Back
Home » ಗಾಸಿಪ್
ತಮಿಳು ನಟನ ಜೊತೆ ರಜನಿಕಾಂತ್ ಪುತ್ರಿಯ ಎರಡನೇ ವಿವಾಹ.!
Oneindia | 14th Nov, 2018 01:58 PM
 • 7 ವರ್ಷದ ದಾಂಪತ್ಯ ಮುರಿದುಕೊಂಡಿದ್ದ ಸೌಂದರ್ಯ

  ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಜೊತೆಗಿನ 7 ವರ್ಷದ ದಾಂಪತ್ಯವನ್ನ ರಜನಿಕಾಂತ್ ಪುತ್ರಿ ಸೌಂದರ್ಯ ಕಳೆದ ವರ್ಷ ಮುರಿದುಕೊಂಡಿದ್ದರು. ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನ ಪಡೆದುಕೊಂಡಿದ್ದರು. ಸುಮಾರು 4 ವರ್ಷಗಳ ಕಾಲ ಪ್ರೀತಿಸಿ, 2010ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸೌಂದರ್ಯ ಮತ್ತು ಅಶ್ವಿನ್ ಅವರು ಮದುವೆಯಾಗಿದ್ದರು. ಈ ದಂಪತಿಗಳಿಗೆ ವೇದ್ ಎನ್ನುವ 4 ವರ್ಷದ ಮಗನಿದ್ದಾನೆ.

  ವಿಚ್ಛೇದನ ಸುದ್ದಿ ಖಚಿತಪಡಿಸಿದ ರಜನಿ ಪುತ್ರಿ ಸೌಂದರ್ಯ


 • ನಟನ ಜೊತೆ ಲವ್

  ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡ ಸೌಂದರ್ಯ ಈಗ ನಟ ಹಾಗೂ ಉದ್ಯಮಿ ವಿಶಾಗನ್ ಜೊತೆ ಪ್ರೀತಿಯಲ್ಲಿದ್ದಾರೆ. ಈ ಪ್ರೀತಿಯನ್ನ ದಾಂಪತ್ಯವಾಗಿಸಿಕೊಳ್ಳುವ ಉದ್ದೇಶದಿಂದ ದೊಡ್ಡವರು ಮತ್ತೆ ಮದುವೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

  ರಜನಿ ಎರಡನೇ ಮಗಳು ಸೌಂದರ್ಯಾ ವಿಚ್ಛೇದನದ ಸುದ್ದಿ ನಿಜವಾ?


 • ಜನವರಿಯಲ್ಲಿ ಮದುವೆ

  ಸದ್ಯ, ಸಂಪ್ರದಾಯವಾಗಿ ಎಂಗೇಜ್ ಮೆಂಟ್ ಕಾರ್ಯಕ್ರಮ ಮಾಡಿಕೊಂಡಿರುವ ರಜನಿಕಾಂತ್ ಪುತ್ರಿ, ಜನವರಿಯಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಈ ವಿಷ್ಯವನ್ನ ಇಬ್ಬರು ಕುಟುಂಬದವರು ಯಾರೂ ಕೂಡ ಖಚಿತ ಪಡಿಸಿಲ್ಲ. ಆದ್ರೆ, ಕೆಲವು ಮಾಧ್ಯಮಗಳ ವರದಿಯಿಂದ ಬಹಿರಂಗವಾಗಿದೆ.

  ರಜನಿಕಾಂತ್ ಮಗಳು ಸೌಂದರ್ಯ ನಿಶ್ಚಿತಾರ್ಥ


 • ಯಾರು ಈ ವಿಶಾಗನ್.?

  ವಿಶಾಗನ್ ತಮಿಳುನಾಡಿನ ಖ್ಯಾತ ಉದ್ಯಮಿಯ ಪುತ್ರ ಹಾಗೂ ಚಲನಚಿತ್ರ ನಟ. ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ನಿಭಾಯಿಸಿರುವ ವಿಶಾಗನ್, ನಾಯಕನಾಗಿಯೂ ನಟಿಸಿದ್ದರು. ಆದ್ರೆ, ಆ ಸಿನಿಮಾ ಬಿಡುಗಡೆಯಾಗಗಲಿಲ್ಲ. ಮತ್ತೊಂದೆಡೆ ರಜನಿಪುತ್ರಿ ಕೂಡ 'ಕೊಚಾಡಿಯನ್' ಸಿನಿಮಾ ನಿರ್ದೇಶನ ಮಾಡಿದ್ದರು.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಮನೆಯಲ್ಲಿ ಮತ್ತೆ ಮದುವೆಯ ಸಂಭ್ರಮ ನಡೆಯಲಿದೆ. ತಲೈವಾ ಪುತ್ರಿ ಹಾಗೂ ನಿರ್ದೇಶಕಿ ಸೌಂದರ್ಯ ರಜನಿಕಾಂತ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಈಗ ಹೊರಬಿದ್ದಿದೆ.

ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿರುವ ರಜನಿ ಪುತ್ರಿ ಸೌಂದರ್ಯ ಈಗ ಖಾಸಗಿ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.

ರಜನಿಕಾಂತ್ ಪುತ್ರಿಯ 7 ವರ್ಷದ ದಾಂಪತ್ಯ ಕೊನೆಗೂ ಅಂತ್ಯ

ಇತ್ತೀಚಿಗಷ್ಟೆ ರಜನಿ ಮಗಳ ನಿಶ್ಚಿತಾರ್ಥ ನೆರವೇರಿದ್ದು, ಕೇವಲ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ. ವಿಶೇಷ ಅಂದ್ರೆ, ತಮಿಳಿನ ನಟನೊಬ್ಬನ ಜೊತೆ ಮತ್ತೆ ಮದುವೆ ಆಗ್ತಿರುವುದು ಈಗ ಚರ್ಚೆಯಾಗ್ತಿದೆ. ಅಷ್ಟಕ್ಕೂ, ಆ ನಟ ಯಾರು.? ಮದುವೆ ಯಾವಾಗ.? ಮುಂದೆ ಓದಿ....

   
 
ಹೆಲ್ತ್