Back
Home » ಆರೋಗ್ಯ
ಹಾಲು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಲೇಬಾರದು! ಯಾಕೆ ಗೊತ್ತೇ?
Boldsky | 15th Nov, 2018 12:48 PM
 • ಹಾಲು ಮತ್ತು ಬಾಳೆಹಣ್ಣು ವಿಭಿನ್ನ ಘಟಕಗಳು

  ಹಾಲಿನಲ್ಲಿ ಪ್ರೋಟೀನ್, ವಿಟಮಿನ್ ಗಳು ಮತ್ತು ಖನಿಜಾಂಶಗಳಾಗಿರುವಂತಹ ರಿಬೊಫ್ಲಾವಿನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ12 ಇದೆ. ಪ್ರತೀ ನೂರು ಗ್ರಾಂ ಹಾಲಿನಲ್ಲಿ 42 ಕ್ಯಾಲರಿ ಇದೆ. ಅದಾಗ್ಯೂ, ಹಿಂದಿನವರು ಹಾಲು ಒಂದು ಸಂಪೂರ್ಣ ಊಟವೆಂದು ಹೇಳುತ್ತಲಿದ್ದರು. ಆದರೆ ಇದರಲ್ಲಿ ಪ್ರಮುಖವಾಗಿರುವಂತಹ ವಿಟಮಿನ್ ಸಿ, ಆಹಾರದ ನಾರಿನಾಂಶ ಮತ್ತು ತುಂಬಾ ಕಡಿಮೆ ಕಾರ್ಬ್ರೋಹೈಡ್ರೇಟ್ಸ್ ಇದೆ. ನಮ್ಮ ದೇಶದಲ್ಲಿ ಹೆಚ್ಚು ಸಸ್ಯಹಾರಿಗಳು ಇರುವ ಕಾರಣದಿಂದಾಗಿ ದೈನಂದಿನ ಲೆಕ್ಕದಲ್ಲಿ ಬೇಕಾಗಿರುವಂತಹ ಪ್ರೋಟಿನ್ ದೇಹಕ್ಕೆ ಸಿಗದು ಮತ್ತು ಹಾಲು ಈ ನಿಟ್ಟಿನಲ್ಲಿ ತುಂಬಾ ನೆರವಾಗುವುದು.


 • ಬಾಳೆಹಣ್ಣು

  ಇನ್ನೊಂದೆಡೆಯಲ್ಲಿ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6, ಮ್ಯಾಂಗನೀಸ್, ವಿಟಮಿನ್ ಸಿ, ಆಹಾರದ ನಾರಿನಾಂಶ, ಪೊಟಾಶಿಯಂ ಮತ್ತು ಬಯೊಟಿನ್ ಇದೆ. ಪ್ರತೀ ನೂರು ಗ್ರಾಂ ಬಾಳೆಹಣ್ಣಿನಲ್ಲಿ ಸುಮಾರು 89 ಕ್ಯಾಲರಿ ಇದೆ. ಹೊಟ್ಟೆಯು ತುಂಬಿದಂತೆ ಆಗುವುದರಿಂದ ದೀರ್ಘಕಾಲದವರೆಗೆ ಇದು ಶಕ್ತಿ ನೀಡುವುದು. ಕಾರ್ಬ್ರೋಹೈಡ್ರೇಟ್ಸ್ ಗಳಿಂದ ಸಮೃದ್ಧವಾಗಿರುವಂತಹ ಬಾಳೆಹಣ್ಣು ವ್ಯಾಯಾಮಕ್ಕೆ ಮೊದಲು ಮತ್ತು ವ್ಯಾಯಾಮದ ಬಳಿಕ ಒಳ್ಳೆಯ ಆಹಾರವೆಂದು ಪರಿಗಣಿಸಲಾಗಿದೆ.


 • ಇದೆರಡೂ ಜತೆಯಾದರೆ ಆಗ ಏನಾಗುವುದು?

  ಹಾಲು ಮತ್ತು ಬಾಳೆಹಣ್ಣಿನ ಮಿಶ್ರಣವು ಸರಿಯಾಗಿರುವುದು ಎಂದು ಪರಿಗಣಿಸುವರು. ಯಾಕೆಂದರೆ ಒಂದರಲ್ಲಿ ಇರದಂತಹ ಪೋಷಕಾಂಶಗಳು ಇನ್ನೊಂದರಲ್ಲಿ ಇದೆ. ಹಾಲಿನಲ್ಲಿ ಆಹಾರದ ನಾರಿನಾಂಶವಿಲ್ಲ, ಬಾಳೆಹಣ್ಣಿನಲ್ಲಿ ಇದೆ. ಆದರೆ ದೇಹದೊಳಗೆ ಪ್ರವೇಶ ಮಾಡಿದಾಗ ಇವೆರಡು ಇದೇ ರೀತಿ ಕೆಲಸ ಮಾಡುವುದಿಲ್ಲ.

  Most Read: ರಾತ್ರಿ ಮಲಗುವ ಮುನ್ನ ಹಾಲು ಕುಡಿದು ಮಲಗಿದರೆ, ಕಣ್ತುಂಬ ನಿದ್ದೆ ಗ್ಯಾರಂಟಿ!


 • ಜೀರ್ಣಕ್ರಿಯೆಗೆ ತೊಂದರೆ

  ಅಧ್ಯಯನಗಳ ಪ್ರಕಾರ ಹಾಲು ಹಾಗೂ ಬಾಳೆಹಣ್ಣು ನಮ್ಮ ಜೀರ್ಣ ಕ್ರಿಯೆ ವ್ಯವಸ್ಥೆಗೆ ತೊಂದರೆ ನೀಡುವುದು ಮಾತ್ರವಲ್ಲದೆ, ಅದು ನಮ್ಮ ಸೈನಸ್ ಗೆ ಕೂಡ ಪರಿಣಾಮ ಬೀರುವುದು. ಇದರಿಂದ ಸೈನಸ್ ತೊಂದರೆ, ಶೀತ ಮತ್ತು ಕೆಮ್ಮು, ದೇಹದಲ್ಲಿ ಇತರ ಕೆಲವೊಂದು ಅಲರ್ಜಿಗಳು ಕಾಣಿಸಿಕೊಳ್ಳಬಹುದು. ಇದರಿಂದಾಗಿ ಇದೆರಡನ್ನು ಜತೆಯಾಗಿ ಸೇವನೆ ಮಾಡಿದರೆ ಆಗ ಅದು ನಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಅದರಿಂದ ವಾಂತಿ ಹಾಗೂ ಭೇದಿ ಕಾಣಿಸಿಕೊಳ್ಳಬಹುದು.


 • ಆಯುರ್ವೇದ ಏನು ಹೇಳುವುದು?

  ಆಯುರ್ವೇದವು ಕೂಡ ಈ ಮಿಶ್ರಣದ ಬಗ್ಗೆ ಹೇಳಿದೆ. ಅದೇನೆಂದರೆ ಆಹಾರ ಮತ್ತು ದ್ರವವನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ತಿನ್ನುವುದು ಸರಿಯಾದ ಕ್ರಮವಲ್ಲವೆಂದು ಹೇಳಲಾಗಿದೆ. ಆಯುರ್ವೇದ ಪ್ರಕಾರ ಬಾಳೆಹಣ್ಣು ಮತ್ತು ಹಾಲಿನ ಮಿಶ್ರಣವು ದೇಹದಲ್ಲಿ ದೊಡ್ಡ ಮಟ್ಟದಲ್ಲಿ ವಿಷಕಾರಿಯಾಗಬಹುದು. ಇದರಿಂದ ದೇಹದಲ್ಲಿ ನಡೆಯಬಹುದಾದ ವಿವಿಧ ರೀತಿಯ ಕಾರ್ಯಗಳಿಗೆ ತೊಂದರೆಯಾಗಬಹುದು. ಇದರೊಂದಿಗೆ ಆಯುರ್ವೇದವು ಹೇಳುವಂತೆ ಬಾಳೆಹಣ್ಣು ಮತ್ತು ಹಾಲನ್ನು ಜತೆಯಾಗಿ ಸೇವನೆ ಮಾಡಿದರೆ ಅದರಿಂದ ದೇಹವು ಭಾರವಾಗಬಹುದು ಮತ್ತು ಮೆದುಳಿನ ಚಟುವಟಿಕೆಯು ನಿಧಾನವಾಗಬಹುದು.

  Most Read: ಸೂರ್ಯ ದೇವರ ಪ್ರಾರ್ಥನೆಗೆ ನೀವು ಪಠಿಸಬೇಕಾದ ಐದು ಶಕ್ತಿಶಾಲಿ ಮಂತ್ರಗಳು


 • ಪರಿಹಾರ

  ಬಾಳೆಹಣ್ಣು ಮತ್ತು ಹಾಲನ್ನು ಸೇವಿಸುವ ಒಳ್ಳೆಯ ವಿಧಾನವೆಂದರೆ ಅದನ್ನು ಪ್ರತ್ಯೇಕವಾಗಿ ಸೇವನೆ ಮಾಡುವುದು. ವ್ಯಾಯಾಮದ ಮೊದಲು ಅಥವಾ ವ್ಯಾಯಾಮದ ಬಳಿಕ ನೀವು ಇದನ್ನು ಸೇವನೆ ಮಾಡಬೇಕೆಂದಿದ್ದರೆ ಆಗ ನೀವು ಹಾಲು ಸೇವಿಸಿದ 20 ನಿಮಿಷ ಬಳಿಕ ಬಾಳೆಹಣ್ಣು ಸೇವನೆ ಮಾಡಿ. ನಿಮಗೆ ಹಾಲಿನ ಉತ್ಪನ್ನದ ಜತೆಗೆ ಬಾಳೆಹಣ್ಣು ಸೇವಿಸಬೇಕೆಂದಿದ್ದರೆ ಆಗ ಮೊಸರಿಗೆ ಬಾಳೆಹಣ್ಣು ಬೆರೆಸಿಕೊಂಡು ಸೇವಿಸಿ.
ಬಾಲ್ಯದಲ್ಲಿ ಹಾಲು ಹಾಗೂ ಬಾಳೆಹಣ್ಣು ಸೇವಿಸುವುದು ತುಂಬಾ ಇಷ್ಟವಾಗುತ್ತಲಿತ್ತು. ಎರಡು ಕೂಡ ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದಾಗಿಯೇ ನಮಗೆ ಬಾಲ್ಯದಲ್ಲಿ ಇದನ್ನು ಸೇವಿಸಲು ನೀಡಲಾಗುತ್ತಿತ್ತು. ಬಾಳೆಹಣ್ಣಿನ ಮಿಲ್ಕ್ ಶೇಕ್ ಗಳು ಮಕ್ಕಳಿಗೆ ತುಂಬಾ ಇಷ್ಟವಾಗಿರುವುದು. ಆದರೆ ಇಂದಿನ ಕೆಲವೊಂದು ಅಧ್ಯಯನಗಳ ಪ್ರಕಾರ ಹಾಲು ಹಾಗೂ ಬಾಳೆಹಣ್ಣನ್ನು ಜತೆಯಾಗಿ ಸೇವಿಸುವುದು ಒಳ್ಳೆಯದಲ್ಲವಂತೆ!

ಬಾಳೆಹಣ್ಣು ಮತ್ತು ಹಾಲು ಸರಿಯಾದ ಮಿಶ್ರಣವಲ್ಲ ಎಂದು ಅಧ್ಯಯನಗಳು ಹೇಳಿವೆ. ಎರಡಲ್ಲೂ ಹೆಚ್ಚಿನ ಪೋಷಕಾಂಶಗಳು ಇರುವುದಾದರೂ ಇದು ಜತೆಯಾಗಿ ಸೇವನೆ ಮಾಡಲು ಯೋಗ್ಯವಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಲೇಖನದಲ್ಲಿ ಮುಂದೆ ಓದುತ್ತಾ ಸಾಗಿ..

   
 
ಹೆಲ್ತ್