Back
Home » ಇತ್ತೀಚಿನ
ಟಾಪ್‌ 5 ಸ್ಮಾರ್ಟ್‌ಫೋನ್‌ ಕಂಪನಿಗಳು: ಸ್ಯಾಮ್‌ಸಂಗ್‌ ಫಸ್ಟ್‌, ಮೂರನೇ ಸ್ಥಾನದಲ್ಲಿ ಆಪಲ್‌..!
Gizbot | 9th Nov, 2018 03:01 PM
 • ಸ್ಯಾಮ್‌ಸಂಗ್‌ ಫಸ್ಟ್‌

  ಸ್ಯಾಮ್‌ಸಂಗ್‌ 2018ರ ತೃತೀಯ ತ್ರೈಮಾಸಿಕದಲ್ಲಿ ಟಾಪ್‌ ಕಂಪನಿಯಾಗಿದೆ. ಆದರೆ, 2017ರ ತೃತೀಯ ತ್ರೈಮಾಸಿಕಕ್ಕೆ ಹೋಲಿಸಿದರೆ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಶೇ.13.4ರಷ್ಟು ಇಳಿಕೆ ಕಂಡಿದ್ದು, 72.2 ಮಿಲಿಯನ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಗ್ಯಾಲೆಕ್ಸಿ ನೋಟ್‌ 9 ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ನ ಟಾಪ್‌ ಸ್ಮಾರ್ಟ್‌ಫೋನ್‌ ಆಗಿ ಮಾರಾಟವಾಗುತ್ತಿದ್ದು, ಗ್ಯಾಲೆಕ್ಸಿ A ಸರಣಿ ಸ್ಮಾರ್ಟ್‌ಫೋನ್‌ಗಳು ಬಿಟ್ಟ ಸ್ಥಳವನ್ನು ಭರ್ತಿ ಮಾಡಿ ಸ್ಯಾಮ್‌ಸಂಗ್‌ ಕಂಪನಿಯನ್ನು ಟಾಪ್‌ ಸ್ಲಾಟ್‌ನಲ್ಲಿ ತಂದು ನಿಲ್ಲಿಸಿವೆ.


 • ಆಪಲ್‌ ಹಿಂದಿಕ್ಕಿದ ಹುವಾವೆ

  ತೃತೀಯ ತ್ರೈಮಾಸಿಕದಲ್ಲಿ ಆಪಲ್‌ನ್ನು ಹುವಾವೆ ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.15.9ರಷ್ಟು ಕಡಿಮೆ ಸ್ಮಾರ್ಟ್‌ಫೋನ್‌ಗಳನ್ನು ಮೂರನೇ ತ್ರೈಮಾಸಿಕದಲ್ಲಿ ಹುವಾವೆ ಮಾರಾಟ ಮಾಡಿದ್ದು, 52 ಮಿಲಿಯನ್‌ ಡಿವೈಸ್‌ಗಳನ್ನು ಮಾರಾಟ ಮಾಡಿದೆ. ಹುವಾವೆ ಯಶಸ್ಸಿಗೆ P ಸರಣಿಯ ಹಾಗೂ Mate ಸರಣಿಯ ಸ್ಮಾರ್ಟ್‌ಫೋನ್‌ಗಳು ಬಹುದೊಡ್ಡ ಕೊಡುಗೆಯನ್ನು ನೀಡಿವೆ.


 • ಮೂರನೇ ಸ್ಥಾನದಲ್ಲಿ ಆಪಲ್‌

  ಆಪಲ್‌ ಕಂಪನಿ ತೃತೀಯ ತ್ರೈಮಾಸಿಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಮೂರು ಹೊಸ ಐಫೋನ್‌ ಸ್ಮಾರ್ಟ್‌ಫೋನ್‌ಗಳಾದ iPhone XS, iPhone XS Max ಮತ್ತು iPhone XR ಬಿಡುಗಡೆಗೊಳಿಸಿದ್ದ ಆಪಲ್‌ ಮೂರನೇ ಸ್ಥಾನ ಪಡೆದಿದೆ. ಒಟ್ಟು 46.9 ಮಿಲಿಯನ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದ್ದು, ಕಳೆದ ಬಾರಿಗಿಂತ ಶೇ.0.5ರಷ್ಟು (46.7 ಮಿಲಿಯನ್) ಹೆಚ್ಚಾಗಿದೆ.


 • ನಾಲ್ಕರಲ್ಲಿ ಶಿಯೋಮಿ

  ಶಿಯೋಮಿಯ ರೆಡ್‌ಮಿ ಸರಣಿಯ ಸ್ಮಾರ್ಟ್‌ಫೋನ್‌ಗಳು ಕಂಪನಿಯನ್ನು ತೃತೀಯ ತ್ರೈಮಾಸಿಕದಲ್ಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲಿಸಿವೆ. ಒಟ್ಟು ಶೇ.9.7ರಷ್ಟು ಮಾರುಕಟ್ಟೆಯ ಪಾಲನ್ನು ಶಿಯೋಮಿ ಹೊಂದಿದೆ. ಚೀನಾ ಕಂಪನಿಯಾದ ಶಿಯೋಮಿಗೆ ಭಾರತ, ಇಂಡೋನೇಷ್ಯಾ ಮತ್ತು ಸ್ಪೇನ್‌ ಭಾರೀ ಮಾರುಕಟ್ಟೆಗಳಾಗಿವೆ. ರೆಡ್‌ಮಿ ಸರಣಿಯ ರೆಡ್‌ಮಿ 5A, ರೆಡ್‌ಮಿ 5 ಪ್ಲಸ್‌, ರೆಡ್‌ಮಿ ನೋಟ್ 5, ರೆಡ್‌ಮಿ 6, ರೆಡ್‌ಮಿ 6A ಮತ್ತು ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್‌ಗಳು ಶಿಯೋಮಿಗೆ ಮಾರುಕಟ್ಟೆಯಲ್ಲಿ ಹಿಡಿತವಿಟ್ಟುಕೊಳ್ಳಲು ಸಹಾಯ ಮಾಡಿವೆ.


 • 5ನೇ ಸ್ಥಾನಕ್ಕೆ ತೃಪ್ತಿಪಟ್ಟ ಒಪ್ಪೋ

  ಒಪ್ಪೋ ಸ್ಮಾರ್ಟ್‌ಫೋನ್‌ ಕಂಪನಿ 29.9 ಮಿಲಿಯನ್‌ ಡಿವೈಸ್‌ಗಳನ್ನು 2018ರ ತೃತೀಯ ತ್ರೈಮಾಸಿಕದಲ್ಲಿ ಮಾರಾಟ ಮಾಡುವ ಮೂಲಕ 5ನೇ ದೊಡ್ಡ ಸ್ಮಾರ್ಟ್‌ಫೋನ್‌ ಕಂಪನಿಯಾಗಿ ಹೊರಹೊಮ್ಮಿದೆ. ಈ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಿದ್ದು, ಕಳೆದ ವರ್ಷ ಶೇ.2.1ರಷ್ಟು ಇಳಿಕೆಯನ್ನು ಕಂಡಿತ್ತು. ಒಪ್ಪೋದ ಬೆಳವಣಿಗೆಗೆ ಫೈಂಡ್‌ X ಮತ್ತು R17 ಸ್ಮಾರ್ಟ್‌ಫೋನ್‌ಗಳು ಮಹತ್ತರ ಕಾರಣವಾಗಿವೆ.


 • ಇತರೆ ಸ್ಮಾರ್ಟ್‌ಫೋನ್‌ ಕಂಪನಿಗಳು

  IDC ಪ್ರಕಾರ ಇತರೆ ಸ್ಮಾರ್ಟ್‌ಫೋನ್‌ ಕಂಪನಿಗಳಾದ ನೋಕಿಯಾ, ಎಲ್‌ಜಿ ಮತ್ತಿತರ ಕಂಪನಿಗಳು ತೃತೀಯ ತ್ರೈಮಾಸಿಕದಲ್ಲಿ 119.9 ಮಿಲಿಯನ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿವೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ.33.8ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. ಈ ಪ್ರಮಾಣವನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಇಳಿಕೆ ಕಂಡಿದೆ. ಕಳೆದ ವರ್ಷದ ಮೂರನೇ ತ್ರೈಮಾಸಿಕದಲ್ಲಿ 149.8 ಮಿಲಿಯನ್‌ ಸ್ಮಾರ್ಟ್‌ಫೋನ್‌ಗಳನ್ನು ಇತರೆ ಸ್ಮಾರ್ಟ್‌ಫೋನ್‌ ಕಂಪನಿಗಳು ಮಾರಾಟ ಮಾಡಿದ್ದವು.
ಸ್ಮಾರ್ಟ್‌ಫೋನ್‌ ಜಗತ್ತು ದಿನದಿಂದ ದಿನಕ್ಕೆ ವ್ಯಾಪಕವಾಗಿ ವಿಸ್ತಾರವಾಗುತ್ತಿದೆ. ಎಲ್ಲಾ ಸ್ಮಾರ್ಟ್‌ಫೋನ್‌ ಕಂಪನಿಗಳು ಭಾರೀ ಸ್ಪರ್ಧೆಯೊಂದಿಗೆ ಹೊಸ ಹೊಸ ಐಡಿಯಾಗಳ ಮೂಲಕ ಜನರನ್ನು ತಲುಪುತ್ತಿವೆ. ಅದರಂತೆ, ಈಗ ವಿಶ್ವದ ಟಾಪ್‌ 5 ದೊಡ್ಡ ಸ್ಮಾರ್ಟ್‌ಫೋನ್‌ ಕಂಪನಿಗಳ ಪಟ್ಟಿ ಬಿಡುಗಡೆಯಾಗಿದ್ದು, ಸ್ಯಾಮ್‌ಸಂಗ್‌ ಮೊದಲ ಸ್ಥಾನವನ್ನು ಪಡೆದಿದೆ.

ಸಂಶೋಧನಾ ಸಂಸ್ಥೆಯಾಗಿರುವ IDC 2018ರ ತೃತೀಯ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ತೃತೀಯ ತ್ರೈಮಾಸಿಕದಲ್ಲಿ ಬರೋಬ್ಬರಿ 355.2 ಮಿಲಿಯನ್‌ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿಯಂತೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ.6ರಷ್ಟು ಇಳಿಕೆ ಕಾಣುತ್ತಿದೆ. ಈ ಸಲ IDC ಸ್ಮಾರ್ಟ್‌ಫೋನ್‌ ಕಂಪನಿಗಳ ಜತೆ ಆ ಕಂಪನಿಯ ಯಾವ ಸ್ಮಾರ್ಟ್‌ಫೋನ್‌ ಹೆಚ್ಚು ಮಾರಾಟ ಕಂಡಿದೆಯೆಂದು ಸಹ ಹೇಳಿದ್ದು, ಸ್ಯಾಮ್‌ಸಂಗ್‌ನ ಗ್ಯಾಲೆಕ್ಸಿ ನೋಟ್‌ 9 ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಆಗಿದೆ.

   
 
ಹೆಲ್ತ್