Back
Home » ಆರೋಗ್ಯ
ವಿಶ್ವ ಏಡ್ಸ್ ದಿನ ವಿಶೇಷ: ಎಚ್‌ಐವಿ ಮತ್ತು ಏಡ್ಸ್‌- ಇವುಗಳ ನಡುವೆ ಇರುವ ವ್ಯತ್ಯಾಸವೇನು?
Boldsky | 30th Nov, 2018 03:08 PM
  • ಎಚ್ ಐವಿ ಎನ್ನುವುದು ವೈರಸ್

    ಎಚ್ ಐವಿ ಎನ್ನುವ ವೈರಸ್ ಪ್ರತಿರೋಧಕ ವ್ಯವಸ್ಥೆಯನ್ನು ಧ್ವಂಸ ಮಾಡಿಬಿಡುವುದು. ಎಚ್ ಐವಿ ಎಂದರೆ ಹ್ಯುಮನ್ ಇಮ್ಯುನೊ ಡಿಫಿಶಿಯನ್ಸಿ ವೈರಸ್ ಎಂದರ್ಥ. ವೈರಸ್ ಹೆಸರು ಹೇಳುವಂತೆ ಇದು ಕೇವಲ ಮನುಷ್ಯರನ್ನು ಮಾತ್ರ ಬಾಧಿಸುವುದು ಮತ್ತು ಪ್ರತಿರೋಧಕ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದು. ಇದರಿಂದಾಗಿ ಪ್ರತಿರೋಧಕ ವ್ಯವಸ್ಥೆಗೆ ಸಾಮಾನ್ಯದಂತೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಪ್ರತಿರೋಧಕ ವ್ಯವಸ್ಥೆಯು ದೇಹದಲ್ಲಿರುವಂತಹ ಹಲವಾರು ವೈರಸ್ ಗಳನ್ನು ನಾಶ ಮಾಡುವುದು. ಆದರೆ ಎಚ್ ಐವಿಯನ್ನು ಮಾತ್ರ ಹೀಗೆ ಮಾಡಲು ಪ್ರತಿರೋಧಕ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಔಷಧಿಯಿಂದಾಗಿ ಎಚ್ ಐವಿಯನ್ನು ಯಶಸ್ವಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.


  • ಏಡ್ಸ್ ಎನ್ನುವುದು ಪರಿಸ್ಥಿತಿ

    ಎಚ್ ಐವಿ ಎನ್ನುವ ವೈರಸ್ ಸೋಂಕನ್ನು ಉಂಟು ಮಾಡಬಹುದು. ಸೋಂಕಿನಿಂತ ಉಂಟಾಗುವ ಪರಿಸ್ಥಿತಿಯನ್ನು ಏಡ್ಸ್ (ಅಕ್ವೈರ್ಡ್ ಇಮ್ಯುನೊಡಿಫಿಶಿಯನ್ಸಿ ಸಿಂಡ್ರೊಮ್) ಎಂದು ಕರೆಯಲಾಗುತ್ತದೆ. ಎಚ್ ಐವಿ ಸೋಂಕು ಬಂದ ವ್ಯಕ್ತಿಯಲ್ಲಿ ಏಡ್ಸ್ ಬೆಳವಣಿಗೆಯಾಗಬಹುದು. ವ್ಯಕ್ತಿಯ ದೇಹದ ಪ್ರತಿರೋಧಕ ವ್ಯವಸ್ಥೆ ಮೇಲೆ ಎಚ್ ಐವಿ ಸೋಂಕು ಗಂಭೀರವಾಗಿ ಹಾನಿಯುಂಟು ಮಾಡಿದ ವೇಳೆ ಏಡ್ಸ್ ಅಥವಾ ಮೂರನೇ ಹಂತದ ಎಚ್ ಐವಿಯು ಕಂಡುಬರುವುದು. ಇದು ತುಂಬಾ ಕ್ಲಿಷ್ಟ ಪರಿಸ್ಥಿತಿಯಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಇದರ ಲಕ್ಷಣಗಳು ಭಿನ್ನವಾಗಿರುವುದು. ಎಚ್ ಐವಿ 3ನೇ ಹಂತವು ಸೋಂಕು ತಗುಲಿತ ವ್ಯಕ್ತಿಯಲ್ಲಿ ಬೆಳವಣಿಗೆಯಾಗಲು ಆತನಲ್ಲಿನ ಪ್ರತಿರೋಧಕ ವ್ಯವಸ್ಥೆಯು ಹಾನಿಯಾಗಿರುವುದು ಮತ್ತು ಸೋಂಕಿನ ವಿರುದ್ಧ ಹೋರಾಡಲು ವಿಫಲವಾಗಿರುವುದು ಕಾರಣವಾಗಿದೆ. ಅವಕಾಶವಾದಿ ಸೋಂಕು ಎಂದು ಹೇಳಲ್ಪಡುವಂತಹ ಕೆಲವೊಂದು ಕಾಯಿಲೆಗಳಾಗಿರುವ ಕ್ಷಯರೋಗ, ನ್ಯುಮೋನಿಯಾ ಮತ್ತು ಇತರ ಕೆಲವು ಕಾಯಿಲೆಗಳಿಗೆ ಇದು ಕಾರಣವಾಗಬಹುದು. ಪ್ರತಿರೋಧಕ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವಂತಹ ಸಮಯದಲ್ಲಿ ಕೆಲವೊಂದು ವಿಧದ ಕ್ಯಾನ್ಸರ್ ಕೂಡ ಬಾಧಿಸಬಹುದು. ಆದರೆ ಆ್ಯಂಟಿರಿಟ್ರೊವೈರಲ್ ಚಿಕಿತ್ಸೆಯು ಎಚ್ ಐವಿ ಮೂರನೇ ಹಂತದ ಬೆಳವಣಿಗೆಯನ್ನು ತಡೆಯಬಹುದು.


  • ಎಚ್ ಐವಿ ಯಾವಾಗಲೂ ಮೂರನೇ ಹಂತಕ್ಕೆ ಬೆಳವಣಿಗೆಯಾಗದು

    ಎಚ್ ಐವಿ ಎನ್ನುವುದು ವೈರಸ್. ಏಡ್ಸ್ ಅನ್ನುವುದು ಈ ವೈರಸ್ ನಿಂದ ಉಂಟಾಗುವಂತಹ ಪರಿಸ್ಥಿತಿಯಾಗಿದೆ. ಎಚ್ ಐವಿ ಸೋಂಕು ಮೂರನೇ ಹಂತಕ್ಕೆ ಬೆಳವಣಿಗೆಯಾಗಬೇಕೆಂದಿಲ್ಲ. ಎಚ್ ಐವಿ ಸೋಂಕಿತ ವ್ಯಕ್ತಿಗಳು ಏಡ್ಸ್ ಬರದೆ ಹಲವಾರು ವರ್ಷಗಳ ಕಾಲ ಬದುಕಿದ ನಿದರ್ಶನಗಳಿವೆ. ಮುಂದುವರಿದಿರುವಂತಹ ವೈದ್ಯಕೀಯ ಲೋಕದ ಸಂಶೋಧನೆಗಳಿಂದಾಗಿ ಎಚ್ ಐವಿ ಸೋಂಕು ಇರುವಂತಹ ವ್ಯಕ್ತಿಯು ಸಾಮಾನ್ಯ ಜೀವನ ನಡೆಸಬಹುದಾಗಿದೆ. ಎಚ್ ಐವಿ ಸೋಂಕಿತ ವ್ಯಕ್ತಿಯು ಏಡ್ಸ್ ಬರದೆ ಬದುಕಬಹುದು. ಏಡ್ಸ್ ಪತ್ತೆಯಾದ ವ್ಯಕ್ತಿಯಲ್ಲಿ ಅದಾಗಲೇ ಎಚ್ ಐವಿ ಸೋಂಕು ತಗಲಿರುವುದು. ಯಾಕೆಂದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಆಗಲ್ಲ. ಏಡ್ಸ್ ಬೆಳವಣಿಗೆಯಾಗದೆ ಇದ್ದರೂ ಎಚ್ ಐವಿ ಸೋಂಕು ದೇಹದಿಂದ ಹೊರಹೋಗದು.

    Most Read: ಏಡ್ಸ್ ಬಗ್ಗೆ ಇರುವ ಸಾಮಾನ್ಯ ತಪ್ಪು ತಿಳುವಳಿಕೆಗಳು


  • ಎಚ್ ಐವಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು

    ಎಚ್ ಐವಿ ಎನ್ನುವುದು ಒಂದು ವೈರಸ್ ಆಗಿರುವ ಕಾರಣದಿಂದಾಗಿ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದು. ಏಡ್ಸ್ ಅನ್ನುವುದು ವ್ಯಕ್ತಿಯೊಬ್ಬನಿಗೆ ಎಚ್ ಐವಿ ಸೋಂಕು ತಗುಲಿದ ಬಳಿಕ ಬಂದಂತಹ ಪರಿಸ್ಥಿತಿಯಾಗಿದೆ. ದೇಹದಲ್ಲಿನ ದ್ರವಗಳಿಂದಾಗಿ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದು. ಸಾಮಾನ್ಯವಾಗಿ ಎಚ್ ಐವಿಯು ಅಸುರಕ್ಷಿತ ಲೈಂಗಿಕ ಕ್ರಿಯೆ ಅಥವಾ ಸಿರೀಂಜ್ ನ್ನು ಹಂಚಿಕೊಳ್ಳುವುದರಿಂದ ಬರುವುದು. ಇದರ ಹೊರತಾಗಿ ಗರ್ಭಿಣಿ ಮಹಿಳೆಗೆ ಎಚ್ ಐವಿ ಇದ್ದರೆ ಇದು ಮಗುವಿಗೂ ಹರಡಬಹುದು.


  • ಎಚ್ ಐವಿ ಎನ್ನುವುದು ಲಕ್ಷಣಗಳನ್ನು ತೋರಿಸಲ್ಲ

    ಎಚ್ ಐವಿ ದೇಹದೊಳಗೆ ಬಂದ ಎರಡರಿಂದ ನಾಲ್ಕು ವಾರದಲ್ಲಿ ಆ ವ್ಯಕ್ತಿಯಲ್ಲಿ ಜ್ವರದಂತಹ ಲಕ್ಷಣ ಕಾಣಿಸಿಕೊಳ್ಳುವುದು. ಸಣ್ಣ ಸಮಯದಲ್ಲಿ ಹರಡುವಂತಹ ತೀವ್ರವಾದ ಸೋಂಕು ಇದಾಗಿದೆ. ಪ್ರತಿರೋಧಕ ವ್ಯವಸ್ಥೆಯು ಈ ಸೋಂಕನ್ನು ನಿಯಂತ್ರಣಕ್ಕೆ ತಂದು, ಕೆಲವು ಸಮಯದ ತನಕ ಇದರ ಪರಿಣಾಮ ಬೀರದಂತೆ ಮಾಡುವುದು. ಆದರೆ ಪ್ರತಿರೋಧಕ ವ್ಯವಸ್ಥೆಯು ಸಂಪೂರ್ಣವಾಗಿ ಎಚ್ ಐವಿಯನ್ನು ಹೊರಹಾಕಲು ಸಾಧ್ಯವಿಲ್ಲ. ದೀರ್ಘಕಾಲದ ತನಕ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಕೆಲವು ವರ್ಷಗಳ ಕಾಲ ವ್ಯಕ್ತಿಗೆ ಎಚ್ ಐವಿಯ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆ ಇರಬಹುದು. ಆ್ಯಂಟಿರಿಟ್ರೊವೈರಲ್ ಚಿಕಿತ್ಸೆಯ ಹೊರತಾಗಿ ವ್ಯಕ್ತಿಯಲ್ಲಿ ಎಚ್ ಐವಿಯು ಏಡ್ಸ್ ಆಗಿ ಪರಿವರ್ತನೆಯಾಗುವುದು ಮತ್ತು ಇದರಿಂದ ಅದಕ್ಕೆ ಸಂಬಂಧಿಸಿದ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುವುದು.


  • ಎಚ್ ಐವಿ ಸೋಂಕನ್ನು ಸರಳ ಪರೀಕ್ಷೆಯಿಂದ ಪತ್ತೆ ಮಾಡಬಹುದು

    ಎಚ್ ಐವಿ ಸೋಂಕು ತಗುಲಿದ ವೇಳೆ ಪ್ರತಿರೋಧಕ ವ್ಯವಸ್ಥೆಯು ದೇಹದಲ್ಲಿ ಆ್ಯಂಟಿಬಾಡಿ ಬಿಡುಗಡೆ ಮಾಡಿ ವೈರಸ್ ವಿರುದ್ಧ ಹೋರಾಡುವುದು. ಈ ಆ್ಯಂಟಿಬಾಡಿಯನ್ನು ಪತ್ತೆ ಹಚ್ಚಲು ವ್ಯಕ್ತಿಯು ರಕ್ತ ಪರೀಕ್ಷೆ ಅಥವಾ ಜೊಲ್ಲಿನ ಪರೀಕ್ಷೆ ಮಾಡಿಸಿಕೊಂಡು ಎಚ್ ಐವಿ ಸೋಂಕು ಇದೆಯಾ ಎಂದು ತಿಳಿಯಬಹುದು. ವ್ಯಕ್ತಿಯ ದೇಹಕ್ಕೆ ಎಚ್ ಐವಿ ಸೋಂಕು ತಗುಲಿದ ಹಲವಾರು ವಾರಗಳ ಬಳಿಕ ಆ್ಯಂಟಿ ಬಾಡಿಯು ಪಾಸಿಟಿವ್ ಆಗಿ ಪತ್ತೆಯಾಗುವುದು. ಇನ್ನೊಂದು ಪರೀಕ್ಷೆಯೆಂದರೆ ಆ್ಯಂಟಿಜೆನ್ಸ್. ಇದು ವೈರಸ್ ಮತ್ತು ಆ್ಯಂಟಿಬಾಡಿ ಬಿಡುಗಡೆ ಮಾಡುವಂತಹ ಪ್ರೋಟೀನ್ ಪರೀಕ್ಷೆಯಾಗಿದೆ. ಈ ಪರೀಕ್ಷೆಯಿಂದ ಎಚ್ ಐವಿ ಸೋಂಕು ತಗುಲಿದ ಮರುದಿನವೇ ಇದನ್ನು ಪತ್ತೆ ಮಾಡಬಹುದು. ಎರಡು ಪರೀಕ್ಷೆಗಳು ತುಂಬಾ ನಿಖರ ಹಾಗೂ ಪತ್ತೆಗೆ ಸರಳವಾಗಿರುವುದು.

    Most Read: ಇವು HIV ಪಾಸಿಟಿವ್ ನ ಲಕ್ಷಣಗಳಾಗಿರಬಹುದೇ?


  • ಏಡ್ಸ್ ಪತ್ತೆ ತುಂಬಾ ಕ್ಲಿಷ್ಟಕರ

    ಏಡ್ಸ್ ಅನ್ನುವುದು ಎಚ್ ಐವಿ ಸೋಂಕಿನ ಕೊನೆಯ ಹಂತವಾಗಿದೆ. ವೈದ್ಯಕೀಯ ಪರೀಕ್ಷೆ ಮೂಲಕ ಎಚ್ ಐವಿ ಸೋಂಕು ಮೂರನೇ ಹಂತದ ಎಚ್ ಐವಿ ಆಗಿ ಪರಿವರ್ತನೆಗೊಂಡಿದೆಯಾ ಎಂದು ತಿಳಿಯಬಹುದು. ಯಾಕೆಂದರೆ ಎಚ್ ಐವಿಯು ಪ್ರತಿರೋಧಕ ಕೋಶ ಸಿಡಿ4ನ್ನು ಧ್ವಂಸ ಮಾಡುವುದು. ಈ ಕೋಶಗಳನ್ನು ಪರೀಕ್ಷೆಯಲ್ಲಿ ಗಣತಿ ಮಾಡುವ ಮೂಲಕವಾಗಿ ವೈದ್ಯರು ಏಡ್ಸ್ ಪತ್ತೆ ಮಾಡುವರು. ಎಚ್ ಐವಿ ಸೋಂಕು ಇಲ್ಲದೆ ಇರುವಂತಹ ವ್ಯಕ್ತಿಯಲ್ಲಿ ಸಿಡಿ4 ಕೋಶಗಳು 500-1200 ತನಕ ಇರುವುದು. ಎಚ್ ಐವಿ ಸೋಂಕಿತ ಅದರಲ್ಲೂ ಮೂರನೇ ಹಂತಕ್ಕೆ ಇದು ಪರಿವರ್ತನೆಯಾಗಿದ್ದರೆ ಆಗ ಈ ಕೋಶಗಳ ಸಂಖ್ಯೆಯು 200ಕ್ಕೆ ಇಳಿಯುವುದು. ಎಚ್ ಐವಿಯು ಮೂರನೇ ಹಂತಕ್ಕೆ ಹೋಗಿದೆ ಎನ್ನುವುದನ್ನು ಪತ್ತೆ ಮಾಡಲು ಮತ್ತೊಂದು ಕ್ರಮವೆಂದರೆ ಅವಕಾಶವಾದಿ ಸೋಂಕಿನ ಉಪಸ್ಥಿತಿ. ಅವಕಾಶವಾದಿ ಸೋಂಕು ಎಂದರೆ ವೈರಸ್, ಶೀಲಿಂಧ್ರ ಅಥವಾ ಬ್ಯಾಕ್ಟೀರಿಯಾದಿಂದ ಬರುವಂತಹ ಕೆಲವೊಂದು ಕಾಯಿಲೆಗಳು. ಇದು ಪ್ರತಿರೋಧಕ ವ್ಯವಸ್ಥೆಯು ಧ್ವಂಸಗೊಂಡಿರುವ ವೇಳೆ ತೀವ್ರ ರೂಪ ಪಡೆಯುವುದು.


  • ಚಿಕಿತ್ಸೆ ಮತ್ತು ಜೀವನ ದೀರ್ಘಗೊಳಿಸುವುದು

    ವ್ಯಕ್ತಿಯಲ್ಲಿ ಎಚ್ ಐವಿಯು ಮೂರನೇ ಹಂತಕ್ಕೆ ತಲುಪಿದರೆ ಆಗ ಜೀವನದ ಅವಧಿಯು ಕಡಿಮೆಯಾಗುವುದು. ಈ ಹಂತದಲ್ಲಿ ಹಾನಿಗೀಡಾಗಿರುವಂತಹ ಪ್ರತಿರೋಧಕ ವ್ಯವಸ್ಥೆಯನ್ನು ಸರಿಪಡಿಸಲು ತುಂಬಾ ಕಷ್ಟವಾಗುವುದು. ಸೋಂಕು ಮತ್ತು ಕೆಲವೊಂದು ರೀತಿಯ ಪರಿಸ್ಥಿತಿಗಳು ಅದರಲ್ಲೂ ಕೆಲ ವಿಧದ ಕ್ಯಾನ್ಸರ್ ಪ್ರತಿರೋಧಕ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುವುದು. ಅದಾಗ್ಯೂ, ಆ್ಯಂಟಿರೆಟ್ರೊವೈರಲ್ ಚಿಕಿತ್ಸೆ ಮತ್ತು ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವ ಮೂಲಕ ಎಚ್ ಐವಿ ಮೂರನೇ ಹಂತದ ವ್ಯಕ್ತಿಗಳು ಕೂಡ ದೀರ್ಘಕಾಲ ಬದುಕಿರುವ ಉದಾಹರಣೆಗಳು ಇವೆ.




ಒಂದು ಕಾಲದಲ್ಲಿ ಎಚ್ ಐವಿ ಅಥವಾ ಏಡ್ಸ್ ಬಂದರೆ ಆ ವ್ಯಕ್ತಿಯ ಮರಣ ನಿಶ್ಚಿತವೆಂದು ಭಾವಿಸಲಾಗಿತ್ತು. ಆದರೆ ವೈದ್ಯಕೀಯ ಲೋಕವು ಪ್ರತಿಯೊಂದು ಕಾಯಿಲೆಗಳಿಗೆ ಮದ್ದನ್ನು ಹುಡುಕುವಂತೆ ಏಡ್ಸ್ ನ್ನು ನಿಯಂತ್ರಿಸಲು ಮದ್ದನ್ನು ಹುಡುಕಿದೆ. ವಿಶ್ವದ ಅತಿ ದೊಡ್ಡ ಸಮಸ್ಯೆ ಎಚ್ಐವಿ-ಏಡ್ಸ್‌ಗೆ ಹೆಚ್ಚಿನ ಯುವಜನರು ತುತ್ತಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ದೇಶದಲ್ಲಿ ಲೈಂಗಿಕ ಶಿಕ್ಷಣ ನೀಡಿಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ.

ಇದು ಸಂಪೂರ್ಣವಾಗಿ ಏಡ್ಸ್ ನ್ನು ದೇಹದಿಂದ ಕಿತ್ತು ಹಾಕದೆ ಇದ್ದರೂ ಬಾಧಿತ ವ್ಯಕ್ತಿಯು ಸಾಮಾನ್ಯ ಜೀವನ ಸಾಗಿಸಿ, ದೀರ್ಘಕಾಲ ಬದುಕಬಹುದು. ಎಚ್ ಐವಿ ಪಾಸಿಟಿವ್ ಇರುವಂತಹ ವ್ಯಕ್ತಿ ಕೂಡ ಆ್ಯಂಟಿರೆಟ್ರೊವೈರಲ್ ಚಿಕಿತ್ಸೆಯನ್ನು ನಿಯಮಿತವಾಗಿ ಮಾಡುವುದರಿಂದ ಸಾಮಾನ್ಯ ಜನರಂತೆ ಜೀವನ ಸಾಗಿಸಬಹುದು. ಎಚ್ ಐವಿ ಅಥವಾ ಏಡ್ಸ್ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

   
 
ಹೆಲ್ತ್