Back
Home » ಗಾಸಿಪ್
ತೆಲುಗು ನಂತರ ಈಗ ತಮಿಳು ಸೂಪರ್ ಸ್ಟಾರ್ ಜೊತೆ ರಶ್ಮಿಕಾ.!
Oneindia | 18th Nov, 2018 05:45 PM
 • ವಿಜಯ್ ಜೊತೆ ರಶ್ಮಿಕಾ.!

  'ಸರ್ಕಾರ್' ಚಿತ್ರದ ಯಶಸ್ಸಿನಲ್ಲಿರುವ ತಮಿಳು ಸ್ಟಾರ್ ನಟ ವಿಜಯ್ ಅವರ ಚಿತ್ರದಲ್ಲಿ ನಟಿಸಲು ಕನ್ನಡದ ರಶ್ಮಿಕಾ ಮಂದಣ್ಣಗೆ ಆಫರ್ ಬಂದಿದೆ ಎನ್ನಲಾಗುತ್ತಿದೆ. ಆದ್ರೆ, ಈ ಬಗ್ಗೆ ಚಿತ್ರತಂಡವಾಗಲಿ, ರಶ್ಮಿಕಾ ಕಡೆಯಿಂದ ಆಗಲಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

  ರಶ್ಮಿಕಾ ಬಗ್ಗೆ ತೆಲುಗು ದೇಶದಿಂದ ಬಂತು ಎರಡು ಸುದ್ದಿ.! ನಿಜಾನಾ, ಸುಳ್ಳಾ..?


 • ದಳಪತಿ 63ನೇ ಸಿನಿಮಾ

  'ಥೇರಿ', 'ಮೆರ್ಸಲ್' ಖ್ಯಾತಿಯ ಅಟ್ಲಿ ನಿರ್ದೇಶನದಲ್ಲಿ ವಿಜಯ್ ಅವರ 63ನೇ ಸಿನಿಮಾ ಸೆಟ್ಟೇರಲಿದ್ದು, ಈ ಚಿತ್ರದಲ್ಲಿ ರಶ್ಮಿಕಾ ನಟಿಸುವ ಬಗ್ಗೆ ಚರ್ಚೆಯಾಗ್ತಿದೆಯಂತೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ನಾಯಕಿಯಾಗಿಬಿಟ್ಟಿದ್ದಾರೆ ಎಂದು ತಮಿಳು ಅಭಿಮಾನಿಗಳೇ ಖುಷಿಯಾಗಿದ್ದಾರೆ.

  ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಆಯ್ಕೆಯಾದ ರಶ್ಮಿಕಾ ಮಂದಣ್ಣ.!


 • ಇಬ್ಬರು ನಾಯಕಿಯರು.!

  ಅಂದ್ಹಾಗೆ, ಅಟ್ಲಿ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇಲಿದ್ದಾರಂತೆ. ಅದರಲ್ಲಿ ಬಾಲಿವುಡ್ ನಟಿ ಕೈರಾ ಅಡ್ವಾನಿ ಕೂಡ ಒಬ್ಬರು ಎನ್ನಲಾಗಿದೆ. ಈ ಹಿಂದೆ ಅವರು ತೆಲುಗಿನ ಮಹೇಶ್ ಬಾಬು ಅಭಿನಯದ 'ಭರತ್ ಅನೇ ನೇನು' ಚಿತ್ರದಲ್ಲಿ ಅಭಿನಯಿಸಿದ್ದರು. ಇವರ ಜೊತೆ ರಶ್ಮಿಕಾ ಕೂಡ ಇರಬಹುದು ಎಂಬ ಮಾತಿದೆ.

  ಬೆಂಗಳೂರಿಗೆ ಬಂದಿದ್ದ ವಿಜಯ ದೇವರಕೊಂಡ ರಕ್ಷಿತ್, ರಶ್ಮಿಕಾ ಬಗ್ಗೆ ಹೀಗಂದ್ರು!


 • ರಶ್ಮಿಕಾ ಏನಂದ್ರು.?

  ಸದ್ಯ, ವಿಜಯ್ 63 ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಆರಂಭವಾಗಿದ್ದು, ಜನವರಿಯಲ್ಲಿ ಅದ್ಧೂರಿಯಾಗಿ ಸೆಟ್ಟೇರಲಿದೆ. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡಲಿದ್ದಾರೆ. ಇನ್ನುಳಿದಂತೆ ಈ ಟ್ರೋಲ್ ಮತ್ತು ಅಭಿಮಾನಿಗಳ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ''ನನಗೆ ನಿರೀಕ್ಷೆಗಳನ್ನ ನೀಡಬೇಡಿ'' ಎಂದು ಟ್ವೀಟ್ ಮಾಡಿದ್ದಾರೆ. ಇದು ಏನು ಎಂಬುದರ ಸ್ಪಷ್ಟ ಅರ್ಥ ಸಿಕ್ಕಿಲ್ಲ. ಮತ್ತೊಂದು ಮೂಲಗಳ ಪ್ರಕಾರ ರಶ್ಮಿಕಾ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಹೇಳಲಾಗ್ತಿದೆ.

  'ದೇವದಾಸ್' ನಂತರ ಮತ್ತೊಬ್ಬ ತೆಲುಗು ಸ್ಟಾರ್ ನಟನ ಚಿತ್ರದಲ್ಲಿ ರಶ್ಮಿಕಾ.!
ಟಾಲಿವುಡ್ ಮಂದಿಯ ನೆಚ್ಚಿನ ನಟಿಯಾಗಿರುವ ಕನ್ನಡದ ರಶ್ಮಿಕಾ ಮಂದಣ್ಣ ಈಗ ನೆರೆರಾಜ್ಯ ತಮಿಳುನಾಡಿನಲ್ಲೂ ಮೋಡಿ ಮಾಡುವ ಸೂಚನೆ ಸಿಕ್ಕಿದೆ.

ತೆಲುಗಿನಲ್ಲಿ ಸಾಕಷ್ಟು ಆಫರ್ ಗಳು ರಶ್ಮಿಕಾಗೆ ಬರ್ತಿದೆ. 'ಗೀತಾ ಗೋವಿಂದಂ' ನಂತರ 'ಚಲೋ' ಖ್ಯಾತಿಯ ನಾಗಶೌರ್ಯಯ ಚಿತ್ರಕ್ಕೆ ನಾಯಕಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೂ ಮುಂಚೆ ವಿಜಯ್ ದೇವರಕೊಂಡ ಜೊತೆ 'ಡಿಯರ್ ಕಾಮ್ರೇಡ್' ಸಿನಿಮಾ ಮಾಡಲಿದ್ದಾರೆ.

'ಪೊಗರು' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತಾ.?

ಈ ಮಧ್ಯೆ ಪ್ರಿನ್ಸ್ ಮಹೇಶ್ ಬಾಬು ಅವರ ಮೆಗಾ ಪ್ರಾಜೆಕ್ಟ್ ಗೆ ರಶ್ಮಿಕಾಗೆ ಬುಲಾವ್ ಬಂದಿದೆ ಎಂದು ಹೇಳಲಾಗ್ತಿದೆ. ಹೀಗಿರುವಾಗ, ಈಗ ತಮಿಳಿನಿಂದ ಕೊಡಗಿನ ಕುವರಿಗೆ ಆಫರ್ ಬಂದಿದ್ದು, ಅದು ಕಾಲಿವುಡ್ ಸೂಪರ್ ಸ್ಟಾರ್ ಒಬ್ಬರ ಚಿತ್ರಕ್ಕೆ ನಾಯಕಿಯಾಗುವ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ, ಆ ನಟ ಯಾರು.? ಏನಾಯ್ತು ಆ ಮಾತುಕತೆ.? ಆ ಸಿನಿಮಾ ಯಾವುದು.? ಮುಂದೆ ಓದಿ......

   
 
ಹೆಲ್ತ್