Back
Home » ಆರೋಗ್ಯ
ಕರಿಬೇವಿನ ಎಲೆ ಸೇವನೆಯಿಂದ ಒಂದೇ ತಿಂಗಳಲ್ಲಿ ತೂಕ ಕಳೆದುಕೊಳ್ಳಬಹುದಂತೆ!
Boldsky | 19th Nov, 2018 09:52 AM
 • ಕರಿಬೇವಿನ ಮರ

  ಕರಿಬೇವಿನ ಮರ (Murraya koenigii)ಸಾಮಾನ್ಯವಾಗಿ ಸಮಶೀತೋಷ್ಣ ಪ್ರದೇಶದಲ್ಲಿ ಹೆಚ್ಚಿನ ಆರೈಕೆಯ ಅಗತ್ಯವಿಲ್ಲದೇ ಬೆಳೆಯುವ ಮರವಾಗಿದ್ದು ರುಟೀಸೀ (Rutaceae)ಅಂಬ ಸಸ್ಯ ಪ್ರವರ್ಗಕ್ಕೆ ಸೇರಿದೆ. ಭಾರತ ಮತ್ತು ಶ್ರೀಲಂಕಾ ಮೂಲಕ ಈ ಮರವನ್ನು ಭಾರತದಲ್ಲಿ ಪ್ರಥಮವಾಗಿ ಆಭರಣಗಳಿಗೆ ಹೊಳಪು ನೀಡುವ ಗುಣಕ್ಕಾಗಿ ಬೆಳೆಸಲಾಗಿತ್ತು. ನಿಧಾನವಾಗಿ ಇದರ ಪ್ರಯೋಜನವನ್ನು ಅಡುಗೆಯಲ್ಲಿ ಕಂಡುಕೊಂಡ ಬಳಿಕ ಏಷಿಯಾದ ಎಲ್ಲಾ ದೇಶಗಳ ಅಡುಗೆ ಮನೆಯಲ್ಲಿ ಶೀಘ್ರವೇ ಬಳಸಲು ಪ್ರಾರಂಭವಾಯಿತು. ಎಂದಿನಿಂದ ಎಂಬುದಕ್ಕೆ ಸೂಕ್ತ ಪುರಾವೆಯಿಲ್ಲ. ಆದರೂ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಬೇವಿನ ಎಲೆ ಅಡುಗೆಯ ಅವಿಭಾಜ್ಯ ಅಂಗವಾಗಿದೆ. ಕರಿಬೇವಿನ ಎಲೆಯಲ್ಲಿ ಹಲವಾರು ಪೋಷಕಾಂಶಗಳಿವೆ. ಪ್ರಮುಖವಾಗಿ ಪ್ರೋಟೀನ್, ಕಾರ್ಬೋಹೈಡ್ರೇಟುಗಳು, ಕರಗದ ನಾರು, ಕೆರೋಟೀನ್, ನಿಕೋಟಿನಿಕ್ ಆಮ್ಲ, ವಿಟಮಿನ್ ಎ, ಬಿ, ಸಿ, ಮತ್ತು ಬಿ೨, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಫೋಲಿಕ್ ಆಮ್ಲಗಳಿವೆ. ಇವೆಲ್ಲವೂ ಉತ್ತಮ ಆರೋಗ್ಯಕ್ಕೆ ಮತ್ತು ವಿಶೇಷವಾಗಿ ತೂಕ ಇಳಿಕೆಗೆ ಪೂರಕವಾಗಿವೆ.

  Most Read: ಇಡ್ಲಿ ತಿಂದ್ರೆ ಇಡ್ಲಿಹಾಗೆ ಊದಿಕೊಳ್ಳುವುದಿಲ್ಲ! ಬದಲಿಗೆ ಸಾರಿನ ಹಾಗೆ ಸಣ್ಣಗಾಗುತ್ತೀರಿ!!


 • ತೂಕ ಇಳಿಕೆಯಲ್ಲಿ ಕರಿಬೇವು ಹೇಗೆ ನೆರವಾಗುತ್ತದೆ?

  ಕರಿಬೇವಿನ ಎಲೆಗಳಲ್ಲಿ ಮಧುಮೇಹ ನಿಯಂತ್ರಿಸಲು ನೆರವಾಗುವ ಆಂಟಿ ಆಕ್ಸಿಡೆಂಟ್ ಗುಣವಿದೆ. ಇದರೊಂದಿಗೆ ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ, ಕ್ಯಾನ್ಸರ್ ನಿವಾರಕ ಹಾಗೂ ಯಕೃತ್ ಗೆ ಆಗುವ ಹಾನಿಯನ್ನು ತಡೆಯುವ (hepatoprotective)ಗುಣಗಳನ್ನು ಹೊಂದಿದೆ. ಇಂದಿನ ಲೇಖನದಲ್ಲಿ ಈ ಅದ್ಭುತ ಗುಣಗಳಿರುವ ಬೇವಿನ ಎಲೆಗಳನ್ನು ಅನಗತ್ಯ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಹೇಗೆ ಬಳಸಿಕೊಳ್ಲಬಹುದು ಎಂಬುದನ್ನು ನೋಡೋಣ:

  ಕರಿಬೇವಿನ ಎಲೆಗಳ ಸೇವನೆಯಿಂದ ಜೀರ್ಣಕ್ರಿಯೆಗೆ ಹೆಚ್ಚಿನ ಸಹಾಯ ದೊರಕುತ್ತದೆ. ಕರುಳುಗಳ ಒಳಪದರದಲ್ಲಿ ಎದುರಾದ ಉರಿಯೂತ ತಡೆಯುವ ಮೂಲಕ ಅಜೀರ್ಣತೆ ಮತ್ತು ಇತರ ಸಂಬಂಧಿತ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ವಾಕರಿಕೆ ಮತ್ತು ಅತಿಸಾರವಿದ್ದಾಗ ಕರಿಬೇವಿನ ಎಲೆಗಳನ್ನು ಅರೆದು ಕುಡಿಸುವುದನ್ನು ಭಾರತೀಯರು ನೂರಾರು ವರ್ಷಗಳಿಂದ ಒಂದು ಮನೆಯೌಷಧಿಯ ರೂಪದಲ್ಲಿ ಬಳಸುತ್ತಾ ಬಂದಿದ್ದಾರೆ. ನಿಯಮಿತವಾಗಿ ಕರಿಬೇವಿನ ಎಲೆಗಳನ್ನು ಚೆನ್ನಾಗಿ ಜಗಿದು ನುಂಗುವ ಮೂಲಕವೂ ಬಾಯಿ ಮತ್ತು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಈ ಮೂಲಕ ಬೇವಿನ ಎಲೆ ಒಂದು ನೈಸರ್ಗಿಕ ಸ್ವಚ್ಛಕಾರಕವಾಗಿದೆ. ಅಲ್ಲದೇ ಈ ಕಾರ್ಯಕ್ಕಾಗಿ ಇದು ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿಕೊಂಡು ಹೆಚ್ಚಿನ ಕ್ಯಾಲೋರಿಗಳನ್ನು ವ್ಯಯಿಸುವುದೇ ತೂಕ ಇಳಿಸುವ ಗುಟ್ಟಾದಿದೆ. ತನ್ಮೂಲಕ ಕೊಬ್ಬಿನ ಸಂಗ್ರಹವಾಗುವುದನ್ನು ತಡೆದು ತೂಕ ಇನ್ನಷ್ಟು ಹೆಚ್ಚುವುದರಿಂದಲೂ ರಕ್ಷಿಸುತ್ತದೆ.

  Most Read: ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ- ದೇಹದ ತೂಕ ಇಳಿಸಬಹುದು!


 • ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

  ಅಷ್ಟೇ ಅಲ್ಲ, ಬೇವಿನ ಎಲೆ ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹಾಗೂ ಅನಗತ್ಯ ಕೊಬ್ಬಿನ ಸಂಗ್ರಹವನ್ನೂ ಕಡಿಮೆಗೊಳಿಸುತ್ತದೆ. ಕರಿಬೇವಿನಲ್ಲಿರುವ mahanimbine ಎಂಬ ಆಲ್ಕಲಾಯ್ಡ್ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಅಥವಾ ಲಿಪಿಡ್ ಗಳ ಸಂಗ್ರಹವನ್ನು ಬಳಸಿಕೊಳ್ಳುವ ಹಾಗೂ ಈ ಮೂಲಕ ಸ್ಥೂಲಕಾಯವನ್ನು ಕರಗಿಸುವ ಗುಣ ಹೊಂದಿದೆ. ಹಾಗಾಗಿ, ನಿಯಮಿತವಾಗಿ ಕರಿಬೇವಿನ ಎಲೆಗಳನ್ನು ಸೇವಿಸುತ್ತಾ ಬರುವ ಮೂಲಕ ದೇಹದಲ್ಲಿ ಒಟ್ಟು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳನ್ನು ಸಮತೋಲನದಲ್ಲಿರಿಸಲು ಸಾಧ್ಯವಾಗುತ್ತದೆ. ಕೊಬ್ಬಿನ ಬಳಸುವಿಕೆ ಮಾತ್ರವಲ್ಲ, ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸುವ ಮೂಲಕವೂ ಇವುಗಳಿಂದ ಎದುರಾಗಬಹುದಾಗಿದ್ದ ಅಪಾಯಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಮಧುಮೇಹ ನಿವಾರಕ ಗುಣ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದಷ್ಟೂ ಸ್ಥೂಲಕಾಯದ ಸಾಧ್ಯತೆಯೂ ಹೆಚ್ಚು. ಬೇವಿನಲ್ಲಿರುವ ಪೋಷಕಾಂಶಗಳು ತ್ವಚೆಗೆ ಹೆಚ್ಚಿನ ಆರೈಕೆ ನೀಡುವ ಕಾರಣ ಕೂದಲ ಬುಡಗಳನ್ನು ದೃಢಗೊಳಿಸಿ ಕೂದಲು ಉದುರುವುದನ್ನೂ ತಡೆಯುತ್ತದೆ.

  Most Read: ರಾತ್ರಿ ಮಲಗುವ ಮುನ್ನ ಇಂತಹ ಆಹಾರಗಳನ್ನು ತಿಂದರೆ, ಆರೋಗ್ಯ ವೃದ್ಧಿಯಾಗುತ್ತದೆ!


 • ತೂಕ ಇಳಿಕೆಗೆ ಕರಿಬೇವಿನ ಎಲೆಗಳನ್ನು ಬಳಸುವುದು ಹೇಗೆ?

  ಕರಿಬೇವನ್ನು ಕೆಲವಾರು ರೂಪದಲ್ಲಿ ಬಳಸಬಹುದು. ಸುಲಭ ಬಳಕೆ ಎಂದರೆ ನಿತ್ಯದ ಆಹಾರದಲ್ಲಿ ಒಂದು ಸಾಮಾಗ್ರಿಯಾಗಿ ಬಳಸುವುದು. ಇನ್ನೂ ಉತ್ತಮ ವಿಧಾನವೆಂದರೆ ಹಸಿಯಾಗಿ ಜಗಿದು ಬಾಯಿಯಲ್ಲಿಯೇ ನೀರಾಗಿಸಿ ನುಂಗುವುದು. ಆದರೆ ಇದು ತುಂಬಾ ಕಹಿಯಾಗಿರುವ ಕಾರಣ ಇದನ್ನು ಹಾಗೇ ಜಗಿಯಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದ್ದರಿಂದ ಪ್ರತಿ ದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬೇವಿನ ಎಲೆಗಳ ರಸವನ್ನು ಹೊಂದಿರುವ ನೀರನ್ನು ಕುಡಿಯುವುದೇ ಉತ್ತಮ ವಿಧಾನವಾಗಿದೆ. ಬನ್ನಿ, ಈ ನೀರನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ:

  ಸುಮಾರು ಮೂವತ್ತರಿಂದ ನಲವತ್ತು ಕರಿಬೇವಿನ ಎಲೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒಂದು ದೊಡ್ಡ ಲೋಟದಷ್ಟು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.
  ಕುದಿಯಲು ಪ್ರಾರಂಭವಾದ ಬಳಿಕ ಕೆಲ ನಿಮಿಷ ಚಿಕ್ಕ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ ಬಳಿಕ ಉರಿ ಆರಿಸಿ.
  ಈ ನೀರನ್ನು ಸೋಸಿ ಒಂದು ಲೋಟದಲ್ಲಿ ಸಂಗ್ರಹಿಸಿ. ಈ ನೀರು ಸಹಾ ತುಂಬಾ ಕಹಿಯಾಗಿರುವ ಕಾರಣ ರುಚಿ ಹೆಚ್ಚಿಸಲು ಇದಕ್ಕೆ ಕೆಲವು ತೊಟ್ಟು ಲಿಂಬೆರಸ ಮತ್ತು ಅರ್ಧ ಚಮಚದಷ್ಟು ಜೇನನ್ನು ಬೆರೆಸಿ .
  ತೂಕ ಇಳಿಸಲು ಸಮರ್ಥವಾಗಿರುವ ಈ ಪೇಯ ಕುಡಿಯಲು ಈಗ ಸಿದ್ಧವಾಗಿದೆ.
  ಉತ್ತಮ ಪರಿಣಾಮಕ್ಕಾಗಿ ಈ ನೀರನ್ನು ಪ್ರತಿದಿನ ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಸೇವಿಸಿ. ನಂತರದ ಒಂದು ಘಂಟೆ ಮತ್ತೇನನ್ನೂ ಸೇವಿಸಬಾರದು. ಬಳಿಕ ಎಂದಿನಂತೆ ಉಪಾಹಾರ ಸೇವಿಸಿ. ಈ ವಿಧಾನವನ್ನು ಕನಿಷ್ಠ ಒಂದು ತಿಂಗಳಾದರೂ ಮುಂದುವರೆಸಬೇಕು.
  ನೀರು ಕುದಿಸುವಷ್ಟು ವ್ಯವಧಾನವಿಲ್ಲದಿದ್ದರೆ ಸುಮಾರು ಹತ್ತು ಹದಿನೈದು ಎಲೆಗಳನ್ನು ಜಗಿದು ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿಯಬಹುದು.
ದಕ್ಷಿಣ ಭಾರತೀಯರು ಯಾವುದೇ ಪದಾರ್ಥ ಮಾಡುವಾಗ ಅದಕ್ಕೊಂದು ಒಗ್ಗರಣೆ ನೀಡುವುದು ಸಾಮಾನ್ಯ. ಇಂತಹ ಒಗ್ಗರಣೆಯಲ್ಲಿ ಪ್ರಮುಖವಾಗಿ ಬಳಸುವುದೇ ಕರಿಬೇವಿನ ಎಲೆ. ಕರಿಬೇವಿನ ಎಲೆಯನ್ನು ಕೆಲವರು ಇಷ್ಟಪಟ್ಟರೆ ಇನ್ನು ಕೆಲವರು ಅದನ್ನು ದ್ವೇಷಿಸಬಹುದು. ಇದರ ರುಚಿಯು ಹಲವಾರು ಮಂದಿಗೆ ಇಷ್ಟವಾಗಬಹುದು. ಇನ್ನು ಕೆಲವು ಮಂದಿ ಸಿಕ್ಕಿದಾಗಲೆಲ್ಲಾ ಅದನ್ನು ಹೆಕ್ಕಿ ಬದಿಗಿಡಬಹುದು. ಆದರೆ ದೇಹದ ತೂಕ ಇಳಿಸಿಕೊಳ್ಳುವವರಿಗೆ ಮಾತ್ರ ಇದು ನೈಸರ್ಗಿಕ ಮನೆಮದ್ದಾಗಿದೆ.

ಆಯುರ್ವೇದದ ಪ್ರಕಾರ ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಕೆಲವಾರು ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಪ್ರಮುಖವಾಗಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು, ಮಧುಮೇಹದ ನಿಯಂತ್ರಣ ಹಾಗೂ ಸ್ಥೂಲಕಾಯದ ಕರಗಿಸುವಿಕೆ. ಇದರ ಜೊತೆಗೇ ನಿತ್ಯದ ಆಹಾರದ ರುಚಿ ಹೆಚ್ಚಿಸಲು ಕರಿಬೇವಿನ ಎಲೆಗಳನ್ನು ಬಳಸುವ ಮೂಲಕವೂ ಕೊಬ್ಬು ಕರಗಿಸುವ ಗತಿಯನ್ನು ಕೆಲವಾರು ಬಗೆಯಲ್ಲಿ ಕೊಂಚ ಹೆಚ್ಚಿಸಬಹುದು. ಈ ಅಭ್ಯಾಸವನ್ನು ರೂಢಿಸಿಕೊಂಡರೆ ಶೀಘ್ರವೇ ನೀವು ಬಯಸುವ ಕೃಶ ಶರೀರವನ್ನು ಪಡೆಯಲು ಖಂಡಿತಾ ಸಾಧ್ಯವಾಗುತ್ತದೆ.

   
 
ಹೆಲ್ತ್