Back
Home » ಇತ್ತೀಚಿನ
ಸ್ಮಾರ್ಟ್ ಫೋನ್ ಖರೀದಿಸಬೇಕು ಎಂದುಕೊಂಡಿದ್ದೀರಾ? ಒಮ್ಮೆ ಈ ಕಹಿ ಸುದ್ದಿಯನ್ನು ಓದಿ!
Gizbot | 15th Nov, 2018 11:51 AM

ಗ್ರಾಹಕರು ಇನ್ನು ಮುಂದೆ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳಾದ ಶಿಯೋಮಿ ಮತ್ತು ರಿಯಲ್ ಮಿ ಸಂಸ್ಥೆಗಳ ಫೋನ್ ಗಳನ್ನು ಖರೀದಿಸಬೇಕಾದರೆ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ . ಹೌದು ಡಾಲರ್ ಎದುರು ರುಪಾಯಿ ಬೆಲೆ ಕುಸಿಯುತ್ತಿರುವ ಕಾರಣದಿಂದಾಗಿ ತಯಾರಿಕಾ ವೆಚ್ಚ ಅಧಿಕಗೊಳ್ಳುತ್ತಿದ್ದು ಅದಕ್ಕಾಗಿ ಈ ಕಂಪೆನಿಗಳು ತಮ್ಮ ಫೋನ್ ಗಳ ಬೆಲೆಯಲ್ಲಿ ಹೆಚ್ಚಳ ಮಾಡುತ್ತವೆ ಎಂದು ತಿಳಿದುಬಂಡಿದೆ.

ಅದರಲ್ಲೂ ಭಾರತದಲ್ಲಿ ಪ್ರಮುಖ ಬ್ರ್ಯಾಂಡ್ ಗಳು ಎನ್ನಿಸಿಕೊಂಡಿರುವ ಸ್ಯಾಮ್ ಸಂಗ್, ಓಪ್ಪೋ, ವಿವೋ,ಶಿಯೋಮಿ, ರಿಯಲ್ ಮಿ ಸೇರಿದಂತೆ ಹಲವು ಕಂಪೆನಿಗಳು ತಮ್ಮ ಈಗಿನ ಸ್ಮಾರ್ಟ್ ಫೋನ್ ಗಳ ಬೆಲೆಯನ್ನೂ ಸೇರಿದಂತೆ ಹೊಸದಾಗಿ ಬಿಡುಗಡೆಗೊಳಿಸುವ ಫೋನ್ ಗಳ ಬೆಲೆಯಲ್ಲೂ ಹೆಚ್ಚಳ ಮಾಡುವ ಸಾಧ್ಯತೆಯನ್ನು ತಜ್ಞರು ಹೇಳುತ್ತಿದ್ದಾರೆ.

ಶಿಯೋಮಿ ಮತ್ತು ರಿಯಲ್ ಮಿ ಈಗಾಗಲೇ ಬೆಲೆಯನ್ನು ಹೆಚ್ಚಿಸಿದೆ ಮತ್ತು ಇತರೆ ಕಂಪೆನಿಗಳೂ ಕೂಡ ಇದನ್ನು ಮಾಡಲಿವೆ ಎಂಬ ಅಭಿಪ್ರಾಯವಿದೆ. 60 ರಿಂದ 70 ಶೇಕಡಾದಷ್ಟು ಬೇಡಿಕೆಯನ್ನು ದೀಪಾವಳಿ ಸಂದರ್ಬದಲ್ಲಿ ಪೂರೈಸಲಾಗಿದೆ. ಹಲವು ಗ್ರಾಹಕರು ಈಗಾಗಲೇ ಖರೀದಿಸಿ ಆಗಿದೆ ಎಂದು ಹೇಳುತ್ತಿದ್ದಾರೆ ಕೌಂಟರ್ ಪಾಯಿಂಟ್ ಸಂಸ್ಥೆಯ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ತರುಣ್ ಪಾಟಕ್.

ಸ್ಯಾಮ್ ಸಂಗ್, ಓಪ್ಪೋ , ವಿವೋ ಸಂಸ್ಥೆಗಳೂ ಕೂಡ ತಮ್ಮ ಫೋನಿನ ಬೆಲೆಯನ್ನು ಹೆಚ್ಚಿಸಲಿವೆಯೇ ಎಂಬ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದ್ದು ಇದುವರೆಗೂ ಈ ಸಂಸ್ಥೆಗಳು ಯಾವುದೇ ಉತ್ತರವನ್ನು ನೀಡಿಲ್ಲ.ಮಾರಾಟದ ವಿಚಾರದಲ್ಲಿ ಅಕ್ಟೋಬರ್ ತಿಂಗಳಲ್ಲಿ ದಾಖಲೆಯಾಗಿದೆ. ಒಟ್ಟಾರೆ ಶೇರು ಮಾರುಕಟ್ಟೆಯ ಶೇಕಡಾ 60 ರಷ್ಟು ಪಾಲನ್ನು ಪಡೆಯಲಾಗಿದೆ.

ರೂಪಾಯಿ ಬೆಲೆಯಲ್ಲಿನ ಏರುಪೇರು ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಿದೆ. ಕೆಲವು ಕಂಪೆನಿಗಳು ಹೊಸ ಪ್ರೊಡಕ್ಟ್ ಗಳನ್ನು ತೋರಿಸಿ ವಿಭಿನ್ನ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿ ಮಾರ್ಕೆಟ್ ಟ್ರಿಕ್ಸ್ ಗಳನ್ನು ಬಳಸುವ ಸಾಧ್ಯತೆಯೂ ಇದೆ. ಗ್ರಾಹಕರಿಗೆ ಗೊತ್ತಾಗದಂತೆ ಬೆಲೆ ಏರಿಕೆ ಮಾಡಲೂ ಬಹುದು ಎನ್ನಲಾಗುತ್ತಿದೆ.

ಶಿಯೋಮಿ ಈಗಾಗಲೇ ರೆಡ್ಮಿ 6 ಮತ್ತು ರೆಡ್ಮಿ 6ಎ ನ್ನು ಪರಿಚಯಿಸಿದ್ದು 600 ರುಪಾಯಿ ಬೆಲೆಯನ್ನು ಹೆಚ್ಚಿಸಿದೆ.ಕೆಲವರು ಹೇಳುವ ಪ್ರಕಾರ ಬೆಲೆ ಏರಿಕೆಯು ಶೇ.5 ಕ್ಕಿಂತ ಹೆಚ್ಚಿರಲಾರದು. ಆದರೆ ಇನ್ನೂ ಕೆಲವರು ಹೇಳುವ ಪ್ರಕಾರ ಬೆಲೆ ಏರಿಕೆಯು ಸುಮಾರು ಶೇ.8 ರಷ್ಟು ಇರುವ ಸಾಧ್ಯತೆಯೂ ಇದೆ.

ಶಿಯೋಮಿ ಹೇಳುವಂತೆ ರೂಪಾಯಿ ಬೆಲೆಯು ಈ ವರ್ಷದ ಆರಂಭಕ್ಕಿಂದ ಶೇ.15 ರಷ್ಟು ಇಳಿಮುಖವಾಗಿದೆ. ಹಾಗಾಗಿ ಬೆಲೆ ಏರಿಕೆ ಅನಿವಾರ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಒಟ್ಟಾರೆ ಡಾಲರ್ ಮತ್ತು ರುಪಾಯಿಯಲ್ಲಿನ ಹಾವುಏಣಿ ಆಟವು ಸ್ಮಾರ್ಟ್ ಫೋನ್ ಬೆಲೆಯಲ್ಲೂ ಕೂಡ ಏರುಪೇರಾಗುವಂತೆ ಮಾಡುತ್ತದೆ. ಇದನ್ನು ಗ್ರಾಹಕರು ಹೇಗೆ ಸ್ವೀಕರಿಸುತ್ತಾರೋ ತಿಳಿಯದು! ಏನೇ ಅಂದರೂ ಸ್ಮಾರ್ಟ್ ಫೋನ್ ಬೆಲೆ ಹೆಚ್ಚಾಗುತ್ತೆ ಅನ್ನೋದು ಕಹಿ ಸುದ್ದಿಯಲ್ಲದೇ ಇನ್ನೇನು?

   
 
ಹೆಲ್ತ್