Back
Home » ಇತ್ತೀಚಿನ
ತಂತ್ರಜ್ಞಾನವೇ ಈಗ ಮುಖ್ಯ, ನಾವದಕ್ಕೆ ಒಗ್ಗಿಕೊಳ್ಳಬೇಕು: ಪ್ರಧಾನಿ ಮೋದಿ
Gizbot | 14th Nov, 2018 01:20 PM
 • ಭಾರತ ಅತ್ಯುತ್ತಮ ತಾಣ

  ಭಾರತದಲ್ಲಿ ವಿತ್ತೀಯ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರೀ ಬೆಳವಣಿಗೆ ಕಂಡುಬರುತ್ತಿದೆ. ಭಾರತವು ಜಗತ್ತಿನ ಮುಂಚೂಣಿ ವಿತ್ತೀಯ ತಂತ್ರಜ್ಞಾನ ಹಾಗು ಸ್ಟಾರ್ಟ್ ಅಪ್‌ ದೇಶವಾಗಿದೆ. ಭವಿಷ್ಯದ ವಿತ್ತೀಯ ತಂತ್ರಜ್ಞಾನ ಉದ್ಯಮ ಭಾರತದಲ್ಲಿ ತಲೆಯೆತ್ತುತ್ತಿದೆ. ಹಾಗಾಗಿ, ಎಲ್ಲ ಫಿನ್‌ಟೆಕ್‌ ಹಾಗು ಸ್ಟಾರ್ಟ್ ಅಪ್‌ ಸಂಸ್ಥೆಗಳಿಗೆ ಭಾರತ ಅತ್ಯುತ್ತಮ ತಾಣವಾಗಿದೆ ಎಂದು ಮೋದಿ ತಿಳಿಸಿದ್ದಾರೆ.


 • ವಿಶ್ವದಲ್ಲೇ ಅತಿ ದೊಡ್ಡ ಜಾಲ

  ಭಾರತದಲ್ಲಿ 128 ಬ್ಯಾಂಕ್‌ಗಳು ಯುಪಿಐ ಜತೆ ಲಿಂಕ್‌ ಆಗಿವೆ. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಜಾಲಗಳಲ್ಲಿ ಒಂದಾಗಿದೆ. ಡಿಜಿಟಲ್‌ ಪೇಮೆಂಟ್‌ಗೆ ಭಾರತ ಒತ್ತು ನೀಡಿರುವುದು, ಅದರಲ್ಲೂ ರೂಪೇ ಕಾರ್ಡ್‌ಗಳು ಈಗ ಬಹುತೇಕ ಎಲ್ಲ ಭಾರತೀಯನ ಕೈಯಲ್ಲಿ ಇದೆ. ಗ್ರಾಮೀಣ ಭಾರತದಲ್ಲಿಯೂ ಈಗ ತಂತ್ರಜ್ಞಾನ, ಡಿಜಿಟಲ್‌ ವಹಿವಾಟು ಜೋರಾಗಿ ಸಾಗುತ್ತಿದೆ ಎಂದು ಹೇಳಿದರು.


 • ಡಿಜಿಟಲೀಕರಣದಿಂದ ಸಾಧ್ಯವಾಗಿದೆ.!

  ದೇಶದಲ್ಲಿ ಡಿಜಿಟಲೀಕರಣದಿಂದಾಗಿ ಹಲವಾರು ಅತ್ಯುತ್ತಮ ಯೋಜನೆಗಳನ್ನು ಆರಂಭಿಸಲು ಸಾಧ್ಯವಾಗಿದೆ. ಡಿಜಿಟಲೀಕರಣದಿಂದ ವಿಶ್ವದ ಅತ್ಯಂತ ಬೃಹತ್ ಆರೋಗ್ಯ ವಿಮೆ ಯೋಜನೆ ಆಯುಷ್ಮಾನ್‌ ಭಾರತ್‌ ಅನ್ನು ಆರಂಭಿಸಲು ಸಾಧ್ಯವಾಯಿತು. ಡಿಜಿಟಲ್‌ ತಂತ್ರಜ್ಞಾನದ ಯಶಸ್ಸಿಗೆ ಇದೊಂದು ಉತ್ತಮ ಉದಾಹರಣೆ ಎಂದು ಆಯುಷ್ಮಾನ್‌ ಭಾರತ್‌ ಬಗ್ಗೆ ಹೇಳಿದ್ದಾರೆ.


 • ಜಗತ್ತಿನಲ್ಲೇ ಅತಿ ದೊಡ್ಡ ಮೂಲ ಸೌಕರ್ಯ

  2014ಕ್ಕೂ ಮುನ್ನ ದೇಶದ 50%ಗಿಂತಲೂ ಕಡಿಮೆ ಜನರು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದರು. ಆದರೆ ಈಗ ಶತಕೋಟಿಗಿಂತ ಹೆಚ್ಚು ಬಯೋಮೆಟ್ರಿಕ್ ಗುರುತುಗಳು, ಬ್ಯಾಂಕ್‌ ಖಾತೆಗಳಿವೆ. ಇದು ಜಗತ್ತಿನಲ್ಲೇ ಇದು ಅತಿ ದೊಡ್ಡ ಮೂಲ ಸೌಕರ್ಯವಾಗಿದೆ. ಸಾಧನೆಗಳ ನಡುವೆ ಸೇತುವೆ ನಿರ್ಮಾಣ ಮಾಡಲು ಇದು ಸುಸಂದರ್ಭ ಎಂದು ಪ್ರಧಾನಿ ಅವರು ಅಭಿಪ್ರಾಯಪಟ್ಟಿದ್ದಾರೆ.


 • ದೇಶದಲ್ಲಿ 33 ಕೋಟಿ ಹೊಸ ಅವಕಾಶಗಳು!

  ಈಗ ಶತಕೋಟಿಗಿಂತ ಹೆಚ್ಚು ಬಯೋಮೆಟ್ರಿಕ್ ಗುರುತುಗಳು, ಬ್ಯಾಂಕ್‌ ಖಾತೆಗಳು ಹಾಗು ಸೆಲ್‌ಫೋನ್‌ಗಳು ವಿಪುಲ ಅವಕಾಶಗಳನ್ನು ತೆರೆದಿಟ್ಟಿದ್ದು, ದೇಶದಲ್ಲಿ 33 ಕೋಟಿ ಹೊಸ ಅವಕಾಶಗಳಿವೆ. ಬಡವರು ಹಾಗು ಶ್ರೀಮಂತರು, ನಗರಗಳು ಹಾಗು ಗ್ರಾಮೀಣ ಪ್ರದೇಶಗಳ ನಡುವಿನ ಅಂತರವನ್ನು ತಗ್ಗಿಸಲು ಇದರಿಂದ ಸಾಧ್ಯವಿದೆ ಎಂದು ಪ್ರಧಾನಿ ಅವರು ಹೇಳಿದ್ದಾರೆ.
ದೇಶದಲ್ಲಿ ಡಿಜಿಟಲ್‌ ವ್ಯವಹಾರಗಳಿಗೆ ಇರುವ ವೃದ್ಧಿಯ ಅವಕಾಶದ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಚುರಪಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಡಿಜಿಟಲ್‌ ಯುಗ ಆರಂಭವಾಗಿದೆ. ಭಾರತ ಕೂಡ ಇದಕ್ಕೆ ಮುಕ್ತವಾಗಿ ತೆರೆದುಕೊಂಡಿದೆ ಕಳೆದ ಕೆಲವು ವರ್ಷಗಳಿಂದ ಡಿಜಿಟಲೀಕರಣದಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ಮೋದಿ ಅವರು ತಿಳಿಸಿದ್ದಾರೆ.

ಸಿಂಗಪುರದಲ್ಲಿ ನಡೆಯುತ್ತಿರುವ ಅರ್ಥ ಹಾಗು ತಂತ್ರಜ್ಞಾನ ಸಂಬಂಧಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ ಅವರು, ಭಾರತದಲ್ಲಿ ವಿತ್ತೀಯ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರೀ ಬೆಳವಣಿಗೆ ಕಂಡುಬರುತ್ತಿದೆ. ಜಾಗತಿಕ ಆರ್ಥಿಕತೆಯ ಚಿತ್ರಣ ಈಗ ಬದಲಾಗುತ್ತಿದೆ. ತಂತ್ರಜ್ಞಾನವೇ ಈಗ ಮುಖ್ಯವಾಹಿನಿಯಲ್ಲಿದೆ. ಇದಕ್ಕೆ ನಾವೆಲ್ಲರೂ ಒಗ್ಗಿಕೊಳ್ಳಬೇಕು ಎಂದು ಹೇಳಿದರು.

ಭವಿಷ್ಯದ ವಿತ್ತೀಯ ತಂತ್ರಜ್ಞಾನ ಉದ್ಯಮವು ಭಾರತದಲ್ಲಿ ತಲೆಯೆತ್ತುತ್ತಿದೆ. ಭಾರತ ಜಗತ್ತಿನ ಮುಂಚೂಣಿ ವಿತ್ತೀಯ ತಂತ್ರಜ್ಞಾನ ಹಾಗು ಸ್ಟಾರ್ಟ್ಅಪ್ ದೇಶವಾಗಿದೆ ಎಂದು ಹೇಳುವ ಮೂಲಕ ದೇಶದಲ್ಲಿ ತಂತ್ರಜ್ಞಾನದ ಅಳವಡಿಕೆ ಮತ್ತು ಬೆಳವಣಿಗೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ಬಯೋಮೆಟ್ರಿಕ್ ಮತ್ತು ಸೆಲ್‌ಫೋನ್ ಈಗ ವಿಪುಲ ಅವಕಾಶ ತೆರೆದಿರುವ ಬಗ್ಗೆ ಸಹ ತಿಳಿಸಿದರು.

   
 
ಹೆಲ್ತ್