Back
Home » ಸಿನಿ ಸಮಾಚಾರ
ಯಶ್ ಗೆ ಮಾತು ಕೊಟ್ಟ ತಮಿಳು ನಟ ವಿಶಾಲ್
Oneindia | 9th Nov, 2018 05:21 PM
 • ಕೆಜಿಎಫ್ ಬಗ್ಗೆ ಖುಷಿ ಇದೆ

  'ಕನ್ನಡ ಸಿನಿಮಾ ಭಾರತದ್ಯಾಂತ ಬಿಡುಗಡೆಯಾಗುತ್ತಿರುವುದು ಖುಷಿ ನೀಡಿದೆ. ಯಶ್ ನನ್ನ ಸಹೋದರ. ಸಹೋದರನ ಚಿತ್ರದ ಟ್ರೈಲರ್ ಬಿಡುಗಡೆಗೆ ನಾನು ಬಂದಿರುವುದು ಸಂತಸ ನೀಡಿದೆ. ಕೆಜಿಎಫ್ ಚಿತ್ರಕ್ಕೆ ಭಾಷೆಯ ಗಡಿಯಿಲ್ಲ. ತಮಿಳು, ತೆಲುಗು, ಮಲಯಾಳಂ, ಹಿಂದಿ ಯಾವುದೇ ಭಾಷೆಯಲ್ಲೂ ಬಂದರೂ ಸಿನಿಮಾವನ್ನ ಸ್ವಾಗತ ಮಾಡ್ತಾರೆ. ಯಾಕಂದ್ರೆ, ಅದರಲ್ಲಿ ಕಂಟೆಂಟ್ ಅಷ್ಟು ಮುಖ್ಯವಾಗಿದೆ' ಎಂದು ವಿಶ್ವಾಸ ವ್ಯಲ್ತಪಡಿಸಿದರು.

  ಟ್ರೈಲರ್: 'ಕೆಜಿಎಫ್' ಚಿನ್ನದ ಗಣಿಯಲ್ಲಿ ಎದ್ದು ನಿಂತ ಬೆಂಕಿಯ ಚೆಂಡು


 • ಕನ್ನಡ ಸಿನಿಮಾಗಳು ಹೆಚ್ಚು ಬರಲಿದೆ

  'ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚು ಸ್ಕ್ರೀನ್ ಸಿಗಲ್ಲ ಎಂಬ ಆರೋಪ ಇದೆ. ಅದಕ್ಕೆ ಕೆಲವು ಕಾರಣಗಳು, ನಿಯಮಗಳು ಇದೆ. ಬಹುಶಃ ಕೆಜಿಎಫ್ ಸಿನಿಮಾ ಈ ಕಟ್ಟುಪಾಡು, ನಿಯಮಗಳನ್ನ ಬ್ರೇಕ್ ಮಾಡಲಿದೆ ಎಂಬ ವಿಶ್ವಾಸ ಇದೆ. ಇಲ್ಲಿಂದ ಕನ್ನಡ ಸಿನಿಮಾಗಳ ಹೆಚ್ಚು ಬಿಡುಗಡೆಯಾಗಲಿದೆ ಎಂಬ ನಂಬಿಕೆ ಇದೆ' ಎಂದು ವಿಶಾಲ್ ಹೇಳಿದರು.

  ಹಿಸ್ಟರಿ ರಿಪೀಟ್ಸ್: ಅಂದು ರವಿಚಂದ್ರನ್, ಇಂದು ಯಶ್ 'ಕೆಜಿಎಫ್'


 • ತಮಿಳುನಾಡಲ್ಲಿ ದೊಡ್ಡ ರಿಲೀಸ್

  ಇನ್ನು ತಮಿಳುನಾಡಿನಲ್ಲಿ ರಿಲೀಸ್ ಮಾಡುವುದರ ಬಗ್ಗೆ ಮಾತನಾಡಿದ ವಿಶಾಲ್ 'ಯಶ್ ಅವರ ವೃತ್ತಿ ಜೀವನದಲ್ಲಿ ಇದೊಂದು ಅತ್ಯುತ್ತಮ ಸಿನಿಮಾವಾಗಲಿದೆ. ಮತ್ತು ತಮಿಳುನಾಡಿನಲ್ಲೂ ದೊಡ್ಡ ರಿಲೀಸ್ ಆಗಲಿದೆ ಎಂದು ನಾನು ಮಾತು ನೀಡುತ್ತೀದ್ದೇನೆ' ಎಂದು ವಿಶಾಲ್ ತಿಳಿಸಿದರು.

  ದಾಖಲೆ ಬೆಲೆಗೆ 'ಕೆ.ಜಿ.ಎಫ್' ತೆಲುಗು, ತಮಿಳು ರೈಟ್ಸ್ ಮಾರಾಟ


 • ವಿಶಾಲ್ ಹಂಚಿಕೆಯಲ್ಲಿ ರಿಲೀಸ್

  ಕೆಜಿಎಫ್ ಸಿನಿಮಾವನ್ನ ತಮಿಳುನಾಡಿನಲ್ಲಿ ವಿಶಾಲ್ ಫ್ಯಾಕ್ಟರಿ ಅಡಿ ಸ್ವತಃ ವಿಶಾಲ್ ರಿಲೀಸ್ ಮಾಡುತ್ತಿದ್ದಾರೆ. ಡಿಸೆಂಬರ್ 21 ರಂದು ವರ್ಲ್ಡ್ ವೈಡ್ ಯಶ್ ಮೇನಿಯಾ ಆರಂಭವಾಗಲಿದೆ. ಇನ್ನುಳಿದಂತೆ ಯಶ್, ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಬಿ ಸುರೇಶ್, ಅಯ್ಯಪ್ಪ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಭುವನ್ ಗೌಡ ಕ್ಯಾಮೆರಾ ವರ್ಕ್, ರವಿಬಸ್ರೂರು ಮ್ಯೂಸಿಕ್ ಚಿತ್ರಕ್ಕೆ ಸಾಥ್ ನೀಡಿದೆ.

  ವಿದೇಶದಲ್ಲಿ ಒಂದು ದಿನ ಮುಂಚೆಯೇ 'ಕೆಜಿಎಫ್' ಎಂಟ್ರಿ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಟ್ರೈಲರ್ ಲಾಂಚ್ ಆಗಿದೆ. ತಮಿಳು ಕಲಾವಿದರ ಸಂಘದ ಅಧ್ಯಕ್ಷ ವಿಶಾಲ್ ತಮಿಳು ವರ್ಷನ್ ಟ್ರೈಲರ್ ಬಿಡುಗಡೆ ಮಾಡಿದ್ರು.

ಮೊದಲಿನಿಂದಲೂ ಕೆಜಿಎಫ್ ಚಿತ್ರಕ್ಕೆ ಸಹಕಾರ ನೀಡುತ್ತಿರುವ ವಿಶಾಲ್, ರಾಕಿಂಗ್ ಸ್ಟಾರ್ ಗೆ ತುಂಬಾ ಆತ್ಮೀಯ ವ್ಯಕ್ತಿ. ಇನ್ನೂ ಹೇಳಬೇಕು ಅಂದ್ರೆ, ಕೆಜಿಎಫ್ ಸಿನಿಮಾದ ಮೇಲೆ ವಿಶಾಲ್ ಗೆ ಅತಿಯಾದ ಪ್ರೀತಿ, ಯಾಕಂದ್ರೆ, ತಮಿಳುನಾಡಿನಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಮಾಡಲಿರುವುದು ಇದೇ ವಿಶಾಲ್.

ಶಂಕ್ರಣ್ಣನ ಕನಸು ನನಸು ಮಾಡುತ್ತಂತೆ ಯಶ್ 'ಕೆಜಿಎಫ್'.!

ಟ್ರೈಲರ್ ರಿಲೀಸ್ ಬಳಿಕ ಮಾತನಾಡಿದ ವಿಶಾಲ್, ಯಶ್ ಕೆಜಿಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಷ್ಟು ದಿನ ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳು ಹೆಚ್ಚು ಬಿಡುಗಡೆ ಆಗುತ್ತಿರಲಿಲ್ಲ. ಬಹುಶಃ ಇಲ್ಲಿಂದ ಆ ಆಪಾದನೆ ಬ್ರೇಕ್ ಆಗಲಿದೆ ಎಂದು ಹೇಳುವ ಮೂಲಕ ಕೆಜಿಎಫ್ ಚಿತ್ರಕ್ಕೆ ಜೋಶ್ ತುಂಬಿದರು. ಮುಂದೆ ಓದಿ....

   
 
ಹೆಲ್ತ್