Back
Home » ಇತ್ತೀಚಿನ
ಒಪನ್ ಸೇಲ್‌ನಲ್ಲಿ ರೆಡ್‌ಮಿ 6A ಸ್ಮಾರ್ಟ್‌ಫೋನ್ ಮಾರಾಟ ಶುರು..!
Gizbot | 9th Nov, 2018 07:01 AM

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರೆಡ್ ಮಿ ಫೋನ್ ಗಳು ಬಳಕೆದಾರರಿಗೆ ಹತ್ತಿರವಾಗುತ್ತಿದೆ. ಆನ್ ಲೈನ್ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಬಳಕೆದಾರರನ್ನು ಸೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ಆನ್ ಲೈನ್ ಮತ್ತು ಆಫ್ ಲೈನ್ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಉಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಹೊಂದಿರುವ ರೆಡ್ ಮಿ 6 ಸ್ಮಾರ್ಟ್ ಫೋನ್ ಇನ್ನು ಮುಂದೆ ಆಫ್ ಲೈನ್ ಮಾರುಕಟ್ಟೆಯಲ್ಲಿಯೂ ದೊರೆಯಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಾದರಿಯಲ್ಲಿ ಬೇಡಿಯನ್ನು ಹೊಂದಿರುವ ರೆಡ್ ಮಿ 6 ಸ್ಮಾರ್ಟ್ ಫೋನ್ ಇದುವರೆಗೂ ಆನ್ ಲೈನ್ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಇದರಲ್ಲಿ 32 ಜಿಬಿ ಮತ್ತು 16 ಜಿಬಿ ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟ ಮಾಡುತ್ತಿದೆ. ಈಗಾಗಲೇ ಆನ್‍ ಲೈನ್‍ನಲ್ಲಿ ಸದ್ದು ಮಾಡುತ್ತಿರುವ ಈ ಸ್ಮಾರ್ಟ ಫೋನ್ ಇನ್ನು ಮುಂದೆ ಒಪನ್ ಮಾರುಟಕ್ಟೆಯಲ್ಲಿಯೂ ಲಭ್ಯವಾಗಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಮಾದರಿಯಲ್ಲಿ ಸದ್ದು ಮಾಡಲಿದೆ.

ಸದ್ಯ ಆನ್ ಲೈನ್ ಮಾರುಕಟ್ಟೆಯಲ್ಲಿ 32 ಜಿಬಿ ಆವೃತ್ತಿಯೂ ದೊರೆಯಲಿದೆ. ಇದರಿಂದಾಗಿ ಬಳಕೆದಾರರಿಗೆ ಹೊಸ ಮಾದರಿಯ ಆಯ್ಕೆಯೂ ದೊರೆಯಲಿದೆ. ಆದರೆ ಬೆಸಿಕ್ ಆವೃತ್ತಿಯೂ 16 ಜಿಬಿ ಆವೃತ್ತಿಯೂ ಕೇವಲ ಆನ್ ಲೈನ್ ಮಾರುಕಟ್ಟೆಯಲ್ಲಿ ದೊರೆಯಲಿದೆ. ಅಲ್ಲದೇ 16 ಜಿಬಿ ಆನ್ ಲೈನ್ ಫ್ಲಾಷ್ ಸೇಲ್ ನಲ್ಲಿ ಮಾತ್ರವೇ ಲಭ್ಯವಿರಲಿದೆ.

ಇನ್ನು ಮುಂದೆ ಎಂಐ ಕಾಮ್ ಮತ್ತು ಅಮೆಜಾನ್ ನಲ್ಲಿ 32 ಜಿಬಿ ಆವೃತ್ತಿಯೂ ಬಳಕೆದಾರಿಗೆ ಒಪನ್ ಸೇಲ್ ನಲ್ಲಿ ದೊರೆಯಲಿದೆ. ದೇಶ‍ ಕಾ ನಯಾ ಸ್ಮಾರ್ಟ್ ಫೋನ್ ಎನ್ನುವ ಹೆಸರಿನಿಂದಲೇ ಖ್ಯಾತಿಯನ್ನು ಪಡೆದುಕೊಂಡಿದ್ದ ಈ ಸ್ಮಾರ್ಟ್ ಪೋನ್ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸಹಾಯವನ್ನು ಮಾಡಲಿದೆ. ಮಾರುಕಟ್ಟೆಯಲ್ಲಿ ದೊರೆಯುವ ಬೆಸ್ಟ್ ಬೆಸಿಕ್ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ.

ಬಜೆಟ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಈ ಸ್ಮಾರ್ಟ್ ಫೋನ್ ಬೇರೆ ಎಲ್ಲಾ ವಿಭಾಗದಲ್ಲಿಯೂ ಬೆಸ್ಟ್ ಎನ್ನಿಸಿಕೊಂಡಿದೆ. ಡಿಸ್ ಪ್ಲೇ, ಪ್ರೋಸೆಸರ್ ಸೇರಿದಂತೆ ಎಲ್ಲಾ ಉತ್ತಮವಾಗಿದ್ದು, ಕ್ಯಾಮೆರಾ ಸಹ ಇದರಲ್ಲಿದೆ. ಇದರಿಂದಾಗಿ ಬಳಕೆದಾರರಿಗೆ ಬೆಸ್ಟ್ ಫೋನ್ ದೊರೆಯಲಿದೆ.

   
 
ಹೆಲ್ತ್