Back
Home » ಸಿನಿ ಸಮಾಚಾರ
ದುನಿಯಾ ವಿಜಯ್ ಮನೆಗೆ ನಾಗರತ್ನ ಹೋಗಬಾರದು: ಇದು ಕೋರ್ಟ್ ಆದೇಶ.!
Oneindia | 9th Nov, 2018 06:41 PM

ದುನಿಯಾ ವಿಜಯ್ ಮನೆಯ ಬೀದಿ ಜಗಳ ನಿಮಗೆಲ್ಲ ಗೊತ್ತೇ ಇದೆ. ಇಬ್ಬರು ಹೆಂಡತಿಯರ ನಡುವೆ ನಡೆದ ರಂಪಾಟವನ್ನ ನೀವೆಲ್ಲ ಕಣ್ತುಂಬಿಕೊಂಡಿದ್ದೀರಾ. ಇಷ್ಟೆಲ್ಲಾ ಆದ್ಮೇಲೆ, ನಾಗರತ್ನ ರಿಂದ ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದರು.

ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ದುನಿಯಾ ವಿಜಯ್ ಮನೆಗೆ ನಾಗರತ್ನ ಹೋಗಬಾರದು ಎಂದು ಆದೇಶಿಸಿದೆ. ಜೊತೆಗೆ ದುನಿಯಾ ವಿಜಯ್ ಹಾಗೂ ಕುಟುಂಬದ ವಿರುದ್ಧ ಮಾಧ್ಯಮಗಳಿಗೆ ನಾಗರತ್ನ ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧ ಹೇರಿದೆ. ಪ್ರಕರಣದ ವಿಚಾರಣೆ ವೇಳೆ ಕ್ಯಾಮರಾ ಬಳಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.

ನಾಗರತ್ನಗೆ ಮಾನ ಮರ್ಯಾದೆ ಇದ್ಯಾ ಎಂದು ಸಿಡಿಮಿಡಿಗೊಂಡ ಕೀರ್ತಿ ಗೌಡ.!

ಪ್ರಕರಣದ ಹಿನ್ನಲೆ: ಕಳೆದ ತಿಂಗಳು ದುನಿಯಾ ವಿಜಯ್ ಹಾಗೂ ಕೀರ್ತಿ ಗೌಡ ವಾಸವಿದ್ದ ಮನೆಗೆ ತೆರಳಿದ್ದ ನಾಗರತ್ನ, ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು.

ನಾಗರತ್ನರಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆಹೋದ ದುನಿಯಾ ವಿಜಯ್.!

ಸಿಸಿಟಿವಿ ದೃಶ್ಯಾವಳಿ ಸಮೇತ ಗಿರಿನಗರ ಪೊಲೀಸ್ ಠಾಣೆಗೆ ನಾಗರತ್ನ ವಿರುದ್ಧ ಕೀರ್ತಿ ಗೌಡ ಹಾಗೂ ದುನಿಯಾ ವಿಜಯ್ ದೂರು ನೀಡಿದ್ದರು. ನಾಗರತ್ನ ವಿರುದ್ಧ ಎಫ್.ಐ.ಆರ್. ದಾಖಲಾಗುತ್ತಿದ್ದಂತೆಯೇ, ಆಕೆ ಪರಾರಿಯಾದರು. ಸದ್ಯ ಈ ಪ್ರಕರಣದಲ್ಲಿ ನಾಗರತ್ನಗೆ ಜಾಮೀನು ಸಿಕ್ಕಿದೆ.

ಕೀರ್ತಿ ಗೌಡಗೆ ಚಪ್ಪಲಿ ಥಳಿತ: ಅಂದು ಸುಳ್ಳು ಹೇಳಿದ್ರಾ ನಾಗರತ್ನ.?

ಈ ನಡುವೆ ಕ್ರೌರ್ಯದ ಕಾರಣ ನೀಡಿ ನಾಗರತ್ನ ರಿಂದ ವಿಚ್ಛೇದನ ಕೋರಿ ದುನಿಯಾ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದರು.

   
 
ಹೆಲ್ತ್