Back
Home » ಇತ್ತೀಚಿನ
72 ಲಕ್ಷ ರೂ.ಮೊತ್ತದ ಇನ್ಫೊಸಿಸ್ ಸೈನ್ಸ್ ಪ್ರಶಸ್ತಿ ಪಟ್ಟಿ ಪ್ರಕಟ!!
Gizbot | 15th Nov, 2018 09:01 AM
 • ನವಕಾಂತ್ ಭಟ್‌

  ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ನವಕಾಂತ್ ಭಟ್‌ ಅವರನ್ನು ಮೆಟಲ್‌ ಆಕ್ಸೈಡ್ ಸೆನ್ಸಾರ್' ಸಂಶೋಧನೆಗಾಗಿ 'ಇಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್‌' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


 • ಎಸ್‌.ಕೆ.ಸತೀಶ್

  ಭಾರತೀಯ ವಿಜ್ಞಾನ ಸಂಸ್ಥೆಯ ವಾಯುಮಂಡಲ ಮತ್ತು ಸಾಗರ ವಿಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಎಸ್‌.ಕೆ.ಸತೀಶ್ ಅವರನ್ನು 'ಹವಾಮಾನ ವೈಪರೀತ' ಕುರಿತು ಸಂಶೋಧನೆಗಾಗಿ 'ಭೌತ ವಿಜ್ಞಾನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


 • ಕವಿತಾ ಸಿಂಗ್‌

  ದೆಹಲಿಯ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಆರ್ಟ್ಸ್ ಅಂಡ್‌ ಏಸ್ತೆಟಿಕ್ಸ್ ವಿಭಾಗದ ಡೀನ್ ಕವಿತಾ ಸಿಂಗ್‌ ಅವರನ್ನು 'ಮೊಗಲರ ಸಾಮ್ರಾಜ್ಯ, ರಜಪೂತರು ಮತ್ತು ಡೆಕ್ಕನ್‌ ಕಲೆ ಅಧ್ಯಯನ'ಕ್ಕೆ 'ಮಾನವಿಕ ವಿಜ್ಞಾನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


 • ರೂಪ್ ಮಲ್ಲಿಕ್

  ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸರ್ಚರ್ ಅಸೋಸಿಯೇಟ್ ಪ್ರೊಫೆಸರ್‌ ರೂಪ್‌ ಮಲ್ಲಿಕ್‌ ಅವರನ್ನು'ಮಾಲಿಕ್ಯೂಲರ್‌ ಮೋಟರ್‌ ಪ್ರೊಟೀನ್ಸ್‌' ಕ್ಷೇತ್ರದಲ್ಲಿ ಸಂಶೋಧನೆಗಾಗಿ 'ಜೀವ ವಿಜ್ಞಾನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


 • ನಳಿನಿ ಅನಂತರಾಮನ್

  ಫ್ರಾನ್ಸ್‌ನ ಯೂನಿವರ್ಸಿಟಿ ಆಫ್‌ ಸ್ಟ್ರಾಬರ್ಗ್ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ ಸ್ಟಡಿಸ್ ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷೆ ನಳಿನಿ ಅನಂತರಾಮನ್ ಅವರನ್ನು 'ಕ್ವಾಂಟಮ್‌ ಕೆಯಾಸ್' ಸಂಶೋಧನೆಗಾಗಿ 'ಗಣಿತ ವಿಜ್ಞಾನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


 • ಸೆಂಥಿಲ್ ಮುಲ್ಲೈನಾಥನ್

  ಶಿಕಾಗೊ ವಿಶ್ವ ವಿದ್ಯಾಲಯದಲ್ಲಿ ಕಂಪ್ಯೂಟೇಷನ್ ಅಂಡ್‌ ಬಿಹೇವಿಯರಲ್ ಸೈನ್ಸ್‌ ಪ್ರಾಧ್ಯಾಪಕ ಸೆಂಥಿಲ್‌ ಮುಲ್ಲೈನಾಥನ್‌ ಅವರನ್ನುಬಿಹೇವಿಯರಲ್ ಎಕಾನಾಮಿಕ್ಸ್' ಸಂಶೋಧನೆಗೆ 'ಸಾಮಾಜಿಕ ವಿಜ್ಞಾನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿಜ್ಞಾನ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಇನ್ಫೊಸಿಸ್ ಸೈನ್ಸ್ ಫೌಂಡೇಶನ್‌ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಇನ್ಫೊಸಿಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇನ್ಪೋಸಿಸ್ ಸೈನ್ಸ್ ಫೌಂಡೇಶನ್‌ ಅಧ್ಯಕ್ಷ ಕೆ.ದಿನೇಶ್‌ ಅವರು ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ್ದಾರೆ.

ವಿಶೇಷವೆಂದರೆ, ಪ್ರಸಕ್ತ ವರ್ಷದಿಂದ ಇನ್ಫೊಸಿಸ್ ಸೈನ್ಸ್ ಫೌಂಡೇಶನ್‌ ಪ್ರಶಸ್ತಿ ಮೊತ್ತವನ್ನು 65 ಲಕ್ಷ ರೂ.ದಿಂದ 72 ಲಕ್ಷ ರೂ.ಗೆ (1 ಲಕ್ಷ ಅಮೆರಿಕನ್‌ ಡಾಲರ್‌) ಹೆಚ್ಚಿಸಲಾಗಿದೆ. ಈ ನಗದು ಬಹುಮಾನದ ಹಣ ತೆರಿಗೆ ಮುಕ್ತವಾಗಿರಲಿದ್ದು, 72 ಲಕ್ಷ ರೂ.ನಗದು ಜತೆಗೆ ಪುರಸ್ಕೃತರಿಗೆ ಚಿನ್ನದ ಪದಕ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಇನ್ಫೊಸಿಸ್ ತಿಳಿಸಿದೆ.

ಒಟ್ಟು ಆರು ವಿಜ್ಞಾನ ವಿಭಾಗದಲ್ಲಿ ಗಣನೀಯ ಸಾಧನೆ ಮಾಡಿರುವ ಆರು ಮಂದಿ ಸಾಧಕರಿಗೆ 2019ರ ಜನವರಿ 5ರಂದು ನಗರದ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಹಾಗಾದರೆ, ಇನ್ಫೊಸಿಸ್ ಬಿಡುಗಡೆ ಮಾಡಿರುವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಯಾವ ಯಾವ ಸಾಧಕರಿದ್ದಾರೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್