ಸ್ಯಾಮ್ಸಂಗ್ ಕಂಪೆನಿಯ ಸ್ಮಾರ್ಟ್ಫೋನ್ಗಳು ಸ್ಪೋಟಗೊಳ್ಳುವ ಸುದ್ದಿ ಮರೆಮಾಡುವಂತೆ ಆಪಲ್ ಕಂಪೆನಿಯ ಬಹು ಬೇಡಿಕೆ ಐಫೋನ್ ಎಕ್ಸ್ ಸ್ಮಾರ್ಟ್ಫೋನ್ ಸ್ಪೋಟಗೊಂಡಿರುವ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಐಫೋನ್ ಎಕ್ಸ್ಗೆ ಸಾಫ್ಟ್ವೇರ್ ಅಪ್ಡೇಟ್ ಮಾಡುವ ವೇಳೆ ಏಕಾಏಕಿ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಿದೆ ಎಂದು ಮೊಬೈಲ್ ಮಾಲಿಕ ಹೇಳಿದ್ದಾನೆ.
'ಸಿರಿಯಾ ಮೂಲದ ರಾಕಿ ಮಹಮ್ಮದ್ ಅಲಿ ಎಂಬವರು ಸ್ಫೋಟಗೊಂಡ ಆಪಲ್ ಐಫೋನ್ ಎಕ್ಸ್ ಚಿತ್ರ ಸಹಿತ ಟ್ವೀಟ್ ಮಾಡಿದ್ದು, ಓಎಸ್ ಅಪ್ಡೇಟ್ ಮಾಡುವಾಗ ಆಪಲ್ ಐಫೋನ್ ಎಕ್ಸ್ ಸ್ಫೋಟಗೊಂಡಿದೆ. ಇಲ್ಲಿ ಏನಾಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ. ಅಲಿ ಮಾಡಿರುವ ಟ್ವಿಟ್ ವೈರಲ್ ಆಗಿದ್ದು, ಈಗ ಆಪಲ್ ಫೋನ್ಗಳು ಸಹ ಸೇಫ್ ಅಲ್ಲವೇ ಎಂಬ ಅನುಮಾನ ಕಾಡುತ್ತಿದೆ.
ಮೊಬೈಲ್ ಮಾಲಿಕ ಮಹಮ್ಮದ್ ಅಲಿ ಹೇಳಿರುವಂತೆ, ಕಳೆದ ಜನವರಿಯಲ್ಲಿ ನಾನು ಐಫೋನ್ ಎಕ್ಸ್ ಖರೀದಿಸಿದ್ದು, ಈ ಫೋನ್ ಬಳಕೆ ಚೆನ್ನಾಗಿಯೇ ಇತ್ತು. ಆದರೆ, ಇತ್ತೀಚಿನ ಐಒಎಸ್ 12.1 ಅಪ್ಡೇಟ್ ಮಾಡುವ ವೇಳೆ ತನ್ನ ಫೋನ್ ಸ್ಪೋಟಗೊಂಡಿದೆ ಎಂದು ಹೇಳಿದ್ದಾನೆ. ಫೋನ್ ಅಪ್ಡೇಟ್ ಆದ ಕೆಲವೇ ಸಮಯದಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದ್ದಾಗಿ ತಿಳಿಸಿದ್ದಾನೆ.
ಮೊಬೈಲ್ ಅಪ್ಡೇಟ್ ಮಾಡುವ ಸಲುವಾಗಿ ಮೊಬೈಲ್ ಚಾರ್ಜ್ ಹಾಕಿದ್ದೆ. ಸ್ಮಾರ್ಟ್ಫೋನ್ ಅಪ್ಡೇಟ್ ಮಾಡುವ ವೇಳೆ ಆಪಲ್ ಲೈಟ್ನಿಂಗ್ ಕೇಬಲ್ ಮತ್ತು ಮನೆಯ ಗೋಡೆಯ ಅಡಾಪ್ಟರ್ ಅನ್ನು ಬಳಸಿಕೊಂಡಿದ್ದೆ. ಫೋನ್ ಅಪ್ಡೇಟ್ ಮುಗಿದಿದೆ ಎಂದು ತಿಳಿದ ನಂತರ ಫೋನ್ ಆನ್ ಆದ ತಕ್ಷಣ ಹೊಗೆ ಮತ್ತು ಬೆಂಕಿ ಹತ್ತಲು ಪ್ರಾರಂಭಿಸಿತು ಎಂದು ಆತ ಹೇಳಿದ್ದಾನೆ.
ಇನ್ನು ಮಹಮ್ಮದ್ ಅಲಿ ಅವರ ಆರೋಪದ ಟ್ವಿಟ್ಗೆ ಪ್ರತಿಕ್ರಿಯಿಸಿರುವ ಆಪಲ್, ಈ ರೀತಿಯಾಗಲು ಸಾಧ್ಯವಿಲ್ಲ. ಅದು ಅನಿರೀಕ್ಷಿತ. ನಿಮ್ಮ ವಿವರಗಳನ್ನು ಹಂಚಿಕೊಳ್ಳಿ, ಈ ಬಗ್ಗೆ ನಾವು ಗಮನ ಹರಿಸುತ್ತೇವೆ ಎಂದಷ್ಟೇ ಹೇಳಿದೆ. ಕಳೆದ ಆಗಸ್ಟ್ನಲ್ಲಿ ಆಪಲ್ನ ಐಫೋನ್ 6 ಒಂದು ಚೀನಾದ ಶಾಂಘೈನಲ್ಲಿ ಸ್ಫೋಟಗೊಂಡ ನಂತರ ಈ ಸುದ್ದಿ ಈಗ ಮತ್ತೊಮ್ಮೆ ಸದ್ದು ಮಾಡುತ್ತಿದೆ.