Back
Home » ಸಿನಿ ಸಮಾಚಾರ
ಹಿಸ್ಟರಿ ರಿಪೀಟ್ಸ್: ಅಂದು ರವಿಚಂದ್ರನ್, ಇಂದು ಯಶ್ 'ಕೆಜಿಎಫ್'
Oneindia | 9th Nov, 2018 07:26 PM
 • 'ಶಾಂತಿಕ್ರಾಂತಿ' ಮಾಡಿತ್ತು ಕ್ರಾಂತಿ

  1991ರಲ್ಲಿ ಬಿಡುಗಡೆಯಾಗಿದ್ದ 'ಶಾಂತಿ ಕ್ರಾಂತಿ' ಸಿನಿಮಾ ವೇಳೆ ಇಂತಹ ಸಾಹಸವನ್ನ ಕ್ರೇಜಿಸ್ಟಾರ್ ರವಿಚಂದ್ರನ್ ಮಾಡಿದ್ದರು. ಕನ್ನಡ ಮಾಧ್ಯಮಗಳ ಜೊತೆ ಬೇರೆ ಭಾಷೆಯ ಮಾಧ್ಯಮದವರನ್ನ ಆಹ್ವಾನಿಸಿ ಸುದ್ದಿಗೋಷ್ಠಿ ಮಾಡಿದ್ದರು. ಅದಾದ ಬಳಿಕ ಈಗ ಯಶ್ ಕೆಜಿಎಫ್ ಸಿನಿಮಾ ಅಂತಹ ಪ್ರಯತ್ನ ಮಾಡಿದೆಯಂತೆ.


 • ನಾಲ್ಕು ಭಾಷೆಯಲ್ಲಿ ಬಂದಿದ್ದ ಸಿನಿಮಾ

  ಅಂದ್ಹಾಗೆ, ಶಾಂತಿ ಕ್ರಾಂತಿ ರವಿಚಂದ್ರನ್ ನಿರ್ದೇಶನ ಮಾಡಿ ನಟಿಸಿದ್ದ ಸಿನಿಮಾ. ಈ ಚಿತ್ರ ಕನ್ನಡದ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಿತ್ತು. ಕನ್ನಡದಲ್ಲಿ ರವಿಚಂದ್ರನ್ ಮಾಡಿದ್ದ ಪಾತ್ರವನ್ನ ತೆಲುಗಿನಲ್ಲಿ ನಾಗಾರ್ಜುನ, ತಮಿಳು ಹಾಗೂ ಹಿಂದಿಯಲ್ಲಿ ರಜನಿಕಾಂತ್ ಅಭಿನಯಿಸಿದ್ದರು. ಆಗಲೇ ಬಹುಭಾಷಾ ಮಾಧ್ಯಮದವರು ಸುದ್ದಿಗೋಷ್ಠಿ ಮಾಡಿದ್ದರು ಎಂದು ಹೇಳಲಾಗಿದೆ.


 • 2.0 ಮಾಡಿದ್ದು ಇದೇ ತಂತ್ರ

  ಇನ್ನು ಇತ್ತೀಚಿಗಷ್ಟೆ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯಿಸಿದ್ದ '2.0' ಚಿತ್ರದ ಟ್ರೈಲರ್ ಲಾಂಚ್ ಕೂಡ ಹೀಗೆ ಮಾಡಲಾಗಿತ್ತು. ಚೆನ್ನೈನಲ್ಲಿ ಆಲ್ ಇಂಡಿಯಾ ಪ್ರೆಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ಮೀಡಿಯಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


 • ಬೆಂಕಿಯಂತಿದೆ ಕೆಜಿಎಫ್

  ಇದೇ ಮೊದಲ ಭಾರಿಗೆ ಯಶ್ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಟ್ರೈಲರ್ ಗೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದ್ದು, ಇಡೀ ಭಾರತವೇ ಸ್ಯಾಂಡಲ್ ವುಡ್ ನತ್ತ ನೋಡುವಂತಾಗಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಡಿಸೆಂಬರ್ 21 ರಂದು ಕೆಜಿಎಫ್ ಮೊದಲ ಭಾಗ ರಿಲೀಸ್ ಆಗಲಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಟ್ರೈಲರ್ ಬಿಡುಗಡೆಯಾಗಿದೆ. ಮಧ್ಯಾಹ್ನ ಸರಿ ಸುಮಾರು 2.34ಕ್ಕೆ ಕೆಜಿಎಫ್ ಟ್ರೈಲರ್ ರಿಲೀಸ್ ಆಗಿದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರು ಈ ಟ್ರೈಲರ್ ಲೋಕಾರ್ಪಣೆ ಮಾಡಿದರು.

ಕೆಜಿಎಫ್ ಟ್ರೈಲರ್ ಕಾರ್ಯಕ್ರಮಕ್ಕೆ ಭಾರತದ ಐದು ಭಾಷೆಯ ಮಾಧ್ಯಮದವರು ಬೆಂಗಳೂರಿಗೆ ಆಗಮಿಸಿದ್ದರು. ಇದು ಕನ್ನಡದ ಮಟ್ಟಿಗೆ ಹೊಸ ಇತಿಹಾಸ ಮತ್ತು ದಾಖಲೆಯೇ ಸರಿ.

ಟ್ರೈಲರ್: 'ಕೆಜಿಎಫ್' ಚಿನ್ನದ ಗಣಿಯಲ್ಲಿ ಎದ್ದು ನಿಂತ ಬೆಂಕಿಯ ಚೆಂಡು

ಕೆಜಿಎಫ್ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣುತ್ತಿರುವುದರಿಂದ ಈ ರೀತಿಯ ಸಾಹಸಕ್ಕೆ ಕೈಹಾಕಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯಾದ ಪ್ರಯತ್ನ ಯಾರೂ ಮಾಡಿರಲಿಲ್ಲ. ಆದ್ರೆ, ಕ್ರೇಜಿಸ್ಟಾರ್ ರವಿಚಂದ್ರನ್ ಆಗಲೇ ಇದನ್ನ ಮಾಡಿದ್ದರು ಎನ್ನುವುದು ಗಮನಿಸಬೇಕಿದೆ. ಅಷ್ಟಕ್ಕೂ, ರವಿಚಂದ್ರನ್ ಮಾಡಿಕದ್ದು ಯಾವಾಗ.? ಯಾವ ಚಿತ್ರಕ್ಕೆ .? ಮುಂದೆ ಓದಿ....

   
 
ಹೆಲ್ತ್