Back
Home » ಬಾಲಿವುಡ್
'ಬಾಜಿರಾವ್ ಮಸ್ತಾನಿ'ಯ ಆರತಕ್ಷತೆಯಲ್ಲಿ ಕನ್ನಡ ತಾರೆಯರು ಕಾಣಲಿಲ್ಲ ಏಕೆ?
Oneindia | 22nd Nov, 2018 04:21 PM
 • ಕಾಣಲಿಲ್ಲ ಕನ್ನಡ ನಟರು

  ಸ್ಯಾಂಡಲ್ ವುಡ್ ನಟರಾದ ಅಂಬರೀಶ್, ಉಪೇಂದ್ರ, ಸುದೀಪ್, ಯಶ್, ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕರಾದ ಇಂದ್ರಜೀತ್ ಲಂಕೇಶ್ ಅವರಿಗೆ ದೀಪಿಕಾ - ರಣ್ವೀರ್ ಆರತಕ್ಷತೆಯ ಆಮಂತ್ರಣ ತಲುಪಿದೆ ಎಂಬ ಸುದ್ದಿ ಇತ್ತು. ಆದರೆ ಇವರಲ್ಲಿ ಯಾವ ಸ್ಟಾರ್ ಕೂಡ ಕಾರ್ಯಕ್ರಮದಲ್ಲಿ ಕಾಣಲಿಲ್ಲ.


 • ಇವರು ಬರುವ ನಿರೀಕ್ಷೆ ಇತ್ತು

  ದೀಪಿಕಾ ಪಡುಕೋಣೆ 'ಐಶ್ವರ್ಯ' ಚಿತ್ರದ ಮೂಲಕ ತಮ್ಮ ಸಿನಿಮಾ ಬದುಕು ಪ್ರಾರಂಭ ಮಾಡಿದ್ದರು. ಹೀಗಾಗಿ ಅವರ ಮೊದಲ ಸಿನಿಮಾ ನಿರ್ದೇಶಕ ಇಂದ್ರಜೀತ್ ಲಂಕೇಶ್ ಹಾಗೂ ನಟ ಉಪೇಂದ್ರ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇತ್ತು. ಜೊತೆಗೆ, ದೀಪಿಕಾ ತಂದೆಗೆ ಅಂಬರೀಶ್ ಪರಿಚಯ ಇದ್ದು, ಅಂಬಿ ಕಾರ್ಯಕ್ರಮಕ್ಕೆ ಆಗಮಿಸಬಹುದು ಎಂಬ ಊಹೆ ಇತ್ತು

  ಬೆಂಗಳೂರಿನಲ್ಲಿ ರಣ್ವೀರ್ - ದೀಪಿಕಾ ಆರತಕ್ಷತೆ : ಕನ್ನಡದ ಯಾವ ಸ್ಟಾರ್ ಗಳು ಭಾಗಿ?


 • ವಿದೇಶದಲ್ಲಿ ಇಂದ್ರಜೀತ್ ಲಂಕೇಶ್

  ಸದ್ಯ, ನಿರ್ದೇಶಕ ಇಂದ್ರಜೀತ್ ಲಂಕೇಶ್ ವಿದೇಶ ಇದ್ದಾರೆ. ಕೆಲ ದಿನಗಳ ಹಿಂದೆ ಥಾಯ್ಲೇಂಡ್ ಗೆ ಹೋಗಿರುವ ಅವರು ದೀಪಿಕಾ ಹಾಗೂ ರಣ್ವೀರ್ ಆರತಕ್ಷತೆ ಕಾರ್ಯಕ್ರಮಕ್ಕೆ ಭಾಗಿಯಾಗಲು ಸಾಧ್ಯ ಆಗಲಿಲ್ಲ. ಇಂದ್ರಜೀತ್ ಲಂಕೇಶ್ ತಮ್ಮ ಹೊಸ ಬಾಲಿವುಡ್ ಸಿನಿಮಾದ ಕೆಲಸದಲ್ಲಿ ಬ್ಯುಸಿ ಇದ್ದು, ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲವಂತೆ.


 • ಆಹ್ವಾನ ತಲುಪಿತ್ತಾ, ಇಲ್ವಾ ?

  ಮತ್ತೊಂದು ಕಡೆ ದೀಪಿಕಾ ಪಡುಕೋಣೆ ಆಹ್ವಾನ ತಲುಪಿತ್ತಾ... ಇಲ್ವ..?ಎನ್ನುವ ಅನುಮಾನ ಕೂಡ ಇದೆ. ಅದರ ಜೊತೆಗೆ ಸೌತ್ ನ ಉಳಿದ ಚಿತ್ರರಂಗದ ಕಲಾವಿದರೂ ಕೂಡ ಕಾರ್ಯಕ್ರಮದಲ್ಲಿ ಕಾಣದೆ ಇರುವುದು ಆಶ್ಚರ್ಯ ಮೂಡಿಸಿದೆ. ದೀಪಿಕಾ ಕನ್ನಡದ ಜೊತೆಗೆ ತಮಿಳಿನಲ್ಲಿ ಕೂಡ ನಟಿಸಿದ್ದಾರೆ.

  ದೀಪಿಕಾ ಆರತಕ್ಷತೆಯಲ್ಲಿ ಇಂದ್ರಜೀತ್ ಭಾಗಿಯಾಗುತ್ತಿಲ್ಲ ಏಕೆ?


 • ಮುಂಬೈ ಕಾರ್ಯಕ್ರಮ ಸಿನಿಮಾದವರಿಗೆ?

  ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರ ಮತ್ತೊಂದು ಆರತಕ್ಷತೆ ಕಾರ್ಯಕ್ರಮ ಮುಂಬೈ ನಲ್ಲಿ ನಡೆಯಲಿದೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮನೆಯವರು ಮತ್ತು ಹತ್ತಿರದ ಸಂಬಂಧಿಗಳು ಇದ್ದು, ಇದೇ ತಿಂಗಳ 28ರಂದು ಆಗುವ ಕಾರ್ಯಕ್ರಮ ಸಿನಿಮಾದವರಿಗಾಗಿ ಇರಬಹುದು.


 • ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರು

  ನಿನ್ನೆಯ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಪಿ ವಿ ಸಿಂಧು, ಉದ್ಯಮಿ ನಂದನ್ ನಿಲ್ಕೆಣಿ ಸೇರಿದಂತೆ ಅನೇಕ ಗಣ್ಯರು ಬಂದು ನವ ಜೋಡಿಗೆ ಶುಭ ಹಾರೈಸಿದರು
ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್ವೀರ್ ಸಿಂಗ್ ಅವರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿ ನಡೆದಿದೆ. ಗಣ್ಯರ ಸಮ್ಮುಖದಲ್ಲಿ ತಾರ ಜೋಡಿಯ ಆರತಕ್ಷತೆ ಕಾರ್ಯಕ್ರಮ ನೆರವೇರಿದೆ.

'ಬಾಜಿರಾವ್ ಮಸ್ತಾನಿ'ಯ ಈ ಕಾರ್ಯಕ್ರಮಕ್ಕೆ ಕನ್ನಡ ಕೆಲವು ನಟರು ಬರುವ ನಿರೀಕ್ಷೆ ಇತ್ತು. ಆದರೆ, ಇಡೀ ಕಾರ್ಯಕ್ರಮದಲ್ಲಿ ಕನ್ನಡದ ಚಿತ್ರರಂಗದ ಯಾವ ಗಣ್ಯರು ಕಾಣಿಸಿಕೊಳ್ಳಲಿಲ್ಲ. ಲೀಲಾ ಪ್ಯಾಲೇಸ್ ನಲ್ಲಿ ಎಲ್ಲಿ ನೋಡಿದರು ಸ್ಯಾಂಡಲ್ ವುಡ್ ಚಿತ್ರರಂಗದ ಯಾರೂ ಇರಲಿಲ್ಲ.

ಬೆಂಗಳೂರಿನ ದೀಪಿಕಾ - ರಣ್ವೀರ್ ಆರತಕ್ಷತೆಯಲ್ಲಿ ಭಾಗಿಯಾಗಿದ್ದ ಗಣ್ಯರು

ಎಲ್ಲದಕ್ಕಿಂತ ಹೆಚ್ಚಾಗಿ ದೀಪಿಕಾ ಪಡುಕೋಣೆ ಕನ್ನಡ ಸಿನಿಮಾದ ಮೂಲಕ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದರು. ಅಲ್ಲದೆ, ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಕನ್ನಡ ಚಿತ್ರರಂಗದಲ್ಲಿ ಕೆಲವರ ಜೊತೆಗೆ ಒಡನಾಡ ಹೊಂದಿದ್ದರು.

ಹೀಗಿದ್ದರು, ಆರತಕ್ಷತೆ ಕಾರ್ಯಕ್ರಮದಲ್ಲಿ ಯಾವ ಸ್ಯಾಂಡಲ್ ವುಡ್ ನಟ ನಟಿಯರು ಭಾಗಿಯಾಗದೆ ಇರುವುದು ಆಶ್ಚರ್ಯ ಮೂಡಿಸಿತು. ಮುಂದೆ ಓದಿ..

   
 
ಹೆಲ್ತ್