Back
Home » ಇತ್ತೀಚಿನ
ಟ್ವಿಟ್ಟರ್ ​ಸಿಇಒ 'ಜಾಕ್​ ಡೊರ್ಸೆ' ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದೇಕೆ?
Gizbot | 13th Nov, 2018 04:31 PM

ಜಾಲತಾಣಗಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಟ್ವಿಟ್ಟರ್ ಸಹ ಸಂಸ್ಥಾಪಕ ಹಾಗೂ​ ಸಿಇಒ ಜಾಕ್​ ಡೊರ್ಸೆ ಅವರು ಭಾರತೀಯ ಕಾಂಗ್ರೆಸ್ ಪಕ್ಷದ​ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆಯಲ್ಲಿ ತಮ್ಮ ಸಂಸ್ಥೆ ಸುಳ್ಳು ಸುದ್ದಿಗಳು ಹರಡದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಜಾಗತಿಕ ಮಟ್ಟದಲ್ಲಿ ಟ್ವಿಟರ್ ಅತ್ಯಂತ ಪ್ರಬಲವಾದ "ಸಂಭಾಷಣೆ" ವೇದಿಕೆಯಾಗಿ ಬೆಳೆದಿದೆ. ಆ ಸಂವಾದಗಳನ್ನು ಆರೋಗ್ಯಕರವಾಗಿಡಲು ಮತ್ತು ನಕಲಿ ಸುದ್ದಿಯ ಅಪಾಯವನ್ನು ನಿಭಾಯಿಸಲು ಹಲವು ಕ್ರಮಗಳನ್ನು ಕೈಗೊಂಡಿರುವುದಾಗ ಜ್ಯಾಕ್ ವಿವರಿಸಿದ್ದಾನೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಅಫಿಷಿಯಲ್ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಅಮೆರಿಕಾದ ಚುನಾವಣೆಯ ಮೇಲೆ ಸುಳ್ಳು ಸುದ್ದಿಗಳ ಪ್ರಭಾವ ಹೆಚ್ಚಿತ್ತು ಎಂಬ ಸತ್ಯ ತಿಳಿದ ನಂತರ, ಚುನಾವಣೆಯ ಸಂದರ್ಭಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ತಡೆಯಲು ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಯತ್ನಿಸುತ್ತಿವೆ. ಇದೆ ವೇಳೆಯಲ್ಲಿ ಜಾಕ್​ ಡೊರ್ಸೆ ಅವರು ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿರುವುದು ಕುತೋಹಲಕ್ಕೆ ಕಾರಣವಾಗಿದೆ.

ಇತ್ತೀಚಿಗಷ್ಟೇ, ಕಾಂಗ್ರೆಸ್‌ ಪಕ್ಷಕ್ಕೆ ಕೆಟ್ಟ ಹೆಸರು ಬರುವಂತೆ ಕಾಂಗ್ರೆಸ್ ಐಟಿ ಸೆಲ್ ಹೆಸರಿನಲ್ಲಿ ಟ್ವಿಟ್ಟರ್ ಖಾತೆಯನ್ನು ತೆರೆದು ಅವಹೇಳನಕಾರಿ ಹೇಳಿಕೆಗಳನ್ನು ದಾಖಲಿಸುತ್ತಿದ್ದ ಟ್ವಿಟ್ಟರ್ ಖಾತೆ ವಿರುದ್ಧ ಕಾಂಗ್ರೆಸ್ ಎಫ್‌ಐಆರ್ ದಾಖಲಿಸಿತ್ತು. ದೂರಿನ ಆಧಾರದ ಮೇಲೆ ಸೈಬರ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ಅದರ ಜಾಡನ್ನು ಹಿಡಿಯಲು ಮುಂದಾಗಿದ್ದನ್ನು ನೋಡಬಹುದು.

ಇನ್ನು ಜಗತ್ತಿನಾದ್ಯಂತ 336 ಮಿಲಿಯನ್‌ಗೂ ಹೆಚ್ಚು​ ಬಳಕೆದಾರರನ್ನು ಹೊಂದಿರುವ ಟ್ಟಿಟ್ಟರ್​, ಸಾಮಾಜಿಕ ಜಾಲತಾಣಗಳು ತಮ್ಮೂಲಕ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ತಡೆಯಲು ಮುಂದಾಗಿದೆ. ಇದೇ ಕಾರಣದಿಂದಾಗಿ ಡೊರ್ಸೆ ಅವರು, ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವರಾದ ರವಿಶಂಕರ್​ ಪ್ರಸಾದ್ ಅವರನ್ನೂ ಕೂಡ ಭೇಟಿಯಾಗಲು ಇಚ್ಛಿಸಿದ್ದರು ಎನ್ನಲಾಗಿದೆ.

   
 
ಹೆಲ್ತ್