Back
Home » ಆರೋಗ್ಯ
ಅವಾಗವಾಗ ಬಲ ಭಾಗದಲ್ಲಿ ಕಾಡುವ ತಲೆ ನೋವಿಗೆ ಕಾರಣವೇನು?
Boldsky | 29th Nov, 2018 10:43 AM
 • ಜೀವನಕ್ರಮದ ಪ್ರಭಾವ

  ಈ ಬಗೆಯ ತಲೆನೋವಿಗೆ ಕಾರಣವಾಗುವ ಅಂಶಗಳೆಂದರೆ:

  * ಮಾನಸಿಕ ಒತ್ತಡ
  * ಆಯಾಸ
  * ಕಾಲ ಕಾಲಕ್ಕೆ ಸೇವಿಸಬೇಕಾದ ಆಹಾರ ಸೇವಿಸದಿರುವುದು
  * ಕುತ್ತಿಗೆಯ ಸ್ನಾಯುಗಳ ತೊಂದರೆಗಳು
  * ಕೆಲವು ಔಷಧಿಗಳ ಅಡ್ಡ ಪರಿಣಾಮಗಳು, ಉದಾಹರಣೆಗೆ ಸುಲಭವಾಗಿ ಲಭಿಸುವ ನೋವು ನಿವಾರಕಗಳ ಅತಿಯಾದ ಬಳಕೆ
  * ಸೋಂಕುಗಳು ಮತ್ತು ಅಲರ್ಜಿಗಳು
  * ಕುಹರದ (sinus)ಸೋಂಕು ಮತ್ತು ಅಲರ್ಜಿ
  ಈ ಮೂಲಕ ಎದುರಾಗುವ ತಲೆನೋವಿಗೆ ಕುಹರ, ಅಂದರೆ ನಮ್ಮ ಮೂಗಿನ ಮೇಲೆ, ಹಣೆಯ ಹಿಂಭಾಗದ ಟೊಳ್ಳುಭಾಗದಲ್ಲಿ ಎದುರಾಗುವ ಸೋಂಕು. ಈ ತಲೆನೋವು ತಲೆಯ ಒಂದು ಭಾಗದಲ್ಲಿ ನೋವು ತರಿಸುವ ಜೊತೆಗೇ ಕೆನ್ನೆಯ ಮೂಳೆ ಮತ್ತು ಹಣೆಯಯಲ್ಲಿಯೂ ನೋವು ಮತ್ತು ಒತ್ತಡವನ್ನು ತಂದಿರಿಸುತ್ತದೆ.
  * ಔಷಧಿಗಳ ಅತಿಯಾದ ಬಳಕೆ

  ಯಾವುದೋ ತೊಂದರೆ ಎದುರಾದರೆ ಬಳಸುವ ಔಷಧಿಯೊಂದರ ಬಳಕೆ ಅತಿಯಾದರೆ ಇದು ತಲೆನೋವಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ತಲೆನೋವು ಎಂದು ಬರುವವರಲ್ಲಿ ಕಂಡುಬರುವ ಅತಿ ಸಾಮಾನ್ಯ ಕಾರಣಗಳಲ್ಲಿ ಇದು ಎರಡನೆಯದಾಗಿದೆ. ಒಟ್ಟಾರೆ ಜನಸಂಖ್ಯೆಯ ಶೇಖಡಾ ಐದರಷ್ಟು ಜನರಲ್ಲಿ ಈ ತೊಂದರೆ ಎದುರಾಗುತ್ತದೆ. ಅಲ್ಲದೇ ಈ ತೊಂದರೆ ಸಾಮಾನ್ಯವಾಗಿ ನಿದ್ದೆಯಿಂದ ಎದ್ದ ತಕ್ಷಣ ತಲೆನೋವು ಎದುರಾಗುವುದು ಗರಿಷ್ಟ ಪ್ರಮಾಣದಲ್ಲಿರುತ್ತದೆ.

  Most Read: ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು


 • ನರವ್ಯವಸ್ಥೆಯ ಕಾರಣಗಳು

  ಆಕ್ಸಿಪೀಟಲ್ ನ್ಯೂರಾಲ್ಜಿಯಾ (Occipital neuralgia)

  ನಮ್ಮ ಕುತ್ತಿಗೆಯ ಮೇಲ್ಭಾಗದಿಂದ ಎರಡು ಪ್ರಮುಖ ನರಗಳು ಸ್ನಾಯುಗಳ ಮೂಲಕ ಹಾಯುತ್ತಾ ನೆತ್ತಿಯನ್ನು ತಲುಪುತ್ತವೆ. ಈ ನರಗಳಲ್ಲೊಂದಕ್ಕಾದರೂ ಏನಾದರೂ ಪ್ರಚೋದನೆ ದೊರೆತರೆ ಇದು ತಲೆಯಲ್ಲಿ ಸಿಡಿತ, ಮಿಂಚು ಹೊಳೆಯುವಂತೆ ಅಥವಾ ಕಚಗುಳಿಯಿಟ್ಟಂತೆ ನೋವನ್ನುಂಟುಮಾಡುತ್ತದೆ. ಸಾಮಾನ್ಯವಾಗಿ ಪ್ರಚೋದಿತ ನರವನ್ನಾಧರಿಸಿ ಇದು ತಲೆಯ ಒಂದು ಭಾಗದಲ್ಲಿ ಮಾತ್ರವೇ ಆವರಿಸುತ್ತದೆ.


 • ಟೆಂಪೋರಲ್ ಆರ್ಟಿರೈಟಿಸ್ (Temporal arteritis)

  ನಮ್ಮ ತಲೆ ಮತ್ತು ಮೆದುಳಿಗೆ ರಕ್ತಪೂರೈಸುವ ನರಗಳಲ್ಲಿ ಎಲ್ಲಾದರೂ ಸೋಂಕು ಎದುರಾಗಿದ್ದರೆ ಅಥವಾ ಘಾಸಿಗೊಂದಿದ್ದರೆ ಈ ಮೂಲಕವೂ ನೋವು ಎದುರಾಗಬಹುದು. ಸೋಂಕು ಉಂಟಾದ ನರದ ಮೂಲಕ ರಕ್ತವನ್ನು ಮುಂದೂಡಿದಾಗ ಎದುರಾಗುವ ಪ್ರತಿರೋಧ ಒತ್ತಡವನುಂಟುಮಾಡುತ್ತದೆ ಹಾಗೂ ಇದರಿಂದ ಮೆದುಳಿನ ಯಾವ ಭಾಗಕ್ಕೆ ರಕ್ತ ಪೂರೈಕೆ ಕಡಿಮೆಯಾಗುವುದಿಲ್ಲವೋ ಅಥವಾ ಕಡಿಮೆ ಪೂರೈಕೆಯಾಗುತ್ತದೆಯೋ ಆ ಭಾಗ ನಿರ್ವಹಿಸುವ ಭಾಗಗಳು ಬಾಧಿತಗೊಳ್ಳುತ್ತವೆ. ಸಾಮಾನ್ಯವಾಗಿ ಕಣ್ಣುಗಳು ಮಂಜಾಗುವುದು, ಭುಜ ಅಥವಾ ನಿತಂಬಗಳಲ್ಲಿ ನೋವು ಹಾಗೂ ಇದರೊಂದಿಗೆ ತೂಕದಲ್ಲಿ ಇಳಿಕೆಯೂ ಕಂಡುಬರುತ್ತದೆ.


 • ಟ್ರೈಗೆಮಿನಲ್ ನ್ಯೂರಾಲ್ಜಿಯಾ (Trigeminal neuralgia)

  ಸಾಮಾನ್ಯವಾಗಿ ಮುಖದ ಭಾವನೆಗಳನ್ನು ವ್ಯಕ್ತಪಡಿಸಲು ಬಳಕೆಯಾಗುವ ನರಗಳ ಮೇಲೆ ಯಾವುದಾದರೂ ಘಾಸಿಯಾದರೆ ಈ ಮೂಲಕ ಎದುರಾಗುವ ತಲೆನೋವು ಗಂಭೀರ ಸ್ವರೂಪದ್ದಾಗಿರುತ್ತದೆ. ಈ ತೊಂದರೆ ಇರುವ ವ್ಯಕ್ತಿಗಳಿಗೆ ಮುಖದಲ್ಲಿ ಕಿಂಚಿತ್ತೂ ಪ್ರಚೋದನೆ ಪಡೆದರೂ ಇದು ತಲೆನೋವನ್ನು ಪ್ರಚೋದಿಸಬಹುದು.


 • ಇತರ ಕಾರಣಗಳು

  ಒಂದೇ ಭಾಗದ ತಲೆನೋವಿಗೆ ಈ ಕೆಳಗಿನ ಸ್ಥಿತಿಗಳೂ ಕಾರಣವಾಗಬಹುದು:
  • ದೈಹಿಕ ಆಘಾತ
  • ಶಿಥಿಲವಾದ ನರ ಉಬ್ಬಿಕೊಳ್ಳುವುದು (aneurysm)
  * ಗಡ್ಡೆಗಳು, ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿದ್ದರೂ, ಬೆಳೆದ ಹಂತದಲ್ಲಿದ್ದರೂ ಕ್ಯಾನ್ಸರ್ ಉಂಟುಮಾಡುವಂತಹವು.
  ಈ ಮೇಲಿನ ಕಾರಣಗಳಿದ್ದರೆ ಇದನ್ನು ಕೇವಲ ವೈದ್ಯರು ಮಾತ್ರವೇ ಸೂಕ್ತ ಚಿಕಿತ್ಸೆಗಳಿಂದ ಇದರ ಇರುವಿಕೆಯನ್ನು ಕಂಡುಕೊಳ್ಳಬಲ್ಲದು.


 • ತಲೆನೋವಿನ ಪ್ರಕಾರಗಳು

  ತಲೆನೋವಿನಲ್ಲಿ ಹಲವು ವಿಧಗಳಿವೆ. ಪ್ರತಿ ವಿಧಕ್ಕೂ ತನ್ನದೇ ಆದ ಕಾರಣಗಳು ಮತ್ತು ಲಕ್ಷಣಗಳಿವೆ. ಈ ವಿಧಗಳನ್ನು ಅರಿಯುವ ಮೂಲಕ ಹಾಗೂ ಇವುಗಳ ಬಗ್ಗೆ ನಿಖರವಾದ ವಿವರಗಳನ್ನು ನೀಡುವ ಮೂಲಕ ವೈದ್ಯರಿಗೆ ತಲೆನೋವಿನ ಕಾರಣ ಪತ್ತೆ ಹಚ್ಚಲು ಹಾಗೂ ಸೂಕ್ತ ಚಿಕಿತ್ಸೆ ನೀಡಲು ಅಪಾರ ನೆರವಾಗುತ್ತದೆ.


 • ಮಾನಸಿಕ ಒತ್ತಡದ ತಲೆನೋವು

  ಅತಿ ಹೆಚ್ಚು ವಯಸ್ಕರಲ್ಲಿ ಕಂಡುಬರುವ ತಲೆನೋವು ಸರಿಸುಮಾರು ನೂರಕ್ಕೆ ಎಪ್ಪತ್ತೈದು ಸಂಧರ್ಭಗಳಲ್ಲಿರುತ್ತದೆ. ಆದರೆ ಇದು ಸರಿಸುಮಾರು ತಲೆಯ ಮಧ್ಯಭಾಗದಲ್ಲಿದ್ದು ಎರಡೂ ಬದಿಗಳಲ್ಲಿರುತ್ತದೆ. ಕೆಲವು ಸಂದರ್ಭಗಳಲ್ಲಿ ಮಾತ್ರವೇ ಇವು ತಲೆಯ ಒಂದೇ ಬದಿಯಲ್ಲಿ ಕಾಣಿಸಿಕೊಳ್ಳುತ್ತವೆ.
  ತಲೆನೋವಿನ ಅನುಭವ: ಈ ನೋವು ಅಲ್ಪ ಅನಿಸುವುದರಿಂದ ಹಿಡಿದು ಭಾರೀ ಎನಿಸುವಷ್ಟು ಪ್ರಬಲವಾಗಿರುತ್ತದೆ. ಜೊತೆಗೇ ಭುಜ ಮತ್ತು ಕುತ್ತಿಗೆಯಲ್ಲಿಯೂ ನೋವು ಕಾಣಿಸಿಕೊಳ್ಳಬಹುದು.

  Most Read: ನೆಗಡಿ-ತಲೆನೋವಿಗೆಲ್ಲಾ ವೈದ್ಯರ ಹಂಗೇಕೆ?


 • ಮೈಗ್ರೇನ್ ತಲೆನೋವು

  ತಲೆನೋವುಗಳಲ್ಲಿಯೇ ಅತ್ಯುಗ್ರ ರೂಪವಾದ ಮೈಗ್ರೇನ್ ಸಾಮಾನ್ಯವಾಗಿ ತಲೆಯ ಎರಡೂ ಭಾಗಗಳಲ್ಲಿ ಏಕಸಮಾನವಾಗಿ ಕಾಣಬರುತ್ತದೆ. ಈ ನೋವು ಬೆಳಕು ಮತ್ತು ಶಬ್ದಗಳಿಗೆ ತೀವ್ರ ಸಂವೇದಿಯಾಗಿದ್ದು ಪ್ರಖರ ಬೆಳಕು ಅಥವಾ ತೀಕ್ಷ್ಣತರಂಗಗಳ ಧ್ವನಿಯಿಂದ ಭಾರೀ ಪ್ರಮಾಣದಲ್ಲಿ ಉಲ್ಬಣಗೊಳ್ಳುತ್ತದೆ. ಈ ಅವಸ್ಥೆಯಲ್ಲಿ ವಾಕರಿಕೆ, ವಾಂತಿಬಂದಂತಾದರೂ ವಾಂತಿಯಾಗದೇ ಇರುವುದು, ದೃಷ್ಟಿಯ ಕೇಂದ್ರಭಾಗ ಮಾಯವಾಗುವುದು ಅಥವಾ ತಲೆಯ ಕೇಂದ್ರಭಾಗದಲ್ಲಿ, ಕಣ್ಣುಗಳ ಹಿಂದೆ ಸೂಜಿಯಿಂದ ಚುಚ್ಚಿದಂತೆ ಅಥವಾ ಬೆಂಕಿ ಹಚ್ಚಿದಂತೆ ಉರಿಯತೊಡಗುತ್ತವೆ (paresthesia)
  ಈ ತಲೆನೋವಿನ ಅನುಭವ: ತಲೆಯೊಳಕ್ಕೊಂದು ಸುತ್ತಿಗೆಯಿಂದ ಹೊಡೆದಂತೆ ನೋವು ಬಿಟ್ಟು ಬಿಟ್ಟು ತಾರಕಕ್ಕೇರಬಹುದು, ಹಣೆಯ ಪಕ್ಕದ ನರಗಳು ರಕ್ತದಿಂದ ಉಬ್ಬಿಕೊಂಡು ರಕ್ತದ ಬಡಿತಕ್ಕನುಗುಣವಾಗಿ ಏರಿಳಿಯಬಹುದು.
  ಕೆಲವರಿಗೆ ತಲೆನೋವು ಉಗ್ರರೂಪ ತಳೆಯುವ ಮುನ್ನ ಅಥವಾ ನೋವಿನ ಸಮಯದಲ್ಲಿ ಬಣ್ಣದ ಮರೀಚಿಕೆಗಳು (auras)ಕಾಣಬರುತ್ತವೆ. ಈ ಮರೀಚಿಕೆಗಳು ಧನಾತ್ಮಕ ಅಥವಾ ಋಣಾತ್ಮಕ ಸೂಚನೆಗಳಾಗಿರಬಹುದು. ಧನಾತ್ಮಕ ಎಂದರೆ ಈ ನೋವಿಗೆ ಸೂಕ್ತ ವ್ಯವಸ್ಥೆಯನ್ನು ನಮ್ಮ ಕೇಂದ್ರ ನರವ್ಯವಸ್ಥೆ ಮಾಡಲು ಪ್ರಾರಂಭಿಸಿದ ಎಂಬ ಸೂಚನೆಯಾಗಿದೆ. ಧನಾತ್ಮಕ ಸೂಚನೆಗಳ ಉದಾಹರಣೆಗಳೆಂದರೆ:
  * ದೃಷ್ಟಿ ಮಂದವಾಗುವುದು ಅಥವಾ ಅಂಕುಡೊಂಕಾಗಿ ಕಾಣಿಸುವುದು ಅಥವಾ ಬೆಳಕಿನ ಮಿಂಚುಗಳು ಕಣ್ಣ ಮುಂದೆ ಮಿಂಚುವುದು
  * ತಲೆಯೊಳಗೆ ಚಿಕ್ಕದಾದ ತೀಕ್ಷ್ಣ ಕಂಪನವೊಂದು (tinnitus) ಅಥವಾ ವಿವರಿಸಲು ಸಾಧ್ಯವಾಗದ ಧ್ವನಿಗಳು ಮೂಡುವುದು
  * ತಲೆಯೊಳಗೆ ಬೆಂಕಿ ಹತ್ತಿಕೊಂಡಂತೆ ಉರಿಯುವುದು (somatosensory)
  * ಚಲನೆಯಲ್ಲಿ ತಡೆತಡೆದು ಮುಂದುವರೆಯುವುದು ಅಥವಾ ಕೆಲವು ಚಲನೆಗಳನ್ನು ಸತತ ಪುನರಾವರ್ತಿಸುವುದು (motor abnormalities)


 • ಋಣಾತ್ಮಕ ಸೂಚನೆಗಳು

  ಇವು ಒಟ್ಟಾರೆಯಾಗಿ ಯಾವುದೋ ಒಂದು ಕ್ಷಮತೆ ಉಡುಗಿರುವುದನ್ನು ಸೂಚಿಸುತ್ತದೆ, ದೃಷ್ಟಿ, ಶ್ರವಣ ಅಥವಾ ದೇಹದ ಚಲನೆ (ಪಾರ್ಶ್ವವಾಯು) ಇಲ್ಲವಾಗುವುದು


 • ಗೊನೆ ತಲೆನೋವು (Cluster headaches)

  ಸಾಮಾನ್ಯವಾಗಿ ಈ ಬಗೆಯ ತಲೆನೋವು ತಲೆಯ ಒಂದೇ ಭಾಗದಲ್ಲಿರುತ್ತದೆ. ಈ ನೋವು ಉಲ್ಬಣಗೊಂಡಾಗ ಚಡಪಡಿಕೆ, ತ್ವಚೆಯ ಬಣ್ಣ ಉಡುಗುವುದು ಅಥವಾ ಪರೆಯೇಳುವುದು, ಬಾಧೆಗೊಳಗಾದ ಬದಿಯ ಕಣ್ಣು ಕೆಂಪಗಾಗುವುದು, ಇದೇ ಬದಿಯ ಮೂಗು ಸತತ ಸೋರುವುದು ಎದುರಾಗುತ್ತದೆ.
  ತಲೆನೋವಿನ ಅನುಭವ: ತೀಕ್ಷ್ಣವಾದ ನೋವು, ವಿಶೇಷವಾಗಿ ತಲೆಯ ಯಾವ ಭಾಗದಲ್ಲಿ ನೋವಿದೆಯೋ ಆ ಬದಿಯ ಕಣ್ಣಿನ ಹಿಂಭಾಗದಲ್ಲಿ ನೋವು ಕೇಂದ್ರೀಕೃತವಾಗಿದ್ದು ಇಲ್ಲಿಂದ ನೋವು ಕುತ್ತಿಗೆ ಮುಖ ತಲೆ ಹಾಗೂ ಭುಜಗಳತ್ತಲೂ ಪಸರಿಸಬಹುದು.

  Most Read: ಬೆಳ್ಳಂಬೆಳಗ್ಗೆ ಕಾಡುವ ಮೈಗ್ರೇನ್ ತಲೆನೋವಿಗೆ ಪರಿಹಾರವೇನು?


 • ದೀರ್ಘಕಾಲ ಆವರಿಸುವ ತಲೆನೋವು (Chronic headaches)

  ಸಾಮಾನ್ಯವಾಗಿ ಈ ತಲೆನೋವು ತಿಂಗಳಲ್ಲಿ ಹದಿನೈದು ದಿನ ಅಥವಾ ಇದಕ್ಕೂ ಹೆಚ್ಚು ಕಾಲ ಕಾಡಬಹುದು. ಇವು ಮಾನಸಿಕ ಒತ್ತಡದ ತಲೆನೋವೂ ಆಗಿರಬಹುದು ಅಥವಾ ಸತತವಾಗಿ ಮರುಕಳಿಸುವ ಮೈಗ್ರೇನ್ ಸಹಾ ಆಗಿರಭುದು. ಒಂದು ವೇಳೆ ಈ ಪರಿಯ ತಲೆನೋವು ಎದುರಾದರೆ ಸ್ವತಃ ಚಿಕಿತ್ಸೆ ಪಡೆಯದೇ ವೈದ್ಯರ ಸಲಹೆ ಪಡೆಯಬೇಕು.


 • ವೈದ್ಯರನ್ನು ಯಾವಾಗ ಕಾಣುವುದು ಒಳ್ಳೆಯದು?

  ಅಪರೂಪದ ಸಂದರ್ಭಗಳಲ್ಲಿ ತಲೆನೋವು ಸಹಾ ತುರ್ತು ಪರಿಸ್ಥಿತಿಗೆ ತಲುಪಬಹುದು. ಒಂದು ವೇಳೆ ಯಾವುದಾದರೂ ಆಘಾತದ ಪರಿಣಾಮವಾಗಿ ತಲೆನೋವು ಎದುರಾದರೆ ಹಾಗೂ ಇದರ ಜೊತೆಗೆ ಕೆಳಗೆ ವಿವರಿಸಿದ ಯಾವುದೇ ಲಕ್ಷಣಗಳೂ ಇದ್ದರೆ ತಡಮಾಡದೇ ವೈದ್ಯರ ಬಳಿ ಧಾವಿಸಬೇಕು.
  * ಜ್ವರ
  * ಸೆಡೆತಗೊಂಡ ಕುತ್ತಿಗೆ
  * ವಿಪರೀತ ಆಯಾಸ
  * ದೃಷ್ಟಿ ಮಂದವಾಗಿರುವುದು
  * ದೃಷ್ಟಿ ಎರಡೆರಡಾಗಿ ಕಾಣುವುದು
  * ಎದುರಿನ ದೃಶ್ಯಗಳು ವಿರೂಪಗೊಳ್ಳುವುದು
  * ಹಣೆಯ ಪಕ್ಕದ, ಕಿವಿಯ ಮುಂಭಾಗದ ಭಾಗದಲ್ಲಿ ನೋವಾಗುವುದು
  * ಚಲನೆಯ ಸಮಯದಲ್ಲಿ ಅಥವಾ ಕೆಮ್ಮಿದಾದ ನೋವು ಅಪಾರವಾಗಿ ಏರುವುದು
  ಒಂದು ವೇಳೆ ತಲೆನೋವು ಹಠಾತ್ತಾಗಿ ಎದುರಾಗಿ ಉಲ್ಬಣಗೊಂಡರೆ, ರಾತ್ರಿ ತಲೆನೋವಿನಿಂದ ಎಚ್ಚರಾದರೆ ಅಥವಾ ಸಮಯಕಳೆದಂತೆ ಉಲ್ಬಣಗೊಳ್ಳುತ್ತಾ ಹೋದರೆ ತಕ್ಷಣವೇ ವೈದ್ಯರನ್ನು ಕಾಣಬೇಕು.


 • ವೈದ್ಯರು ನಿಮ್ಮ ತಲೆನೋವನ್ನು ಹೇಗೆ ತಪಾಸಿಸುತ್ತಾರೆ?

  ನಿಮ್ಮ ತಲೆನೋವಿನ ತೀವ್ರತೆ ಹಾಗೂ ಮರುಕಳಿಸುವ ಅವಧಿಯನ್ನು ಪರಿಗಣಿಸಿ ವೈದ್ಯರನ್ನು ಕಾಣಲು ನಿಗದಿಪಡಿಸಿಕೊಳ್ಳಿ.
  ವೈದ್ಯರು ನಿಮ್ಮ ಆರೋಗ್ಯದ ಪ್ರಾಥಮಿಕ ತಪಾಸಣೆಯನ್ನು ಮಾಡಿ ಬಳಿಕ ನಿಮ್ಮ ಆರೋಗ್ಯ ಇತಿಹಾಸದ ಬಗ್ಗೆ ವಿವರ ಪಡೆಯುತ್ತಾರೆ ಹಾಗೂ ಇದಕ್ಕೂ ಹಿಂದೆ ಈ ಅನುಭವಗಳಾಗಿತ್ತೇ ಎಂದು ವಿಚಾರಿಸುತ್ತಾರೆ.
  ಈ ಕೆಳಗಿನ ಪ್ರಶ್ನೆಗಳನ್ನು ವೈದ್ಯರು ಸಾಮಾನ್ಯವಾಗಿ ವಿಚಾರಿಸುವುದರಿಂದ ಇದಕ್ಕೆ ಮೊದಲೇ ಪ್ರಾಮಾಣಿಕ ಉತ್ತರಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದರೆ ಒಳ್ಳೆಯದು.
  * ತಲೆನೋವು ಯಾವಾಗಿನಿಂದ ಪ್ರಾರಂಭವಾಯಿತು?
  * ಈ ಸಂದರ್ಭದಲ್ಲಿ ನಿಮಗೆ ಯಾವ ಬಗೆಯ ಅನುಭವಗಳಾಗುತ್ತವೆ?
  * ತಲೆನೋವು ಮೊದಲ ಸೂಚನೆಯೇ?
  * ತಲೆನೋವು ಎಷ್ಟು ಬಾರಿ ಎದುರಾಗುತ್ತದೆ? ಇವು ದಿನವೂ ಬರುತ್ತದೆಯೇ?
  * ನಿಮ್ಮ ಕುಟುಂಬದಲ್ಲಿ ಇತರರಿಗೆ ಯಾರಿಗಾದರೂ ಈ ತೊಂದರೆ ಇತ್ತೇ? ಇದೆಯೇ? ಅಥವಾ ಮೈಗ್ರೇನ್ ಹಾಗೂ ಇತರ ಸಂಬಂಧಿತ ತೊಂದರೆಗಳಿತ್ತೇ? ಇವೆಯೇ?
  * ತಲೆನೋವಿಗೆ ಪ್ರಚೋದನೆ ನೀಡುವುದು ಯಾವುದು ಎಂದು ನಿಮಗೆ ಖಚಿತವಾಗಿದೆಯೇ?

  Most Read: ಕೀಲು, ಹಾಗೂ ಮಂಡಿ ನೋವು ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸುವ ನೈಸರ್ಗಿಕ ಜ್ಯೂಸ್‌ಗಳು


 • ತಲೆನೋವಿನ ಪರೀಕ್ಷೆ

  ತಲೆನೋವಿನ ನಿಖರವಾದ ಕಾರಣವನ್ನರಿಯಲು ವೈದ್ಯರು ಕೆಲವು ಪರೀಕ್ಷೆಗಳಿಗೆ ಒಳಪಡಲು ಸೂಚಿಸಬಹುದು. ಈ ಪರೀಕ್ಷೆಗಳಲ್ಲಿ ಕೆಳಗಿನವು ಒಳಗೊಂಡಿರಬಹುದು:
  * ರಕ್ತಪರೀಕ್ಷೆ, ನಿಮ್ಮ ಮೆದುಳು ಬಳ್ಳಿ, ಮೆದುಳು ಅಥವಾ ರಕ್ತದಲ್ಲಿ ಏನಾದರೂ ಸೋಂಕು ಇದೆಯೇ? ಅಥವಾ ರಕ್ತನಾಳಗಳಲ್ಲಿ ತೊಂದರೆ ಇದೆಯೇ, ವಿಷಕಾರಿ ವಸ್ತುಗಳು ರಕ್ತದಲ್ಲಿವೆಯೇ ಎಂಬ ವಿವರಗಳು ಇದರಿಂದ ದೊರಕುತ್ತದೆ.
  * ತಲೆಯ ಸಿಟಿ ಸ್ಕ್ಯಾನ್ : ಈ ಪರೀಕ್ಷೆಯಿಂದ ನಮ್ಮ ಮೆದುಳನ್ನು ಅಡ್ಡಲಾಗಿ ಕತ್ತರಿಸಿದರೆ ಸಿಗುವ ನೋಟ ಲಭಿಸುತ್ತದೆ ಹಾಗೂ ಇದರಿಂದ ಮೆದುಳಿನ ಒಳಗೆಲ್ಲಾದರೂ ಸೋಂಕು, ಗಡ್ಡೆ, ಹೆಪ್ಪುಗಟ್ಟಿದ ರಕ್ತ ಅಥವಾ ಮೆದುಳಿಗೆ ಏನಾದಗೂ ಆಘಾತವಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
  * ತಲೆಯ ಎಂ ಆರ್ ಐ ಸ್ಕ್ಯಾನ್: ತಲೆಯ ಒಳಭಾಗದಲ್ಲಿರುವ ನರಗಳು ಆರೋಗ್ಯಕರವಾಗಿವೆಯೇ? ನರವ್ಯವಸ್ಥೆ ಹಾಗೂ ಮೆದುಳಿನಲ್ಲಿ ಏನಾದರೂ ಅಸಹಜತೆ ಉಂಟಾಗಿದೆಯೇ, ಮೆದುಳಿನ ಒಳಗೆಲ್ಲಾದರೂ ರಕ್ತಸ್ರಾವವಾಗಿದೆಯೇ? ಪಾರ್ಶ್ವವಾಯುವಿನ ಸೂಚನೆ ಇದೆಯೇ ಅಥವಾ ಯಾವುದಾದರೂ ಸೋಂಕುಎದುರಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.


 • ತಲೆನೋವು ಎದುರಾದರೆ ತಕ್ಷಣ ಕಡಿಮೆಯಾಗಲು ಕ್ರಮಗಳು:

  ತಕ್ಷಣ ನೋವು ಕಡಿಮೆಯಾಗಲು ಕೆಲವಾರು ಕ್ರಮಗಳಿವೆ.
  * ತಲೆನೋವು ಪ್ರಾರಂಭವಾದ ತಕ್ಷಣ ಕುತ್ತಿಗೆಯ ಹಿಂಭಾಗಕ್ಕೆ ಶಾಖದ ಒತ್ತಡ ಒದಗಿಸಿ
  * ಬಿಸಿನೀರಿನ ಸ್ನಾನ ಮಾಡಿ
  * ಮಾನಸಿಕ ಒತ್ತಡ ನಿವಾರಣೆಯಾಗುವ ಭಂಗಿಯಲ್ಲಿ ಕುಳಿತುಕೊಳ್ಳಿ. ತಲೆ, ಕುತ್ತಿಗೆ ಹಾಗೂ ಭುಜಗಳು ನಿರಾಳವಾಗಿರುವಂತೆ ಮಾಡಿ
  * ಈಗಿರುವ ಕೋಣೆಯನ್ನು ಬಿಟ್ಟು ಬೇರೊಂದು ವಾತಾವರಣಕ್ಕೆ ಹೋಗಿ. ವಿಶೇಷವಾಗಿ ಬೆಳಕು, ಶಬ್ದ ಅಥವಾ ಕೆಲವು ಪರಿಮಳಗಳು ನಿಮಗೆ ತಲೆನೋವು ಅಥವಾ ಕಣ್ಣುಗಳಿತೆ ತ್ರಾಸ ನೀಡುವಂತಿದ್ದರೆ ಇವು ಇಲ್ಲದ ಸ್ಥಳವನ್ನರಸಿ
  * ಚಿಕ್ಕ ನಿದ್ದೆಯೊಂದನ್ನು ಪಡೆಯಲೆತ್ನಿಸಿ, ಇದರಿಂದ ಸುಸ್ತಿನ ಕಾರಣದಿಂದ ಎದುರಾಗಿದ್ದ ತಲೆನೋವು ಇಲ್ಲವಾಗುತ್ತದೆ.
  * ಕಟ್ಟಿಕೊಂಡಿದ್ದ ತಲೆಗೂದಲನ್ನು ಬಿಡಿಸಿ, ವಿಶೇಷವಾಗಿ ಮಹಿಳೆಯರು ಗಂಟುಕಟ್ಟುವ ಪೋನಿಟೈಲ್, ಜಡೆ ಅಥವಾ ಗೊಂಡೆ ಆಗಿದ್ದರೆ ಬಿಡಿಸಿ ಸಡಿಲವಾಗಿಸಿ.
  * ನಿರ್ಜಲೀಕರಣಕ್ಕೆ ಒಳಗಾಗದೇ ಇರಲು ಸಾಕಷ್ಟು ನೀರು ಕುಡಿಯಿರಿ.
  ಥಟ್ಟನೇ ಎದುರಾದ ತಲೆನೋವಿನ ನಿವಾರಣೆಗೆ ಸುಲಭವಾಗಿ ಲಭಿಸುವ ನೋವು ನಿವಾರಕ (ಉದಾಹರಣೆಗೆ ibuprofen (Advil). ಆದರೆ ಈ ಔಷಧಿಗಳು ತಾತ್ಕಾಲಿಕವಾಗಿರಬೇಕೇ ವಿನಃ ಇದನ್ನು ಅಭ್ಯಾಸ ಮಾಡಿಕೊಳ್ಳಬಾರದು ಹಾಗೂ ಉಗ್ರ ರೂಪದ ತಲೆನೋವಿಗೆ ವೈದ್ಯರ ಸಲಹೆಯಿಲ್ಲದೇ ನಿಮ್ಮ ಆಯ್ಕೆಯ ಮಾತ್ರೆ ತಿನ್ನಬಾರದು.


 • ಒತ್ತಡದ ತಲೆನೋವು

  ಒತ್ತಡದ ತಲೆನೋವು ಅಥವಾ ಬೇರೊಂದು ಕಾಯಿಲೆಯ ಪರಿಣಾಮವಾಗಿ ಎದುರಾದ ತಲೆನೋವು (cervicogenic headaches) ಇವೆರಡೂ ಕುತ್ತಿಗೆಯ ತೊಂದರೆಯಿಂದ ಸಾಮಾನ್ಯವಾಗಿ ಎದುರಾಗುತ್ತವೆ. ಕುತ್ತಿಗೆಯ ಸ್ನಾಯುಗಳ ಸೆಡೆತದಿಂದಾಗಿ ಇವು ಇಲ್ಲಿ ಹಾದು ಹೋಗುವ ನರಗಳನ್ನು ಒತ್ತುತ್ತವೆ. ಹಾಗಾಗಿ ಮೆದುಳಿಗೆ ಅಗತ್ಯ ಪ್ರಮಾಣದ ರಕ್ತ ದೊರಕದೇ ತಲೆನೋವು ಸಂಭವಿಸುತ್ತದೆ. ದೈಹಿಕ ಚಿಕಿತ್ಸಕರು ಈ ಭಾಗವನ್ನು ನಿರಾಳಗೊಳಿಸುವುದು ಹೇಗೆ ಎಂಬುದನ್ನು ವಿವರಿಸಿ ತೋರಿಸುತ್ತಾರೆ ಹಾಗೂ ಈ ಸ್ನಾಯುಗಳನ್ನು ನಿರಾಳವಾಗಿಸಲು ಕೆಲವು ವ್ಯಾಯಾಮಗಳನ್ನೂ ಸಲಹೆ ಮಾಡುತ್ತಾರೆ. ಈ ಸೂಚನೆಗಳನ್ನು ಸರಿಯಾಗಿ ಪಾಲಿಸಿ ಚಿಕಿತ್ಸೆ ಮುಂದುವರೆಸಿದರೆ ಹೆಚ್ಚು ಕಾಲ ತಲೆನೋವಿನಿಂದ ದೂರವಿರಬಹುದು.
ತಲೆನೋವು ಹಲವು ಪ್ರಾಬಲ್ಯಗಳಲ್ಲಿ ಆವರಿಸುತ್ತದೆ. ಚಿಕ್ಕದಾಗಿ ಪ್ರಾರಂಭವಾಗುವ ತಲೆನೋವು ಕೆಲವರಿಗೆ ಕೊಂಚ ಹೊತ್ತಿನಲ್ಲಿಯೇ ತಾನಾಗಿ ಶಮನಗೊಂಡರೆ ಕೆಲವರಿಗೆ ಹಾಸಿಗೆ ಹಿಡಿಸುವಷ್ಟು ಭೀಕರವಾಗಿರುತ್ತದೆ. ಕೆಲವರಿಗೆ ತಲೆಯ ಒಂದೇ ಭಾಗದಲ್ಲಿ ಆವರಿಸಿ ಅರೆ ತಲೆನೋವಾಗಿ ಪರಿಣಮಿಸುತ್ತದೆ. ಕೆಲವರಿಗೆ ತಲೆಯ ಕೇಂದ್ರಭಾಗ, ಹಿಂಭಾಗ, ಕುತ್ತಿಗೆ ಮೇಲ್ಭಾಗ, ಕಿವಿಯ ಪಕ್ಕ, ದವಡೆಯ ಮೇಲೆ ಕಣ್ಣುಗಳ ಹಿಂದೆ, ಹೀಗೆ ಕೆಲವಾರು ಭಾಗಗಳಲ್ಲಿ ಕೇಂದ್ರೀಕೃತವಾಗಿರುತ್ತದೆ.

ತಲೆನೋವು ಯಾವುದೇ ಬಗೆಯದ್ದಾಗಿರಲಿ, ಇವನ್ನು ಅನುಭವಿಸುವವರಿಗೆ ಆ ಕ್ಷಣದಲ್ಲಿ ಜೀವನದ ಮೇಲೇ ಬೇಸರವಾಗುವುದು ಖಚಿತ. ಸಾಮಾನ್ಯವಾಗಿ ತಲೆನೋವು ಎಂದರೆ ನಾವು ಮೆದುಳಿನ ನೋವು ಎಂದೇ ಭಾವಿಸುತ್ತೇವೆ. ವಾಸ್ತವವಾಗಿ ಮೆದುಳು ಮತ್ತು ತಲೆಬುರುಡೆಯಲ್ಲಿ ನರಾಗ್ರಗಳೇ ಇರುವುದಿಲ್ಲ! ನೋವಿನ ಸ್ಪಂದನೆಗಳನ್ನು ಗ್ರಹಿಸಬೇಕಾದ ಈ ನರಾಗ್ರಗಳೇ ಇಲ್ಲದ ಮೇಲೆ ನೋವು ಎಲ್ಲಿಂದ ಬರುತ್ತದೆ? ಈ ಪ್ರಶ್ನೆಗೆ ಹಲವರು ವಿಷಯಗಳು ಉತ್ತರ ನೀಡುತ್ತವೆ. ನಿದ್ದೆಯ ಕೊರತೆ, ಶರೀರದಿಂದ ಕೆಫೀನ್ ನಷ್ಟಗೊಂಡಿರುವುದು ಮೊದಲಾದವೂ ತಲೆನೋವು ಬರಲು ಕಾರಣವಾಗುತ್ತವೆ. ತಲೆಯ ಬಲಭಾಗದಲ್ಲಿ ಆವರಿಸುವ ಅರೆತಲೆನೋವಿಗೆ ಕಾರಣಗಳು

   
 
ಹೆಲ್ತ್