Back
Home » ಸಮ್ಮಿಲನ
ಬೆರಳುಗಳ ಗಾತ್ರ ನೋಡಿ, ಲೈಂಗಿಕ ಜೀವನದ ಬಗ್ಗೆ ತಿಳಿಯಬಹುದಂತೆ!!
Boldsky | 9th Nov, 2018 08:01 PM
  • ಉಂಗುರು ಬೆರಳು ಮತ್ತು ತೋರು ಬೆರಳು ಸಮಾನವಾಗಿದ್ದರೆ...

    ಅಧ್ಯಯನಗಳು ಕಂಡುಕೊಂಡಿರುವ ವಿಚಾರದ ಪ್ರಕಾರ ತೋರು ಬೆರಳು ಹಾಗೂ ಉಂಗುರ ಬೆರಳಿನ ಗಾತ್ರವು ಸಮಾನವಾಗಿದ್ದರೆ ಆಗ ತಳೀಯವಾಗಿ ಪೂರ್ವಯೋಜಿತವಾಗಿರುವಿರಿ. ಇದರ ಪರಿಣಾಮವಾಗಿ ನೀವು ಲೈಂಗಿಕ ಜೀವನಕ್ಕೆ ಏಕಸಂಗಾತಿಯನ್ನು ದೀರ್ಘಕಾಲಕ್ಕೆ ಆಯ್ಕೆ ಮಾಡುವಿರಿ. ಈ ವ್ಯಕ್ತಿಗಳು ತುಂಬಾ ನಿಷ್ಠ ಮತ್ತು ದೀರ್ಘಕಾಲದ ಸಂಬಂಧವನ್ನು ಇಷ್ಟಪಡುವವರು.

    Most Read: ಮಹಿಳೆಯರು ಪರಾಕಾಷ್ಠೆಯ ಸುಖ ತಲುಪಲು ಹೀಗೂ ಮಾಡಬಹುದು


  • ಸಲಿಂಗಿ ಅವಳಿಗಳ ಮೇಲೆ ಅಧ್ಯಯನ ನಡೆಯಿತು

    ಅಧ್ಯಯನವು ಸಲಿಂಗಿ ಅವಳಿಗಳ ಮೇಲೆ ಸಂಶೋಧನೆ ನಡೆಸಿತು. ಈ ವೇಳೆ ಸಲಿಂಗಿ ಅವಳಿಗಳ ತೋರು ಬೆರಳು ಹಾಗೂ ಉಂಗುರು ಬೆರಳುಗಳನ್ನು ಗಮನಿಸಿದಾಗ ಅದರಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವು ಕಂಡುಬಂತು. ಮಹಿಳೆಯರಲ್ಲಿ ಈ ವ್ಯತ್ಯಾಸವು ಪ್ರಮುಖವಾಗಿತ್ತು.


  • ಅವಳಿಗಳ ಮೇಲೆ ಅಧ್ಯಯನ ನಡೆಯಿತು

    ಈ ಅಧ್ಯಯನವು 18 ಜತೆ ಮಹಿಳಾ ಅವಳಿಗಳು ಮತ್ತು 14 ಜತೆ ಪುರುಷ ಅವಳಿಗಳ ಮೇಲೆ ನಡೆಯಿತು. ಸಲಿಂಗಿ ಮಹಿಳಾ ಅವಳಿ ಕೈಯ ಬೆರಳುಗಳು ಪುರುಷರ ಬೆರಳುಗಳಿಗೆ ಸಮಾನವಾಗಿತ್ತು. ಆದರೆ ಸಲಿಂಗಿಯಲ್ಲದೆ ಅವಳಿಯಲ್ಲಿ ಇದು ವ್ಯತ್ಯಾಸವಿತ್ತು. ಪುರುಷ ಅವಳಿಗಳಲ್ಲಿ ಸಲಿಂಗಿ ಅವಳಿಯಲ್ಲಿ ಪುರುಷರ ರೀತಿಯ ಕೈಬೆರಳುಗಳಿದ್ದರೆ, ಸಲಿಂಗಿಯಲ್ಲದವನಲ್ಲಿ ಇದು ಭಿನ್ನವಾಗಿತ್ತು.


  • ಅವಳಿಗಳನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವುದು ಯಾಕೆ?

    ವರದಿಯ ಪ್ರಕಾರ ಅವಳಿಗಳಲ್ಲಿ ಶೇ.100ರಷ್ಟು ಜಿನ್ ಗಳು ಸಮಾನವಾಗಿರುವುದು. ಆದರೆ ಇವರ ಲೈಂಗಿಕ ಆಕಾಂಕ್ಷೆಯು ಭಿನ್ನವಾಗಿರಲೂಬಹುದು ಎಂದು ಕಂಡುಕೊಳ್ಳಲಾಗಿದೆ. ಈ ಕಾರಣದಿಂದ ಜೆನೆಟಿಕ್ ಹೊರತುಪಡಿಸಿ ವ್ಯತ್ಯಾಸಗಳು ಕೂಡ ಜವಾಬ್ದಾರವಾಗಿರುತ್ತದೆ.

    Most Read: ಲಿಂಗ ಪರಿವರ್ತನೆಗೊಂಡು ಸುಂದರ ಯುವಕರಾದ ಮಹಿಳೆಯರು!


  • ಅಧ್ಯಯನಗಳು ಕಂಡುಕೊಂಡಿರುವುದು

    ಅಧ್ಯಯನಗಳು ಹೇಳಿರುವಂತಹ ಭ್ರೂಣವು ಪುರುಷ ಹಾರ್ಮೋನು ಟೆಸ್ಟೋಸ್ಟೆರಾನ್ ಗೆ ಹೊಂದಿಕೆಯಾಗಿರುವುದು ಬೆರಳುಗಳಲ್ಲಿನ ವ್ಯತ್ಯಾಸಕ್ಕೆ ಕಾರಣವಾಗಿರಬಹುದು ಮತ್ತು ಇವರ ಲೈಂಗಿಕ ಆಕಾಂಕ್ಷೆಯು ಬದಲಾಗಬಹುದು.




ಕೆಲವೊಂದು ಅಧ್ಯಯನಗಳು ಈಗ ದೇಹದ ಪ್ರತಿಯೊಂದು ಅಂಗಾಂಗಳಿಂದ ಏನೆಲ್ಲಾ ತಿಳಿಯಬಹುದು ಎಂದು ಹೇಳುತ್ತಲೇ ಇರುತ್ತದೆ. ಅದರಲ್ಲೂ ಹೆಚ್ಚು ಆಸಕ್ತಿ ಕೆರಳಿಸುವಂತಹ ಸೆಕ್ಸ್ ವಿಚಾರದ ಬಗ್ಗೆ ನಡೆಯುವಂತಹ ಅಧ್ಯಯನಗಳು ನಿಜವಾಗಿಯೂ ಗಮನಾರ್ಹವಾಗಿದೆ. ಇತ್ತೀಚೆಗೆ ಅಧ್ಯಯನವೊಂದು ಕಂಡುಕೊಂಡ ವಿಚಾರವೆಂದರೆ ನಿಮ್ಮ ಕೈಯ ಬೆರಳುಗಳ ಗಾತ್ರವನ್ನು ನೋಡಿಕೊಂಡು ಸೆಕ್ಸ್ ಜೀವನದ ಬಗ್ಗೆ ಹೇಳಬಹುದು. ಬಲಗೈಯನ್ನು ನೀವು ನೋಡಿಕೊಂಡು ಉಂಗುರು ಬೆರಳು ತೋರು ಬೆರಳಿಗಿಂತ ಉದ್ದ ಇದೆಯಾ ಎಂದು ನೀವು ನೋಡಬೇಕಾಗಿದೆ.

ತೋರು ಬೆರಳಿಗಿಂತ ಉಂಗುರ ಬೆರಳು ದೊಡ್ಡದಾಗಿದ್ದರೆ ಆಗ ನೀವು ಒಂದಕ್ಕಿಂತ ಹೆಚ್ಚಿನ ಸಂಗಾತಿಯನ್ನು ಹೊಂದಿರುತ್ತೀರಿ ಎಂದು ಅಧ್ಯಯನಗಳು ಹೇಳಿವೆ. ಕೈಬೆರಳಿನ ಗಾತ್ರ ನೋಡಿಕೊಂಡು ಲೈಂಗಿಕ ಜೀವನದ ಬಗ್ಗೆ ಹೇಗೆ ತಿಳಿದುಕೊಳ್ಳಬಹುದು ಎಂದು ಈ ಲೇಖನದ ಮೂಲಕ ನೀವು ತಿಳಿಯಿರಿ.

   
 
ಹೆಲ್ತ್