Back
Home » ಬಾಲಿವುಡ್
''ಪತ್ನಿಯಿಂದ ದೂರ ಮಾಡಬೇಡಿ'' ಅಂತ ಆರತಕ್ಷತೆಯಲ್ಲಿ ರಣ್ವೀರ್ ಸಿಂಗ್ ಹೇಳಿದ್ಯಾಕೆ.?
Oneindia | 22nd Nov, 2018 03:08 PM

ಕಳೆದ ವಾರ.. ಅಂದ್ರೆ ನವೆಂಬರ್ 14 ಮತ್ತು 15 ರಂದು ಇಟಲಿಯ ಲೇಕ್ ಕೋಮೋದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಿನ್ನೆ ಬೆಂಗಳೂರಿನ 'ದಿ ಲೀಲಾ ಪ್ಯಾಲೇಸ್'ನಲ್ಲಿ ದೀಪಿಕಾ-ರಣ್ವೀರ್ ಆರತಕ್ಷತೆ ಸಮಾರಂಭ ನಡೆಯಿತು. ರಿಸೆಪ್ಷನ್ ಸಮಾರಂಭಕ್ಕೆ ತೆರಳುವ ಮುನ್ನ ದೀಪಿಕಾ ಮತ್ತು ರಣ್ವೀರ್ ಸಿಂಗ್ ಮಾಧ್ಯಮಗಳ ಮುಂದೆ ಬಂದರು.

ಬೆಂಗಳೂರಿನ ದೀಪಿಕಾ - ರಣ್ವೀರ್ ಆರತಕ್ಷತೆಯಲ್ಲಿ ಭಾಗಿಯಾಗಿದ್ದ ಗಣ್ಯರು

ಗೋಲ್ಡನ್ ಎಂಬ್ರಾಯಿಡರಿ ಹೊಂದಿದ್ದ ಕಪ್ಪು ಬಣ್ಣದ ಶೇರ್ವಾನಿಯಲ್ಲಿ ವರ ರಣ್ವೀರ್ ಸಿಂಗ್ ಮಿಂಚಿದರೆ, ಗೋಲ್ಡನ್ ಬಣ್ಣದ ರೇಶ್ಮೆ ಸೀರೆ ತೊಟ್ಟು ರಾಯಲ್ ಲುಕ್ ನಲ್ಲಿ ದೀಪಿಕಾ ಪಡುಕೋಣೆ ಮಿನುಗಿದರು.

ಮಾಧ್ಯಮಗಳ ಮುಂದೆ ನವ ವಧು-ವರ ಒಟ್ಟಿಗೆ ಪೋಸ್ ಕೊಟ್ಟರು. ದಂಪತಿಯ ಫೋಟೋಗಳನ್ನು ಕ್ಲಿಕ್ ಮಾಡಿದ ಬಳಿಕ ''ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ರವರ ಪ್ರತ್ಯೇಕ ಫೋಟೋ ಬೇಕು'' ಅಂತ ನೆರೆದಿದ್ದ ಫೋಟೋಗ್ರಾಫರ್ ಡಿಮ್ಯಾಂಡ್ ಇಟ್ಟರು.

ದೀಪ್ವೀರ್ ಬೆಂಗಳೂರು ರಿಸೆಪ್ಷನ್: ರಾಯಲ್ ಲುಕ್ ನಲ್ಲಿ ಮಿಂಚಿದ ದಂಪತಿ

''ಇಲ್ಲ'' ಎನ್ನದ ರಣ್ವೀರ್ ಸಿಂಗ್ ತಮ್ಮದೇ ಶೈಲಿಯಲ್ಲಿ ''ಈಗಷ್ಟೇ ಪತ್ನಿ ಜೊತೆಯಾಗಿದ್ದೇನೆ. ನೀವು ನೋಡಿದ್ರೆ ಬೇರೆ ಮಾಡ್ತಿದ್ದೀರಲ್ಲಾ.?'' ಅಂತ ನಗೆ ಚಟಾಕಿ ಹಾರಿಸಿದರು.

ಪತಿ ರಣ್ವೀರ್ ಸಿಂಗ್ ಹೇಳಿದ ಮಾತನ್ನು ಕೇಳಿ ಪಕ್ಕದಲ್ಲೇ ನಿಂತಿದ್ದ ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಮೊಗದಲ್ಲಿ ಮಂದಹಾಸ ಮೂಡಿತು.

ಅಂದ್ಹಾಗೆ, ಆರತಕ್ಷತೆ ಸಮಾರಂಭದಲ್ಲಿ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಪಿ.ವಿ.ಸಿಂಧು, ಸುಧಾ ಮೂರ್ತಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ದೀಪಿಕಾ-ರಣ್ವೀರ್ ದಂಪತಿಗೆ ಶುಭ ಹಾರೈಸಿದರು.

   
 
ಹೆಲ್ತ್