Back
Home » ಆರೋಗ್ಯ
ರಾತ್ರಿ ವೇಳೆ ಮಾಡುವ ಇಂತಹ ಅಭ್ಯಾಸಗಳಿಂದ ದೇಹದ ತೂಕ ಹೆಚ್ಚಾಗಬಹುದು!
Boldsky | 13th Nov, 2018 05:05 PM
 • ತಡರಾತ್ರಿ ತಿಂಡಿ

  ಸಂಜೆ 6 ಗಂಟೆ ಬಳಿಕ ಏನೂ ತಿನ್ನಬಾರದು ಎನ್ನುವ ನಿಯಮವಿದೆ. ಆದರೆ ಇಂದಿನ ದಿನಗಳಲ್ಲಿ ಇದನ್ನು ಪಾಲಿಸಿಕೊಂಡು ಹೋಗುವುದು ತುಂಬಾ ಕಷ್ಟ. ಇದರಿಂದಾಗಿ ತಡರಾತ್ರಿ ಊಟ ಹಾಗೂ ತಿಂಡಿ ತಿನ್ನುವುದನ್ನು ಕೆಲವರು ರೂಢಿ ಮಾಡಿಕೊಂಡಿರುವರು. ಆದರೆ ತಡರಾತ್ರಿ ತಿನ್ನುವುದರಿಂದಾಗಿ ತೂಕ ಹೆಚ್ಚಳವಾಗುವುದು. ಇದು ಕೊಲೆಸ್ಟ್ರಾಲ್, ಇನ್ಸುಲಿನ್ ಮಟ್ಟ ಹೆಚ್ಚಿಸುವುದು ಮತ್ತು ಹಾರ್ಮೋನು ಬಿಡುಗಡೆ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರುವುದು. ದೇಹವು ದಹಿಸುವುದಕ್ಕಿಂತ ಹೆಚ್ಚಿಗೆ ನೀವು ಕ್ಯಾಲೋರಿ ಸೇವನೆ ಮಾಡಿದರೆ ಆಗ ಸಾಮಾನ್ಯವಾಗಿ ತೂಕ ಹೆಚ್ಚಳವಾಗುವುದು.

  Most Read: ರಾತ್ರಿ ಮಲಗುವ ಮುನ್ನ ಹಾಲು ಕುಡಿದು ಮಲಗಿದರೆ, ಕಣ್ತುಂಬ ನಿದ್ದೆ ಗ್ಯಾರಂಟಿ!


 • ತಡರಾತ್ರಿ ಕಾಫಿ ಸೇವನೆ

  ರಾತ್ರಿ ಕಾಫಿ ಸೇವನೆ ಮಾಡುವುದು ನಿಮ್ಮ ನಿದ್ರೆಗೆ ಭಂಗ ಉಂಟು ಮಾಡುವುದು. ಮಲಗುವ ಆರು ಗಂಟೆಗೆ ಮೊದಲು ನೀವು ಕೆಫಿನ್ ಸೇವನೆ ಮಾಡಬೇಕು. ಕಾಫಿಯಲ್ಲಿ ಇರುವಂತಹ ಕ್ಲೋರೋಜೆನಿಕ್ ಆಸಿಡ್ ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಅಧ್ಯಯನಗಳ ಕೂಡ ಕಂಡುಕೊಂಡಿವೆ. ಗಿಡಮೂಲಿಕೆ ಚಹಾ ಅಥವಾ ಬಿಸಿ ನೀರನ್ನು ಕಾಫಿ ಬದಲಿಗೆ ಸೇವಿಸಿದರೆ ಒಳ್ಳೆಯದು.


 • ಸರಿಯಾಗಿ ನಿದ್ರಿಸದೇ ಇರುವುದು

  ರಾತ್ರಿ ವೇಳೆ ಪ್ರತಿಯೊಬ್ಬ ವ್ಯಕ್ತಿಗೂ ಸುಮಾರು 7-8 ಗಂಟೆಗಳ ನಿದ್ರೆಯ ಅವಶ್ಯಕತೆಯಿದೆ. ದಿನಿನಿತ್ಯವು ವ್ಯಕ್ತಿಯೊಬ್ಬ ಇದಕ್ಕಿಂತ ಕಡಿಮೆ ಸಮಯ ನಿದ್ರಿಸಿದರೆ ಆಗ ಆರೋಗ್ಯ ಸಮಸ್ಯೆಯು ಆರಂಭವಾಗುವುದು. ನಿದ್ರೆಯ ತೊಂದರೆ ಮತ್ತು ಚಯಾಪಚಯದಲ್ಲಿ ನಕಾರಾತ್ಮಕ ಬದಲಾವಣೆಯು ನೇರ ಸಂಬಂಧ ಹೊಂದಿದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ನಿದ್ರೆಯ ಕೊರತೆಯ ಮತ್ತೊಂದು ಸಮಸ್ಯೆಯೆಂದರೆ ಇದರಿಂದ ಆಯಾಸವಾಗುವುದು. ಹೀಗಾದಲ್ಲಿ ನಿಮ್ಮ ದೈಹಿಕ ಚಟುವಟಿಕೆಗಳು ಕಡಿಮೆಯಾಗುವುದು.


 • ವ್ಯಾಯಾಮದ ಕೊರತೆ

  ತೂಕ ಕಳೆದುಕೊಳ್ಳಬೇಕೆಂದರೆ ಆಗ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯು ಪ್ರಮುಖ ಪಾತ್ರ ವಹಿಸುವುದು. ಇದರಿಂದ ನಿಮ್ಮ ಚಯಾಪಚಯ ಕ್ರಿಯೆ ವೃದ್ಧಿಸುವುದು ಮತ್ತು ಕ್ಯಾಲರಿ ದಹಿಸಲ್ಪಡುವುದು. ದಿನಿನಿತ್ಯವು ನೀವು ಮಿತವಾಗಿ ವ್ಯಾಯಾಮ ಮಾಡಿಕೊಳ್ಳಲೇಬೇಕು. ಪ್ರತಿನಿತ್ಯ 15 ನಿಮಿಷಗಳ ತನಕ ನಡೆದರೆ ಆಗ ಸುಮಾರು 100 ಹೆಚ್ಚುವರಿ ಕ್ಯಾಲರಿ ದಹಿಸುವುದು. ಇದು ವಾರದಲ್ಲಿ 700 ಕ್ಯಾಲರಿ ಆಗುವುದು. ಇದರಿಂದ ನೀವು ಒಂದು ವರ್ಷದಲ್ಲಿ ತೂಕವನ್ನು ನಿಯಂತ್ರಣಕ್ಕೆ ತರಬಹುದು.

  Most Read: ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ- ದೇಹದ ತೂಕ ಇಳಿಸಬಹುದು!


 • ರಾತ್ರಿ ವೇಳೆ ಇಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದು

  ಹಸಿರು ಬೆಳಕನ್ನು ಹೊರಸೂಸುವಂತಹ ಇಲೆಕ್ಟ್ರಾನಿಕ್ ಸಾಧನಗಳನ್ನು ರಾತ್ರಿ ಮಲಗುವ ಮೊದಲು ಬಳಸುವುದರಿಂದ ನಿದ್ರೆಗೆ ತೊಂದರೆಯಾಗುವುದು ಮತ್ತು ಇದರಿಂದ ತೂಕ ಹೆಚ್ಚಳವಾಗುವುದು. ನಿದ್ರೆಯ ಆವರ್ತನಕ್ಕೆ ಕಾರಣವಾಗುವಂತಹ ಮೆಲಟೊನಿನ್ ಉತ್ಪತ್ತಿಗೆ ಈ ಸಾಧನಗಳು ಭಂಗ ತರುವುದು. ನಿದ್ರಿಸುವ ಮೊದಲು ನೀವು ಮೊಬೈಲ್ ನಲ್ಲಿ ಹುಡುಕಾಡುವುದನ್ನು ಬಿಟ್ಟು, ಯಾವುದಾದರೂ ಪುಸ್ತಕ ಓದಿ ಅಥವಾ ಸುಮಧುರ ಸಂಗೀತ ಕೇಳಿ.


 • ತುಂಬಾ ವಿಳಂಬವಾಗಿ ಅಲರಾಂ ಇಡುವುದು

  ಬೆಳಗ್ಗೆ ಬೇಗನೆ ಎದ್ದು ಸೂರ್ಯನ ಬಿಸಿಲಿಗೆ ಮೈಯೊಡ್ಡಿದವರ ದೇಹದ ಭೌತಿಕ ದ್ರವ್ಯರಾಶಿ ಸೂಚಿಯು ತಡವಾಗಿ ಸೂರ್ಯನ ಬೆಳಕಿಗೆ ಮೈಯೊಡ್ಡಿದವರ ಭೌತಿಕ ದ್ರವ್ಯರಾಶಿ ಸೂಚಿಗಿಂತ ಕಡಿಮೆ ಇರುವುದು ಎಂದು ಅಧ್ಯಯನಗಳು ಹೇಳಿ. 20-30 ನಿಮಿಷ ಕಾಲ ಬಿಸಿಲಿಗೆ ಮೈಯೊಡ್ಡಿದರೆ ಆಗ ಭೌತಿಕ ದ್ರವ್ಯರಾಶಿ ಸೂಚಿಯ ಮೇಲೆ ಪರಿಣಾಮ ಬೀರುವುದು. ಇದರಿಂದ ಬೇಗನೆ ಎದ್ದು ನೀವು ಓಡಿ.

  Most Read: ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!


 • ಕೆಟ್ಟ ಬಣ್ಣಗಳು ಸುತ್ತವರಿದಿರುವುದು

  ನೀಲಿ ಬಣ್ಣವು ಆರಾಮವನ್ನು ಉತ್ತೇಜಿಸುವುದು ಮತ್ತು ಇದರಿಂದ ಸುಖ ನಿದ್ರೆಗೆ ಸಹಕಾರಿಯಾಗುವುದು. ಇದು ಬಯಕೆಯನ್ನು ಕೂಡ ಕಡಿಮೆ ಮಾಡುವುದು. ಕೆಂಪು ಅಥವಾ ಕಿತ್ತಳೆ ಬಣ್ಣವು ನಿಮ್ಮ ತುಂಬಾ ಶಕ್ತಿಯುತ ಹಾಗೂ ಹಸಿವಿನಿಂದ ಇರುವಂತೆ ಮಾಡುವುದು. ಇದರಿಂದ ನಿಮ್ಮ ಮಲಗುವ ಕೋಣೆಯ ಬಣ್ಣವನ್ನು ಇಂದೇ ಬದಲಾಯಿಸಿಕೊಳ್ಳಿ. ಇದೆಲ್ಲವೂ ನಾವು ಸಂಜೆ ವೇಳೆ ಮಾಡುವಂತಹ ತಪ್ಪುಗಳಾಗಿವೆ. ಇದನ್ನು ನೀವು ಬದಲಾಯಿಸಿಕೊಳ್ಳಬೇಕು. ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಲು ಮರೆಯಬೇಡಿ.
ಬೊಜ್ಜು ದೇಹ ಪಡೆಯುವುದು ತುಂಬಾ ಸುಲಭ. ಕೆಲವರಿಗೆ ಅನುವಂಶೀಯವಾಗಿ, ಇನ್ನು ಕೆಲವರಿಗೆ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಬೊಜ್ಜು ದೇಹವು ಬರುವುದು. ಬೊಜ್ಜು ದೇಹದಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಾಗುವುದು. ಇಂತಹ ಬೊಜ್ಜು ದೇಹವನ್ನು ಕರಗಿಸದೆ ಇದ್ದರೆ ಆಗ ರೋಗಗಳು ದೇಹವನ್ನು ಮುತ್ತಿಕೊಳ್ಳುವುದು. ಆದರೆ ನಮ್ಮಲ್ಲಿನ ಕೆಲವೊಂದು ಅಭ್ಯಾಸಗಳು ಕೂಡ ಬೊಜ್ಜು ದೇಹಕ್ಕೆ ಕಾರಣವಾಗಿದೆ.

ಬೊಜ್ಜು ದೇಹ ಹೊಂದಿದ್ದರೆ ಆಗ ಅಕಾಲಿಕವಾಗಿ ಮರಣ ಹೊಂದುವ ಸಾಧ್ಯತೆಯು ಹೆಚ್ಚಾಗಿರುತ್ತದೆ ಎಂದು ಅಧ್ಯಯನ ವರದಿಗಳು ಕೂಡ ಹೇಳಿವೆ. ಬೊಜ್ಜು ದೇಹ ಬರಲು ಕಾರಣವೇನೆಂದು ನಿಮಗೆ ತಿಳಿದರೆ ಆಗ ನೀವು ಮುನ್ನೆಚ್ಚರಿಕೆ ತೆಗೆದುಕೊಂಡು ಆರೋಗ್ಯಕರ ಜೀವನ ಸಾಗಿಸಬಹುದು. ಬೊಜ್ಜು ಬರಲು ಕಾರಣವಾಗುವಂತಹ ರಾತ್ರಿ ವೇಳೆಯ ಕೆಲವೊಂದು ಅಭ್ಯಾಸಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ ಮತ್ತು ಬೊಜ್ಜು ದೇಹ ಬರದಂತೆ ಆರೋಗ್ಯಕರ ಜೀವನ ನಡೆಸಿ.

   
 
ಹೆಲ್ತ್