Back
Home » ಗಾಸಿಪ್
ದೀಪಿಕಾ ಆರತಕ್ಷತೆಯಲ್ಲಿ ಇಂದ್ರಜೀತ್ ಭಾಗಿಯಾಗುತ್ತಿಲ್ಲ ಏಕೆ?
Oneindia | 21st Nov, 2018 01:37 PM
 • ಥಾಯ್ಲೇಂಡ್ ಗೆ ಹೋಗಿದ್ದಾರೆ

  ಸದ್ಯ ನಿರ್ದೇಶಕ ಇಂದ್ರಜೀತ್ ಲಂಕೇಶ್ ವಿದೇಶ ಇದ್ದಾರೆ. ಕೆಲ ದಿನಗಳ ಹಿಂದೆ ಥಾಯ್ಲೇಂಡ್ ಗೆ ಹೋಗಿರುವ ಅವರು ದೀಪಿಕಾ ಹಾಗೂ ರಣ್ವೀರ್ ಆರತಕ್ಷತೆ ಕಾರ್ಯಕ್ರಮಕ್ಕೆ ಭಾಗಿಯಾಗಲು ಸಾಧ್ಯ ಆಗುತ್ತಿಲ್ಲ. ಈ ವಿಷಯವನ್ನು ಅವರು ಪತ್ರಿಕೆಯೊಂದರಲ್ಲಿ ತಿಳಿಸಿದ್ದಾರೆ.


 • ಸಿನಿಮಾದ ಕೆಲಸ ಇರುವ ಕಾರಣ

  ಇಂದ್ರಜೀತ್ ಲಂಕೇಶ್ ತಮ್ಮ ಸಿನಿಮಾದ ಕೆಲಸದಲ್ಲಿ ಬ್ಯುಸಿ ಇದ್ದಾರಂತೆ. ಇದೇ ಕಾರಣದಿಂದ ದೀಪಿಕಾ ಕಡೆಯಿಂದ ಆಮಂತ್ರಣ ತಲುಪಿದ್ದರೂ, ಆರತಕ್ಷತೆ ಕಾರ್ಯಕ್ರಮಕ್ಕೆ ಭಾಗಿಯಾಗಲು ಸಾಧ್ಯ ಆಗುತ್ತಿಲ್ಲವಂತೆ. ಭಾರತಕ್ಕೆ ಮರಳಿದ ನಂತರ ಅವರು ನವ ಜೋಡಿಯನ್ನು ಭೇಟಿ ಮಾಡಿ ತಮ್ಮ ಶುಭಾಶಯವನ್ನು ತಿಳಿಸಲಿದ್ದಾರಂತೆ.

  ದೀಪಿಕಾ-ರಣ್ವೀರ್ ಸಿಂಧಿ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ


 • ಸ್ಯಾಂಡಲ್ ವುಡ್ ಸ್ಟಾರ್ ಗಳಿಗೆ ಆಮಂತ್ರಣ

  ಉಳಿದಂತೆ, ಸ್ಯಾಂಡಲ್ ವುಡ್ ನಟರಾದ ಅಂಬರೀಶ್, ಉಪೇಂದ್ರ, ಸುದೀಪ್, ಯಶ್, ಪುನೀತ್ ರಾಜ್ ಕುಮಾರ್ ಅವರಿಗೆ ದೀಪಿಕಾ - ರಣ್ವೀರ್ ಆರತಕ್ಷತೆಯ ಆಮಂತ್ರಣ ತಲುಪಿದ್ದು, ಇವರೆಲ್ಲ ನವ ಜೋಡಿಯನ್ನು ಹರಸಲು ಬರುವ ಸಾಧ್ಯತೆ ಇದೆ.


 • ತಮಿಳು, ತೆಲುಗು, ಮಲೆಯಾಳಂ ಸ್ಟಾರ್ ಗಳು

  ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ಪ್ರಮುಖ ನಟ, ನಟಿ, ನಿರ್ದೇಶಕ, ನಿರ್ಮಾಪಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ದೀಪಿಕಾ ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ ನಟಿಸಿದ್ದು, ಇಲ್ಲಿನ ಚಿತ್ರರಂಗದಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ.

  ಮೆಹಂದಿ ಶಾಸ್ತ್ರದಲ್ಲಿ ಕುಣಿದು ಕುಪ್ಪಳಿಸಿದ ದೀಪಿಕಾ-ರಣ್ವೀರ್


 • ಇದೇ ತಿಂಗಳ 28 ರಂದು

  ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರ ಮತ್ತೊಂದು ಆರತಕ್ಷತೆ ಕಾರ್ಯಕ್ರಮ ಮುಂಬೈ ನಲ್ಲಿ ನಡೆಯಲಿದೆ. ಇದೇ ತಿಂಗಳ 28ರಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಾಲಿವುಡ್ ಚಿತ್ರರಂಗದ ಸಾಕಷ್ಟು ಕಲಾವಿದರು, ಚಿತ್ರರಂಗ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
'ಬಾಜಿರಾವ್ ಮಸ್ತಾನಿ' ಜೋಡಿ ಈಗ ಬೆಂಗಳೂರಿನಲ್ಲಿದೆ. ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ. ಕನ್ನಡ ಚಿತ್ರರಂಗದ ಕೆಲವು ಪ್ರಮುಖ ನಟರು ಸಹ ನವ ಜೋಡಿಗೆ ಆಶೀರ್ವಾದ ಮಾಡಲಿದ್ದಾರೆ. ಆದರೆ, ನಿರ್ದೇಶಕ ಇಂದ್ರಜೀತ್ ಮಾತ್ರ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

ಬೆಂಗಳೂರಿನಲ್ಲಿ ರಣ್ವೀರ್ - ದೀಪಿಕಾ ಆರತಕ್ಷತೆ : ಕನ್ನಡದ ಯಾವ ಸ್ಟಾರ್ ಗಳು ಭಾಗಿ?

ಹಾಗೆ ನೋಡಿದರೆ, ದೀಪಿಕಾ ಪಡುಕೋಣೆ ಅವರನ್ನು ಮೊದಲು ಚಿತ್ರರಂಗಕ್ಕೆ ಪರಿಚಯ ಮಾಡಿದ್ದು, ನಿರ್ದೇಶಕ ಇಂದ್ರಜೀತ್ ಲಂಕೇಶ್. ಐಶ್ವರ್ಯ ಮೂಲಕ ಮೊದಲ ಬಾರಿಗೆ ಬೆಳ್ಳೆ ಪರದೆ ಮೇಲೆ ಮಿಂಚಿದ ದೀಪಿಕಾ ನಂತರ ಬಾಲಿವುಡ್ ನ ಬಂಗಾರದ ಗೊಂಬೆಯಾದರು.

ಅಂದಹಾಗೆ, ಸದ್ಯ ದೀಪಿಕಾ ಪಡುಕೋಣೆ ಆರತಕ್ಷತೆಗೆ ಇಂದ್ರಜೀತ್ ಭಾಗಿಯಾಗಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಕಾರಣ ಮುಂದಿದೆ ಓದಿ...

   
 
ಹೆಲ್ತ್