Back
Home » ಆರೋಗ್ಯ
ಮಂಜುಗಡ್ಡೆಯಲ್ಲಿರುವ ಈ 7 ಅಚ್ಚರಿಯ ಸೌಂದರ್ಯ ಪ್ರಯೋಜನಗಳು ನಿಮಗೆ ತಿಳಿದಿರಲಿಕ್ಕಿಲ್ಲ!
Boldsky | 30th Nov, 2018 04:29 PM
 • 1.ಈ ಚಿಕಿತ್ಸೆಗೆ ಅಪ್ಪಟ ಮಂಜುಗಡ್ಡೆ ಸಾಕು!

  ಈ ಚಿಕಿತ್ಸೆಗೆ ಬೇಕಾಗಿರುವುದು ಕೇವಲ ಅಪ್ಪಟ ಮಂಜುಗಡ್ಡೆ ಮಾತ್ರ! ಈ ಮಂಜುಗಡ್ಡೆಯನ್ನು ತಾಜಾ ನೀರಿನಿಂದಲೂ ತಯಾರಿಸಿಕೊಳ್ಳಬಹುದು ಅಥವಾ ಹಸಿರು ಟೀ, ಸೌತೆಕಾಯಿಯ ತಿರುಳನ್ನು ಕಡೆದ ದ್ರವ ಅಥವಾ ನಿಮ್ಮ ನೆಚ್ಚಿನ ಬೇರಾವುದೇ ಸಾಮಾಗ್ರಿಯಾಗಬಹುದು.
  ಈ ವಿಧಾನವನ್ನು ಅನುಸರಿಸುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕು.
  * ಈ ವಿಧಾನವನ್ನು ಪ್ರಾರಂಭಿಸುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದು ಒರೆಸಿ ಒಣಗಿಸಿಕೊಳ್ಳಬೇಕು.
  * ಸದಾ ಕೈಗವಸು ಧರಿಸಬೇಕು. ಇದರಿಂದ ಮಂಜುಗಡ್ಡೆಯ ಶೀತಲಪ್ರಭಾವದಿಂದ ಕೈಗಳು ಮರಗಟ್ಟುವುದನ್ನು ತಡೆಯಬಹುದು. ವಿಶೇಷವಾಗಿ ಈ ವಿಧಾನವನ್ನು ಹೆಚ್ಚು ಹೊತ್ತು ಸಂಭ್ರಮಿಸಲು ಈ ಗವಸು ಅಗತ್ಯ.
  * ಎಂದಿಗೂ ಮಂಜುಗಡ್ಡೆಯನ್ನು ನೇರವಾಗಿ ಚರ್ಮಕ್ಕೆ ತಾಕಿಸಬಾರದು. ಇದನ್ನೊಂದು ಮೃದುವಾದ ಬಟ್ಟೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿಟ್ಟೇ ಬಳಿಕ ಮುಖಕ್ಕೆ ಮಸಾಜ್ ಒದಗಿಸಬೇಕು
  * ಕೇವಲ ಮೊಡವೆ ಅಥವಾ ಕಣ್ಣುಗಳ ಕೆಳಭಾಗದಲ್ಲಿ ಊದಿಕೊಂಡಿದ್ದರೆ ಈ ಭಾಗಗಳಿಗೆ ಮಂಜುಗಡ್ಡೆಯನ್ನು ನೇರವಾಗಿ ತಾಕಿಸಬಹುದು.
  * ಯಾವುದೇ ಕಾರಣಕ್ಕೆ ಈ ಅವಧಿ ಒಂದು ಘಂಟೆ ಮೀರಕೂಡದು, ಮೀರಿದರೆ ಚರ್ಮ ಉರಿಯುವ ಸಂಭವವಿದೆ!
  * ಮಂಜುಗಡ್ಡೆಗಳನ್ನು ಸೌತೆ, ಹಸಿರು ಟೀ, horsetail tea,ಅರಿಶಿನ, ಬೆಳುಳ್ಳಿ ಮೊದಲಾದವುಗಳನ್ನು ಬೆರೆಸಿದ ನೀರಿನಿಂದ ತಯಾರಿಸಿದ್ದರೆ ದುಪ್ಪಟ್ಟು ಲಾಭವಿದೆ.

  Most Read: ದಿನಾ ಬೆಳಗ್ಗೆ 1 ಲೀ. ನೀರು ಕುಡಿದು ಆರೋಗ್ಯ ಭಾಗ್ಯ ನಿಮ್ಮದಾಗಿಸಿಕೊಳ್ಳಿ


 • 2.ಪ್ರಯೋಗದ ವಿಧಾನ

  ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ವಿಧಾನವನ್ನು ಪ್ರಯತ್ನಿಸಿ, ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಒಣಗಿಸಿದ ಬಳಿಕ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಂಜುಗಡ್ಡೆಗಳನ್ನು ತುಂಬಿಸಿ ಈ ಚೀಲವನ್ನು ಕುತ್ತಿಗೆ ಹಾಗೂ ಮುಖದ ಮೇಲೆ ನಯವಗಿ ಒತ್ತುತ್ತಾ ಮಸಾಜ್ ಮಾಡಿ. ಚೀಲವನ್ನು ಚರ್ಮದ ಮೇಲೆ ಎಳೆಯಬಾರದು, ಕೇವಲ ಒತ್ತಬೇಕು ಹಾಗೂ ಮಂಜಿನ ತಣಪು ಸಹಿಸಲು ಸಾಧ್ಯವಿರುವಷ್ಟು ಹೊತ್ತು ಮಾತ್ರವೇ ಇರಿಸಬೇಕು. ಬಳಿಕ ಎತ್ತಿ ಮುಂದಿನ ಭಾಗದ ಚರ್ಮದ ಮೇಲೆ ಇರಿಸಬೇಕು. ಸುಮಾರು ಮೂರು ನಿಮಿಷ ಈ ವಿಧಾನ ಅನುಸರಿಸಿ. ಕೆಲವೇ ದಿನಗಳಲ್ಲಿ ಗಮನಾರ್ಥ ಬದಲಾವಣೆ ಕಂಡುಬರುತ್ತದೆ. ನಿಮ್ಮ ತ್ವಚೆ ಹೆಚ್ಚು ತಾಜಾ ಹಾಗೂ ಸೌಮ್ಯವಾಗುತ್ತದೆ. ಅಲ್ಲದೇ ಈ ವಿಧಾನ ಚರ್ಮ ನೆರಿಗೆಗಟ್ಟುವುದನ್ನು ತಡೆಯುತ್ತದೆ ಮತ್ತು ಸುಖನಿದ್ದೆಯನ್ನೂ ತರುತ್ತದೆ.


 • 3.ಮೊಡವೆಗಳನ್ನು ನಿವಾರಿಸಲು

  ಮೊಡವೆಗಳನ್ನು ನಿವಾರಿಸಲು ಐಸ್ ಥೆರಪಿ ಅತ್ಯುತ್ತಮ ವಿಧಾನವಾಗಿದೆ. ಮುಖವನ್ನು ಚೆನ್ನಾಗಿ ತೊಳೆದು ಒಣಗಿಸಿದ ಬಳಿಕ ಒಂದು ಮೃದುವಾದ ಬಟ್ಟೆಯಲ್ಲಿ ಮಂಜುಗಡ್ಡೆಯ ತುಂಡೊಂದನ್ನು ಸುತ್ತಿ ಮೊಡವೆಯ ಮೇಲೆ ಹೆಚ್ಚಿನ ಒತ್ತಡವಿಲ್ಲದೇ ಮೂರರಿಂದ ಐದು ನಿಮಿಷಗಳ ಕಾಲ ಒತ್ತಿ ಹಿಡಿಯಿರಿ. ಇದರ ಪರಿಣಾಮ ನಿಮಗೆ ಅಚ್ಚರಿ ತರಲಿದೆ.


 • 4.ನೆರಿಗೆಗಳನ್ನು ನಿವಾರಿಸುತ್ತದೆ

  ಈ ಸುಲಭ ವಿಧಾನ ಹೀಗೆ ಕಾರ್ಯನಿರ್ವಹಿಸುತ್ತದೆ: ಮುಖದ ಚರ್ಮದಲ್ಲಿ ಇದರಿಂದ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಸಡಿಲವಾಗುವುದನ್ನು ತಪ್ಪಿಸುತ್ತದೆ. ಇದಕ್ಕಾಗಿ ಪ್ರತಿದಿನ ಮೇಕಪ್ ಹಚ್ಚಿಕೊಳ್ಳುವ ಮುನ್ನ ಈ ವಿಧಾನವನ್ನು ಸುಮಾರು ಒಂದು ನಿಮಿಷ ಅನುಸರಿಸಿದರೆ ಸಾಕು.


 • 5.ತೆರೆದ ರಂಧ್ರಗಳನ್ನು ಮುಚ್ಚುತ್ತದೆ

  ಒಂದು ವೇಳೆ ಮುಖದ ರಂಧ್ರಗಳು ತೀರಾ ದೊಡ್ಡದಾಗಿದ್ದು ಕೊಳೆ ತುಂಬಿಕೊಂಡಿದ್ದರೆ ಒಂದು ಮಂಜುಗಡ್ಡೆಯನ್ನು ಚರ್ಮದ ಮೇಲೆ ಎರಡರಿಂದ ಮೂರು ನಿಮಿಷಗಳ ಕಾಲ ಹೆಚ್ಚಿನ ಒತ್ತಡವಿಲ್ಲದೇ ಓಡಾಡಿಸಿ. ಈ ಮೂಲಕ ಕೆಲವೇ ದಿನಗಳಲ್ಲಿ ಈ ರಂಧ್ರಗಳು ಸಂಕುಚಿತಗೊಳ್ಳುತ್ತವೆ.

  Most Read: ಸ್ವರ್ಗದಲ್ಲಿರುವ ನಿಮ್ಮ ಪಿತೃಗಳು ಈ ನಾಲ್ಕು ಸಂದರ್ಭಗಳಲ್ಲಿ ನಿಮ್ಮನ್ನು ಭೇಟಿಯಾಗಬಹದು!


 • 6.ಕಣ್ಣುಗಳ ಕೆಳಗೆ ಊದಿಕೊಂಡಿರುವುದನ್ನು ನಿವಾರಿಸುತ್ತದೆ:

  ಈ ಭಾಗ ಊದಿಕೊಂಡು ಚೀಲದಂತಾಗಲು ಕೆಲವಾರು ಕಾರಣಗಳಿವೆ. ಆದರೆ ಈಗ ಚಿಂತೆ ಬೇಡ. ಎರಡು ಮಂಜುಗಡ್ಡೆಯ ತುಂಡುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿ ಮಲಗಿದ್ದು ಕಣ್ಣುಗಳು ಮುಚ್ಚಿಕೊಂಡಿರುವಂತೆ ಈ ಬಟ್ಟೆಯನ್ನು ಊದಿಕೊಂಡ ಭಾಗದ ಮೇಲಿರಿಸಿ ಹೆಚ್ಚಿನ ಒತ್ತಡವಿಲ್ಲದೇ ವೃತ್ತಾಕಾರದಲ್ಲಿ ನಯವಾಗಿ ಮಸಾಜ್ ಮಾಡಿ. ಸುಮಾರು ಎರಡು ನಿಮಿಷ ಮುಂದುವರೆಸಿ.


 • 7.ಹೊಟ್ಟೆಯ ಕೊಬ್ಬನ್ನು ಕರಗಿಸಲು

  ಹೊಟ್ಟೆಯ ಕೊಬ್ಬನ್ನು ಕರಗಿಸಲು ವೃತ್ತಿಪರರ ದುಬಾರಿ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದೇ ಇದ್ದರೆ ನೀವು ಒಂದು ಸುಲಭ ವಿಧಾನವನ್ನು ಮನೆಯಲ್ಲಿಯೇ ನಿರ್ವಹಿಸಬಹುದು. ಒಂದು ಮಂಜುಗಡ್ಡೆಯಿಂದ ತುಂಬಿದ ಚೀಲವನ್ನು ಹೊಟ್ಟೆಯ ಮೇಲೆ ಸುಮಾರು ಹದಿನೈದು ನಿಮಿಷಗಳ ಕಾಲ ಇರಿಸಿಕೊಳ್ಳಬೇಕು. ಬಳಿಕ ಇದನ್ನು ನಿವಾರಿಸಿ ಮೂರು ನಿಮಿಷ ಹಾಗೇ ಬಿಟ್ಟು ಇನ್ನೊಂದು ಚೀಲವನ್ನು ಮತ್ತೊಂದು ಹದಿನೈದು ನಿಮಿಷಗಳ ಕಾಲ ಇರಿಸಬೇಕು. (ಗರಿಷ್ಟ ಒಂದು ಗಂಟೆ). ಈ ಮಂಜುಗಡ್ಡೆಗಳು ಹಸಿರು ಟೀ , horsetail tea,ಕಾಫಿ ರೋಸ್ಮರಿ ಮೊದಲಾದವುಗಳಿಂದ ತಯಾರಿಸಿದ್ದರೆ ಇನ್ನೂ ಉತ್ತಮ. ಈ ಮಂಜುಗಡ್ಡೆ ಹೊಟ್ಟೆಯಲ್ಲಿ ಸಂಗ್ರಹವಾಗಿದ್ದ ಬಿಳಿಯ ಕೊಬ್ಬಿನ ಕಣಗಳನ್ನು ಕಂದು ಕೊಬ್ಬಿನ ಕಣಗಳನ್ನಾಗಿ ಬದಲಿಸುತ್ತದೆ ಹಾಗೂ ಇವು ಜೀವರಾಸಾಯನಿಕ ಕ್ರಿಯೆಯಲ್ಲಿ ಸುಲಭವಾಗಿ ದಹಿಸಲ್ಪಡುತ್ತವೆ. ಇದೇ ತೂಕ ಇಳಿಕೆಯ ಗುಟ್ಟು.
  ಆದರೆ ನೆನಪಿರಲಿ, ಹೊಟ್ಟೆ ಇಳಿಸಲು ಇದೊಂದೇ ರಾಮಬಾಣವಲ್ಲ, ಇದರ ಜೊತೆಗೇ ಸೂಕ್ತ ಆಹಾರ ಕ್ರಮ ಮತ್ತು ನಿಯಮಿತ ವ್ಯಾಯಾಮವೂ ಅಗತ್ಯ!
'ನಿಮ್ಮ ಮುಖ ನಿಮ್ಮ ಅದೃಷ್ಟವನ್ನು ಸೂಚಿಸುತ್ತದೆ' ಎಂಬ ನಾಣ್ಣುಡಿಯೊಂದು ಪಾಶ್ಚಾತ್ಯ ದೇಶಗಳಲ್ಲಿ ಜನಜನಿತವಾಗಿದೆ. ಈ ವಿಷಯವನ್ನು ನಾವು ನಂಬುವುದಿಲ್ಲವಾದರೂ ನಮ್ಮ ಮುಖ ಆಕರ್ಷಕವಾಗಿರಬೇಕು ಎಂದು ನಾವು ಬಯಸುತ್ತೇವೆ.

ಅಂದರೆ ಮುಖದ ತ್ವಚೆ ಆರೋಗ್ಯಕರವಾಗಿದ್ದು ಕಾಂತಿಯುಕ್ತವಾಗಿದ್ದರೆ ಎಲ್ಲರ ಗಮನವನ್ನು ಸುಲಭವಾಗಿ ಸೆಳೆಯಲು ಸಾಧ್ಯ ಎಂಬುದೇ ಈ ನಾಣ್ಣುಡಿಯ ಅರ್ಥವಾಗಿದ್ದು ಈ ವಾಸ್ತವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮುಖದ ಕಾಂತಿಯನ್ನು ಹೆಚ್ಚಿಸಲು ಮಂಜುಗಡ್ಡೆಯನ್ನು ಬಳಸುವ ಐಸ್ ಥೆರಪಿ ಎಂಬ ಒಂದು ಸುಲಭ ವಿಧಾನವನ್ನು ಇಂದಿನ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದ್ದು ಇದರ ಗುಣಪಡಿಸುವ ಮತ್ತು ನಿರಾಳತೆ ಒದಗಿಸುವ ಗುಣವನ್ನು ನೀವು ಖಂಡಿತಾ ಮೆಚ್ಚುತ್ತೀರಿ ಎಂಬ ಭರವಸೆ ನಮಗಿದೆ.

   
 
ಹೆಲ್ತ್