Back
Home » ಆರೋಗ್ಯ
ಪುರುಷರು ಆರೋಗ್ಯ ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳಲು ಸರಳ ಸಲಹೆಗಳು
Boldsky | 19th Nov, 2018 02:16 PM
 • ಅತಿಯಾದ ತೂಕ ಅಥವಾ ಬೊಜ್ಜು

  ಪುರುಷರು ತುಂಬಾ ವ್ಯಸ್ತರಾಗಿರುವ ಕಾರಣದಿಂದಾಗಿ ತಾವು ಸೇವಿಸುವ ಆಹಾರದ ಕಡೆಗೆ ಹೆಚ್ಚಿನ ಗಮನಹರಿಸದೆ ಇರುವುದರಿಂದ ಅವರಲ್ಲಿ ಅತೀ ಬೇಗನೆ ಬೊಜ್ಜು ಕಾಣಿಸಿಕೊಳ್ಳುವುದು. ಬೊಜ್ಜು ದೇಹದ ಸಮಸ್ಯೆ ನಿವಾರಣೆ ಮಾಡಲು ಪುರುಷರು ಯಾವುದಾದರೂ ಆಟಗಳಲ್ಲಿ ಅಥವಾ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಪುರುಷರು ಸ್ವಲ್ಪ ಸಮಯವನ್ನು ದೇಹಕ್ಕೆ ಆರಾಮ ನೀಡಲು ವ್ಯಯಿಸಿದರೆ ಅದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದು ಶಕ್ತಿಯನ್ನು ಉತ್ಪಾದಿಸುವುದು ಮತ್ತು ದೇಹ ಹಾಗೂ ಮನಸ್ಸಿಗೆ ಶಮನ ನೀಡುವುದು. ಮದುವೆಗೆ ಮೊದಲು ಬೊಜ್ಜು ದೇಹವು ಒಳ್ಳೆಯದಲ್ಲ. ಹುಡುಗಿಯರು ಯಾವಾಗಲೂ ಮದುವೆಯಾಗಲು ಬೊಜ್ಜು ದೇಹದವರನ್ನು ಇಷ್ಟಪಡಲ್ಲ.

  Most Read: ಪುರುಷರ ಆರೋಗ್ಯಕ್ಕೆ ಕುಂಬಳಕಾಯಿ ಬೀಜ ಸಾಕು!


 • ಸಿಗರೇಟ್ ಸೇವನೆ ಬಿಟ್ಟು ಬಿಡಿ

  ಸಿಗರೇಟ್ ಅಥವಾ ಸಿಗಾರ್ ಸೇವನೆ ಮಾಡುವುದು ಪುರುಷರಿಗೆ ಸಾಮಾನ್ಯವಾದ ಅಭ್ಯಸವಾಗಿದೆ. ಆದರೆ ಇದು ತುಂಬಾ ಗಂಭೀರ ಸಮಸ್ಯೆಗಳಾಗಿರುವ ಕ್ಯಾನ್ಸರ್, ಹೃದಯಾಘಾತ ಮತ್ತು ಕ್ಷಯರೋಗ ಉಂಟು ಮಾಡಬಹುದು. ಧೂಮಪಾನ ತ್ಯಜಿಸಿ ಮತ್ತು ಇಂತಹ ಮಾರಕ ಕಾಯಿಲೆಗಳಿಂದ ದೂರವಾಗಿ. ಧೂಮಪಾನವು ನಿಮ್ಮ ಆರೋಗ್ಯಕ್ಕೆ ಮಾತ್ರ ಹಾನಿಕಾರವಲ್ಲದೆ, ಇದು ನಿಮ್ಮ ಬಜೆಟ್ ಮೇಲೂ ಪರಿಣಾಮ ಬೀರುವುದು. ಕೆಟ್ಟ ಪರಿಣಾಮದಿಂದಾಗಿ ಧೂಮಪಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ. ಧೂಮಪಾನವು ಕೇವಲ ಧೂಮಪಾನಿಗೆ ಮಾತ್ರವಲ್ಲದೆ ಆತನ ಸುತ್ತಲಿನ ವ್ಯಕ್ತಿಗಳಿಗೂ ಇದರಿಂದ ಹಾನಿಯಾಗುವುದು.


 • ವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ

  ನೀವು ವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾಕೆಂದರೆ ಇದನ್ನು ನೀವು ಕಡೆಗಣಿಸಿದರೆ ಆಗ ದೊಡ್ಡ ಮಟ್ಟದ ಹಾನಿಯಾಗುವುದು. ನಿಯಮಿತವಾಗಿ ಕೊಲೆಸ್ಟ್ರಾಲ್ ಮಟ್ಟ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ನಿವಾರಣೆ ಮಾಡಬಹುದು. ನಿಯಮಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತಲಿದ್ದರೆ ಆಗ ಕೆಲವೊಂದು ಗಂಭೀರ ಸಮಸ್ಯೆಗಳೂ ಬರುವುದನ್ನು ಆರಂಭದಲ್ಲೇ ತಡೆಯಬಹುದು ಮತ್ತು ಇದರಿಂದ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು.


 • ಆಹಾರ ಕ್ರಮದಲ್ಲಿ ಎಲ್ಲಾ ಪ್ರಮುಖ ಆಹಾರ ಸೇವಿಸಿ

  ಆರೋಗ್ಯಕಾರಿ ಚರ್ಮ ಹಾಗೂ ಫಿಟ್ನೆಸ್ ಗಾಗಿ ನೀವು ಎಲ್ಲಾ ರೀತಿಯ ಆಹಾರಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದನ್ನು ಮದುವೆಯ ಬಳಿಕ ಕೂಡ ಪಾಲಿಸಿಕೊಂಡು ಹೋಗಿ. ಪ್ರಮುಖ ಆಹಾರ ವಿಭಾಗಗಳೆಂದರೆ ಕಾರ್ಬ್ರೋಹೈಡ್ರೇಟ್ಸ್, ಕೊಬ್ಬು, ಪ್ರೋಟೀನ್, ವಿಟಮಿನ್ ಗಳು, ಖನಿಜಾಂಶಗಳು ಮತ್ತು ನೀರು. ನಮ್ಮ ದೇಹವನ್ನು ತೇವಾಂಶದಿಂದ ಇಡಲು ನೀರು ಅತೀ ಮುಖ್ಯವಾಗಿದೆ ಮತ್ತು ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುವುದು. ತಾಜಾ ಹಣ್ಣುಗಳು ಮತ್ತು ಜ್ಯೂಸ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಸಿಟ್ರಸ್ ಹಣ್ಣುಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಇದು ಆರೋಗ್ಯಕಾರಿ ಚರ್ಮಕ್ಕೆ ಒಳ್ಳೆಯದು.


 • ವ್ಯಾಯಾಮ

  ವ್ಯಾಯಾಮವು ಅಧಿಕ ರಕ್ತದೊತ್ತಡ, ಮಧುಮೇಹ, ಸಂಧಿವಾತ ಮತ್ತು ಬೊಜ್ಜಿಗೆ ತುಂಬಾ ಒಳ್ಳೆಯದು. ನಿಯಮಿತವಾಗಿ ವ್ಯಾಯಾಮ ಮಾಡಿದರೆ ಆಗ ದೇಹದ ತೂಕ ನಿಯಂತ್ರಣ ಮಾಡಬಹುದು. ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು. ವ್ಯಾಯಾಮದಿಂದ ದೇಹದ ಸ್ನಾಯುಗಳು ಆರಾಮವಾಗುವುದು ಮತ್ತು ಸುಖ ನಿದ್ರೆಗೆ ನೆರವಾಗುವುದು. ಲಘು ವ್ಯಾಯಾಮದಿಂದ ಚಯಾಪಚಯ ಕ್ರಿಯೆಯು ಉತ್ತಮವಾಗುವುದು. ಇದರಿಮದ ಜೀರ್ಣಕ್ರಿಯೆ ಮತ್ತು ದೇಹದ ವ್ಯವಸ್ಥೆಯು ಸುಧಾರಣೆಯಾಗುವುದು. ವ್ಯಾಯಾಮದಿಂದ ದೇಹದಲ್ಲಿರುವಂತಹ ಕೆಲವೊಂದು ವಿಷಕಾರಿ ಅಂಶಗಳು ಬೆವರಿನ ಮೂಲಕ ಹೊರಬರುವುದು.

  Most Read: ಪುರುಷರಲ್ಲಿ ಶಕ್ತಿ ಹೆಚ್ಚಿಸುವ ಹದಿನೈದು ಆಹಾರಗಳು


 • ಮದುವೆಯಾಗಿ!

  ಸಂತೃಪ್ತ ವೈವಾಹಿಕ ಜೀವನ ಸಾಗಿಸುತ್ತಿರುವಂತಹ ಪುರುಷರು ಸಂಬಂಧದಲ್ಲಿನ ತಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಜವಾಬ್ದಾರರಾಗಿರುವರು. ಹಲವಾರು ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದ ಮೇಲೆ ಮದುವೆಯು ಧನಾತ್ಮಕವಾದ ಪರಿಣಾಮ ಬೀರಿದೆ. ಮದುವೆಯಾಗಿರುವ ಪುರುಷರಲ್ಲಿ ಖಿನ್ನತೆಯ ಅಪಾಯವು ತುಂಬಾ ಕಡಿಮೆ ಇರುವುದು ಮತ್ತು ಸಂತೃಪ್ತಿಯು ಅಧಿಕವಾಗಿರುವುದು. ಮದುವೆಯಾಗಿರುವಂತಹ ಪುರುಷರು ಯಾವುದೇ ರೀತಿಯ ಕೆಟ್ಟ ಚಟುವಟಿಕೆಗಳಲ್ಲಿ ಭಾಗಿಯಾದರೆ ತಮ್ಮ ಆರೋಗ್ಯದ ಆರೈಕೆ ಮಾಡುವರು. ಇದರಿಂದಾಗಿ ಅವರು ತಮ್ಮ ಜೀವನವನ್ನು ತುಂಬಾ ಸಂತೋಷ ಹಾಗೂ ಆರೋಗ್ಯಕಾರಿಯಾಗಿ ಸಾಗಿಸುವರು. ಈ ಲೇಖನದಲ್ಲಿ ಪುರುಷರಿಗಾಗಿ ಕೆಲವೊಂದು ಮೂಲ ಆರೋಗ್ಯ ಸಲಹೆಗಳ ಬಗ್ಗೆ ಬರೆದಿದ್ದೇನೆ. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಅಥವಾ ಏನಾದರೂ ಇದರಲ್ಲಿ ಕಡಿಮೆಯೆಂದು ನಿಮಗೆ ಅನಿಸಿದರೆ ಆಗ ನೀವು ಕಮೆಂಟ್ ಬಾಕ್ಸ್ ನಲ್ಲಿ ಇದರ ಬಗ್ಗೆ ಬರೆದು ಕಳಿಸಿ. ನಿಮ್ಮ ಕಮೆಂಟ್, ಅನುಭವ ಮತ್ತು ಸಲಹೆಗಳು ಇತರರಿಗೂ ಆರೋಗ್ಯಕಾರಿ ಜೀವನ ನಡೆಸಲು ಸಹಕಾರಿಯಾಗಲಿದೆ.
ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿಯಿದೆ. ಆರೋಗ್ಯವಿದ್ದರೆ ಆಗ ಎಲ್ಲವೂ ಇದ್ದಂತೆ. ಈ ಕಾರಣದಿಂದಾಗಿ ಹೆಚ್ಚಿನ ದೇಶಗಳು ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತವೆ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದು. ಆಧುನಿಕ ಯುಗದಲ್ಲಿ ಹೆಚ್ಚಾಗಿ ಪುರುಷರು ತಮ್ಮ ಗುರಿ ಸಾಧಿಸಲು ಮತ್ತು ಕರ್ತವ್ಯ ನಿರ್ವಹಣೆ ಮಾಡಲು ತುಂಬಾ ಕಷ್ಟಪಡುತ್ತಿರುತ್ತಾರೆ. ಇದಕ್ಕಾಗಿ ಅವರು ಪ್ರತಿನಿತ್ಯ ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವನ್ನು ಕೆಲವೊಂದು ಸಲ ಮಾಡದೆ ಇರಬಹುದು. ಇದಕ್ಕೆ ಅವರ ವ್ಯಸ್ತ ವೃತ್ತಿ ಕಾರಣವಾಗಿದ್ದರೂ ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ನಿರ್ಲಕ್ಷ್ಯ ವಹಿಸುವ ಕಾರಣದಿಂದಾಗಿ ಪುರುಷರ ಆರೋಗ್ಯದಲ್ಲಿ ಏರುಪೇರಾಗುವುದು. ವೃತ್ತಿ, ವ್ಯಾಪಾರ ಮತ್ತು ಇತರ ಕೆಲವೊಂದು ಕಾರಣಗಳಿಂದಾಗಿ ಸಮಸ್ಯೆಯಾಗುವುದು. ಇನ್ನೊಂದು ಬದಿಯಲ್ಲಿ ಪುರುಷರಿಗೆ ತಮ್ಮ ಕೆಲಸದಿಂದ ಹೆಚ್ಚು ಸಮಯ ಸಿಗದೆ ಇರುವ ಕಾರಣ ಅವರಿಗೆ ಆರೋಗ್ಯದ ಕಡೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಆದರೆ ಪುರುಷರು ನಿಯಮಿತವಾಗಿ ವೈದ್ಯರನ್ನು ಭೇಟಿಯಾಗಿ, ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಇದರಿಂದ ದೇಹಕ್ಕೆ ಕಾಡಬಹುದಾದ ಹಲವಾರು ರೀತಿಯ ಅನಾರೋಗ್ಯಗಳು ದೂರವಾಗುವುದು.

ತಮ್ಮ ಆಹಾರ ಕ್ರಮದ ಬಗ್ಗೆ ಗಮನಹರಿಸಿ, ಸಮತೋಲಿತ ಆಹಾರ ಸೇವಿಸಬೇಕು. ನೈಸರ್ಗಿಕ ಆಹಾರಗಳಾಗಿರುವಂತಹ ಹಣ್ಣುಗಳು, ತರಕಾರಿಗಗಳು ಮತ್ತು ಧಾನ್ಯಗಳನ್ನು ಸೇವಿಸಿದರೆ ಅದರಿಂದ ಪುರುಷರು ಆರೋಗ್ಯ ಕಾಪಾಡಿಕೊಳ್ಳಬಹುದು. ಸಣ್ಣ ಮಟ್ಟದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಂದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಭೇಟಿಯಾಗಬೇಕು. ಪುರುಷರು ಜಾಗಿಂಗ್ ನಂತಹ ಸರಳ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಈ ಲೇಖನದಲ್ಲಿ ಪುರುಷರ ಫಿಟ್ನೆಸ್ ಹಾಗೂ ಆರೋಗ್ಯಕ್ಕೆ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ.

   
 
ಹೆಲ್ತ್