Back
Home » ಇತ್ತೀಚಿನ
ಭೂಮಿಗೆ ಇರುವುದು ಒಟ್ಟು ಮೂರು ಚಂದ್ರರು ಎಂದರೆ ನೀವು ನಂಬಲೇಬೇಕು!!
Gizbot | 9th Nov, 2018 11:17 AM
 • ಭೂಮಿಗೆ ಮೂರು ಚಂದ್ರರೆಂದರೆ?

  ನಮಗೆಲ್ಲಾ ಗೊತ್ತಿರುವಂತೆ ಭೂಮಿಯ ಉಪಗ್ರಹ ಚಂದ್ರ ತನ್ನ ಅಕ್ಷದ ಸುತ್ತ ಸುತ್ತಿದ್ದಾನೆ. ಈ ಚಂದ್ರ ನಮ್ಮ ಬರಿಗಣ್ಣಿಗೆ ಗೋಚರಿಸುತ್ತಾನೆ. ಆದರೆ, ಚಂದ್ರನಷ್ಟೇ ದೂರದಲ್ಲಿ ಇನ್ನೂ ಎರಡು ಚಂದ್ರರು ಭೂಮಿಯ ಸುತ್ತ ಸುತ್ತುತ್ತಿದ್ದಾರೆ.! . ಭೂಮಿಯಿಂದ ಈ ಚಂದ್ರಗಳು 400,000 ಕಿ.ಮೀ. ದೂರದಲ್ಲಿ ನೈಸರ್ಗಿಕ ಶರೀರಗಳ ಛಾಯಾಚಿತ್ರಗಳ ಮೂಲಕ ಇವರಿಬ್ಬರ ಉಪಸ್ಥಿತಿಯನ್ನು ಸಂಶೋಧಕರ ತಂಡ ದೃಢಪಡಿಸಿದೆ.


 • ನಮಗೆ ಕಾಣದಂತೆ ಎರಡು ಚಂದ್ರಗಳು?

  ಸುಮಾರು ಒಂದು ಮೈಕ್ರೋಮೀಟರಿನಷ್ಟು ಸಣ್ಣ ಧೂಳಿನ ಕಣಗಳಿಂದ ಭೂಮಿಯ ಮತ್ತೆರಡು ಚಂದ್ರಗಳು ರೂಪಿಸಲ್ಪಟ್ಟಿದೆ. ಸೂರ್ಯನ ಕಿರಣಗಳು ಈ ಧೂಳಿನ ಕಣಗಳ ಮೇಲೆ ಬಿದ್ದಾಗ ಇವು ಪ್ರಕಾಶಮಾನವಾಗಿ ಹೊಳೆಯುತ್ತವೆ. ಈ ಧೂಳಿನ ಕಣಗಳು ಆಗಾಗ್ಗೆ ತನ್ನ ಸ್ಥಾನ ಬದಲಾಯಿಸುತ್ತಿರುತ್ತವೆ. ಕೋಟ್ಯಂತರ ವರ್ಷಗಳಿಂದಲೂ ಇವು ಅಸ್ತಿತ್ವದಲ್ಲಿದ್ದು, ಭೂಮಿಗೆ ಹೋಲಿಸಿದರೆ ಸುಮಾರು 9 ಪಟ್ಟು ಹೆಚ್ಚು ದೊಡ್ಡದಾಗಿದ್ದು, 65 ಸಾವಿರ ಮೈಲು ವ್ಯಾಪ್ತಿಯನ್ನು ಇದು ಹೊಂದಿದೆ ಎನ್ನಲಾಗಿದೆ.


 • ಭೂಮಿಗಿಂತ ದೊಡ್ಡವು!

  ಈಗ ನಡೆದಿರುವ ಹೊಸ ಸಂಶೋಧನೆಯ ಪ್ರಕಾರ, ಈ ಎರಡು ಚಂದ್ರರು ರಾತ್ರಿ ಆಕಾಶದಲ್ಲಿ 15 ರಿಂದ 10 ಡಿಗ್ರಿ ಅಗಲದಲ್ಲಿದ್ದು, 30 ರಿಂದ 20 ಚಂದ್ರರಿಗೆ ಸಮಾನವಾಗಿರುತ್ತದೆ. ವಿಸ್ತೀರ್ಣದಲ್ಲಿ ಭೂಮಿಯ ಒಂಭತ್ತು ಪಟ್ಟು ಜಾಗವನ್ನು ಆಕ್ರಮಿಸಿವೆ. 65,000 ಮೈಲಿಯಿಂದ 45,000 ಮೈಲುಗಳಷ್ಟು ಗಾತ್ರ ಹೊಂದಿವೆ ಎಂದು ಹಂಗೇರಿಯ ಬಾಹ್ಯಾಕಾಶ ತಜ್ಞರು ಹಾಗೂ ಭೌತಶಾಸ್ತ್ರಜ್ಞರು ಈ ಬಗ್ಗೆ ಇನ್ನಷ್ಟು ದತ್ತಾಂಶಗಳನ್ನು ಪೋಣಿಸಿದ್ದಾರೆ. ಎರಡೂ ಚಂದ್ರರು ಧೂಳಿನಿಂದ ತುಂಬಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.


 • ಕಣ್ಣಿಗೇಕೆ ಕಾಣೊಲ್ಲಾ?

  ಈ ಉಪಗ್ರಹಗಳು ಲಕ್ಷಾಂತರ ವರ್ಷಗಳಿಂದಲೂ ತಮ್ಮ ಅಕ್ಷದಲ್ಲಿ ಸ್ಥಿರವಾಗಿವೆ. ಆದರೆ ಇವುಗಳ ಒಳಗಿನ ಧೂಳಿನ ಕಣಗಳು ಕಾಲ ಕಾಲಕ್ಕೆ ಬದಲಾಗುತ್ತಿರುತ್ತವೆ. ಕೆಲವೊಂದು ಭೂಮಿಯ ಅಥವಾ ಚಂದ್ರನ ಗುರುತ್ವಾಕರ್ಷಣಕ್ಕೆ ಸಿಲುಕಿದರೆ ಮತ್ತೆ ಕೆಲವು ಕಣಗಳು ಅಂತರಗ್ರಹ ಅಥವಾ ಉಲ್ಕಾಪಾತಗಳಿಂದ ಗಳಿಸಲ್ಪಡುತ್ತವೆ. ಗಾತ್ರದಲ್ಲಿ ಅತಿ ದೊಡ್ಡದಾಗಿದ್ದರೂ ಇದರ ಧೂಳಿನ ಕಣಗಳು ಒಂದು ಮೈಕ್ರೋ ಮೀಟರ್‌ನಷ್ಟೇ ಚಿಕ್ಕದಿರುವುದರಿಂದ ಇವುಗಳು ಕಣ್ಣಿಗೆ ಕಾಣುವುದಿಲ್ಲ.


 • ದೃಢಪಟ್ಟಿದ್ದು ಹೇಗೆ?

  ಭೂಮಿ-ಚಂದ್ರ ವ್ಯವಸ್ಥೆಯಲ್ಲಿನ ಎರಡು ಅಂಶಗಳ ಕುರಿತು ಸಂಶೋಧನೆ ನಡೆಸುವ ಸಂದರ್ಭದಲ್ಲಿ ಎರಡು ಗುರುತ್ವಾಕರ್ಷಕ ಶಕ್ತಿಗಳು ವಸ್ತುಗಳ ಸ್ಥಾನವನ್ನು ಸ್ಥಿರಗೊಳಿಸುವ ಚಟುವಟಿಕೆ ನಡೆಸುತ್ತಿರುವುದನ್ನು ಕಂಡುಕೊಂಡಿದ್ದರು. ಅದನ್ನು ಲಾಗ್ರೇಂಜ್ ಪಾಯಿಂಟ್ ಎಂದು ಕರೆಯಲಾಗಿತ್ತು. ಮೊದಲ ಅಂತರಿಕ್ಷ ಯಾನದ 19000 ಗಂಟೆಗಳ ಸಂಭಾಷಣೆಯ ಆಡಿಯೋ ಬಿಡುಗಡೆ ಇತ್ತೀಚಿನ ಅಧ್ಯಯನದ ವೇಳೆ ಕ್ಯಾಮೆರಾಗಳು ಮೋಡದೊಳಗಿನ ದೂಳಿನ ಕಣಗಳ ನಡುವೆ ಚೆದುರಿದ ಬೆಳಕಿನ ಪ್ರತಿಫಲನಗಳನ್ನು ಪತ್ತೆಹಚ್ಚಿವೆ. ಹೀಗಾಗಿ ಭೂಮಿಯ ಸುತ್ತಲೂ ಸುತ್ತುವ ಇನ್ನೂ ಎರಡು ಚಂದ್ರಗಳು ಅಸ್ತಿತ್ವದಲ್ಲಿ ಇರುವುದು ದೃಢಪಟ್ಟಿದೆ.


 • ಇನ್ಮುಂದೆ ಚೀನಾದಲ್ಲಿ ಕತ್ತಲೆಯೇ ಆಗಲ್ಲ..! 24 ಗಂಟೆಯೂ ಬೆಳಕೇ ಇರುತ್ತೇ..!

  ಚೀನಾ ಎಂದರೆ ನಿಮಗೆ ನಕಲಿ ಉತ್ಪನ್ನಗಳ ಜನನ ಸ್ಥಳ ಎಂದು ನೆನಪಾಗುವುದು ಖಂಡಿತ. ಇಷ್ಟು ದಿನ ಎಲೆಕ್ಟ್ರಾನಿಕ್‌ ಉತ್ಪನ್ನಗಳು, ಶೂಗಳು ಮತ್ತೀತರ ವಸ್ತುಗಳನ್ನು ಡುಪ್ಲಿಕೇಟ್‌ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವಲ್ಲಿ ಚೀನಾ ಮಂದಿ ಬಹಳಷ್ಟು ಪ್ರವೀಣರು. ಆದರೆ, ಈ ನಕಲಿತನವನ್ನು ಮತ್ತೊಂದು ಹಂತಕ್ಕೆ ವಿಸ್ತರಿಸಿರುವ ಚೀನಾ ಚಂದ್ರನನ್ನೇ ಮರು ಸೃಷ್ಟಿಸಲು ಹೊರಟಿದೆ.

  ಇದನ್ನು ನಾವು ಡುಪ್ಲಿಕೇಟ್‌ ಎನ್ನುವುದಕ್ಕಿಂತ ಮಾನವ ನಿರ್ಮಿತ ಅಥವಾ ಕೃತಕ ಚಂದ್ರನನ್ನು ಚೀನಾ 2022ರಷ್ಟರ ಹೊತ್ತಿಗೆ ಲಾಂಚ್‌ ಮಾಡಲು ನಿರ್ಧರಿಸಿದೆ. ಈ ಮೂಲಕ ಆಕಾಶದಲ್ಲಿ ತನ್ನ ಕಂಪನಿಯನ್ನು ಸ್ಥಾಪಿಸಿದರು ಸ್ಥಾಪಿಸಬಹುದು. ಕೃತಕ ಚಂದ್ರನನ್ನು ಲಾಂಚ್‌ ಮಾಡುತ್ತಿರುವುದು ಚೀನಾದ ಬೀದಿಗಳನ್ನು ಬೆಳಗಿಸಲು ಎಂದು ಹೇಳಲಾಗಿದೆ. ಕೃತಕ ಚಂದ್ರನಿಂದ ವಿದ್ಯುತ್‌ನ್ನು ಕೂಡ ಉಳಿಸಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ. ಆಗಿದ್ದರೆ, ಕೃತಕ ಚಂದ್ರ ಏನೇಲ್ಲಾ ವಿಶೇಷತೆ ಹೊಂದಿದ್ದಾನೆ. ವಿದ್ಯುತ್ ಹೇಗೆ ಉಳಿತಾಯವಾಗುತ್ತದೆ ಮುಂದೆ ನೋಡಿ.


 • ಎಲ್ಲಿ ಕೃತಕ ಚಂದ್ರ..?

  ವಿಜ್ಞಾನಿಗಳು ನೈರುತ್ಯ ಚೀನಾದಲ್ಲಿನ ಸಿಚುವಾನ್‌ ಪ್ರಾಂತ್ಯದ ರಾಜಧಾನಿಯಾಗಿರುವ ಚೆಂಗಡು ನಗರದ ಮೇಲೆ ಮಾನವ ನಿರ್ಮಿತ ಚಂದ್ರನನ್ನು ಪ್ರತಿಷ್ಟಾಪಿಸಲು ಆಶಿಸುತ್ತಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಈ ಉಪಗ್ರಹ ಚಂದ್ರನನ್ನು ಅನುಕರಣೆಯನ್ನು ಮಾಡುತ್ತದೆ. ಹಾಗೂ ಮೂಲಭೂತವಾಗಿ ಪ್ರಕಾಶಿತ ಉಪಗ್ರಹವಾಗಿದ್ದು, ಸೂರ್ಯನ ಬೆಳಕನ್ನು ಭೂಮಿಗೆ ನೀಡಲು ಪ್ರತಿಫಲನಗಳನ್ನು ಹೊಂದಿದ್ದು, ರಾತ್ರಿ ಕೃತಕ ಚಂದ್ರನಿಂದ ರಾತ್ರಿ ಸಮಯದಲ್ಲಿ ಬೀದಿ ದೀಪವನ್ನು ನೀಡುತ್ತದೆ.


 • ಚಂದ್ರನಿಗಿಂತ ಹೆಚ್ಚು ಪ್ರಕಾಶಮಾನ

  ವಿಜ್ಞಾನಿಗಳ ಪ್ರಕಾರ ಮೂಲ ಚಂದ್ರಕ್ಕಿಂತ ಚೀನಾ ಲಾಂಚ್‌ ಮಾಡಲು ಉದ್ದೇಶಿಸಿರುವ ಕೃತಕ ಚಂದ್ರ ಎಂಟು ಪಟ್ಟು ಹೆಚ್ಚಿನ ಪ್ರಕಾಶಮಾನವಾಗಿರುತ್ತೆ ಎಂದು ಅಂದಾಜಿಸಲಾಗಿದೆ. ಅದಲ್ಲದೇ ಚಂದ್ರನಿಗಿಂತ ಬಹು ಹತ್ತಿರದಲ್ಲಿ ಇರುತ್ತದೆ. ಕೃತಕ ಚಂದ್ರ 500 ಕಿ.ಮೀ. (310 ಮೈಲು) ಭೂಮಿಯೊಂದಿಗೆ ಅಂತರ ಹೊಂದಿರುತ್ತೆ. ಆದರೆ, ಚಂದ್ರ ಭೂಮಿಯಿಂದ 3,80,000 ಕಿ.ಮೀ. (236,000 ಮೈಲು)ಅಂತರ ಹೊಂದಿದೆ.


 • ಇಡೀ ಆಕಾಶಕ್ಕೆಲ್ಲಾ ಬೆಳಕು ನೀಡಲ್ಲ

  ಮಾನವ ನಿರ್ಮಿತ ಚಂದ್ರ ಉಪಗ್ರಹವು ಸಂಪೂರ್ಣ ಆಕಾಶವನ್ನು ಬೆಳಗಿಸುವುದಿಲ್ಲ ಎಂದು ಟಿಯಾನ್ ಫು ನ್ಯೂ ಏರಿಯಾ ಸೈನ್ಸ್‌ ಸೊಸೈಟಿಯ ಮುಖ್ಯಸ್ಥ ವೂ ಚುನ್‌ಫೆಂಗ್‌ ಚೀನಾದ ಪತ್ರಿಕೆಯೊಂದಕ್ಕೆ ತಿಳಿಸಿದ್ದು, ಮಾನವರ ದೃಷ್ಟಿಯಲ್ಲಿ ಕೃತಕ ಚಂದ್ರನ ನಿರೀಕ್ಷಿತ ಹೊಳಪು ಸಾಮಾನ್ಯ ರಸ್ತೆ ದೀಪಗಳ ಐದನೇ ಒಂದು ಭಾಗವಾಗಿದೆ ಎಂದು ಆತ ಹೇಳಿದ್ದಾನೆ.


 • ವಿದ್ಯುತ್‌ ವೆಚ್ಚದಲ್ಲಿ ಭಾರೀ ಉಳಿಕೆ

  ಹೊಸ ನಿರೀಕ್ಷಿತ ಕೃತಕ ಚಂದ್ರ ವಿದ್ಯುತ್‌ನ್ನು ಭಾರೀ ಪ್ರಮಾಣದಲ್ಲಿ ಉಳಿಸಲಿದೆ. ಹೌದು, ಚೆಂಗಡು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗುತ್ತಿದ್ದ ವಾರ್ಷಿಕ ವಿದ್ಯುತ್‌ ವೆಚ್ಚ 173 ಡಾಲರ್ ಮಿಲಿಯನ್ ಹಣವನ್ನು ಉಳಿಸಲಿದೆ. ಅದಲ್ಲದೇ ಬ್ಲಾಕ್‌ಔಟ್‌ ಮತ್ತು ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಕಾರ್ಯಕ್ಕೆ ನೆರವಾಗುತ್ತದೆ.


 • ಯೋಜನೆಯಿಂದ ಪರಿಸರಕ್ಕೆ ಹಾನಿವಿಲ್ಲವಂತೆ

  ಯೋಜನೆಯನ್ನು ಯಶಸ್ವಿಯಾಗಿಸಲು ಇನ್ನು ಹೆಚ್ಚಿನ ಪರೀಕ್ಷೆಗಳನ್ನು ಮಾಡಬೇಕಾಗಿದೆ. ಯೋಜನೆ ಯಶಸ್ವಿಯಾಗಿ ಕೃತಕ ಚಂದ್ರ ಪ್ರತಿಷ್ಟಾಪನೆಯಾದರೆ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ ಎಂದಿದ್ದಾರೆ. ಆದರೆ, ಪರಿಸರಕ್ಕೆ ಹಗಲಿನಂತೆ ಕತ್ತಲು ಕೂಡ ಅವಶ್ಯಕವಾಗಿರುವುದರಿಂದ ಏನಾಗುತ್ತೋ ಕಾದು ನೋಡಬೇಕು.


 • ಎಲ್ಲಿ ಪರೀಕ್ಷೆ..?

  ಈ ಯೋಜನೆಯ ಪರೀಕ್ಷೆಯನ್ನು ಜನರಿಲ್ಲದ ಮರಳುಗಾಡಿನಲ್ಲಿ ಮಾಡಲಾಗುತ್ತಿದೆ. ಆದ್ದರಿಂದ ಇಲ್ಲಿನ ಬೆಳಕಿನ ಕಿರಣಗಳು ಯಾವುದೇ ಜನರಿಗೆ ಅಥವಾ ಭೂಮಿಯ ಆಧಾರದ ಬಾಹ್ಯಾಕಾಶ ಪರಿವೀಕ್ಷಣಾ ಸಲಕರಣೆಗಳಿಗೆ ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.


 • ಚೀನಾ ಮೊದಲಲ್ಲ..!

  ಕೃತಕ ಚಂದ್ರನನ್ನು ತರುತ್ತಿರುವ ದೇಶಗಳಲ್ಲಿ ಚೀನಾ ಮೊದಲಲ್ಲ. 90ರ ದಶಕದಲ್ಲಿ ರಷ್ಯಾ ತನ್ನ ಸೂರ್ಯ ವಂಚಿತ ಉತ್ತರ ಭಾಗದ ಕೆಲವು ನಗರಗಳಲ್ಲಿ ಸೂರ್ಯನ ಬೆಳಕನ್ನು ಪ್ರತಿಫಲಿಸಲು ಕಕ್ಷೆಯ ಕನ್ನಡಿಯನ್ನು ಬಳಸಿಕೊಂಡು ಪ್ರಯೋಗ ಮಾಡಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಆದರೆ, ಕನ್ನಡಿ ಅನ್‌ಪೋಲ್ಡ್‌ ಆಗದೆ ಮತ್ತು ವಾತಾವರಣದಲ್ಲಿ ವೈಪರೀತ್ಯ ಪರಿಣಾಮಗಳು ಆಗಿದ್ದರಿಂದ ರಷ್ಯಾ ಈ ಯೋಜನೆಯನ್ನು 1999ರಲ್ಲಿ ಕೈಬಿಟ್ಟಿತು.


 • ಅಮೆರಿಕಾದಿಂದಲೂ ಪ್ರಯತ್ನ

  ಇದೇ ಜನೇವರಿಯಲ್ಲಿ ಅಮೆರಿಕಾದ ರಾಕೆಟ್‌ ಲ್ಯಾಬ್‌ ಸಂಸ್ಥೆ ಕೃತಕ ನಕ್ಷತ್ರವನ್ನು ಬಾಹ್ಯಾಕಾಶಕ್ಕೆ ಲಾಂಚ್‌ ಮಾಡಿತು. ಆದರೆ, ವಿಜ್ಞಾನಿಗಳಿಂದ ಈ ಯೋಜನೆ ತೀವ್ರ ಟೀಕೆಗೆ ಒಳಗಾಯಿತು. ಇಲ್ಲಿ ಪ್ರತಿಫಲಿತ ಮಿನಿ-ಉಪಗ್ರಹವನ್ನು ಡಬ್ ಮಾಡಲಾಗಿತ್ತು, ಅದಲ್ಲದೇ ಕೃತಕ ಬೆಳಕಿನ ಮಾಲಿನ್ಯ ಹಾಗೂ ಭೂಮಿಯ ಕಕ್ಷೆಯಲ್ಲಿ ಗೊಂದಲ ಆಗಿದ್ದರಿಂದ ಟೀಕೆಗೆ ಗುರಿಯಾಗಿತ್ತು.


 • ಹೇಗೆ ಕಾರ್ಯನಿರ್ವಹಿಸುತ್ತದೆ..?

  ಕೃತಕ ಚಂದ್ರನಲ್ಲಿ ಮೂರು ಅತಿ ದೊಡ್ಡ ಕನ್ನಡಿಗಳಿದ್ದು, ಅವು 360 ಡಿಗ್ರಿ ಆರ್ಬಿಟಲ್‌ ಪ್ಲೇನ್‌ನ್ನು ವಿಭಜಿಸುತ್ತವೆ. ಇದರಿಂದ ನಿರಂತರವಾಗಿ 24 ಗಂಟೆಗಳ ಕಾಲ ಪ್ರದೇಶಕ್ಕೆ ಬೆಳಕು ಲಭ್ಯವಾಗುತ್ತದೆ, ಅದಲ್ಲದೆ ಪ್ರತಿಫಲಿತ ಸೂರ್ಯನ ಬೆಳಕು 3,600 ಚ.ಕಿ.ಮೀ ಯಿಂದ 6,400 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಬಹುದು.
ಭೂಮಿಗೆ ಇರುವುದು ಕೇವಲ ಒಂದು ಚಂದ್ರನಲ್ಲ. ಇನ್ನೂ ಎರಡು ಚಂದ್ರರಿದ್ದಾರೆ ಎಂಬ ಸುದ್ದಿ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಚಂದ್ರ ಒಬ್ಬನೇ ಅಲ್ಲ, ಭೂಮಿಗೆ ಇನ್ನೂ ಎರಡು ಚಂದ್ರಗಳಿದ್ದಾರೆ ಎಂಬ ಅನುಮಾನಕ್ಕೆ ಈಗ ಸ್ಪಷ್ದ ಉತ್ತರ ಸಿಕ್ಕಿದೆ. ಕತ್ತಲಲ್ಲಿ ಬೆಳಗುವ ಚಂದ್ರನಿಗೆ ಇನ್ನೂ ಕನಿಷ್ಠ ಇಬ್ಬರು ಸಂಗಾತಿಗಳಿದ್ದಾರೆ. ಅವರನ್ನು ಧೂಳಿನ ಕಣಗಳು ಸಂಪೂರ್ಣವಾಗಿ ಆವರಿಸಿವೆ ಎಂಬುದನ್ನು ಹಂಗೇರಿಯಾದ ಖಗೋಳ ವಿಜ್ಞಾನಿಗಳು ಮತ್ತು ಭೌತಶಾಸ್ತ್ರಜ್ಞರು ದೃಢಪಡಿಸಿದ್ದಾರೆ.

ಹೌದು, ಇತ್ತೀಚೆಗೆ ನ್ಯಾಷನಲ್‌ ಜಿಯೋಗ್ರಫಿಕ್‌ ವರದಿ ಪ್ರಕಾರ ಹಂಗೇರಿಯ ಬಾಹ್ಯಾಕಾಶ ತಜ್ಞರು ಹಾಗೂ ಭೌತಶಾಸ್ತ್ರಜ್ಞರು ಈ ಬಗ್ಗೆ ಇನ್ನಷ್ಟು ದತ್ತಾಂಶಗಳನ್ನು ಪೋಣಿಸಿದ್ದಾರೆ. ಸುಮಾರು 50 ವರ್ಷಗಳಿಂದಲೂ ಈ ಬಗ್ಗೆ ವಿಜ್ಞಾನಿಗಳ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಎರಡೂ ಚಂದ್ರರು ಧೂಳಿನಿಂದ ತುಂಬಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ನಮ್ಮ ಗ್ರಹದ ಸುತ್ತ ಖಗೋಳ ಮೋಡಗಳು ಸುತ್ತುತ್ತಿರುವುದನ್ನು ಈ ಸಂಶೋಧನೆ ಖಚಿತಪಡಿಸಿದೆ. ಭೂಮಿಯಿಂದ ಈ ಚಂದ್ರಗಳು 400,000 ಕಿ.ಮೀ. ದೂರದಲ್ಲಿವೆ ಎಂದು ಹಂಗೇರಿಯಾದ ವಿಜ್ಞಾನಿಗಳು ಹೇಳಿದ್ದಾರೆ.

ಇವಕ್ಕೆ ಕೊರ್ಡಿಲೆವ್‌ಸ್ಕಿ ಎಂದು ಹೆಸರಿಡ ಲಾಗಿದ್ದು, ಪೋಲೆಂಡ್‌ ಬಾಹ್ಯಾಕಾಶ ತಜ್ಞ ಕಜಿಮೀರ್ಸ್‌ ಕೊರ್ಡಿಲೆವ್‌ಸ್ಕಿ 1961ರಲ್ಲಿ ಈ ಬಗ್ಗೆ ಮೊದಲು ಪ್ರಸ್ತಾಪಿಸಿದ್ದರು. ಇವರ ನೆನಪಿಗಾಗಿ ಇದಕ್ಕೆ ಕೊರ್ಡಿಲೆವ್‌ಸ್ಕಿ ಎಂದು ಹೆಸರಿಸಲಾಗಿದೆ. ಸುಮಾರು ಒಂದು ಮೈಕ್ರೋಮೀಟರಿನಷ್ಟು ಸಣ್ಣ ಧೂಳಿನ ಕಣಗಳಿಂದ ಇದು ರೂಪಿಸ ಲ್ಪಟ್ಟಿದೆ. ಸೂರ್ಯನ ಕಿರಣಗಳು ಈ ಧೂಳಿನ ಕಣಗಳ ಮೇಲೆ ಬಿದ್ದಾಗ ಇವು ಪ್ರಕಾಶಮಾನ ವಾಗಿ ಹೊಳೆಯುತ್ತವೆ. ಹಾಗಾದರೆ, ಭೂಮಿಗಿರುವ ಇನ್ನೂ ಎರಡು ಚಂದ್ರರ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್