Back
Home » ಗಾಸಿಪ್
'ಪೊಗರು' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತಾ.?
Oneindia | 17th Nov, 2018 06:13 PM
 • ರಶ್ಮಿಕಾ ಸಂಭಾವನೆ ಎಷ್ಟು.?

  ಮೂಲಗಳ ಪ್ರಕಾರ, 'ಪೊಗರು' ಚಿತ್ರಕ್ಕಾಗಿ ನಟಿ ರಶ್ಮಿಕಾ ಮಂದಣ್ಣ 64 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅತಿ ಹೆಚ್ಚು ಸಂಭಾವನೆ ಕೊಟ್ಟು ರಶ್ಮಿಕಾ ರನ್ನ 'ಪೊಗರು' ನಿರ್ಮಾಪಕರು ಕರೆತಂದಿದ್ದಾರೆ ಎಂಬ ಗುಸುಗುಸು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

  ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಆಯ್ಕೆಯಾದ ರಶ್ಮಿಕಾ ಮಂದಣ್ಣ.!


 • ಅತಿ ಹೆಚ್ಚು ಸಂಭಾವನೆ ಪಡೆದ ಕನ್ನಡ ನಟಿ

  64 ಲಕ್ಷ ರೂಪಾಯಿ ಸಂಭಾವನೆ ಪಡೆದಿರುವುದು ನಿಜವೇ ಆಗಿದ್ದರೆ, ಕನ್ನಡ ನಟಿಯರ ಪೈಕಿ ನಟಿ ರಶ್ಮಿಕಾ ಮಂದಣ್ಣ 'ಹೈಯೆಸ್ಟ್ ಪೇಯ್ಡ್ ಆಕ್ಟ್ರೆಸ್'. ಇಲ್ಲಿಯವರೆಗೂ ಕನ್ನಡದ ನಟಿಯರು ಐವತ್ತು ಲಕ್ಷ ಸಂಭಾವನೆಯ ಗಡಿಯನ್ನು ದಾಟಿರಲಿಲ್ಲ.

  ಬೆಂಗಳೂರಿಗೆ ಬಂದಿದ್ದ ವಿಜಯ ದೇವರಕೊಂಡ ರಕ್ಷಿತ್, ರಶ್ಮಿಕಾ ಬಗ್ಗೆ ಹೀಗಂದ್ರು!


 • ಅಂದು ರಮ್ಯಾ ಇಂದು ರಶ್ಮಿಕಾ

  ಗಾಂಧಿನಗರದಲ್ಲಿ ಒಂದ್ಕಾಲದಲ್ಲಿ ನಟಿ ರಮ್ಯಾ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಖ್ಯಾತಿ ಪಡೆದಿದ್ದರು. ಇದೀಗ ಅದೇ ಕಿರೀಟ ನಟಿ ರಶ್ಮಿಕಾ ಮಂದಣ್ಣ ಪಾಲಾಗಿದೆ. ಡಿಮ್ಯಾಂಡ್ ಹೆಚ್ಚಿರುವ ಕಾರಣ ತೆಲುಗಿನಲ್ಲೂ ಆಕೆಗೆ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ.

  'ದೇವದಾಸ್' ನಂತರ ಮತ್ತೊಬ್ಬ ತೆಲುಗು ಸ್ಟಾರ್ ನಟನ ಚಿತ್ರದಲ್ಲಿ ರಶ್ಮಿಕಾ.!


 • 'ಪೊಗರು' ಕುರಿತು...

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಚಿತ್ರ 'ಪೊಗರು'. ಈಗಾಗಲೇ ಶೂಟಿಂಗ್ ಶುರುವಾಗಿರುವ ಈ ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತೆರೆಮೇಲೆ ಧ್ರುವ ಸರ್ಜಾ-ರಶ್ಮಿಕಾ ಜೋಡಿ ಹೇಗೆ ಕಾಣ್ತಾರೆ ಅಂತ ನೋಡಬೇಕು.
ಅದೃಷ್ಟ ಅಂದ್ರೆ ಹೀಗೆ ಇರಬೇಕು ನೋಡಿ... ಬಣ್ಣದ ಲೋಕಕ್ಕೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕಾಲಿಟ್ಟು ಎರಡು ವರ್ಷಗಳು ಕಳೆದಿವೆ ಅಷ್ಟೇ. ಈ ಎರಡು ವರ್ಷಗಳಲ್ಲಿ ಸಾಲು ಸಾಲು ಹಿಟ್ ಕೊಟ್ಟು ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿರುವ ಈಕೆಗೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯರ ಪೈಕಿ ಅತಿ ಹೆಚ್ಚು ಸಂಭಾವನೆ ಸಿಕ್ಕಿದೆ.

'ಕಿರಿಕ್ ಪಾರ್ಟಿ' ಚಿತ್ರದ ಬಳಿಕ ಕರ್ನಾಟಕದ ಕ್ರಶ್ ಆದ ರಶ್ಮಿಕಾ ಮಂದಣ್ಣ ಪಕ್ಕದ ಟಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿ. ತೆಲುಗು ಚಿತ್ರರಂಗದಲ್ಲಿ 'ಗೀತ ಗೋವಿಂದಂ' ಸೂಪರ್ ಡ್ಯೂಪರ್ ಹಿಟ್ ಆದ್ಮೇಲೆ ರಶ್ಮಿಕಾಗೆ ಸಾಲು ಸಾಲು ಆಫರ್ ಗಳು ಹುಡುಕಿಕೊಂಡು ಬಂದಿವೆ.

ತೆಲುಗು ಸಿನಿ ಅಂಗಳದಲ್ಲೇ ಸಿಕ್ಕಾಪಟ್ಟೆ ಬಿಜಿಯಾಗಿರುವ ರಶ್ಮಿಕಾ ಮಂದಣ್ಣ ಈಗ ಕನ್ನಡದ 'ಪೊಗರು' ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಪೊಗರು' ಚಿತ್ರಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

   
 
ಹೆಲ್ತ್