Back
Home » ಸಿನಿ ಸಮಾಚಾರ
'ಕೆಜಿಎಫ್' ಟ್ರೈಲರ್ ನಲ್ಲಿ ಸದ್ದು ಮಾಡಿದ್ದು ಈ ಎರಡೇ ಡೈಲಾಗ್.!
Oneindia | 9th Nov, 2018 06:43 PM

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಮೊದಲ ಭಾಗದ ಟ್ರೈಲರ್ ಇಂದು ಅದ್ಧೂರಿಯಾಗಿ ತೆರೆಕಂಡಿದೆ. ಚಿತ್ರದ ಟ್ರೈಲರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದೇ ರೀತಿ ಕನ್ನಡ ಇಂಡಸ್ಟ್ರಿ ಸೇರಿದಂತೆ ಪರಭಾಷೆಯ ತಾರೆಯರು ಕೂಡ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಸಹಜವಾಗಿ ಯಶ್ ಸಿನಿಮಾಗಳು ಅಂದ್ಮೇಲೆ ಅಲ್ಲಿ ಡೈಲಾಗ್ ಗಳು ಸದ್ದು ಮಾಡುತ್ತೆ. ಹಾಗಾಗಿ, ಕೆಜಿಎಫ್ ಸಿನಿಮಾದಲ್ಲಿ ಯಾವ ಡೈಲಾಗ್ ಇರಲಿದೆ ಎಂಬ ಕುತೂಹಲ ಕಾಡುತ್ತಿತ್ತು.

ಶಂಕ್ರಣ್ಣನ ಕನಸು ನನಸು ಮಾಡುತ್ತಂತೆ ಯಶ್ 'ಕೆಜಿಎಫ್'.!

ಟ್ರೈಲರ್ ರಿಲೀಸ್ ಗೂ ಮೊದಲೇ ಕೆಲವು ಕೆಜಿಎಫ್ ಚಿತ್ರದ ಕೆಲವು ಡೈಲಾಗ್ ಗಳನ್ನ ಯಶ್ ಹೇಳಿದ್ದರು. ಅದರಲ್ಲಿ ಯಾವುದಾದರೂ ಡೈಲಾಗ್ ಇರಬಹುದು ಎಂಬ ಊಹಿಸಲಾಗಿತ್ತು. ಬಟ್, ಅದ್ಯಾವ ಡೈಲಾಗ್ ಗಳು ಟ್ರೈಲರ್ ನಲ್ಲಿ ಇರಲಿಲ್ಲ.

ಟ್ರೈಲರ್: 'ಕೆಜಿಎಫ್' ಚಿನ್ನದ ಗಣಿಯಲ್ಲಿ ಎದ್ದು ನಿಂತ ಬೆಂಕಿಯ ಚೆಂಡು

ಅನಂತ್ ನಾಗ್ ಅವರ ವಾಯ್ಸ್ ಇಡೀ ಟ್ರೈಲರ್ ಗೆ ಶಕ್ತಿ ತುಂಬಿದೆ. ಅದರ ಜೊತೆ ಕೆಲವು ಒನ್ ಲೈನ್ ಡೈಲಾಗ್ ಗಮನ ಸೆಳೆದರೂ, ಪೂರ್ತಿ ಡೈಲಾಗ್ ಅಂತ ಇರೋದು ಎರಡೇ. ಈ ಎರಡು ಡೈಲಾಗ್ ಗಳು ಚಿತ್ರದ ಕಥೆಯನ್ನ ಹೇಳುತ್ತೆ.

ಯಶ್ ಗೆ ಮಾತು ಕೊಟ್ಟ ತಮಿಳು ನಟ ವಿಶಾಲ್

ಡೈಲಾಗ್ 1

(ಈ ಡೈಲಾಗ್ ಹಿಂದಿಯಲ್ಲಿ ಇದೆ: ಕನ್ನಡಕ್ಕೆ ಅನುವಾದ ಮಾಡಲಾಗಿದೆ)

ಅನಾಮಿಕ: ಬಾಂಬೆ ಏನು ನಿಮ್ಮಪ್ಪಂದಾ.?

ಇಲ್ಲ ಕಣೋ, ಬಾಂಬೆ ನಿಮ್ಮಪ್ಪಂದೆ,

ಆದ್ರೆ, ನಿಮ್ಮ ಅಪ್ಪ ನಾನೇ....

ಡೈಲಾಗ್ 2

ಅಮ್ಮ : ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರಿ ಒಂದು ಯುದ್ಧ ಗೆಲ್ಬಹುದು...

ಅದೇ ನೀನು ಮುಂದೆ ನಿಂತಿದ್ದೀಯಾ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಪ್ರಪಂಚನೇ ಗೆಲ್ಬಹುದು....

ಈ ಎರಡು ಡೈಲಾಗ್ ಗಳು ಕೆಜಿಎಫ್ ಗೆ ಮತ್ತಷ್ಟು ಜೋಶ್ ತುಂಬಿದೆ. ಉಳಿದ ಡೈಲಾಗ್ ಗಳು ಸಿನಿಮಾದಲ್ಲೇ ನೋಡಬೇಕಿದೆ. ಡಿಸೆಂಬರ್ 21 ರಂದು ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ.

   
 
ಹೆಲ್ತ್