Back
Home » ಆರೋಗ್ಯ
ಮೊಟ್ಟೆ ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆಯೇ?
Boldsky | 28th Nov, 2018 01:30 PM
 • ಮೊಟ್ಟೆ ತಿನ್ನುವುದರಿಂದ ವಾಯುಪ್ರಕೋಪ ಎದುರಾಗುವುದು ಖಚಿತವೇ?

  ಹೌದು, ಮೊಟ್ಟೆಯಿಂದಲೂ ವಾಯುಪ್ರಕೋಪ ಎದುರಾಗಬಹುದು. ಮೊಟ್ಟೆಯನ್ನು ಸೇವಿಸಿದ ಬಳಿಕ ಮೊಟ್ಟೆಯ ಹಳದಿಭಾಗದಲ್ಲಿರುವ ಕೆಲವು ಪ್ರೋಟೀನುಗಳನ್ನು ಪೂರ್ಣವಾಗಿ ಒಡೆಯಲು ನಮ್ಮ ಜೀರ್ಣಾಂಗಗಳು ಪೂರ್ಣವಾದ ಕ್ಷಮತೆ ಪಡೆದಿಲ್ಲವಾದ ಕಾರಣ (ನಾವು ಮಿಶ್ರಾಹಾರಿಗಳು, ಅತ್ತ ಪೂರ್ಣ ಮಾಂಸಾಹಾರಿಗಳೂ ಅಲ್ಲದ, ಇತ್ತ ಪೂರ್ಣ ಸಸ್ಯಾಹಾರಿಗಳೂ ಅಲ್ಲದ ರಚನೆ) ಕೆಲವು ಅನಿಲಗಳು ಉತ್ಪತ್ತಿಯಾಗುತ್ತವೆ. ನಾವು ಸೇವಿಸುವ ಹಾಗೂ ನಾವು ಪೂರ್ಣವಾಗಿ ಜೀರ್ಣಿಸಿಕೊಳ್ಳಬಹುದಾದ ಆಹಾರಗಳಿಗೆ ಸೂಕ್ತವಾದ ಕಿಣ್ವಗಳನ್ನು ದೇಹ ಉತ್ಪಾದಿಸುತ್ತದೆ ಹಾಗೂ ಇವುಗಳನ್ನು ಚಿಕ್ಕದಾಗಿ ವಿಭಜಿಸಿ ಸಕ್ಕರೆ ಮತ್ತು ಪ್ರೋಟೀನುಗಳನ್ನಾಗಿಸುತ್ತವೆ. ನಮ್ಮ ದೇಹದಲ್ಲಿ ಹುಲ್ಲಿನಲ್ಲಿರುವ ಸೆಲ್ಯುಲೋಸ್ ಎಂಬ ಭಾಗವನ್ನು ಒಡೆಯಲು ಶಕ್ತವಿರುವ ಯಾವುದೇ ಕಿಣ್ವ ನಮ್ಮ ದೇಹದಲ್ಲಿ ಉತ್ಪತ್ತಿಯಾಗದ ಕಾರಣ ನಾವು ಹುಲ್ಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಅಂತೆಯೇ ತರಕಾರಿಗಳನ್ನೂ ಬೇಯಿಸಿದಾಗ ಮಾತ್ರವೇ ಜೀರ್ಣಿಸಿಕೊಳ್ಳಲು ಸಾಧ್ಯ. ಮೊಟ್ಟೆಯಲ್ಲಿರುವ ಕೆಲವು ಪ್ರೋಟೀನುಗಳನ್ನು ಒಡೆಯುವ ಕಿಣ್ವವೂ ಇಲ್ಲದ ಕಾರಣ ಈ ಪ್ರೋಟೀನುಗಳು ಜೀರ್ಣವ್ಯವಸ್ಥೆಯಲ್ಲಿ ಹಾಗೇ ಉಳಿದುಬಿಡುತ್ತವೆ. ಇವುಗಳನ್ನು ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಈ ಪ್ರೋಟೀನುಗಳನ್ನು ತಮ್ಮ ಸುತ್ತ ಆವರಿಸಿ ಕೊಳೆಸಲು ಶುರುಮಾಡುತ್ತವೆ. ಇದೇ ಅನಿಲ ಉತ್ಪಾದನೆ ಹಾಗೂ ಅಸಹಿಷ್ಣುತೆಗೆ ಕಾರಣ.

  Most Read:ಮೊಟ್ಟೆ ತಿನ್ನುವುದರಿಂದ ಹೊಟ್ಟೆಯಲ್ಲಿ ವಾಯುಪ್ರಕೋಪ ಉಂಟಾಗುತ್ತದೆಯೇ?


 • ಸೆಡೆತ, ವಾಕರಿಕೆ, ಅತಿಸಾರ ಹಾಗೂ ವಾಂತಿ ಎದುರಾದರೆ...

  ಒಂದು ವೇಳೆ ನಿಮಗೆ ಮೊಟ್ಟೆಯ ಅಸಹಿಷ್ಣುತೆ ಇದ್ದು ಇದರಿಂದಾಗಿಯೇ ವಾಯುಪ್ರಕೋಪ ಎದುರಾಗುತ್ತಿರಬಹುದು ಎಂಬ ಅನುಮಾನ ಎದುರಾದರೆ ಇದಕ್ಕೆ ಪ್ರಾರಂಭಿಕ ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಈ ಸೂಚನೆಗಳೆಂದರೆ ಹೊಟ್ಟೆಯುಬ್ಬರಿಕೆ, ಹೊಟ್ಟೆಯ ಕೆಳಭಾಗದಲ್ಲಿ ಕೊಂಚ ನೋವು ಕಾಣಿಸಿಕೊಳ್ಳುವುದು, ಸೆಡೆತ, ವಾಕರಿಕೆ, ಅತಿಸಾರ ಹಾಗೂ ವಾಂತಿ ಎದುರಾಗಬಹುದು. ಮೊಟ್ಟೆಯನ್ನು ಸೇವಿಸಿದ ಅರ್ಧ ಘಂಟೆಯಿಂದ ಹಿಡಿದು ಎರಡು ಘಂಟೆಯ ಅವಧಿಯಲ್ಲಿ ಈ ಲಕ್ಷಣಗಳು ಅತಿ ಹೆಚ್ಚಾಗಿ ಕಂಡುಬಂದರೆ ನಿಮ್ಮ ಅನುಮಾನ ಖಚಿತಪಡಿಸಿಕೊಳ್ಳಬಹುದು. ಆದರೆ ಈ ಸೂಚನೆಗಳ ಪ್ರಾಬಲ್ಯ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಬೇರೆಯಾಗಿದ್ದು ಆಯಾ ವ್ಯಕ್ತಿಯ ನೈಸರ್ಗಿಕ ಅಸಹಿಷ್ಣುತೆಯನ್ನು ಅನುಸರಿಸಿರುತ್ತದೆ.


 • ವೈದ್ಯರ ಸಲಹೆ ಪಡೆದುಕೊಳ್ಳಿ

  ನಮ್ಮ ದೊಡ್ಡ ಕರುಳಿನಲ್ಲಿ ಈ ಸಂಗ್ರಹಗೊಂಡ ಪ್ರೋಟೀನುಗಳನ್ನು ಒಡೆಯುವ ಕಿಣ್ವಗಳನ್ನು ಉತ್ಪಾದಿಸುವ ಸಾಧ್ಯತೆಯೂ ಇದೆ. ಈ ಸಂದರ್ಭದಲ್ಲಿ ಮೊಟ್ಟೆ ಪೂರ್ಣವಾಗಿ ಜೀರ್ಣಗೊಂಡು ಕೇವಲ ವಾಯುಪ್ರಕೋಪ ಮಾತ್ರವೇ ಎದುರಾಗುತ್ತದೆ. ವಾಯುಬಿಡುಗಡೆಯಾದ ಬಳಿಕ ಯಾವುದೇ ತೊಂದರೆ ಇರುವುದಿಲ್ಲ. ಆದರೆ, ಹೀಗಲ್ಲದೇ, ಹೊಟ್ಟೆಯಲ್ಲಿ ನೋವು, ಮಲ ಅಥವಾ ವಾಂತಿಯಲ್ಲಿ ರಕ್ತ ಕಂಡುಬಂದರೆ ತಕ್ಷಣವೇ ವೈದ್ಯರ ನೆರವು ಪಡೆಯುವುದು ಅವಶ್ಯವಾಗಿದೆ.

  Most Read: ದಿನಕ್ಕೆ ಮೂರು ಮೊಟ್ಟೆಗಳನ್ನು ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ!


 • ಮೊಟ್ಟೆ ತಿಂದ ಬಳಿಕ ಎದುರಾಗುವ ವಾಯುಪ್ರಕೋಪಕ್ಕೆ ಚಿಕಿತ್ಸೆ

  ಒಂದು ವೇಳೆ ನಿಮಗೆ ಮೊಟ್ಟೆಯ ಅಸಹಿಷ್ಣುತೆ ಇರುವುದು ಖಚಿತವಾದರೆ ಇದನ್ನು ಸೂಕ್ತ ಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಇದಕ್ಕೆ ಪ್ರಥಮವಾಗಿ ಈ ಅಸಹಿಷ್ಣುತೆಗೆ ಕಾರಣವೇನು ಎಂದು ಅರಿತುಕೊಳ್ಳಬೇಕು. ಕಾರಣ ತಿಳಿದುಬಂದರೆ ಚಿಕಿತ್ಸೆ ಸುಲಭ. ಈ ಕಾರಣವನ್ನು ಕಂಡುಕೊಳ್ಳಲು ವಾಯುಪ್ರಕೋಪ ರಾಸಾಯನಶಾಸ್ತ್ರಜ್ಞ (gastroenterologist) ರ ನೆರವನ್ನು ಪಡೆಯಬೇಕು. ಇವರು ಸೂಕ್ತ ಪರೀಕ್ಷೆಗಳಿಂದ ಅಗತ್ಯ ಮಾಹಿತಿಯನ್ನು ಒದಗಿಸಿ ಚಿಕಿತ್ಸೆಯನ್ನೂ ಸೂಚಿಸುತ್ತಾರೆ. ಈ ತೊಂದರೆ ಇದೆ ಎಂದು ಖಚಿತವಾದ ಬಳಿಕ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಮೊಟ್ಟೆ ಮತ್ತು ಮೊಟ್ಟೆಯಾಧಾರಿತ ಆಹಾರಗಳನ್ನು ಸೇವಿಸುವುದನ್ನು ತಕ್ಷಣ ನಿಲ್ಲಿಸುವುದು.


 • ಇಂತಹ ಸಂಗತಿಗಳ ಬಗ್ಗೆ ನೆನಪಿರಲಿ

  ಮೊಟ್ಟೆಯಾಧಾರಿತ ಆಹಾರಗಳು ಮಾರುಕಟ್ಟೆಯಲ್ಲಿ ಹಲವು ವಿಧ ಮತ್ತು ಹೆಸರುಗಳಿಂದ ಮಾರಲ್ಪಡುತ್ತವೆ. ಉದಾಹರಣೆಗೆ ಮೊಟ್ಟೆಯ ಪುಡಿ, ಗ್ಲೋಬುಲಿನ್, ಪ್ರೋಟೀನ್, ಲಿಸೈಥಿನ್, ಒವ್ಯೂಮ್ಯೂಸಿನ್ ಮೊದಲಾದವು. ಕಾನೂನಿನ ಪ್ರಕಾರ ಯಾವುದೇ ಉತ್ಪನ್ನದಲ್ಲಿ ಬಳಸಿರುವ ಆಹಾರಗಳ ವಿವರಗಳನ್ನು ಕಡ್ಡಾಯವಾಗಿ ಮುದ್ರಿಸಲೇಬೇಕಾಗುತ್ತದೆ. ಈ ವಿವರಗಳಲ್ಲಿ ಈ ಹೆಸರುಗಳು ಅಥವಾ ಮೊಟ್ಟೆಯ ಉಲ್ಲೇಖವಿದ್ದರೆ ಈ ಆಹಾರಗಳಿಂದ ದೂರವಿರಬೇಕು.

  Most Read: ಮೊಟ್ಟೆಯ ಹಿಂದಿರುವ ಸತ್ಯಾಸತ್ಯತೆ- ಎಲ್ಲವೂ ಹಣ ಮಾಡುವ ಕುತಂತ್ರ!


 • ಗೊಂದಲಕ್ಕೆ ತೆರೆ

  ಮೊಟ್ಟೆಯ ಅಸಹಿಷ್ಣುತೆ ಮತ್ತು ಮೊಟ್ಟೆಯ ಅಲರ್ಜಿ ಎರಡೂ ಬೇರೆಬೇರೆಯಾಗಿವೆ. ನಿಮಗೆ ಇವೆರಡರಲ್ಲಿ ಯಾವುದು ಅನ್ವಯಯಾಗುತ್ತದೆ ಎಂಬುದರ ಬಗ್ಗೆ ನಿಮಗೆ ಚಿಕಿತ್ಸೆ ನೀಡಿದ ವೈದ್ಯರೇ ಸೂಕ್ತ ವಿವರ ನೀಡಬಲ್ಲರು. ವಾಯುಪ್ರಕೋಪ ಉಂಟಾಗಿರುವುದು ಇವೆರಡರಲ್ಲಿ ಯಾವ ಕಾರಣದಿಂದ ಎಂಬ ಗೊಂದಲವನ್ನು ನಿವಾರಿಸಿಕೊಳ್ಳುವುದು ಅಗತ್ಯವಾಗಿದೆ. ಸೂಕ್ತ ವಿವರ ಮತ್ತು ಮಾಹಿತಿಗಳ ಮೂಲಕ ಸೂಕ್ತ ವೈದ್ಯಕೀಯ ನೆರವನ್ನು ಪಡೆಯುವುದರ ಜೊತೆಗೇ ಮೊಟ್ಟೆ ಮತ್ತು ಆಧಾರಿತ ಉತ್ಪನ್ನಗಳನ್ನು ಸೇವಿಸದಿರುವ ಮೂಲಕ ಈ ತೊಂದರೆಯಿಂದ ಶೀಘ್ರವೇ ಹೊರಬರಬಹುದು.


 • ವಾಯು ಉತ್ಪಾದನೆ ಅತ್ಯಂತ ಸಾಮಾನ್ಯ ಪ್ರಕ್ರಿಯೆ

  ಪ್ರತಿಯೊಬ್ಬರ ಜೀರ್ಣವ್ಯವಸ್ಥೆಯಲ್ಲಿಯೂ ವಾಯು ಉತ್ಪಾದನೆ ಅತ್ಯಂತ ಸಾಮಾನ್ಯವಾಗಿದೆ. ಒಂದು ಸರಾಸರಿಯ ಪ್ರಕಾರ ಪ್ರತಿದಿನವೂ ಓರ್ವ ಆರೋಗ್ಯವಂತ ವ್ಯಕ್ತಿಯಿಂದ ಹದಿಮೂರು ಬಾರಿ ವಾಯು ಬಿಡುಗಡೆಯಾಗುತ್ತದೆ. ಇದು ಸಾಮಾನ್ಯವಾಗಿದೆ ಹಾಗೂ ನಿಜವಾಗಿಯೂ ಆರೋಗ್ಯಕ್ಕೆ ಪೂರಕ! ಆದರೆ ಇದು ಅತಿ ಹೆಚ್ಚಾಗಿದ್ದು ಹೊಟ್ಟೆಯ ಭಾಗದಲ್ಲಿ ನೋವುಂಟುಮಾಡಿದ್ದರೆ ಮಾತ್ರ ಇದು ಕಾಳಜಿ ವಹಿಸಬೇಕಾದ ವಿಷಯವಾಗಿದೆ. ಒಂದು ವೇಳೆ ಈ ವಾಯುಪ್ರಕೋಪಕ್ಕೆ ಮೊಟ್ಟೆಯೇ ಕಾರಣವೆಂದಾದರೆ ಅನಿವಾರ್ಯವಾಗಿ ಮೊಟ್ಟೆಯನ್ನು ನಿಮ್ಮ ನೆಚ್ಚಿನ ಆಹಾರದ ಪಟ್ಟಿಯಿಂದ ನಿವಾರಿಸಬೇಕು ಹಾಗೂ ಬದಲಾವಣೆಯನ್ನು ಗಮನಿಸಬೇಕು. ತೊಂದರೆ ಇಲ್ಲವಾದರೆ ಸರಿ, ಇಲ್ಲದಿದ್ದರೆ ವೈದ್ಯರ ಭೇಟಿ ಅನಿವಾರ್ಯ.
ಸಾಮಾನ್ಯವಾಗಿ ವಾಯುಪ್ರಕೋಪ (ಹೊಟ್ಟೆಯಲ್ಲಿ ಗ್ಯಾಸ್) ಎದುರಾದರೆ ನಾವೆಲ್ಲರೂ ಇದಕ್ಕೆ ನಾವು ತಿಂದ ಯಾವ ಆಹಾರ ಕಾರಣವಾಗಿರಬಹುದು ಎಂದು ಚಿಂತಿಸುತ್ತೇವೆ. ಬೇಯಿಸಿದ ಮೊಟ್ಟೆಗಳನ್ನು ಸೇವಿಸಿದ ಬಳಿಕ ಎದುರಾಗುವ ವಾಯುಪ್ರಕೋಪ ಸಹಿಸಲಸಾಧ್ಯ ಎನ್ನುವವರೂ ಇದ್ದಾರೆ. (ಹಲಸಿನ ಬೀಜದ ವಾಯುಪ್ರಕೋಪವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಸುತ್ತಲಿದ್ದವರೆಲ್ಲರೂ ಹೇಳುತ್ತಾರೆ). ಸಾಮಾನ್ಯವಾಗಿ ಕೆಲವು ಆಹಾರಗಳು ಕರುಳುಗಳಲ್ಲಿ ಜೀರ್ಣವಾಗುವ ವೇಳೆ ಕೆಲವು ಅಂಶಗಳನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಕೆಲವು ಅನಿಲಗಳು ಬಿಡುಗಡೆಯಾಗುವುದೇ ಇದಕ್ಕೆ ಕಾರಣ.

ಪ್ರತಿಬಾರಿಯೂ ಬೇಯಿಸಿದ ಮೊಟ್ಟೆಗಳನ್ನು ಸೇವಿಸಿದಾದ ವಾಯುಪ್ರಕೋಪದ ಜೊತೆಗೇ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳೂ ಎದುರಾದರೆ ಇದಕ್ಕೆ ಮೊಟ್ಟೆಯ ಅಸಹಿಷ್ಣುತೆ (intolerance)ಎಂದು ಕರೆಯಬಹುದು. . ಈ ಅಸಹಿಷ್ಣುತೆ ಮೊಟ್ಟೆಯ ಅಲರ್ಜಿಗಿಂತ ಭಿನ್ನವಾಗಿವೆ. ಈ ಅಸಹಿಷ್ಣುತೆಗೆ ಕಾರಣವೆಂದರೆ ಜೀರ್ಣಕ್ರಿಯೆಯ ಮೂಲಕ ಆಹಾರವನ್ನು ಪೂರ್ಣವಾಗಿ ಒಡೆಯಲು ಅಗತ್ಯವಾಗಿರುವ ಕೆಲವು ಕಿಣ್ವಗಳ ಕೊರತೆ. ಮೊಟ್ಟೆಯ ಅಲರ್ಜಿ ಎಂದರೆ ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಒಂದು ವಿಧಾನವಾಗಿದ್ದು ಮೊಟ್ಟೆಯ ಪ್ರೋಟೀನುಗಳು ತನಗೆ ಸಲ್ಲದು ಎಂದು ಸೂಚಿಸುವ ವಿಧಾನವಾಗಿದೆ. ವಾಯುಪ್ರಕೋಪಕ್ಕೆ ಮೊಟ್ಟೆಯ ಅಲರ್ಜಿಯೂ ಒಂದು ಕಾರಣವಾಗಿದ್ದು ಇತರ ಜೀರ್ಣಸಂಬಂಧಿತ ತೊಂದರೆಗಳನ್ನೂ ಎದುರಿಸಬೇಕಾಗಿ ಬರಬಹುದು.

   
 
ಹೆಲ್ತ್