Back
Home » ಇತ್ತೀಚಿನ
ಮಾರುಕಟ್ಟೆಯಲ್ಲಿ ಮತ್ತೇ ಸದ್ದು ಮಾಡುತ್ತಿದೆ ಆಪಲ್..!
Gizbot | 14th Nov, 2018 07:01 AM

ಜಾಗತಿಕ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಪೋನ್ ಗಳ ಹಾವಳಿಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಹೊಸ ಮಾದರಿಯ ತಂತ್ರಜ್ಞಾನಗಳು ಸ್ಮಾರ್ಟ್ ಫೋನ್ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳ ಬೇಡಿಕೆಯನ್ನು ಕಸಿದುಕೊಂಡು ಮುನ್ನುಗುತ್ತಿರುವ ಸ್ಮಾರ್ಟ್ ಪೋನ್ ಗಳು ಇಂದು ಮಾನವರ ಅಗತ್ಯ ವಸ್ತುಗಳ ಸಾಲಿನಲ್ಲಿ ಮೊದಲನೆಯದಾಗಿ ನಿಂತಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಆಪಲ್ ಹೊಸ ಮಾದರಿಯ ತಂತ್ರಜ್ಞಾನದ ಅಭಿವೃದ್ಧಿಗೆ ಮುಂದಾಗಿದೆ.

ಈಗಾಗಲೇ ತನ್ನ ಐಫೋನ್ ಬಳಕೆದಾರರಿಗೆ ದೊಡ್ಡ ಮಾದರಿಯಲ್ಲಿ ಆಫರ್ ಗಳನ್ನು ನೀಡುತ್ತಿರುವ ಆಪಲ್, ಅತೀ ಹೆಚ್ಚಿನ ಗುಣಮಟ್ಟದ ಮತ್ತು ಮಾರುಕಟ್ಟೆಯಲ್ಲಿಯೇ ಯೂನಿಕ್ ಆಗಿರುವ ಮಾದರಿಯ ತಂತ್ರಜ್ಞಾನವನ್ನು ಪರಿಚಯಿಸುವುದರಲ್ಲಿ ಮುಂಚುಣಿಯಲ್ಲಿದೆ. ತನ್ನ ಬಳಕೆದಾರರಿಗೆ ಗುಣಮಟ್ಟದ ಸೇವೆಯನ್ನು ನೀಡುವ ಮಾದರಿಯಲ್ಲಿ ಈ ಬಾರಿ ಹಿಂದೆದೊ ಕಾಣದ ಮಾದರಿಯ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ.

ಆಪಲ್ ತನ್ನ ಬಳಕೆದಾರರಿಗೆ ಈ ಬಾರಿ ಅತೀ ಕಡಿಮೆ ಬ್ಯಾಟರಿಯನ್ನು ಬಳಕೆ ಮಾಡಿಕೊಂಡು ಹೆಚ್ಚಿನ ಪ್ರಮಾಣದ ನೆಟ್ ವರ್ಕ್ ಗುಣಮಟ್ಟವನ್ನು ನೀಡುವ ಹೊಸ ಮಾದರಿಯ ಆಂಟೆನಾಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಇದರಿಂದಾಗಿ ನೆಟ್ ವರ್ಕ್ ಸಮಸ್ಯೆಯಿಂದ ಬಳಲುತ್ತಿರುವ ಬಳಕೆದಾರರಿಗೆ ಸಹಾಯವಾಗಲಿದೆ ಎನ್ನಲಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ 5G ತಂತ್ರಜ್ಞಾನವು ಕಾಣಿಸಿಕೊಳ್ಳಲಿದ್ದು, ಈ ಸಂದರ್ಭದಲ್ಲಿ ಬಳಕೆದಾರರಿಗೆ ಗುಣಮಟ್ಟದಲ್ಲಿ ವೇಗದ ಸೇವೆಯನ್ನು ನೀಡುವ ಅವಶ್ಯಕತೆಯೂ ನಿರ್ಮಾಣವಾಗಲಿದೆ. ಹಾಗಾಗಿ ಹೆಚ್ಚು ಪ್ರಮಾಣದ ನೆಟ್ ವರ್ಕ್ ಅನ್ನು ಆಕರ್ಷಿಸುವ ಆಂಟೆನಾಗಳ ಅಗತ್ಯತೆ ಇರುವುದರಿಂದಾಗಿ ಬಳಕೆದಾರರಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸಲಿದೆ.

ಆಪಲ್ ಪರಿಚಯ ಮಾಡಲು ಮುಂದಾಗಿರುವ ಹೊಸ ಮಾದರಿಯ ತಂತ್ರಜ್ಞಾನದ ಆಂಟೆನಾಗಳು ಬಳಕೆದಾರರಿಗೆ ನೆಟ್ ವರ್ಕ್ ಸಮಸ್ಯೆ ಕಾಡುವಂತೆ ಮಾಡುವುದಿಲ್ಲ, ಬದಲಾಗಿ ಬಳಕೆದಾರಿಗೆ ಹೆಚ್ಚಿನ ಗುಣಮಟ್ಟದ ನೆಟ್ ವರ್ಕ್ ನೀಡಲಿದ್ದು, ವೇಗದ ಇಂಟರ್ನೆಟ್ ಬಳಕೆಗೆ ಅವಕಾಶ ಮಾಡಿಕೊಡಲಿದೆ. ಅಲ್ಲದೇ ಈ ಮಾದರಿಯಲ್ಲಿ ಗುಣಮಟ್ಟದ ನೆಟ್ ವರ್ಕ್ ಪಡೆಯುವ ವೇಳೆಯಲ್ಲಿ ಹೆಚ್ಚಿನ ವ್ಯಾಟರಿಯನ್ನು ಬಳಕೆ ಮಾಡಿಕೊಳ್ಳದಂತೆ ಹೊಸ ತಂತ್ರಜ್ಞಾನವನ್ನು ವಿನ್ಯಾಸ ಮಾಡಲಾಗಿದೆ.

ಪ್ರತಿ ಬಾರಿಯೂ ಹೊಸ ಮಾದರಿಯ ಪ್ರಯತ್ನಕ್ಕೆ ಮುಂದಾಗುವ ಆಪಲ್, ಈ ಬಾರಿ ಹೊಸ ಮಾದರಿಯ ಆಟೆನಾ ನಿರ್ಮಾಣದಿಂದಾಗಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಿನ ತಯಾರರಿಗೆ ದಾರಿ ಯನ್ನು ಮಾಡಿಕೊಡಲಿದೆ.

   
 
ಹೆಲ್ತ್