಮುಂದಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ರಿಯಲ್ ಮಿ 2 ಸ್ಮಾರ್ಟ್ ಫೋನ್ ಮತ್ತು ರಿಯಲ್ ಮಿ ಸಿ 1 ಸ್ಮಾರ್ಟ್ ಫೋನ್ ಬೇಡಿಯಲ್ಲಿ ಇರುವ ಕಾರಣ ಮತ್ತು ಪೂರೈಕೆಯೂ ಕಷ್ಟವಾಗುತ್ತಿರುವ ಹಿನ್ನಲೆಯಲ್ಲಿ ಈ ಎರಡು ಸ್ಮಾರ್ಟ್ ಪೋನ್ ಬೆಲೆಯಲ್ಲಿ ರೂ. 1000 ವನ್ನು ಏರಿಕೆ ಮಾಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವಾಗುವುದು ಕಡಿಮೆಯಾಗಲಿದೆ.

ಈಗಾಗಲೇ ಲಭ್ಯವಿದ್ದ ಈ ಎರಡು ಫೋನ್ ಗಳ ಬೆಲೆ ಫ್ಲೀಪ್‍ ಕಾರ್ಟ್ ನಲ್ಲಿ ಬದಲಾಗಿದೆ. ರಿಯಲ್ ಮಿ ಸಿ 1 ಸ್ಮಾರ್ಟ್ ಫೋನ್ ಬೆಲೆ ರೂ. 7990 ಆಗಿದ್ದು, ರಿಯಲ್ ಮಿ 2 ಸ್ಮಾರ್ಟ ಫೋನ್ ಬೆಲೆ ರೂ.9499 ಆಗಿದೆ. ಆದರೆ ಇಷ್ಟು ಬೆಲೆಯನ್ನು ನೀಡಿದರು ಸಹ ಈ ಫೋನ್ ಖರೀದಿಯ ಮೇಲೆ ಯಾವುದೇ ನಷ್ಟವಾಗುವುದಿಲ್ಲ.

   
 
ಹೆಲ್ತ್